For Quick Alerts
ALLOW NOTIFICATIONS  
For Daily Alerts

ಪ್ರೇಮ ಹಾಗೂ ವೈವಾಹಿಕ ಜೀವನದ ಯಶಸ್ವಿಗೆ ಪಾಲಿಸಬೇಕಾದ ಸಪ್ತಸೂತ್ರಗಳಿವು

|

ಫೆಬ್ರವರಿ 14 ಪ್ರೇಮಿಗಳ ದಿನ ಮಾತ್ರವಲ್ಲ, ವಿಶ್ವ ಮದುವೆ ದಿನ ಕೂಡ.

ವೈಯಕ್ತಿಕ ಮಟ್ಟದ ಸಂಬಂಧಗಳಲ್ಲಿ, ಇಬ್ಬರ ನಡುವಿನ "ಆಪ್ತತೆ" ಎಂದರೆ, ಅವರಿಬ್ಬರ ನಡುವೆ ತೀರಾ ನಿಕಟವಾದ ಅಥವಾ ಅತ್ಯಂತ ಆತ್ಮೀಯ, ಸಲುಗೆಯ ಬಾಂಧವ್ಯವಿರುವುದು ಎಂದೇ ಅದರ ಅರ್ಥ.

ನಿಮಗೆ ಪ್ರಿಯರೆನಿಸಿದವರೊಂದಿಗೆ ನೀವು ನಿರಂತರ ಸಂಪರ್ಕವನ್ನಿರಿಸಿಕೊಂಡಾಗ ಕಾಲಕ್ರಮೇಣ ನಿಮ್ಮಿಬ್ಬರ ನಡುವೆ ಬೆಳೆಯುವುದೇ ಈ ಆಪ್ತತೆ. ಹಾಗೆ ಬೆಳೆಯುವ ಈ ಆಪ್ತತೆಯು ಪರಸ್ಪರರ ನಡುವೆ ಅತೀವ ಕಾಳಜಿಯ ರೂಪವನ್ನು ತಾಳುತ್ತದೆ. ಅಂತಹ ವ್ಯಕ್ತಿಯ ಸಾಮಿಪ್ಯವಿರುವಾಗಲೆಲ್ಲ ನೀವು ಜೀವನೋತ್ಸಾಹದ ಬುಗ್ಗೆಯೇ ಆಗಿರುತ್ತೀರಿ!!

ಅದು ದೈಹಿಕ ಅಥವಾ ಭಾವನಾತ್ಮಕ ಆಪ್ತತೆಯಾಗಿರಬಹುದು, ಅಥವಾ ಅವೆರಡರ ಮಿಶ್ರಣವೂ ಆಗಿರಬಹುದು. ಆಪ್ತತೆ ಅದ್ಯಾವ ಪ್ರಕಾರದ್ದೇ ಆಗಿರಲೀ, ಅದು ಗಟ್ಟಿಗೊಳ್ಳಬೇಕಾದರೆ, ಈ ಕೆಳಗೆ ನಾವು ಪ್ರಸ್ತಾವಿಸಿರುವ ಕೆಲವು ಅತ್ಯಂತ ಪ್ರಮುಖ ಅಂಶಗಳು ಬಹು ಮುಖ್ಯ ಪಾತ್ರವಹಿಸುತ್ತವೆ:

ಪರಸ್ಪರರ ನಡುವೆ ಇರಬೇಕಾದ

ಪರಸ್ಪರರ ನಡುವೆ ಇರಬೇಕಾದ "ಅಗಾಧ ನಂಬಿಕೆ"

ನಿಮ್ಮ ಕುರಿತಾದ ಅತ್ಯಂತ ವೈಯಕ್ತಿಕ ವಿಚಾರಗಳನ್ನು, ಉದಾಹರಣೆಗೆ ಅತ್ಯಂತ ಮುಜುಗುರವನ್ನುಂಟು ಮಾಡಬಹುದಾದ ನಿಮ್ಮದೇ ಕುರಿತಾದ ಕೆಲವು ರಹಸ್ಯಗಳು ಅಥವಾ ನಿಮ್ಮ ಮನದಾಳದ ದುಗುಡಗಳು - ಇವೆಲ್ಲವನ್ನೂ ಆ ಇನ್ನೊಬ್ಬರೊಡನೆ ಹಂಚಿಕೊಳ್ಳಬೇಕಾದರೆ, ಮೊಟ್ಟಮೊದಲು ನೀವು ಆ ವ್ಯಕ್ತಿಯನ್ನು ಪೂರ್ತಿಯಾಗಿ ನಂಬಲು ಸಾಧ್ಯವಾಗುವಂತಿರಬೇಕು.

ಸ್ವಯಂ ನೀವೂ ಕೂಡ ನಂಬಿಕೆಗೆ ಅರ್ಹರು ಎಂದು ಆ ಇನ್ನೊಬ್ಬ ವ್ಯಕ್ತಿಗೆ ನೀವು ತೋರಿಸಿಕೊಟ್ಟಲ್ಲಿ, ಆಗ ಆ ವ್ಯಕ್ತಿಗೂ ಕೂಡ ನಿಮ್ಮ ಸಾಮಿಪ್ಯ ಹಿತಕರವೆನಿಸುತ್ತದೆ, ಅವರಿಗೂ ನಿಮ್ಮಲ್ಲಿ ನಂಬಿಕೆ ಹುಟ್ಟಿಕೊಳ್ಳುತ್ತದೆ.

ಸ್ವೀಕಾರ ಮನೋಭಾವ

ಸ್ವೀಕಾರ ಮನೋಭಾವ

ಮೇಲೆ ತಿಳಿಸಿರೋ ಪ್ರಕಾರ, ಅತ್ಯಂತ ಮುಜುಗುರಕ್ಕೀಡು ಮಾಡಬಹುದಾದ ನಿಮ್ಮದೇ ಕುರಿತಾದ ರಹಸ್ಯವನ್ನು ನೀವು ಆ ಇನ್ನೊಬ್ಬರೊಡನೆ ಹಂಚಿಕೊಳ್ಳುವಷ್ಟು ನಂಬಿಕೆ ನಿಮ್ಮಲ್ಲಿ ಹುಟ್ಟಿದೆ ಎಂದರೆ, ಆ ವ್ಯಕ್ತಿಯೂ ಕೂಡ ನೀವು ಹೇಗೇ ಆದರೂ ನಿಮ್ಮನ್ನು ಸ್ವೀಕರಿಸುತ್ತಾನೆ/ಳೆ ಅನ್ನೋ ನಂಬಿಕೆ ನಿಮ್ಮಲ್ಲಿ ಉಂಟಾಗಿದೆ ಅನ್ನೋದು ಖಚಿತವಾಗುತ್ತೆ. ಈ ಮಾತು ಇಬ್ಬರಿಗೂ ಅನ್ವಯವಾಗುತ್ತೆ. ಹಾಗೆ ಪರಸ್ಪರರು ಸ್ವೀಕರಿಸಿಕೊಂಡಾಗ ನಿಮ್ಮಿಬ್ಬರ ನಡುವೆ ಒಂದಿಷ್ಟು ಆಪ್ತತೆ ಉಂಟಾದಂತೆ ನಿಮಗೂ ಅನ್ನಿಸಲಾರಂಭಿಸುತ್ತೆ.

ಮೊದಲ ಬಾರಿಗೆ ನೀವು ಯಾರನ್ನಾದರೂ ಭೇಟಿಯಾದಾಗ, ಸಾರ್ವತ್ರಿಕವಾಗಿ ತಪ್ಪೆನಿಸುವ ನಿಮ್ಮ ಮನದಾಳದ ಆ "ಗುಪ್ತ ಮನೋಕಾಮನೆ" ಗೆ ಅವರು ಕಿವಿಯಾಗುತ್ತಾರೋ ಇಲ್ಲವೋ, ಹಾಗೊಂದು ವೇಳೆ ಕಿವಿಯಾದರೂ ಕೂಡ, "ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೋ ?!" ಎಂಬ ಗಲಿಬಿಲಿ ನಿಮ್ಮಲ್ಲಿ ಹುಟ್ಟಿಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ!!

ಆದರೆ, ಒಮ್ಮೆ ನಿಮ್ಮಿಬ್ಬರ ಮಧ್ಯೆ ಆಪ್ತತೆಯು ಬೆಳೆಯಿತೆಂದಾದರೆ, ತೆರೆದ ಪುಸ್ತಕದಂತೆ ನೀವು ನಿಮ್ಮ ಮನದಾಳದ ಎಲ್ಲ ಭಾವನೆಗಳನ್ನೂ, ಅವೆಷ್ಟೇ "ಹುಚ್ಚು ಯೋಚನೆಗಳೇ" ಆಗಿರಲೀ, ಯಾವುದೇ ಮುಚ್ಚುಮರೆಯಿಲ್ಲದೇ ಆ ಇನ್ನೊಬ್ಬರೊಡನೆ ಅವೆಲ್ಲವನ್ನೂ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆ ಹೇಳಿಕೊಂಡ ಬಳಿಕವೂ ನೀವು ಆ ಇನ್ನೊಬ್ಬರಿಗೆ ಸ್ವೀಕಾರಾರ್ಹರೇ ಆಗಿರುತ್ತೀರಿ ಹಾಗೂ ನಿಮ್ಮ ಬಗೆಗಿನ ಆಪ್ತ ಭಾವನೆ ಅವರಲ್ಲಿ ಹಾಗೆಯೇ ಮುಂದುವರಿಯುತ್ತದೆ.

ಪ್ರಾಮಾಣಿಕತೆ

ಪ್ರಾಮಾಣಿಕತೆ

ಪ್ರಾಮಾಣಿಕತೆ ಹಾಗೂ ಆಪ್ತತೆ ಎಂಬವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಇವು ಒಂದನ್ನೊಂದು ಬಿಟ್ಟಿಲಾರವೋ ಎಂಬಷ್ಟು "ಆಪ್ತತೆ" ಇವೆರಡರೆ ನಡುವೆ!

ಸ್ವಲ್ಪ ಸ್ವಲ್ಪವಾಗಿಯೇ ನಿಮ್ಮ ಮನದಾಳದ ಭಾವನೆಗಳನ್ನು ನಿಮ್ಮ ಆ ಇನ್ನೊಬ್ಬರಿಗೆ ಹೇಳಿಕೊಳ್ಳುವುದು ನಿಮಗೀಗ ಸುಲಭವಾಗಿದೆ. ಏಕೆಂದರೆ, ನೀವಿಬ್ಬರೂ ಈಗ ಅಷ್ಟರಮಟ್ಟಿಗೆ ಹತ್ತಿರದವರಾಗಿದ್ದೀರಿ!

ಅದೇ ಓಘದಲ್ಲಿ, ಪ್ರತಿಬಾರಿಯೂ ನೀವು ಆ ನಿಮ್ಮ ಇನ್ನೊಬ್ಬರೊಡನೆ ಮನಬಿಚ್ಚಿ ಮಾತನಾಡುವಾಗ, ನಿಮ್ಮೀರ್ವರ ನಡುವೆ ನಿಕಟತೆ ಹೆಚ್ಚಾಗುತ್ತಾ ಹೋಗುತ್ತದೆ. ನೀವು ಅದೆಷ್ಟು ಹತ್ತಿರದವರಾಗುತ್ತೀರೆಂದರೆ, ಮುಂದಿನ ಬಾರಿ ನೀವು ತೀರಾ ವೈಯಕ್ತಿಕವಾದದ್ದೇನನ್ನಾದರೂ ಹಂಚಿಕೊಳ್ಳ ಬಯಸಿದಾಗ, ನಿಮ್ಮ ಆ ಇನ್ನೊಬ್ಬರು ಅದಕ್ಕೆ ಕಿವಿಯಾಗಲು ಸಿದ್ಧರಿರುತ್ತಾರೆ ಎಂದು ನಿಮಗೆ ಗೊತ್ತೇ ಇರುತ್ತದೆ.

ಸುರಕ್ಷತಾ ಭಾವ

ಸುರಕ್ಷತಾ ಭಾವ

ನಿಮ್ಮ ಅತ್ಯಂತ ಮನದಾಳದ, ನಿಮ್ಮ ನೈಜ ಸ್ವರೂಪವನ್ನು ಇನ್ನೋರ್ವ ವ್ಯಕ್ತಿಯೊಡನೆ ಹಂಚಿಕೊಳ್ಳುವುದೆಂದರೆ ಅದು ನಿಮ್ಮನ್ನು ಮುಂದೆ ವಿಪತ್ತಿಗೀಡು ಮಾಡುವ ಸಾಧ್ಯತೆಯೂ ಇಲ್ಲದಿಲ್ಲ!!

ಹಾಗಾಗಿಯೇ ಯಾರೋ ಹೊಸಬರನ್ನು ಭೇಟಿಯಾದಾಗ ನೀವು ಅಷ್ಟು ಸುಲಭವಾಗಿ ತೆರೆದುಕೊಳ್ಳುವುದಿಲ್ಲ. ನೀವು ಅವರನ್ನು ಬೆಂಬಲಿಸಲು ಮುಂದಾಗುವಷ್ಟು ಅವರು ನಿಮ್ಮನ್ನು ಬೆಂಬಲಿಸುವರೋ, ಇಲ್ಲವೋ ಎಂಬುದು ನಿಮಗಾಗ ಖಚಿತವಾಗಿ ತಿಳಿದಿರುವುದಿಲ್ಲ.

ಹಾಗಾಗಿ, "ಆಪ್ತತೆ" ಎಂಬುದರ ಅರ್ಥವು, ನಿಮ್ಮ ನೈಜ ಸ್ವರೂಪವನ್ನು ಆ ಇನ್ನೊಬ್ಬರೊಡನೆ ಹಂಚಿಕೊಳ್ಳುವಾಗಲೂ ಸಾಕಷ್ಟು ಸುರಕ್ಷತಾ ಮನೋಭಾವ ನಿಮ್ಮಲ್ಲಿರುವುದೇ ಆಗಿರುತ್ತದೆ. ನಿಮ್ಮ ಬಗ್ಗೆ ತಿಳಿದ ಬಳಿಕವೂ ಆ ಇನ್ನೊಬ್ಬರು ನಿಮ್ಮನ್ನು ಹೀಗಳೆಯಲಾರರು ಎಂಬ ಗಟ್ಟಿ ನಂಬಿಕೆಯೇ ಈ ಸುರಕ್ಷತಾ ಭಾವನೆಯ, ಈ ಆಪ್ತತೆಯ ಆಧಾರವಾಗಿರುತ್ತದೆ.

ಕರುಣಾಭಾವ

ಕರುಣಾಭಾವ

ಯಾರಾದರೂ ನಮ್ಮ ಕುರಿತು ನೈಜ ಕಾಳಜಿವಹಿಸುತ್ತಿದ್ದಾರೆ ಎಂಬ ಭಾವನೆಯೇ ನಿಜಕ್ಕೂ ಬಲು ಅಪ್ಯಾಯಮಾನವಾದದ್ದು ಅಲ್ಲವೇ ?!!

ಯಾರದೋ ಜೊತೆಗಿನ ನಿಮ್ಮ ಸಂಬಂಧವು ಹೀನಾಯವಾಗಿ ಮುರಿದು ಬಿದ್ದಾಗಲೂ ಕೂಡ, ನಿಮ್ಮ ನೋವನ್ನು ಹಂಚಿಕೊಳ್ಳಲು ಸದಾ ಜೊತೆಗಿರುವ ನಿಮ್ಮ ಪರಮಾಪ್ತ ಸ್ನೇಹಿತರು ನಿಮ್ಮೊಡನೆ ಇದ್ದೇ ಇರುತ್ತಾರೆ ಅಲ್ಲವೇ ?! "ನೀವು ಹೇಗಿದ್ದೀರಿ ?" ಎಂದು ವಾರಕ್ಕೊಮ್ಮೆಯಾದರೂ ನಿಮ್ಮ ಸಹೋದರಿ ನಿಮ್ಮನ್ನು ವಿಚಾರಿಸದೇ ಬಿಡಲಾರರು ಎಂಬುದು ನಿಮಗೆ ಗೊತ್ತೇ ಇದೆ!

ಇಬ್ಬರ ವ್ಯಕ್ತಿಗಳ ನಡುವೆ ಅಂತ:ಕರಣ/ಕಾರುಣ್ಯಭಾವ/ಸಹಾನುಭೂತಿ ಇದ್ದಾಗ ಮಾತ್ರವೇ ಕ್ಷಮೆ ಹಾಗೂ ಪರಸ್ಪರ ಅರ್ಥೈಸಿಕೊಳ್ಳುವಿಕೆ ಇರಲು ಸಾಧ್ಯ.

ಒಬ್ಬರು ಇನ್ನೊಬ್ಬರ ಸೌಖ್ಯದ ಕುರಿತಾಗಿ ಕಾಳಜಿವಹಿಸುವ ವಿಚಾರದಲ್ಲಿ ಈ ಸಹಾನುಭೂತಿ ಎಂಬುದು ಒಂದು ನೈಸರ್ಗಿಕವಾದ ಘಟಕವೇ ಆಗಿದೆ ಎನ್ನಬಹುದು.

ಗಾಢವಾದ ಪ್ರೀತಿ

ಗಾಢವಾದ ಪ್ರೀತಿ

ಒಬ್ಬರು ಕುರಿತು ಇನ್ನೊಬ್ಬರು ಕಾಳಜಿವಹಿಸುವುದು ಒಂದು ವಿಚಾರವಾದರೆ, ನೀವು ಕಾಳಜಿ ವಹಿಸುತ್ತೀರಿ ಎಂದು ತೋರಿಸಿಕೊಡುವುದರ ಮೂಲಕವೂ "ಆಪ್ತತೆ" ಯನ್ನು ಬೆಳೆಸಿಕೊಳ್ಳುವಿರಿ.

ಪ್ರೀತಿ ಎಂಬುದು ಪ್ರೇಮಿಗಳಿಬ್ಬರ ನಡುವಿನ ಒಂದು ಚುಂಬನದ ರೂಪದಲ್ಲೋ, ಅಥವಾ ತಂದೆ/ತಾಯಿ ಮತ್ತು ಮಗುವಿನ ನಡುವಿನ ಒಂದು ಅಪ್ಪುಗೆಯ ರೂಪದಲ್ಲೋ ದೈಹಿಕ ಸ್ವರೂಪದ್ದೂ ಆಗಿರಬಹುದು. ಇಲ್ಲವೇ ಸದಾ ಹಾಗೆಯೇ ಇರಬೇಕೆಂದೂ ಇಲ್ಲ!!

ಈ ಪ್ರೀತಿ ಎಂಬುದನ್ನು ಮಾತುಗಳ ಮೂಲಕವೇ ವ್ಯಕ್ತಪಡಿಸಬೇಕೆಂದೇನೂ ಇಲ್ಲ. ಉದಾಹರಣೆಗೆ, ನಿಮ್ಮ ಕುರಿತಾದ ಅತೀ ಪ್ರೀತಿಯ ಕಾರಣಕ್ಕಾಗಿಯೇ ನಿಮ್ಮ ಸ್ನೇಹಿತರು ಯಾವುದೋ ಒಂದು ವಿಚಾರದಲ್ಲಿ ನಿಮಗೆ ನೆರವಾಗುತ್ತಾ ಅವರ ಇಡೀ ದಿನವನ್ನೇ ಅದಕ್ಕಾಗಿ ಮುಡಿಪಾಗಿ ಇಡಬಹುದು!!! ಇಂತಹ ಚಟುವಟಿಕೆಯೂ ಪ್ರೀತಿಯ ಅಭಿವ್ಯಕ್ತಿಯೇ ಅಲ್ಲವೇ ?!

ಸಂವಹನ

ಸಂವಹನ

ಒಂದು ಆರೋಗ್ಯಪೂರ್ಣ ಸಂಬಂಧದ ವಿಚಾರವಾದಲ್ಲಿ ಒಳ್ಳೆಯ ಸಂವಹನವೂ ಮಹತ್ತರ ಪಾತ್ರವಹಿಸುತ್ತದೆ ಅಂತಾ ಹೇಳೋದಕ್ಕೂ ಕಾರಣವಿದೆ!

ನಿಮಗೆ ಹತ್ತಿರವಾದವರ ಮನದಾಳದ ಮಾತನ್ನು ಕೇಳಲು ನೀವು ಮುಂದಾದಾಗ ಹಾಗೂ ನಿಜಕ್ಕೂ ನಿಮಗೆ ಏನನಿಸುತ್ತದೆ ಎಂಬುದನ್ನು ಅವರಿಗೆ ಮನಬಿಚ್ಚಿ ಹೇಳುವಾಗ, ನಿಮ್ಮಿಬ್ಬರ ನಡುವೆ ಒಂದು ಆಳವಾದ ಅರ್ಥೈಸಿಕೊಳ್ಳುವಿಕೆಯು ಹುಟ್ಟಿಕೊಳ್ಳುತ್ತದೆ.

ನೀವು ಒಬ್ಬರನ್ನೊಬ್ಬರು ಹೆಚ್ಚು ಹೆಚ್ಚಾಗಿ ಅರಿತುಕೊಂಡಂತೆಲ್ಲ, ನೀವಿಬ್ಬರೂ ಇನ್ನಷ್ಟು, ಮತ್ತಷ್ಟು ಹತ್ತಿರದವರಾಗುತ್ತೀರಿ!!

English summary

Elements That Define an Intimate Relationship

Here elements that define an intimate relationship, Have a look...
Story first published: Saturday, February 13, 2021, 18:12 [IST]
X
Desktop Bottom Promotion