For Quick Alerts
ALLOW NOTIFICATIONS  
For Daily Alerts

ಇಂಥಾ ಗುಣಗಳಿರುವ ವ್ಯಕ್ತಿ ಎಂದಿಗೂ ಉತ್ತಮ ಜೀವನ ಸಂಗಾತಿ ಆಗಲಾರರು

|

ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ನಿಜ, ಆದರೆ ದಂಪತಿಗಳಿಬ್ಬರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಗೌರವ ಒಬ್ಬರನ್ನೊಬ್ಬರು ಅರಿತು ಅರ್ಥಮಾಡಿಕೊಳ್ಳುವುದರಲ್ಲಿದೆ. ಸತಿಪತಿ ಯಾವ ರೀತಿ ಸಂವಹನ ನಡೆಸುತ್ತಾರೆ, ಗೌರವ ಮತ್ತು ವಾತ್ಸಲ್ಯ ತೋರಿಸುತ್ತಾರೆ ಮತ್ತು ತಮ್ಮಿಬ್ಬರ ಸಂಬಂಧ ಆರೋಗ್ಯಕರವಾಗಿರಲು ಇಬ್ಬರೂ ಹೇಗೆ ಶ್ರಮಿಸುತ್ತಾರೆ ಎಂಬುದೂ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಆದರೆ, ಈಗಿನ ಸಂಬಂಧಗಳು ಹಿಂದಿನಷ್ಟು ಸಂಪನ್ನವಾಗಿಲ್ಲ, ಸಣ್ಣಪುಟ್ಟ ವಿಷಯಗಳಿಗೆಲ್ಲಾ ದಂಪತಿಗಳಲ್ಲಿ ಕಲಹ, ದೂರಾಗುವುದು ಸಾಮಾನ್ಯವಾಗಿದೆ. ಆದ್ದರಿಂದ ವಿವಾಹಕ್ಕೂ ಮುನ್ನವೇ ವ್ಯಕ್ತಿ ನಮ್ಮ ಮನೋಭಿಲಾಷೆಗೆ ಹೊಂದುತ್ತಾರೆಯೇ ಎಂದು ಅವರೊಂದಿಗೆ ಚರ್ಚಿಸಿ, ಅರ್ಥೈಸಿಕೊಂಡು ನಂತರ ವಿವಾಹವಾಗುವುದು ಇಬ್ಬರಿಗೂ ಒಳಿತು.

ಅದರಲ್ಲೂ ಯುವತಿಯರು ಎಂಥಾ ಯುವಕನನ್ನು ಆಯ್ಕೆ ಮಾಡಬೇಕು, ಯಾವೆಲ್ಲಾ ಗುಣಗಳು ಯುವಕನಲ್ಲಿ ಇರಲೇಬಾರದು, ಯಾವ ಗುಣಗಳಿರುವ ಯುವಕನನ್ನು ವಿವಾಹವಾಗಬಾರದು ಎಂಬುದನ್ನು ಈ ಲೇಖನ ನಿಮಗೆ ತಿಳಿಸಿಕೊಡಲಿದೆ:

ದ್ರೋಹ ಸಲ್ಲದು

ದ್ರೋಹ ಸಲ್ಲದು

"ಒಮ್ಮೆ ಮೋಸಗಾರ ಎನಿಸಿಕೊಂಡವನು, ಯಾವಾಗಲೂ ಮೋಸಗಾರನೇ". ವ್ಯಕ್ತಿಯು ಒಮ್ಮೆ ತನ್ನ ಮಿತಿ/ಗಡಿ ದಾಟುವ ಮನಸ್ಸು ಮಾಡಿದರೆ ಇದು ಅವನ ನಿರಂತರ ಚಾಳಿಯಾಗಬಹುದು, ಮತ್ತೆ ಮತ್ತೆ ಗಡಿದಾಟುವುದು ಅವರಿಗೆ ಕಷ್ಟವೆನಿಸದು. ನೀವು ಇಷ್ಟಪಡುವ ಅಥವಾ ಮದುವೆ ಆಗಬಯಸುವ ವ್ಯಕ್ತಿ ಹಿಂದೆಯೂ ಸಂಬಂಧದಲ್ಲಿ ದ್ರೋಹ ಮಾಡಿದ್ದರೆ ಅಥವಾ ಸಂಬಂಧಕ್ಕೆ ಅಷ್ಟೇನೂ ಬೆಲೆಕೊಡದ, ಮೋಸ ಮಾಡುವ ಸ್ವಭಾವ ಹೊಂದಿದ್ದರೆ ಇವರು ಎಂದಿಗೂ ದಾಂಪತ್ಯ ಜೀವನದಲ್ಲಿ ಗೌರವವನ್ನು ಹೊಂದಿರುವುದಿಲ್ಲ. ಇಂಥಾ ಸ್ವಭಾವ ಇರುವ ವ್ಯಕ್ತಿಯನ್ನು ವಿವಾಹವಾಗುವುದರಿಂದ ನಿಮ್ಮ ವೈವಾಹಿಕ ಜೀವನವೂ ಕಹಿಯಾಗಿರುತ್ತದೆ. ಸಂಬಂಧ ಎನ್ನುವುದು ಒಂದೇ ಬಾರಿ ನಿರ್ಧರಿಸಿ ತೆಗೆದಿಕೊಳ್ಳುವ ನಿರ್ಣವಾಗಿಬೇಕು, ಪದೇ ಪದೇ ಬದಲಾದರೆ ಅದರಲ್ಲಿ ಯಾವುದೇ ಅರ್ಥವಿರುವುದಿಲ್ಲ.

ಚಟ ಚಟ್ಟಕ್ಕೆ ದಾರಿ

ಚಟ ಚಟ್ಟಕ್ಕೆ ದಾರಿ

ಚಟ ಚಟ್ಟಕ್ಕೆ ದಾರಿ ಎಂಬುದು ಎಲ್ಲರಿಗೂ ಗೊತ್ತು. ಮಾದಕ ದ್ರವ್ಯ ಸೇವನೆ, ಮದ್ಯಪಾನ, ಲೈಂಗಿಕ ವ್ಯಸನ ಮತ್ತು ಜೂಜಾಟಗಳಂಥ ಎಲ್ಲ ಚಟಗಳೂ ನಮ್ಮ ವಿನಾಶಕ್ಕೆ ನಾವೇ ದಾರಿ ಮಾಡಿಕೊಂಡಂತೆ. ಇಂಥವರು ವಿವಾಹಕ್ಕೂ ಮುನ್ನ ತಮ್ಮ ವ್ಯಸನಗಳನ್ನು ಬಿಡುವುದಾಗಿ ಹೇಳಿದರೂ ಜೀವನದಲ್ಲಿ ಯಾವುದಾದದರೂ ಸಮಸ್ಯಗಳು ಎದುರಾದರೆ ಮತ್ತೆ ವ್ಯಸನಕ್ಕೆ ದಾಸರಾಗುವ ಸಾಧ್ಯತೆ ಹೆಚ್ಚಿಸುತ್ತದೆ. ಹಲವು ಮಹಿಳೆಯರು ತಮ್ಮ ಸಂಗಾತಿಯಿಂದ ವ್ಯಸನ ಮುಕ್ತರಾಗಿ ಮಾಡುತ್ತೇವೆ ಎಂದು ಪ್ರಯತ್ನಪಡುತ್ತಾರಾದರೂ, ವಾಸ್ತವವೆಂದರೆ ಹೆಚ್ಚಿನ ವ್ಯಸನಿಗಳಿಗೆ ಇಂದ್ರಿಯನಿಗ್ರಹ ಅಸಾಧ್ಯ ಎಂದೇ ಹೇಳಬಹುದು.

ಮಾನಸಿಕ ಹಿಂಸೆ ದೈಹಿಕ ಹಿಂಸೆಗಿಂತ ಕ್ರೂರ

ಮಾನಸಿಕ ಹಿಂಸೆ ದೈಹಿಕ ಹಿಂಸೆಗಿಂತ ಕ್ರೂರ

ಹಿಂಸೆ ಎಂದರೆ ಅದು ದೈಹಿಕವಾಗಿರಬೇಕೇಂದು ಏನಿಲ್ಲ, ಅದು ಮಾನಸಿಕವಾದರೂ ಹಿಂಸೆಯೇ. ಪತಿಯು ಕೆಟ್ಟ, ಹಿಂಸಾತ್ಮಕ ಮಾತಿನ ಮೂಲಕವೇ ಸಂಗಾತಿಯ ಮೇಲೆ ದಾಳಿ ಮಾಡಿದರೂ, ದೈಹಿಕ ಹಿಂದೆ ನೀಡದಿದ್ದರೂ ಮಾನಸಿಕವಾಗಿಯೇ ಕಿರುಕುಳ ನೀಡುವವನು ಎಂದಿಗೂ ಮಾದರಿ ಸಂಗಾತಿ ಆಗಲಾರ, ಇದು ಎಂದಿಗೂ ಸುಖೀ ಕುಟುಂಬ ಆಗಲಾರದು. ಇಂಥವರು ಮಾನಸಿಕವಾಗಿ ಹಿಂಸೆ ನೀಡುವುದಲ್ಲೇ ತಾವು ಸಂತಸ ಪಡುತ್ತಾರೆ, ಇದು ದಿನೇ ದಿನೇ ಹೆಚ್ಚಾಗುತ್ತದೇ ವಿನಃ ಕಡಿಮೆ ಆಗಲಾರದು, ಇಂಥವರಿಗೆ ಆಪ್ತಸಮಾಲೋಚನೆ (ಕೌನ್ಸೆಲಿಂಗ್) ಅತ್ಯಗತ್ಯ.

ಪತ್ನಿಯ ಬೆನ್ನೆಲುಬಾಗಿರಬೇಕು

ಪತ್ನಿಯ ಬೆನ್ನೆಲುಬಾಗಿರಬೇಕು

ಯಾವ ವ್ಯಕ್ತಿ ತನ್ನ ಸಂಗಾತಿಯ ಮೇಲೆ ತೀವ್ರವಾದ ಅಸೂಯೆ ಮತ್ತು ತನ್ನದೇ ಆಸ್ತಿ ಎಂಬಂತೆ ವರ್ತಿಸುತ್ತಾರೊ, ಅಂಥವರು ಬಹುತೇಕ ಸ್ವಾಭಿಮಾನ ಕೊರತೆ ಮತ್ತು ಆತ್ಮವಿಶ್ವಾಸ ಇಲ್ಲದಿರುವ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಎಂತರ್ಥ. ಮಾನಸಿಕವಾಗಿ ಆರೋಗ್ಯವಾಗಿರುವ ಪುರುಷ ಮಹಿಳೆಯ ಸಾಮಾಜಿಕ ಸಂವಹನದ ಅಗತ್ಯವನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಅವಳ ದಾರಿಗೆ ಯಾವುದೇ ರೀತಿಯಲ್ಲೂ ಅಡ್ಡಬರುವುದಿಲ್ಲ. ಆದರೆ ಪುರುಷನಲ್ಲಿ ಅಸೂಯೆಯ ಗುಣಗಳು ಮುಂದೆ ಕೋಪ ಮತ್ತು ಹಿಂಸೆಗೆ ಕಾರಣವಾಗುತ್ತದೆ ಎಚ್ಚರ!.

ನಿಮ್ಮ ಸಂಗಾತಿಯಲ್ಲಿ ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೆ ವಿವಾಹವಾಗುವ ಮುನ್ನ ಒಮ್ಮೆ ಯೋಚಿಸಿನೋಡಿ ಇಲ್ಲವಾದಲ್ಲಿ ಆಪ್ತಸಮಾಲೋಚಕರೊಂದಿಗೆ ಚರ್ಚಿಸಿ. ಇಂಥಾ ಲಕ್ಷಣಗಳು ಸಂಬಂಧವನ್ನು ಮುಂದುವರಿಯಲು ಮತ್ತು ಆರೋಗ್ಯಕರ ಸಂಬಂಧವನ್ನು ಹೊಂದುವುದು ಕಷ್ಟಸಾಧ್ಯ. ಈ ರೀತಿ ತಮ್ಮ ಜೀವನದ ಜತೆಗೆ ನಿಮ್ಮ ಜೀವನವನ್ನು ಹಾನಿಮಾಡುವ ವ್ಯಕ್ತಿಯನ್ನು ಪೋಷಿಸುವ ಮತ್ತು ರಕ್ಷಿಸುವ ಮೂಲಕ ನಿಮ್ಮ ಜೀವನವನ್ನು ಬಲಿಕೊಡಬೇಡಿ. ನಿಮ್ಮ ಗುಣಕ್ಕೆ ಹೊಂದುವ ಸೂಕ್ತ ಆಯ್ಕೆಯ ಮೂಲಕ ಜೀವನವನ್ನು ಸುಖಮಯವಾಗಿಸಿಕೊಳ್ಳಿ.

English summary

Don't Marry Your Guy, If He Does These Things

Here we are discussing about how you should choose your life partner and early signs of dysfunction about destructive relationships. There are also an abundance of relationships that look nothing like the aforementioned relationship. Even more distressing is that many of these destructive relationships evolved despite early signs of dysfunction. For women, these signs should be deal breakers that scream “Don’t Marry Him!”. The four biggest deal breaker should be: Read more.
Story first published: Monday, May 10, 2021, 17:30 [IST]
X