For Quick Alerts
ALLOW NOTIFICATIONS  
For Daily Alerts

ಇವಷ್ಟೇ ಮಾಡಿದರೆ ಸಾಕು ಸೊಸೆಗೆ ಅತ್ತೆಯ ಮೇಲೆ ಪ್ರೀತಿ-ಗೌರವ ಹೆಚ್ಚುವುದು

|

ಮಗನಿಗೆ ಒಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಬೇಕು, ಅವನಿಗೆ ಒಳ್ಳೆಯ ಹೆಂಡತಿ ಸಿಗಬೇಕು ಎಂಬ ಆಸೆ ತಾಯಿಂದರಲ್ಲಿ ಇದ್ದೇ ಇರುತ್ತದೆ. ಮಗ ಮದುವೆಯಾಗಿ ಸೊಸೆ ಮನೆಗೆ ಬಂದ ಮೇಲೆ ಎಷ್ಟೋ ಅತ್ತೆಯರಿಗೆ ತಮ್ಮ ಸೊಸೆಂದಿರ ಜೊತೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಸೊಸೆಯೂ ಅಷ್ಟೆ ಅತ್ತೆಯನ್ನು ತಾಯಿ ಸ್ಥಾನದಲ್ಲಿ ನೋಡುತ್ತಾಳೆ, ಆದರೆ ಅತ್ತೆ ತಾಯಿಯೇ ಆಗುವುದು ಕೆಲವು ಕುಟುಂಬಗಳಲ್ಲಿ ಮಾತ್ರ. ಕೆಲವರಿಗಷ್ಟೇ ಅದು ಸಾಧ್ಯವಾಗುವುದು.

How To Be A Good Mother In Law

ಒಳ್ಳೆಯ ಅತ್ತೆಯಾಗಬೇಕೆಂದರೆ ಕೆಲವೊಂದು ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಆ ರೀತಿಯಿದ್ದರೆ ಕುಟುಂಬದಲ್ಲಿ ವೃಥಾ ಉಂಟಾಗುವ ಕಲಹಗಳನ್ನು ತಡೆಗಟ್ಟಬಹುದು, ಮಗನಿಗೂ ಅಮ್ಮ-ಪತ್ನಿ ನಡುವೆ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲ ತಪ್ಪುವುದು, ಆ ಕುಟುಂಬದಲ್ಲಿ ಖುಷಿ ನೆಲೆಸುವುದು, ಸೊಸೆ ನಿಮ್ಮನ್ನು ತಾಯಿಯಂತೆಯೇ ಕಾಣಲು, ನಿಮಗೆ ಅವಳನ್ನು ಮಗಳಂತೆ ಕಾಣಲು ಸಾಧ್ಯವಾಗುವುದು.

ಒಳ್ಳೆಯ ಅತ್ತೆಯಾಗಲು ಇವಷ್ಟೇ ಮಾಡಿದರೆ ಸಾಕು:

ಶೇ.99ರಷ್ಟು ಸಂದರ್ಭಗಳಲ್ಲಿ ಯಾವುದೇ ತಪ್ಪು ಕಂಡು ಹಿಡಿಯಲು ಹೋಗಬೇಡಿ

ಶೇ.99ರಷ್ಟು ಸಂದರ್ಭಗಳಲ್ಲಿ ಯಾವುದೇ ತಪ್ಪು ಕಂಡು ಹಿಡಿಯಲು ಹೋಗಬೇಡಿ

ಸೊಸೆ ಮನೆಗೆ ಬರುವವರೆಗೆ ಆ ಮನೆಯನ್ನು ನೀವು ನಿಭಾಯಿಸಿರುತ್ತೀರಿ, ಅವಳು ಬಂದಾಗ ಅದರ ಜವಾಬ್ದಾರಿ ಅವಳಿಗೆ ಕೊಡುತ್ತೇವೆ. ಅವಳು ಅದನ್ನು ಹೇಗೆ ನಿಭಾಯಿಸುತ್ತಿದ್ದಾಳೆ ಎಂದು ಸದಾ ತಪ್ಪುಗಳನ್ನು ಕಂಡು ಹಿಡಿಯುತ್ತಿದ್ದರೆ ಅದೇ ಕೆಲಸವಾಗುತ್ತದೆ. ಉದಾಹರಣೆಗೆ ನೀವು ಅಡುಗೆ ಮಾಡುವಂತೆ ಅವಳು ಮಾಡದೇ ಇರಬಹುದು, ನಿಮಗೆ ಖರ್ಚುಗಳಲ್ಲಿ ಹಿಡಿತವಿರಬಹುದು, ಅವಳಿಗೆ ಅದು ಇಲ್ಲದೇ ಹೋಗಬಹುದು, ಆದರೆ ಅವರು ಎಲ್ಲಾ ಕಲಿಯುತ್ತಾರೆ. ನಿಮಗೆ ಆದದ್ದು ನೀವು ಮಾಡಿ, ಇಲ್ಲಾಂದ್ರೆ ಸುಮ್ಮನೆ ಇದ್ದು ಬಿಡಿ. ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತ ಹೇಳುವುದನ್ನು ಮೊದಲು ನಿಲ್ಲಿಸಬೇಕು.

 ನೀವು ಎಂದಿಗೂ ಆಕೆಯ ತಾಯಿಯಾಗಲು ಸಾಧ್ಯವಿಲ್ಲ ಎಂಬುವುದು ನೆನಪಿರಲಿ

ನೀವು ಎಂದಿಗೂ ಆಕೆಯ ತಾಯಿಯಾಗಲು ಸಾಧ್ಯವಿಲ್ಲ ಎಂಬುವುದು ನೆನಪಿರಲಿ

ಅವಳನ್ನು ನೀವು ಮಗಳಂತೆ ಕಾಣುತ್ತೀರಿ, ಅವಳು ನಿಮ್ಮನ್ನು ತಾಯಿಯಂತೆ ನೋಡುತ್ತಾಳೆ, ಆದರೆ ಅವಳು ನಿಮಗೆ ನಿಮ್ಮದೇ ಮಗಳಂತೆ ಆಗುವುದಿಲ್ಲ, ಆಕೆಗೆ ನೀವು ಆಕೆಯ ತಾಯಿಯೇ ಆಗುವುದಿಲ್ಲ ಎಂಬುವುದು ನೆನಪಿರಲಿ. ಆಕೆಯ ತಾಯಿಯನ್ನು ಪ್ರೀತಿಯಿಂದ ಮಾತನಾಡಿಸಿ, ಆಗ ಅವಳಿಗೂ ನಿಮ್ಮ ಮೇಲಿನ ಪ್ರೀ

ಅವಳ ಮನೆಯ ಪಾರ್ಟಿ, ಫಂಕ್ಷನ್‌ಗಳಿಗೆ ಹೋಗಿ

ಅವಳ ಮನೆಯ ಪಾರ್ಟಿ, ಫಂಕ್ಷನ್‌ಗಳಿಗೆ ಹೋಗಿ

ನೀವು ನಿಮ್ಮ ಮನೆಯದ್ದೇ ಚಿಂತಿಸುವ ಬದಲು ಅವಳ ಮನೆಯ ಕಡೆಯ ಪಾರ್ಟಿ ಫಂಕ್ಷನ್‌ಗಳಿಗೆ ಕರೆದರೆ ಹೋಗಿ ಬನ್ನಿ, ಹಾಗೇ ಹೋಗುವಾಗ ನಿಮ್ಮ ಕೈಯಲ್ಲಾದ ಚಿಕ್ಕ-ಪುಟ್ಟ ಗಿಫ್ಟ್ ತಗೊಂಡು ಹೋಗಿ.. ಸೊಸೆ, ಮೊಮ್ಮಕ್ಕಳಿಗೂ ಕೈಯಲ್ಲಾದ ಉಡುಗೊರೆ ನೀಡುವುದು ಅಥವಾ ಅಪರೂಪಕ್ಕೆ ನಿಮ್ಮ ಸ್ಪೆಷಲ್ ಅಡುಗೆ ಮಾಡಿ ಅವರಿಗೆ ನೀಡುವುದು ಹೀಗೆಲ್ಲಾ ಮಾಡಿ.. ಈ ರೀತಿಯ ಚಿಕ್ಕ-ಪುಟ್ಟ ವಿಷಯಗಳು ಅತ್ತೆ-ಸೊಸೆ ಸಂಬಂಧ ಗಟ್ಟಿಗೊಳಿಸುವುದರಲ್ಲಿ ನೋ ಡೌಟ್.

ಎಲ್ಲಾ ವಿಷಯದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುವುದು ಬೇಡ

ಎಲ್ಲಾ ವಿಷಯದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುವುದು ಬೇಡ

ಸೊಸೆ-ಮಗನ ಎಲ್ಲಾ ವಿಷಯಗಳಲ್ಲಿ ನೀವು ಅಭಿಪ್ರಾಯ ವ್ಯಕ್ತ ಪಡಿಸಲು ಹೋಗಬೇಡಿ, ಕೆಲವೊಮದು ಸಂದರ್ಭಗಳಲ್ಲಿ ನಿಮ್ಮಿಷ್ಟಕ್ಕೇ ನೀವಿರುವುದೇ ಒಳ್ಳೆಯದು.

English summary

Do’s And Don’ts Of Being a Good Mother In Law in Kannada

Do’s And Don’ts Of Being a Good Mother In Law in Kannada, read on,
X
Desktop Bottom Promotion