For Quick Alerts
ALLOW NOTIFICATIONS  
For Daily Alerts

ಮಗಳ ದಿನ 2023: ಪ್ರತಿ ಅಪ್ಪ-ಅಮ್ಮ ಮಗಳಿಗೆ ಕಳುಹಿಸಲು ಬಯಸುವ ಮಾತುಗಳಿವು

|

ನಮ್ಮ ದೇಶದಲ್ಲಿ ಗಂಡು ಸಂತಾನವೇ ಶ್ರೇಷ್ಠ ಎಂದು ಯೋಚಿಸುವ ಕೀಳು ಮನಸ್ಥಿತಿ ಕೆಲವರಲ್ಲಿದೆ. ಆದ್ದರಿಂದಲೇ ಹೆಣ್ಣು ಮಗು ಬೇಡ ಎಂದು ಹೆಣ್ಣು ಭ್ರೂಣ ಹತ್ಯೆಕ್ಕೆ ಮುಂದಾಗುತ್ತಾರೆ. ಇನ್ನು ಕೆಲವರು ಹೆಣ್ಣು ಮಗು ಜನಿಸಿದರೆ ಅವಳಿಂದ ನಮಗೆ ಖರ್ಚು ಅಲ್ಲದೆ ಮತ್ತೇನು ಇಲ್ಲ, ಆದರೆ ಗಂಡು ಮಗು ಜನಿಸಿದರೆ ಮುಂದೆ ಅವನು ನಮ್ಮನ್ನು ನೋಡಿಕೊಳ್ಳುತ್ತಾನೆ ಎಂದು ಯೋಚಿಸುತ್ತಾರೆ. ಯಾರೆಲ್ಲಾ ಹಾಗೇ ಯೋಚಿಸಿರುತ್ತಾರೋ ತಮ್ಮ ಜೀವನದ ಕೊನೆಯ ಘಟ್ಟದಲ್ಲಾದರೂ ನಮ್ಮ ಬಾಳಿನಲ್ಲಿ ಮಗಳು ಎಷ್ಟು ಮುಖ್ಯ ಎಂದು ಅರಿತುಕೊಳ್ಳುತ್ತಾರೆ, ಇಲ್ಲದವರು ನಮಗೆ ಒಬ್ಬ ಮಗಳು ಇರಬೇಕಿತ್ತು ಎಂದು ಹಂಬಲಿಸುತ್ತಾರೆ.

Daughters Day Quotes from Mother

ಮಗಳು ಎಂಬುವುದೇ ಹಾಗೇ.... ಅವಳು ತೋರುವ ಪ್ರೀತಿ, ಆರೈಕೆ ನಿಮಗೆ ಬೇರೆ ಯಾರಿಂದಲೂ ಸಿಗಲು ಸಾಧ್ಯವಿಲ್ಲ. ಮದುವೆಯಾಗಿ ಗಂಡನ ಮನೆಗೆ ಹೋದರೂ ತನ್ನ ಅಪ್ಪ-ಅಮ್ಮನಿಗೆ ಸ್ವಲ್ಪ ಏನಾದರೂ ಆಯ್ತು ಎಂದು ತಿಳಿದರೆ ಅವಳು ಚಡಪಡಿಸುವ ರೀತಿ ಯಾರೂ ಪಡಲ್ಲ. ಎಷ್ಟೋ ಜನರಿಗೆ ಕೊನೆಗಾಲದಲ್ಲಿ ಆಸರೆಯಾಗಿರುವವಳು ಮಗಳೇ ಆಗಿರುತ್ತಾಳೆ. ಹೆಣ್ಣನ್ನು ತುಚ್ಛವಾಗಿ ಕಾಣುವ ಮನಸ್ಥಿತಿ ಕಡಿಮೆಯಾಗುತ್ತಿದೆ. ಮಗನ್ನಷ್ಟೇ ಪ್ರೀತಿಯಿಂದ, ಸಮಾನತೆಯಿಂದ ನೋಡಿಕೊಳ್ಳುವ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿವೆ.

ಮಗಳು ಹುಟ್ಟಿದಾಗ ತುಂಬಾ ಸಂಭ್ರಮಿಸುವವರೂ ನಮ್ಮ ನಡುವೆ ಇದ್ದಾರೆ. ಏಕೆಂದರೆ ಅವರಿಗೆ ಮಗಳ ಮಹತ್ವ ತಿಳಿದಿರುತ್ತದೆ. ಹಾಗಾಗಿ ಮನೆಗೆ ಲಕ್ಷ್ಮಿಯೇ ಬಂದಳು ಎಂದು ಭಾವಿಸುತ್ತಾರೆ.

ಮಗಳ ಬಗ್ಗೆ ಹೇಳುವಾಗ ನಿಮಗೊಂದು ಪುಟ್ಟ ಕತೆ ಹೇಳಬೇಕೆನಿಸುವುದು.
ಒಬ್ಬನಿಗೆ ಮದುವೆಯಾಗಿ ಮೂರು ಮಕ್ಕಳಿರುತ್ತವೆ. ಮೊದಲೆರಡು ಗಂಡು ಮಕ್ಕಳು, ಮೂರನೇಯ ಮಗು ಹೆಣ್ಣು ಮಗು. ಗಂಡು ಮಕ್ಕಳ ಹುಟ್ಟು ಮೊದಲಿಗೆ ಬರುತ್ತದೆ, ಆಗ ತಂದೆ ಚೆನ್ನಾಗಿಯೇ ತನ್ನ ಗಂಡು ಮಕ್ಕಳ ಹುಟ್ಟು ಹಬ್ಬ ಆಚರಿಸುತ್ತಾನೆ. ನಂತರ ಮಗಳ ಮೊದಲ ಹುಟ್ಟು ಹಬ್ಬ ಬರುತ್ತದೆ. ತಂದೆಯ ಸಂಭ್ರಮ ಹೇಳ ತೀರದ್ದು. ಮಗಳಿಗೆ ತುಂಬಾ ಡ್ರೆಸ್‌ಗಳನ್ನು ತರುತ್ತಾನೆ. ನನ್ನ ಮಗಳನ್ನು ರಾಜಕುಮಾರಿಯಂತೆ ಅಲಂಕರಿಸು ಎಂದು ಹೆಂಡತಿಗೆ ಹೇಳುತ್ತಾನೆ. ತನ್ನ ಫ್ರೆಂಡ್ಸ್‌ನ್ನೆಲ್ಲಾ ಮಗಳ ಹುಟ್ಟು ಹಬ್ಬಕ್ಕೆ ಆಹ್ವಾನಿಸುತ್ತಾನೆ. ಮಗಳ ಹುಟ್ಟು ಹಬ್ಬ ಹಾಗೇ ಆಚರಿಸಬೇಕು, ಹೀಗೆ ಆಚರಿಸಬೇಕು ಎಂದು ಸಾಕಷ್ಟು ಪ್ಲ್ಯಾನ್‌ ಮಾಡುತ್ತಾ ಇರುತ್ತಾನೆ. ಆತನ ಸಡಗರ ನೋಡಿ ಹೆಂಡತಿ ಅಲ್ಲಾ... ಗಂಡು ಮಕ್ಕಳ ಹುಟ್ಟು ಚೆನ್ನಾಗಿಯೇ ಮಾಡಿದ್ದೀರಿ, ಆದರೆ ಇಷ್ಟೊಂದು ಸಂಭ್ರಮ ಪಟ್ಟದ್ದು ನೋಡಿಲ್ಲ, ಮಗಳ ಬರ್ತ್‌ಡೇ ಏನು ವಿಶೇಷ? ಎಂದು ಕೇಳುತ್ತಾಳೆ.

ಆಗ ಅವನು ಹೆಂಡತಿ ಕೈ ನೇವರಿಸುತ್ತಾ ಹೇಳುತ್ತಾನೆ ನಾವಿಬ್ಬರೂ ಮದುವೆಯಾಗಿ ಹನಿಮೂನ್‌ಗೆ ಹೋಗಿದ್ದು ನೆನಪಿದ್ಯಾ? ಆಗ ನಮ್ಮ ಮನೆಗೆ ನಾನು ಫೋನ್‌ ಮಾಡಿ ಎಲ್ಲರೂ ಹೇಗಿದ್ದಾರೆ ಎಂದು ವಿಚಾರಿಸಿದಾಗ ಅಪ್ಪನಿಗೆ ಸ್ವಲ್ಪನ ಹುಷಾರಿಲ್ಲ ಅಂದ್ರು, ಅದಕ್ಕೆ ನಾನು ವೈದ್ಯರ ಬಳಿ ಹೋಗಿ ಪರೀಕ್ಷಿಸಿ, ಔಷಧಿಯನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ, ಹಣ ಸಾಕಾಗದಿದ್ದರೆ ಕೇಳಿ ಕಳುಹಿಸಿಕೊಡ್ತೀನಿ ಅಂದೆ.

ಆದರೆ ಅದೇ ದಿನ ಸಂಜೆ ನಿಮ್ಮ ಮನೆಗೆ ನೀನು ಫೋನಾಯಿಸಿದ್ದಾಗ ಅಪ್ಪನಿಗೆ ಸ್ವಲ್ಪ ಹುಷಾರಿಲ್ಲ ಎಂದು ನಿಮ್ಮಮ್ಮ ಹೇಳಿದ ತಕ್ಷಣ ನೀನು ಹನಿಮೂನ್‌ ಪ್ಲ್ಯಾನ್‌ ಕ್ಯಾನ್ಸಲ್‌ ಮಾಡಿ ಹೊರಡೋಣ ಎಂದು ಹೇಳಿದೆ... ಆಗ ತಿಳಿಯಿತು ಮಗಳು ಎಷ್ಟು ಮುಖ್ಯ ಎಂದು ಹೇಳಿದೆ.

ಸೆಪ್ಟೆಂಬರ್‌ ತಿಂಗಳ ನಾಲ್ಕನೇ ಭಾನುವಾರ ಮಗಳ ದಿನವನ್ನು ಆಚರಿಸಲಾಗುವುದು. ಈ ವರ್ಷ ಸೆಪ್ಟೆಂಬರ್‌ 25ರಂದು ಆಚರಿಸಲಾಗುವುದು. ಮಗಳು ತಮ್ಮ ಪಾಲಿಗೆ ಎಷ್ಟು ಸ್ಪೆಷಲ್‌ ಎಂದು ತಮ್ಮ ಸಂದೇಶ ಮೂಲಕ ಅವಳಿಗೆ ತಿಳಿಸುತ್ತಾರೆ.

ನಾವಿಲ್ಲ ಮಗಳ ದಿನದಂದು ನಿಮ್ಮ ಮಗಳಿಗೆ ಕಳುಹಿಸಿಲೂ ನಿಮ್ಮ ಮನಸ್ಸಿನ ಭಾವನೆಗಳನ್ನು ಸಂದೇಶ ರೂಪಕ್ಕೆ ಇಳಿಸುವ ಪ್ರಯತ್ನ ಮಾಡಿದ್ದೇವೆ, ಇದನ್ನು ಕಳುಹಿಸಿದರೆ ಅವಳಿಗೆ ಖಂಡಿತ ಖುಷಿಯಾಗುವುದು...

ಕೋಟ್ 1

ಕೋಟ್ 1

ನನ್ನ ತಾಯಿಯೇ ನನ್ನ ಮಗಳಾಗಿ ಹುಟ್ಟಿ ಬಂದಿದ್ದಾಳೆ ಅನಿಸುತ್ತ. ಅಮ್ಮ ತೋರುತ್ತಿದ್ದ ಪ್ರೀತಿ, ಆರೈಕೆ ನನ್ನ ಮಗಳಿಂದ ಮತ್ತೆ ನನಗೆ ಸಿಕ್ಕಿದೆ. ಅವಳು ನನಗೆ ಆ ದೇವರು ಕೊಟ್ಟು ವರ ನನಗೆ.

ನಿನ್ನಂಥ ಮಗಳನ್ನು ಪಡೆದ ಹೆಮ್ಮೆ ನನಗೆ... ನೂರ್ಕಾಲ ನೀ ನಗು-ನಗುತ್ತಾ ಇರಬೇಕು, ಅದೇ ಈ ಅಪ್ಪನ ಆಸೆ, ಆರೈಕೆ... ಮಗಳ ದಿನದ ಶುಭಾಶಯಗಳು ಮಗಳೇ...

ಕೋಟ್ 2

ಕೋಟ್ 2

ಆ ದೇವರಲ್ಲಿ ಸದಾ ನನ್ನ ರಕ್ಷಣೆಗೆ ನೀ ಜೊತೆಗಿರು ಎಂದು ಬೇಡಿದೆ, ಆ ದೇವರು ನಿನ್ನನ್ನೇ ಕೊಟ್ಟ, ನೀ ನನ್ನ ಭರವಸೆ, ಶಕ್ತಿ ಎಲ್ಲವೂ

ಸದಾ ಖುಷಿಯಾಗಿರು ಮಗಳೇ ಎಂಬುವುದೇ ಈ ಅಮ್ಮನ ಆರೈಕೆ- ಮಗಳ ದಿನದ ಶುಭಾಶಯಗಳು

ಕೋಟ್ 3

ಕೋಟ್ 3

ಅಪ್ಪನ ರಾಜ ಕುಮಾರಿ ಮಗಳು

ಅಮ್ಮನ ಜವಾಬ್ದಾರಿಯ ಭಾರ ಹೊರುವವಳೂ ಮಗಳು

ಅಪ್ಪ ಮಗಳನ್ನು ರಾಣಿಯಂತೆ ಮರೆಸಿದರೆ,

ಅಮ್ಮ ಮಗಳನ್ನು ತನ್ನ ಅದೃಷ್ಟವೆಂಬಂತೆ ಕಂಡರೆ

ಮಗಳು ಅಪ್ಪ-ಅಮ್ಮನ ರಾಜ-ರಾಣಿಯಂತೆ ಪ್ರತಿಕ್ಷಣ ಮೆರೆಸಬೇಕೆಂದು ಬಯಸುತ್ತಾಳೆ.. ಅದುವೇ ಮಗಳ ಪ್ರೀತಿ

ಗುಣದಲ್ಲಿ, ನಡತೆಯಲ್ಲಿ ನಮ್ಮ ಹೆಸರು, ಮನೆತನದ ಗೌರವವನ್ನು ಕಾಪಾಡುತ್ತಿರುವ ನಿನ್ನಂಥ ಮಗಳು ನಮಗಿರುವುದೇ ನಮ್ಮ ಹೆಮ್ಮೆ

ಮಗಳ ದಿನದ ಶುಭಾಶಯಗಳು

ಕೋಟ್ 4

ಕೋಟ್ 4

ಮಗ ಹುಟ್ಟಿದಾಗ ಖುಷಿ ಪಟ್ಟೆ

ಮಗಳು ಹುಟ್ಟಿದಾಗ ಹಬ್ಬದಂತೆ ಸಂಭ್ರಮಿಸಿದೆ

ಏಕೆಂದರೆ ಅಪ್ಪ-ಅಮ್ಮನ ವಿಷಯದಲ್ಲಿ ಮಗಳಿರುವ ಪ್ರೀತಿಯ ಆಳ ನ ಬಲ್ಲೆ...

ನನ್ನ ಮಗಳು ನನ್ನ ಹೆಮ್ಮೆ

ನನ್ನ ಮುದ್ದಿನ ಮಗಳೇ ನಗು ಸದಾ ನಿನ್ನ ಮೊಗದಲ್ಲಿರಲಿ

ಮಗಳ ದಿನದ ಶುಭಾಶಯಗಳು

ಕೋಟ್ 5

ಕೋಟ್ 5

ಮಗಳು ನಮ್ಮ ಮನೆಯ ಬೆಳಕು

ಅವಳ ಗಂಡನ ಮನೆಯ ಪ್ರಕಾಶ

ಎರಡೂ ಮನೆಯಲ್ಲಿ ಬೆಳಕಿನ ಪ್ರಭೆಗೆ ಅವಳು ಬೇಕೇಬೇಕು.

ಹುಟ್ಟಿದ ಮನೆಯನ್ನು, ಬಾಳುವ ಮನೆಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಶಕ್ತಿ ಇರುವುದು ಅವಳಿಗೇ ಮಾತ್ರ

ಮಗಳು ನಮ್ಮ ಪಾಲಿನ ಅದೃಷ್ಟ

ಮಗಳ ದಿನದ ಶುಭಾಶಯಗಳು

ಕೋಟ್ 6

ಕೋಟ್ 6

ಮಗ ಅಪ್ಪ- ಅಮ್ಮನ ಕಣ್ಣಾದರೆ

ಮಗಳು ಅವರ ಉಸಿರು

ಅವರು ಜೀವಿಸಿರುವ ಪ್ರತಿಕ್ಷಣದವರಿಗೂ ಅವಳು ಜೊತೆ ನಿಲ್ಲುತ್ತಾಳೆ... ಆ ಗುಣ ಇರುವುದೇ ಮಗಳಲ್ಲಿ

ನಿನ್ನಂಥ ಮಗಳನ್ನು ಪಡೆದ ಅದೃಷ್ಟಶಾಲಿಗಳು ನಾವು

ಮಗಳ ದಿನದ ಶುಭಾಶಯಗಳು ಮಗಳೇ... ನಿನ್ನಂಥ ಮಗಳು ಎಲ್ಲರಿಗೂ ಸಿಗಲಿ

English summary

Daughters day Quotes from Mother and Father

Daughters Day Quotes from Mother and Father, Read on...
X
Desktop Bottom Promotion