For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19: ಇಂಥ ಅಮಾನವೀಯ ಘಟನೆ ಆಗದಿರಲಿ, ಸಂಬಂಧ ಮೌಲ್ಯ ಎತ್ತಿ ಹಿಡಿಯೋಣ

|

ಕೊರೊನಾ ಎಲ್ಲಾ ರೀತಿಯಲ್ಲೂ ಹೊಡೆತ ಬೀರಿದೆ, ಸಂಬಂಧದ ವಿಷಯದಲ್ಲೂ... ಎಷ್ಟು ಸಂಬಂಧಗಳು ತಮ್ಮ ಸಂಬಂಧದ ಅರ್ಥವನ್ನೇ ಕಳೆದುಕೊಂಡಿದೆ. ಈ ಸಮಯದಲ್ಲಿ ಮುಖ್ಯವಾಗಿ ಬೇಕಾಗಿರುವುದೇ ಮಾನವೀಯತೆ, ಅದನ್ನೇ ಮರೆತವರಿದ್ದಾರೆ ಈ ಸಂಕಷ್ಟ ಕಾಲದಲ್ಲಿ ಇಂಥ ಹಲವಾರು ಘಟನೆಗಳನ್ನು ಕೇಳಿದ್ದೇವೆ, ಇಲ್ಲಿ ಒಮದೆರಡು ಉದಾಹರಣೆ ಮಾತ್ರ ನೀಡಲಾಗಿದೆ, ಅಲ್ಲದೆ ಏನು ಮಾಡಬೇಕು, ಏನು ಮಾಡಬಾರದು ಎಂಬುವುದನ್ನು ಕೂಡ ಹೇಳಲಾಗಿದೆ, ಅದರಂತೆ ನಡೆದುಕೊಳ್ಳೋಣ... ಸಂಬಂಧದ ಮೌಲ್ಯ ಎತ್ತಿ ಹಿಡಿಯೋಣ...

ಕೋವಿಡ್‌ 19 ಬಂದ ಮೇಲೆ ಕೆಲವೊಂದು ಸಂಬಂಧಗಳು ಅರ್ಥವನ್ನು ಕಳೆದು ಕೊಳ್ಳುತ್ತಿದೆಯೇ? ಕೆಲವೊಂದು ಘಟನೆಗಳನ್ನು ನೋಡುವಗ ಹಾಗೇ ಅನಿಸುತ್ತಿದೆ..

ಗಂಡನಿಗೆ ಗೇಟ್‌ ತೆಗೆಯದ ಪತ್ನಿ

ಗಂಡನಿಗೆ ಗೇಟ್‌ ತೆಗೆಯದ ಪತ್ನಿ

ಇತ್ತೀಚೆಗೆ ತಮಿಳು ನಾಡಿನಲ್ಲಿ ನಡೆದ ಘಟನೆ.. ಗಂಡ ಅಮೆರಿಕದಲ್ಲಿ ಕೆಲಸದಲ್ಲಿದ್ದ, ಈ ಕೊರೊನಾ ಸಂಕಷ್ಟ ಸಮಯದಲ್ಲಿ ತನ್ನ ಕುಟುಂಬದೊಂದಿಗೆ ಇರಲು ಊರಿಗೆ ಬಂದಿದ್ದಾನೆ, ನೋಡಿದರೆ ಹೆಂಡತಿ ಗೇಟಿನ ಬೀಗ ತೆಗೆಯಲ್ಲ.

ಅವಳಿಗೆ ಕೊರೊನಾ ಭಯ! ಗಂಡ ಹೆಂಡತಿ ಹತ್ತಿರ ನನ್ನ ಬಳಿ ಕೊರೊನಾ ನೆಗೆಟಿವ್ ಎಂದು ಹೇಳಿದರೂ ಅವಳು ಮಾತ್ರ ಗಂಡನನ್ನು ಒಳಗಡೆ ಕರೆಯಲಿಲ್ಲ, ಕೊನೆಗೆ ಈತನ ಪರದಾಟ ನೋಡಿದ ನೆರೆ ಹೊರೆಯವರೂ ಆಕೆಯ ಬಳಿ ಮಾತನಾಡುತ್ತಾರೆ, ಕೊನೆಗೆ ಅಲ್ಲಿಗೆ ಪೊಲೀಸರು ಬರುತ್ತಾರೆ, ಗೇಟಿನ ಬೀಗ ಒಡೆದು ಒಳಗೆ ಹೋಗುತ್ತಾನೆ, ಆದರೆ ಮನೆಯೊಳಗೆ ಹೋಗಲ್ಲ, ಅಷ್ಟೊತ್ತಿಗೆ ಆತನ ಮನಸ್ಸೂ ಮುರಿದು ಹೋಗಿರುತ್ತಾನೆ. ಅಲ್ಲಿದ್ದ ತನ್ನ ಕಾರು ತೆಗೆದುಕೊಂಡು ಸೀದಾ ಅಲ್ಲಿಂದ ಹೊರ ನಡೆಯುತ್ತಾನೆ.

ಇಲ್ಲಿ ಗಂಡ ಹೆಂಡತಿ ಸಂಬಂಧಕ್ಕೆ ಏನು ಅರ್ಥ ಇದೆ.. ಆಕೆಗೆ ಕೊರೊನಾ ಭಯವಿದ್ದರೆ ಗಂಡನ ಒಳ ಕರೆದು ಸ್ವಲ್ಪ ದಿನ ಐಸೋಲೇಷನ್‌ನಲ್ಲಿ ಇರುವಂತೆ ಸೂಚಿಸಬಹುದಾಗಿತ್ತು...ಕೊರೊನಾ ಎದುರಿಸಲು ಸಾಮಾಜಿಕ ಅಂತರ ಇರಬೇಕು, ಆದರೆ ಮನಸ್ಸುಗಳ ನಡುವೆ ಅಂತರ ಬರಲು ಖಂಡಿತ ಬಿಡಬಾರದು...

ತಂದೆ ಬೇಡ, ಹಣ ಬೇಕು

ತಂದೆ ಬೇಡ, ಹಣ ಬೇಕು

ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಸಾಕಷ್ಟು ವೈರಲ್ ಆಗಿತ್ತು. ತಂದೆ ಕೊರೊನಾದಿಂದಾಗಿ ಸಾವನ್ನಪ್ಪಿದ್ದರು, ಮಗ ನೋಡಲು ಬಂದಿರಲಿಲ್ಲ..ಅಧಿಕಾರಿಗಳು ಆತನಿಗೆ ಕರೆ ಮಾಡಿದ್ದಾಗ ತಂದೆಯ ಹಣ ಪಡೆಯಲು ಸಿದ್ಧನಿದ್ದ, ಅಂಥ ಮಗನ ವರ್ತನೆಗೆ ನೆಟ್ಟಿಗರು ಟೀಕೆ ಮಾಡಿದ್ದರು.

ಚಾಮರಾಜನಗರದಲ್ಲಿ ನಡೆದ ಅಮಾನವೀಯ ಘಟನೆ

ಚಾಮರಾಜನಗರದಲ್ಲಿ ನಡೆದ ಅಮಾನವೀಯ ಘಟನೆ

ಮತ್ತೊಂದು ಅಮಾನವೀಯ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಅದೊಂದು ಬಡ ಕುಟುಂಬ, ಆ ಕುಟುಂಬಕ್ಕೆ ಕೊರೊನಾ ಮಹಾಮಾರಿ ತಗುಲಿತ್ತು, ಆದರೆ ಅದರಿಂದ ಆ ಕುಟುಂಬಕ್ಕೆ ಏನೂ ಆಗಿರಲಿಲ್ಲ... ಆದರೆ ಜನರ ವರ್ತನೆ ಅವರನ್ನು ಬಲಿ ತೆಗೆದುಕೊಂಡಿದೆ. ಕೊರೊನಾದಿಂದ ಚೇತರಿಸಿದ ಆ ಕುಟುಂಬವನ್ನು ಯಾರೂ ಮಾತನಾಡಿಸಲು ಬರುತ್ತಿಲ್ಲ ಎಂದು ಆ ಮುಗ್ಧ ಜೀವಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ. ಇವರೊಂದಿಗೆ ಜನರು ಎಷ್ಟೊಂದು ಕ್ರೂರವಾಗಿ ನಡೆದುಕೊಂಡಿದ್ದಾರೆ, ಛೀ.. ಇಂತಹ ಅಮಾನವೀಯ ವರ್ತನೆ ಬೇಕೆ?

ಕೊರೊನಾ ಎಂಬ ಸಾಂಕ್ರಾಮಿಕ ರೋಗವನ್ನು ಗೆಲ್ಲಬೇಕೆಂದರೆ ಮುಖ್ಯವಾಗಿ ಬೇಕಾಗಿರುವುದು ಧೈರ್ಯ ಹಾಗೂ ನಮ್ಮವರು ನಮಗಾಗಿ ತೋರುವ ಪ್ರೀತಿ... ಕೊರೊನಾ ಹೆಸರಿನಲ್ಲಿ ಸಂಬಂಧದ ಮೌಲ್ಯ ಕುಸಿಯದಿರಲಿ. ಕೊರೊನಾ ಸಮಯದಲ್ಲಿ ಸಂಬಂಧದ ಮೌಲ್ಯ ಹೆಚ್ಚಿಸಲು ನೀವೇನು ಮಾಡಬೇಕು ಎಂದು ನೋಡುವುದಾದರೆ:

ಸಹಾಯ ಮಾಡಿ:

ಸಹಾಯ ಮಾಡಿ:

ನೆರೆಮನೆಯಲ್ಲಿ ಯಾರಿಗಾದರೂ ಕೊರೊನಾ ಬಂದ್ರೆ ಅವರ ಸಹಾಯಕ್ಕೆ ಯಾರೂ ಇಲ್ಲದಿದ್ದರೆ ನಿಮ್ಮ ಕೈಯಲ್ಲಿ ಆದ ಸಹಾಯ ಮಾಡಿ. ಅವರ ಅಗ್ಯತಗಳೇನು ಎಂದು ಕೇಳಿ ತಂದು ಕೊಡಿ. ದುಡ್ಡಿದ್ದರೂ ಒಂದು ವಸ್ತು ತರಲು ಅವರಿಗೆ ಹೊರಗಡೆ ಹೋಗಲು ಸಾಧ್ಯವಿಲ್ಲ, ಅಂಥ ಸಂದರ್ಭದಲ್ಲಿ ನೀವು ಔಷಧಿ ತಂದು ಕೊಡಿ. ನಿಮ್ಮ ಕೈಯಲ್ಲಿಯೂ ಹಣವಿಲ್ಲ ಎಂದು ಚಿಂತಿಸಬೇಡಿ, ಅವರು ಹಣ ಕೊಡುತ್ತಾರೆ, ನೀವು ವಸ್ತುಗಳನ್ನು ತಂದು ಕೊಡುವ ಧೈರ್ಯ ಮಾಡಬೇಕಷ್ಟೆ.

ಕರೆ ಮಾಡಿ:

ಕರೆ ಮಾಡಿ:

ನಿಮ್ಮ ಸ್ನೇಹಿತರಿಗೆ ಅಥವಾ ನೆರೆ ಮನೆಯವರಿಗೆ ಕೊರೊನಾ ಬಂದ್ರೆ ಕರೆ ಮಾಡಿ ಧೈರ್ಯದ ಮಾತುಗಳನ್ನು ಆಡಿ, ಇದು ಅವರಲ್ಲಿ ಧೈರ್ಯ ತುಂಬುವುದು,ಯಾವಾಗಲೂ ಒಳ್ಳೆಯ ವಿಷಯನೇ ಚರ್ಚಿಸಿ. ಅವರು ತುಂಬಾ ಸುಸ್ತು ಅಂದ್ರೆ, ನನ್ನ ಫ್ರೆಂಡ್‌ಗೂ ಇತ್ತು, ಆದರೆ ಈಗ ಆರಾಮ ಆಗಿದ್ದಾನೆ ಅನ್ನಿ, ಅದು ಅವರಲ್ಲಿ ಧೈರ್ಯ ತುಂಬುತ್ತೆ. ಸಾವು, ನೋವಿನ ಬಗ್ಗೆ ಅವರಲ್ಲಿ ಮಾತನಾಡಬೇಡಿ.

ಮನೆಯವರಿಗೆ ಸೋಂಕು ತಗುಲಿದರೆ: ಐಸೋಲೇಷನ್ ಮಾಡಿದರೂ

ಮನೆಯವರಿಗೆ ಸೋಂಕು ತಗುಲಿದರೆ: ಐಸೋಲೇಷನ್ ಮಾಡಿದರೂ

ಅವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ. ಯಾವುದೇ ಭಯ, ಆತಂಕ ತೋರಿಸಬೇಡಿ, ಅವರಿಗೆ ಸಮಯಕ್ಕೆ ಸರಿಯಾದ ಔಷಧ, ಆಹಾರ ಕೊಡಿ, ಪ್ರೀತಿಯಿಂದ ಮಾತನಾಡಿಸಿ, ತಮಾಷೆ ಮಾಡಿ, ಇವೆಲ್ಲಾ ಅವರನ್ನು ಬೇಗ ಚೇತರಿಸುವಂತೆ ಮಾಡುವುದು.

 ಮಾನವೀಯತೆ ಮರೆಯದಿರೋಣ:

ಮಾನವೀಯತೆ ಮರೆಯದಿರೋಣ:

ಕಾಲದಲ್ಲಿ ಮುಖ್ಯವಾಗಿ ಇದನ್ನು ಎದುರಿಸಲು ನಾವೆಲ್ಲಾ ಒಟ್ಟಾಗಿ ಹೋರಾಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸಿರಲಿ, ಪ್ರೀತಿಯಿಂದ ಮತನಾಡಿಸಿ. ಕೊರೊನಾದಿಂದ ಗುಣಮುಖರಾದವರನ್ನು ಮಾತನಾಡಿಸಲು ಭಯ ಪಡಬೇಡಿ, ಅವರೊಂದಿಗೆ ಎಂದಿನಂತೆ ಸಹಜವಾಗಿರಿ. ನೀವು ಧೈರ್ಯವಾಗಿರಿ, ಮತ್ತೊಬ್ಬರಿಗೆ ಧೈರ್ಯ ತುಂಬಿ....

English summary

Covid 19: Don't Forget Humanity And Relationship Values During This Pandemic Crisis

Covid 19: Don't forget humanity and relationship values during this pandemic crisis,
Story first published: Thursday, June 3, 2021, 17:59 [IST]
X
Desktop Bottom Promotion