For Quick Alerts
ALLOW NOTIFICATIONS  
For Daily Alerts

ಕಸಿನ್ಸ್ ಡೇ: ಏಕೈಕ ಸಂತಾನವಾಗಿ ಬೆಳೆಯುವ ಮಗುವಿಗೆ ಈ ಕಾರಣಗಳಿಗೆ ಕಸಿನ್ಸ್ ತುಂಬಾನೇ ಮುಖ್ಯ

|

ಜುಲೈ 24 ಕಸಿನ್ಸ್ ದಿನ...ಕಸಿನ್ಸ್ ನಮ್ಮ ಬದುಕಿನಲ್ಲಿ ಅವರಿಗೊಂದು ಸ್ಪೆಷಲ್ ಸ್ಥಾನವಿರುತ್ತದೆ, ಅದರಲ್ಲೂ ಬಾಲ್ಯದಲ್ಲಿ ಅಜ್ಜಿ ಮನೆಗೆ ಅಥವಾ ಮನೆಯ ಯಾವುದೋ ಸಭೆ, ಸಮಾರಂಭಗಳಿಗೆ ಹೋದಾಗ ಕಸಿನ್ಸ್‌ ಬಂದಿರುತ್ತಾರೆ, ಅವರು ಬಂದಾಗಲೇ ನಮ್ಮ ಸಂಭ್ರಮ ಹೆಚ್ಚುವುದು.

Cousins day

ಚಿಕ್ಕ ವಯಸ್ಸಿನವರಾದರೆ ಕೂಡಿ ಆಡುತ್ತಿದ್ದರೆ, ಯೌವನ ಪ್ರಾಯದವರಾದರೆ ತಮ್ಮ ವಿಚಾರಗಳನ್ನು ಹಂಚುತ್ತಾರೆ, ಇನ್ನು ಪ್ರಾಯದವರು ತಮ್ಮ ಕಸಿನ್ಸ್‌ ಜೊತೆ ಹರಟೆಯಲ್ಲಿ ಮುಳಗಿರುತ್ತಾರೆ... ಹೀಗೆ ಎಲ್ಲಾ ಪ್ರಾಯದವರಿಗೂ ಕಸಿನ್ಸ್‌ ಮುಖ್ಯ.

ಒಡ ಹುಟ್ಟಿದವರು ಬೇಕಾದರೆ ಯಾವದಾದರೂ ಕಾರಣಕ್ಕೆ ದೂರವಾಗಬಹುದು, ಆದರೆ ಕಸಿನ್ಸ್ ಮಾತ್ರ ಸದಾ ನಮಗೆ ಆಪ್ತರಾಗಿಯೇ ಇರುತ್ತಾರೆ. ಏಕೆಂದರೆ ಇವರ ಜೊತೆಗೆ ಯಾವುದೇ ಆಸ್ತಿ ಜಗಳವಿರಲ್ಲ, ಎಲ್ಲಾ ಸಮಯದಲ್ಲಿ ಜೊತೆಗೆ ಇರಲ್ಲ, ಸಿಗುವುದು ಅಪರೂಪಕ್ಕೆ ಆ ಸಮಯವನ್ನು ಸಂತೋಷದಿಂದ ಅವರ ಜೊತೆ ಕಳೆಯುತ್ತೇವೆ.

ಇನ್ನು ತಂದೆ-ತಾಯಿಗೆ ಒಂದೇ ಸಂತಾನವಾಗಿದ್ದರೆ ಅವರ ಪಾಲಿಗಂತೂ ಕಸಿನ್ಸ್‌ ಎಂಬುವುದು ತುಂಬಾನೇ ಮುಖ್ಯವಾಗಿರುತ್ತದೆ. ಏಕೆಂದರೆ ಕೂಡಿ ಆಡಿ ಬೆಳೆಯಲು ಯಾರೂ ಇರಲ್ಲ, ಎಲ್ಲವನ್ನೂ ಅಪ್ಪ-ಅಮ್ಮನ ಜೊತೆ ಹೇಳಿಕೊಳ್ಳಲು ಸಾಧ್ಯವಿಲ್ಲ, ಎಷ್ಟೋ ಬಾರಿ ನನಗೊಂದು ಅಣ್ಣನೋ, ಅಕ್ಕನೋ, ತಮ್ಮನೋ, ತಂಗಿಯೋ ಇರಬೇಕೆಂದು ಅನಿಸಿಯೇ ಅನಿಸಿರುತ್ತದೆ.

ಅಂಥವರ ಜೀವನದಲ್ಲಿ ಕಸಿನ್ಸ್‌ಗೆ ತುಂಬಾನೇ ಪ್ರಾಮುಖ್ಯತೆ ಇರುತ್ತದೆ. ಒಂಟಿಯಾಗಿ ಬೆಳೆಯುವ ಮಕ್ಕಳಿಗೆ ಕಸಿನ್ಸ್‌ ಈ ಕಾರಣಗಳಿಗೆ ತುಂಬಾನೇ ಮುಖ್ಯವಾಗುತ್ತಾರೆ...

ಒಂಟಿತನ ದೂರ ಮಾಡಲು

ಒಂಟಿತನ ದೂರ ಮಾಡಲು

ಒಬ್ಬನೇ ಮಗ/ ಮಗಳಾಗಿ ಬೆಳೆಯುತ್ತಿರುವ ಮಗುವಿಗೆ ಪೋಷಕರು ಎಷ್ಟೇ ಆಟ ಸಾಮಾನು ತಂದು ಕೊಡಲಿ, ಎಷ್ಟೇ ಸೌವಲತ್ತು ಒದಗಿಸಲಿ ಅವರ ಒಳ ಮನಸ್ಸಿನಲ್ಲಿ ಒಂಟಿತನ ಎಂಬುವುದು ಇದ್ದೇ ಇರುತ್ತದೆ. ಅಂಥವರನ್ನು ಮಾತನಾಡಿಸಿದಾಗ ಈ ಮಾತನ್ನು ಹೇಳಿಯೇ ಹೇಳುತ್ತಾರೆ. ಈ ಒಂಟಿತನ ಹೋಗಲಾಡಿಸಲು ಕಸಿನ್ಸ್ ಸಹಾಯ ಮಾಡುತ್ತಾರೆ. ಅವರು ಇವರ ಮನೆಗೆ ಬರುವುದು, ಇವರು ಅವರ ಮನೆಗೆ ಹೋಗುವುದು ಆಡುವುದು ಮಾಡುವುದರಿಂದ ಬಾಲ್ಯದಲ್ಲಿ ಒಂಟಿಯಾಗಿ ಬೆಳೆಯುವ ಮಗುವಿಗೆ ಕಾಡುವ ಒಂಟಿತನ ದೂರವಾಗುವುದು, ಆ ಮಕ್ಕಳು ತಮ್ಮ ಕಸಿನ್ಸ್ ಜೊತೆ ಖುಷಿಯಾಗಿ ಸಮಯ ಕಳೆಯುತ್ತಾರೆ.

ಮನಸ್ಸಿನ ಭಾವನೆ ಹಂಚಿಕೊಳ್ಳಲು

ಮನಸ್ಸಿನ ಭಾವನೆ ಹಂಚಿಕೊಳ್ಳಲು

ಎಷ್ಟೋ ಜನರಿಗೆ ಕಸಿನ್ಸ್‌ ಆಪ್ತ ಸ್ನೇಹಿತರು ಕೂಡ ಆಗಿರುತ್ತಾರೆ, ಅವರೊಂದಿಗೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಮನಸ್ಸಿನ ಭಾರ ಕಡಿಮೆಯಾಗುವುದು. ಈ ಕಾರಣದಿಂದ ಕಸಿನ್ಸ್‌ ತುಂಬಾನೇ ಆಪ್ತರಾಗುತ್ತಾರೆ.

ಕಷ್ಟದಲ್ಲಿ ಇರುವಾಗ ಸ್ಪಂದಿಸುತ್ತಾರೆ

ಕಷ್ಟದಲ್ಲಿ ಇರುವಾಗ ಸ್ಪಂದಿಸುತ್ತಾರೆ

ನಮಗೆ ಏನೋ ಕಷ್ಟವಿದೆ ಎಂದಾಗ ಅದನ್ನು ಕಸಿನ್ಸ್‌ ಬಳಿ ಹೇಳಿದಾಗ ಅವರು ಖಂಇಡಿತ ಸ್ಪಂದಿಸುತ್ತಾರೆ, ಕೆಲವು ಸಲಹೆಗಳನ್ನೂ ನೀಡುತ್ತಾರೆ. ಅವರು ನಮಗೆ ಸಹೋದರ-ಸಹೋದರಿ ಸ್ಥಾನದಲ್ಲಿ ನಿಂತು ಸಾಂತ್ವಾನ ತುಂಬುತ್ತಾರೆ. ಎಷ್ಟೋ ಸಂದರ್ಭದಲ್ಲಿ ಅವರ ಜೊತೆ ಸ್ವಲ್ಪ ಸಮಯ ಕಳೆದರೆ ತುಂಬಾನೇ ಖುಷಿಯಾಗುವುದು. ಇನ್ನು ಒಂಟಿಯಾಗಿ ಬೆಳೆಯುವವರಿಗೆ ಬೆಳೆದ ಮೇಲೆ ಸಹೋದರನ ಮನೆ, ಸಹೋದರಿ ಮನೆ ಅಂತ ಇರಲ್ಲ. ಇವರೇ ಆ ಸ್ಥಾನ ತುಂಬಿ ಮನಸ್ಸಿಗೆ ತೃಪ್ತಿ ಕೊಡುತ್ತಾರೆ.

 ಕಸಿನ್ಸ್ ದಾಯಾದಿಗಳಾಗುವುದಿಲ್ಲ

ಕಸಿನ್ಸ್ ದಾಯಾದಿಗಳಾಗುವುದಿಲ್ಲ

ಒಂದು ಮಾತಿದೆ ಹುಟ್ಟುವಾಗ ಅಣ್ಣ-ತಮ್ಮಂದಿರು, ಬೆಳೆಯುತ್ತಾ-ಬೆಳೆಯುತ್ತಾ ದಾಯಾದಿಗಳು... ಹೌದು ನಮಗೆ ಸ್ವಂತ ಸಹೋದರ-ಸಹೋದರಿ ಇದ್ದರೆ ಬಾಲ್ಯದಲ್ಲಿ ಅವರ ಜೊತೆಗೂಡಿ ಬೆಳೆಯುತ್ತೇವೆ... ಬೆಳೆದ ಮೇಲೆ ನಮಗೂ ಒಂದು ಕುಟುಂಬ ಅಂತ ಆದ ಮೇಲೆ ಆಸ್ತಿ-ಅಂತಸ್ತು ಕಾರಣಕ್ಕೆ ಕಿತ್ತಾಡುವವರೇ ಜಾಸ್ತಿ... ಎಷ್ಟೋ ಒಡ ಹುಟ್ಟಿದವರು ದೊಡ್ಡವರಾದ ಮೇಲೆ ಯಾವುದೋ ಒಂದು ಕಾರಣಕ್ಕೆ ಜಗಳವಾಡಿ ಸಂಬಂಧವನ್ನು ಮುರಿದುಕೊಂಡಿರುತ್ತಾರೆ. ಆದರೆ ಕಸಿನ್ಸ್ ಜೊತೆ ಆ ರೀತಿ ಆಗಲ್ಲ (ಅವರ ಜೊತೆ ಹಣದ ವ್ಯವಹಾರ ಇಟ್ಟುಕೊಳ್ಳದಿದ್ದರೆ). ಅವರು ಮೊದಲು ಹೇಗಿರುತ್ತಾರೋ ಕೊನೆಯವರಿಗೂ ಹಾಗೇ ಇರುತ್ತಾರೆ. ಹಾಗಾಗಿ ಒಂಟಿಯಾಗಿ ಬೆಳೆಯುವ ಮಕ್ಕಳಿಗೆ ಕಸಿನ್ಸ್ ಜೊತೆ ಒಳ್ಳೆಯ ಒಡನಾಟ ಇದ್ದರೆ ಅವರು ಬಾಲ್ಯದಲ್ಲಿ ಎಷ್ಟೋ ಪ್ರೀತಿ-ವಿಶ್ವಾಸ ಇಟ್ಟಿರುತ್ತಾರೋ ಅಷ್ಟೇ ಪ್ರಿತಿ ವಿಶ್ವಾಸ ಕೊನೆಯವರಿಗೆ ಇರುತ್ತದೆ, ಅಲ್ಲದೆ ಒಂಟಿ ಎಂದು ಅನಿಸುವುದೇ ಇಲ್ಲ.

English summary

Cousins day: The Importance Of Cousins To An Only Child in kannada

Cousins day: the importance of cousins to an only child in kannada, read on...
Story first published: Saturday, July 24, 2021, 19:44 [IST]
X
Desktop Bottom Promotion