For Quick Alerts
ALLOW NOTIFICATIONS  
For Daily Alerts

ಸಮಾನ ವೇತನ ಪಡೆಯುವ ದಂಪತಿಗಳು ಹೆಚ್ಚು ಸಂತೋಷವಾಗಿರುತ್ತಾರಂತೆ!

|

ಸುಖ ಸಂಸಾರಕ್ಕೆ ಪ್ರೀತಿ ಒಂದಿದ್ದರೆ ಸಾಕು ಎನ್ನುವ ಜನರು ಸಾಕಷ್ಟಿದ್ದಾರೆ. ಆದರೆ ವಾಸ್ತವದಲ್ಲಿ ಜೀವನ ಮಾಡಲು ಪ್ರೀತಿ ಒಂದಿದ್ದರೆ ಸಾಲದು. ಅದರ ಜೊತೆಗೆ ಜೀವನ ಸಾಗಿಸಬೇಕಾದರೆ ಹಣವೂ ಮುಖ್ಯವಾಗಿರುತ್ತದೆ. ಇದೇ ಕಾರಣಕ್ಕಾಗಿ ಇಂದು ಪತಿ -ಪತ್ನಿ ಇಬ್ಬರೂ ದುಡಿಯೋದು. ಏಕೆಂದರೆ ಒಬ್ಬರಿಂದಲೇ ಸಂಸಾರ ಎಂಬ ಗಾಡಿ ಎಳೆಯಲು ಸಾಧ್ಯವಿಲ್ಲ.

ಅವರವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗವು ಸಿಗುವುದು. ಕೆಲವರಲ್ಲಿ ಪತಿಗೆ ಹೆಚ್ಚಿನ ಸಂಬಳವಿದ್ದರೆ, ಇನ್ನು ಕೆಲವು ದಾಂಪತ್ಯದಲ್ಲಿ ಪತ್ನಿಗೆ ಹೆಚ್ಚಿನ ಸಂಬಳವಿರುತ್ತದೆ. ಆದರೆ ಅಧ್ಯಯನಗಳು ಹೇಳುವ ಪ್ರಕಾರ ದುಡಿಯುವ ಪತಿ ಪತ್ನಿ ಇಬ್ಬರಿಗೂ ಸಮಾನ ಸಂಬಳವಿದ್ದರೆ ಜೀವನವು ಸುಖಮಯವಾಗಿರುವುದಂತೆ. ಅದೇಗೆ ಎಂಬುದನ್ನು ಇಲ್ಲಿ ನೋಡೋಣ.

ಕಡಿಮೆ ಸಂಬಳದಿಂದ ಬದ್ಧತೆ ಹೆಚ್ಚಾಗುವುದು, ಆದರೆ:

ಕಡಿಮೆ ಸಂಬಳದಿಂದ ಬದ್ಧತೆ ಹೆಚ್ಚಾಗುವುದು, ಆದರೆ:

ಅಧ್ಯಯನದ ಪ್ರಕಾರ, ಕಡಿಮೆ ಸಂಬಳ ಇರುವ ಸಂಗಾತಿಯು ಯಾವಾಗಲೂ ತುಂಬಾ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಇರುವರು. ತಮ್ಮ ಖರ್ಚು ವೆಚ್ಚಗಳನ್ನ ಬಹಳ ಜಾಗರೂಕವಾಗಿ ಇಡುತ್ತಾರೆ ಎಂದು ತಿಳಿಯಲಾಗಿದೆ. ಆದರೆ ಇವರು ದಾಂಪತ್ಯದಲ್ಲಿ ಸುಖದಿಂದ ಇರುವುದಿಲ್ಲ ಮತ್ತು ಅವರಿಗೆ ತಮ್ಮ ಆದಾಯದ ಬಗ್ಗೆ ಸದಾ ಚಿಂತೆ ಕಾಡುತ್ತಲಿರುವುದು. ಆದ್ದರಿಂದ ಇಬ್ಬರಿಗೂ ಸಮಾನ ಆದಾಯ ಇದ್ದರೆ ಆಗ ದಾಂಪತ್ಯದಲ್ಲಿ ಯಾವುದೇ ಸಮಸ್ಯೆಗಳು ಬರದು.

ದಾಂಪತ್ಯದಲ್ಲಿ ಹಣಕ್ಕಿಂತ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಹೆಚ್ಚು ಮುಖ್ಯ:

ದಾಂಪತ್ಯದಲ್ಲಿ ಹಣಕ್ಕಿಂತ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಹೆಚ್ಚು ಮುಖ್ಯ:

ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಸಲ್ಲದು. ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಂಡಾಗ ಮತ್ತು ಆರ್ಥಿಕವಾಗಿ ಇಬ್ಬರೂ ಸಮನಾಗಿ ಪಾಲು ನೀಡಿದಾಗ ಬದ್ಧತೆಯ ಮಟ್ಟವು ಹೆಚ್ಚಾಗುವುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ ಪರಸ್ಪರ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವುದು ಇಲ್ಲಿ ಅತೀ ಅಗತ್ಯ. ಒಬ್ಬರಿಗೆ ಕಡಿಮೆ ವೇತನವಿದ್ದರೂ, ಅವರ ಸ್ಥಿತಿಯನ್ನು ಅರಿತುಕೊಂಡು ಹೊಂದಿಕೊಂಡು ಹೋಗಬೇಕು. ದಂಪತಿಗಳ ನಡುವೆ ಈ ವಿಚಾರಕ್ಕಾಗಿ ಬಿರುಕು ಹುಟ್ಟಿಕೊಳ್ಳುವುದಿಲ್ಲ.

ಸಂಬಂಧದಲ್ಲಿ ಹಣದ ವಿಚಾರ ಬಂದಾಗ ಈ ವಿಷ್ಯಗಳು ನೆನಪಿರಲಿ:

ಸಂಬಂಧದಲ್ಲಿ ಹಣದ ವಿಚಾರ ಬಂದಾಗ ಈ ವಿಷ್ಯಗಳು ನೆನಪಿರಲಿ:

ಸಂಬಂಧದಲ್ಲಿ ಹಣದ ವಿಚಾರವನ್ನು ತರುವುದು ಎಂದಿಗೂ ಒಳ್ಳೆಯದಲ್ಲ. ಪ್ರತಿಯೊಂದು ಜಗಳದಲ್ಲೂ ಹಣವನ್ನು ಮಧ್ಯ ತರುವುದು ಸಮಸ್ಯೆಯನ್ನು ಮತ್ತಷ್ಟು ದೊಡ್ಡದು ಮಾಡುತ್ತದೆ. ಹಣದ ಬಗ್ಗೆಯೇ ಏನಾದ್ರೂ ಸಮಸ್ಯೆಗಳಿದ್ದರೆ ಇಬ್ಬರೂ ಕೂತು ಮಾತನಾಡಿ, ಹೇಗೆ ಬಗೆ ಹರಿಸಬೇಕು ಎಂಬುದನ್ನು ನಿರ್ಧಾರ ಮಾಡಿ, ಪರಿಹಾರ ಮಾರ್ಗ ಹುಡುಕಿ. ಅಷ್ಟೇ ಅಲ್ಲದೇ ಆದಾಯದ ವಿಚಾರಕ್ಕೆ ಬಂದರೆ ಸಂಗಾತಿ ಜತೆಗೆ ಸ್ಪರ್ಧೆ ಮಾಡುವುದು ಸರಿಯಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಪರಸ್ಪರ ಉಳಿತಾಯ ಮಾಡುವ ಬಗ್ಗೆ ನೀವಿಬ್ಬರು ಸ್ಪರ್ಧೆಯಲ್ಲಿ ತೊಡಗಬೇಕೇ ಹೊರತು, ನಿಮ್ಮ ಆದಾಯದ ಬಗ್ಗೆ ಖಂಡಿತವಾಗಿಯೂ ಸ್ಪರ್ಧೆ ಮಾಡಬೇಡಿ. ಇದರಿಂದ ಜಗಳವಾಗುವ ಸಾಧ್ಯತೆಯೇ ಹೆಚ್ಚು.

ಹಣದ ವಿಚಾರದಿಂದಲೇ ಸಂಸಾರ ಹಾಳಾಗಬಹುದು :

ಹಣದ ವಿಚಾರದಿಂದಲೇ ಸಂಸಾರ ಹಾಳಾಗಬಹುದು :

ಹೌದು, ಸಂಬಂಧದಲ್ಲಿ ಹೆಚ್ಚಾಗಿ ಸಮಸ್ಯೆಗಳು ಬರುವುದೇ ಹಣದಿಂದಾಗಿ. ಮೊದ ಮೊದಲು ಎಲ್ಲವೂ ಚೆನ್ನಾಗಿದ್ದು, ಬರು ಬರುತ್ತಾ ಇಂತಹ ಸಮಸ್ಯೆಗಳು ತಲೆದೂರುತ್ತವೆ. ಇವುಗಳಲ್ಲಿ ಹಣದ ಸಮಸ್ಯೆಯ ಬಗ್ಗೆ ದಂಪತಿಯು ಹೆಚ್ಚು ಜಗಳವಾಡುವರು. ಆದರೆ ಸಂತೋಷವಾಗಿರುವ ದಂಪತಿಯು ಹಣದ ಬಗ್ಗೆ ಹೆಚ್ಚು ಚರ್ಚೆ ಮಾಡುವರು, ಜೊತೆಗೆ ಹಣದ ಸಮಸ್ಯೆಯು ಬಂದ ವೇಳೆ ಅದನ್ನು ತುಂಬಾ ಶಾಂತವಾಗಿ ಬಗೆಹರಿಸುವರು. ಇದರಿಂದ ದಾಂಪತ್ಯದಲ್ಲಿ ಒತ್ತಡವು ಕಡಿಮೆ ಆಗುವುದು ಮತ್ತು ಸಂತೋಷವು ಮನೆ ಮಾಡುವುದು.

English summary

Couples Who Earn the Same Amount of Money are Happier; Study

Here we talking about Couples who earn the same amount of money are happier; Study, read on
Story first published: Tuesday, June 1, 2021, 17:32 [IST]
X
Desktop Bottom Promotion