For Quick Alerts
ALLOW NOTIFICATIONS  
For Daily Alerts

ದಾಂಪತ್ಯ ಜೀವನ ಸದಾ ಲವಲವಿಕೆಯಿಂದ ಕೂಡಿರಲು ಇವೇ ಸೂತ್ರಗಳು

|

ಸುಖಿಸಂಸಾರಕ್ಕೆ ದಂಪತಿಗಳಿಬ್ಬರು ಜೊತೆಗಿದ್ದರಷ್ಟೇ ಸಾಲದು. ತಮ್ಮ ವೈವಾಹಿಕ ಜೀವನ ಸದಾ ಲವಲವಿಕೆಯಿಂದ ಕೂಡಿರಲು ಸಣ್ಣ ಶ್ರಮ ಬೇಕಾಗುತ್ತದೆ. ಇಬ್ಬರನ್ನೂ ಹತ್ತಿರಕ್ಕೆ ತರುವ, ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಲು ಸಹಾಯವಾಗುವ ಅನೇಕ ಚಟುವಟಿಕೆಗಳಿವೆ. ಅಂತಹ ಚಟುವಟಿಕೆಗಳಲ್ಲಿ ಇಬ್ಬರೂ ಜೊತೆಯಾಗಿ ಪಾಲ್ಗೊಳ್ಳುವುದರಿಂದ, ಇಬ್ಬರ ನಡುವಿನ ಬಂಧ ಗಟ್ಟಿಯಾಗುತ್ತದೆ. ಹಾಗಾದರೆ, ಆ ಸಂಬಂಧ ಬಿಗಿಗೊಳಿಸುವ ಚಟುವಟಿಕೆಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ದಂಪತಿಗಳ ಬಂಧವನ್ನು ಬಿಗಿಗೊಳಿಸುವ ಕೆಲವೊಂದು ಚಟುವಟಿಕೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ. ಇವುಗಳನ್ನು ಗಂಡ-ಹೆಂಡತಿ ಸೇರಿ ಮಾಡಿದರೆ, ದಾಂಪತ್ಯ ಸುಖಮಯವಾಗಿರುವುದು:

ಉದ್ಯಾನವನಕ್ಕೆ ಒಟ್ಟಿಗೆ ಭೇಟಿ ನೀಡಿ:

ಉದ್ಯಾನವನಕ್ಕೆ ಒಟ್ಟಿಗೆ ಭೇಟಿ ನೀಡಿ:

ಇದು ಕಿಡಿಷ್ ಎಂದು ತೋರಿದರೂ, ಈ ಚಟುವಟಿಕೆ ಬಹಳ ಮುಖ್ಯವಾಗಿದೆ. ನಿಮ್ಮಲ್ಲಿರುವ ಮಗು ಹೊರಬರಬೇಕಾದರೆ, ಅದಕ್ಕೆ ಉದ್ಯಾನವನ ಅಥವಾ ಜೂ ಹೋಗುವುದು ತುಂಬಾ ಮುಖ್ಯ. ಜೊತೆಗೆ ನಾವು ಅಲ್ಲಿಗೆ ಹೋದಾಗ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತೇವೆ. ಈ ಮೂಲಕ ಇಬ್ಬರನ್ನೂ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

ಸಂಗೀತ ಒಟ್ಟಿಗೆ ಕಲಿಯಿರಿ:

ಸಂಗೀತ ಒಟ್ಟಿಗೆ ಕಲಿಯಿರಿ:

ಗಿಟಾರ್, ಪಿಯಾನೋ, ಹಾರ್ಮೋನಿಯಂ ಮತ್ತು ತಬಲಾ ಯಾವುದಾದರೂ ಸಂಗೀತ ಕ್ಲಾಸ್ ಆರಿಸಿಕೊಳ್ಳಿ. ಇದು ನಿಮ್ಮ ಜೀವನದಲ್ಲಿ ಸಂಗೀತವನ್ನು ತರುವ ಒಂದು ಮಾರ್ಗವಾಗಿದ್ದು, ನಿಮ್ಮ ಮದುವೆಯ ಸಂಬಂಧವನ್ನು ಶಾಶ್ವತವಾಗಿ ಜೀವಂತವಾಗಿಸುವ ಸಾಮರಸ್ಯವನ್ನು ಸೇರಿಸುತ್ತದೆ. ನಿಮ್ಮ ಸಂಗಾತಿಯು ಎಂದಿಗೂ ಬೇಸರಗೊಳ್ಳದೇ, ಇಷ್ಟಪಟ್ಟು ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪರಸ್ಪರ ಪತ್ರಗಳನ್ನು ಬರೆಯಿರಿ:

ಪರಸ್ಪರ ಪತ್ರಗಳನ್ನು ಬರೆಯಿರಿ:

ನೀವು ಕೆಲಸ ಅಥವಾ ಯಾವುದೇ ಕಾರಣದಿಂದಾಗಿ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದರೆ, ಪೋಸ್ಟ್‌ಕಾರ್ಡ್‌ಗಳು ಮತ್ತು ಹಳೆಯ ಕಾಲದ ಪತ್ರಗಳಿಂದ ಸ್ಫೂರ್ತಿ ಪಡೆಯಿರಿ. ಅದರಲ್ಲಿ ಒಂದು ಪ್ರಣಯವಿತ್ತು. ಇ-ಮೇಲ್ ಚಂದ, ಆದರೆ, ಕಾಗದದ ಮೇಲಿನ ಅಕ್ಷರವು ವಿಭಿನ್ನ ಭಾವವನ್ನು ನೀಡುತ್ತದೆ. ಆದ್ದರಿದ ಇದನ್ನು ಪ್ರಯತ್ನಿಸಿ.

ಪಿಕ್‌ನಿಕ್‌ಗೆ ಹೋಗಿ:

ಪಿಕ್‌ನಿಕ್‌ಗೆ ಹೋಗಿ:

ನೀವಿಬ್ಬರು ಸೇರಿ, ಸ್ವಲ್ಪ ಆಹಾರ, ಜ್ಯೂಸ್ ಅಥವಾ ವೈನ್ ಜೊತೆಗೆ ಒಂದು ಚಾಪೆ ಹಿಡಿದು, ಎಲ್ಲಿಯಾದರೂ ಆಗಾಗ ಪಿಕ್‌ನಿಕ್‌ಗೆ ಹೋಗಿ. ಇದು ಖಂಡಿತವಾಗಿಯೂ ನಿಮ್ಮನ್ನು ಹತ್ತಿರ ತರುತ್ತದೆ. ಏಕೆಂದರೆ ಬಾಯಿಬಿಟ್ಟು ಹೇಳದಿದ್ದರೂ ಪ್ರತಿ ದಂಪತಿಗಳು ಹಂಬಲಿಸುವ ಪರಿಪೂರ್ಣ ಚಿತ್ರ ಇದು. ತಿಂಗಳಿಗೆ ಒಂದು ಬಾರಿಯಾದರೂ ಇದನ್ನು ಮಾಡಿ.

ಪ್ರವಾಸಗಳನ್ನು ಕೈಗೊಳ್ಳಿ:

ಪ್ರವಾಸಗಳನ್ನು ಕೈಗೊಳ್ಳಿ:

ನಿಮ್ಮ ಸಂಗಾತಿಯೊಂದಿಗೆ ಪ್ರಯಾಣಿಸುವುದರಿಂದ ನೀವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ. ನಿಮ್ಮ ಅತ್ಯುತ್ತಮ ಮತ್ತು ಕೆಟ್ಟದ್ದನ್ನು ಹೊರತರಲು ಸಹಾಯವಾಗುತ್ತದೆ, ಜೊತೆಗೆ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ.

ಒಟ್ಟಿಗೆ ಅಡುಗೆ ಮಾಡಿ:

ಒಟ್ಟಿಗೆ ಅಡುಗೆ ಮಾಡಿ:

ಅಡುಗೆ ವಿನೋದಮಯವಾಗಿದ್ದು, ಖಂಡಿತವಾಗಿಯೂ ಇಬ್ಬರನ್ನೂ ಹತ್ತಿರ ತರುತ್ತದೆ. ನಿಮಗೆ ಇಷ್ಟವಾಗಿರುವ ಯಾವುದಾದರೂ ತಿಂಡಿಯನ್ನು ಇಬ್ಬರೂ ಸೇರಿ ತಯಾರಿಸಿ ಹಾಗೂ ಇಬ್ಬರ ಜೊತೆ ಸವಿಯಿರಿ. ಇದು ಸಂತೃಪ್ತಿಯ ಭಾವ ನೀಡುವುದರ ಜೊತೆಗೆ ನಿಮ್ಮ ಸಂಬಂಧಕ್ಕೂ ರುಚಿ ನೀಡುವುದು.

English summary

Couples Should Do These Activities Together To Strengthen Their Bond in Kannada

Here we talking about Couples Should Do These Activities Together To Strengthen Their Bond in Kannada, read on
Story first published: Wednesday, October 20, 2021, 17:10 [IST]
X
Desktop Bottom Promotion