For Quick Alerts
ALLOW NOTIFICATIONS  
For Daily Alerts

ಇಂಥದ್ದೊಂದು ಪ್ರೀವೆಡ್ಡಿಂಗ್‌ ಪೋಟೋಶೂಟ್ ಯಾರೂ ಮಾಡಿರಲಿಕ್ಕಿಲ್ಲ

|

ಇತ್ತೀಚಿನ ದಿನಗಳಲ್ಲಿ ಪ್ರೀವೆಡ್ಡಿಂಗ್ ಫೋಟೋಶೂಟ್‌ ಸರ್ವೇಸಾಮಾನ್ಯ. ಒಂದು ಕಾಲದಲ್ಲಿ ಶ್ರೀಮಂತರು, ಸೆಲೆಬ್ರಿಟಿಗಳು ಮಾತ್ರ ಫ್ರೀವೆಡ್ಡಿಂಗ್ ಫೋಟೋಶೂಟ್‌ ಮಾಡಿಸುತ್ತಾ ಇದ್ದರು, ಆದರೆ ಈಗ ಎಲ್ಲರೂ ಮಾಡಿಸಿಕೊಳ್ಳುತ್ತಾರೆ.

ಈ ಪ್ರೀವೆಡ್ಡಿಂಗ್ ಫೋಟೋಶೂಟ್‌ ಮುಂದೆ ನೆನಪಿಸಿಕೊಳ್ಳಲು ಒಂದು ಸುಂದರವಾದ ಅನುಭವ ಜೊತೆಗೆ ಜೋಡಿಗೆ ಒಂದು ರೊಮ್ಯಾಂಟಿಕ್ ಟ್ರಿಪ್ ಕೂಡ ಆಗಿರುತ್ತದೆ. ಮದುವೆಯಾಗುವ ಹುಡುಗ-ಹುಡುಗಿ, ಸ್ವಲ್ಪ ಫ್ರೆಂಡ್ಸ್ ಜೊತೆ ಫೋಟೋಗ್ರಾಫರ್ ಇಷ್ಟೇ ಇರುತ್ತಾರೆ, ಫ್ರೆಂಡ್ಸ್ ನವ ಜೋಡಿಗಳನ್ನು ತಮಾಷೆ ಮಾಡಿ ನಗಿಸುತ್ತಿದ್ದರೆ, ಜೋಡಿಯ ರೊಮ್ಯಾಂಟಿಕ್ ಫೋಟೋಗಳನ್ನು ಫೋಟೋಗ್ರಾಫರ್/ವೀಡಿಯೋಗ್ರಾಫರ್ ಸೆರೆ ಹಿಡಿಯುತ್ತಿರುತ್ತಾರೆ.

ಯಾವುದಾದರೂ ಸುಂದರ ಸ್ಥಳಕ್ಕೆ ಹೋಗಿ ಫೋಟೋಶೂಟ್‌ ಮಾಡಿಸುತ್ತಾರೆ. ಅದಕ್ಕಾಗಿ ಬೆಲೆ ಬಾಳುವ ಡ್ರೆಸ್‌ ಕೊಳ್ಳುತ್ತಾರೆ, ಚೆನ್ನಾಗಿ ಕಾಣಲು ಮೇಕಪ್ ಆರ್ಟಿಸ್ಟ್ ಕಡೆಯಿಂದ ಮೇಕಪ್ ಮಾಡಿಕೊಳ್ಳುತ್ತಾರೆ. ಸೆರೆ ಹಿಡಿಯುವ ಪ್ರತಿಯೊಂದು ಫೋಟೋಗಳಲ್ಲಿ ತುಂಬಾ ಆಕರ್ಷಕವಾಗಿ ಕಾಣಿಸಬೇಕೆಂದು ಬಯಸುತ್ತಾರೆ. ಇನ್ನು ಕೆಲವರು ತಮ್ಮ ಪೋಟೋಶೂಟ್‌ ಇತರರಿಗಿಂತ ಭಿನ್ನವಾಗಿ ಇರಲಿ ಎಂದೂ ಕೂಡ ಮಾಡಿಸುತ್ತಾರೆ, ಅಂಥ ಫೋಟೋಶೂಟ್‌ಗಳಲ್ಲಿ ಕೆಲವೊಂದು ಸದ್ದು ಮಾಡುತ್ತವೆ. ಇರ್ತೀಚೆಗೆ ಕೇರಳ ಜೋಡಿಯೊಂದು ಮಾಡಿಸಿದ ಫೋಟೋ ಶೂಟ್‌ ಬಗ್ಗೆ ತುಂಬಾ ಟೀಕೆ ಕೇಳಿ ಬಂದಿತ್ತು, ಆದರೆ ಇದೀಗ ಒಂದು ಪ್ರೀವೆಡ್ಡಿಂಗ್ ಫೋಟೋಶೂಟ್ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ.

 ಫೋಟೋ ನೋಡಿದವರು ಪ್ರೀವೆಡ್ಡಿಂಗ್ ಫೋಟೋಶೂಟ್‌ ಹೀಗಿರಬೇಕು ಅಂತಿದ್ದಾರೆ

ಫೋಟೋ ನೋಡಿದವರು ಪ್ರೀವೆಡ್ಡಿಂಗ್ ಫೋಟೋಶೂಟ್‌ ಹೀಗಿರಬೇಕು ಅಂತಿದ್ದಾರೆ

ಜೋಡಿಯೊಂದು ತಮ್ಮ ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸಿರುವ ಥೀಮ್ ನೋಡಿದವರು ಫೋಟೋಶೂಟ್‌ ಮಾಡಿಸುವುದಾದರೆ ಇಷ್ಟೊಂದು ಅರ್ಥಪೂರ್ಣವಾಗಿ ಮಾಡಿಸಬೇಕೆಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೋಡಿ ಕಟ್ಟಡ ಕಟ್ಟುವ ಕೆಲಸದವರಂತೆ ಕಾಣಿಸಿಕೊಂಡಿದ್ದಾರೆ. ಆತ ಇಟ್ಟಿಗೆ ಜೋಡಿಸಿ ಗಾರೆ ಹಾಕುತ್ತಿದ್ದರೆ, ಆ ಕಟ್ಟಡ ಭದ್ರವಾಗಲು ಬೇಕಾಗಿರುವ ಗಾರೆಯನ್ನು ಕಲೆಸಿ ಈಕೆ ತಂದುಕೊಡುತ್ತಿದ್ದಾಳೆ.

 ದಾಂಪತ್ಯವೆಂಬುವುದು ಮನೆಯಂತೆ

ದಾಂಪತ್ಯವೆಂಬುವುದು ಮನೆಯಂತೆ

ಒಂದು ಮನೆ ಕಟ್ಟುವಾಗ ಅದು ಗಟ್ಟಿಯಾಗಿ ನಿಲ್ಲಬೇಕೆಂದರೆ ಆ ಮನೆಗೆ ಅಡಿಪಾಯ ಗಟ್ಟಿಯಾಗಿರಬೇಕು, ಅಲ್ಲದೆ ಇಟ್ಟಿಗೆ ಗಳನ್ನುಇಟ್ಟು, ಅವು ಬೀಳದಂತೆ ಗಾರೆ ಹಾಕಬೇಕು. ಅದೇ ರೀತಿ ದಾಂಪತ್ಯ ಜೀವನದಲ್ಲಿ ಗಂಡ ಇಟ್ಟಿಗೆಯಾದರೆ ಹೆಂಡತಿ ಅದು ಗಟ್ಟಿ ಮಾಡುವ ಗಾರೆ. ಇಬ್ಬರು ಉತ್ತಮವಾಗಿದ್ದರೆ ಮಾತ್ರ ಆ ಸಂಸಾರ ನೆಲೆ ನಿಲ್ಲುತ್ತದೆ. ಒಬ್ಬರು ಮತ್ತೊಬ್ಬರಿಗೆ ಸಪೋರ್ಟಿವ್ ಆಗಿದ್ದರೆ ಮಾತ್ರ ಸಂಸಾರವೆಂಬ ಮನೆ ಕಟ್ಟಬಹುದು ಎಂಬ ಸಂದೇಶ ಸಾರುವ ಫೋಟೋಶೂಟ್ ಇದಾಗಿದೆ ಎಂದು ಹೇಳಬಹುದು.

ಸುಖವಿರಲಿ-ಕಷ್ಟವಿರಲಿ ನಾವು ಜೊತೆಯಾಗಿ ಇರುವೆವು

ಸುಖವಿರಲಿ-ಕಷ್ಟವಿರಲಿ ನಾವು ಜೊತೆಯಾಗಿ ಇರುವೆವು

ಈ ಜೋಡಿ ಕಟ್ಟಡ ಕಾರ್ಮಿಕರಂತೆ ಕಾಣಿಸಿಕೊಂಡಿದ್ದು ಮಾತ್ರವಲ್ಲ ಬುತ್ತಿ ಬಿಚ್ಚಿ ಊಟ ಮಾಡುತ್ತಿರುವ ದೃಶ್ಯ ತುಂಬಾ ಮನಸ್ಸು ಮುಟ್ಟುವಂತೆ ಇದೆ. ಅದರಲ್ಲೂ ಆತ ಆಕೆಗೆ ಊಟ ಮಾಡುವಾಗ ನೀರು ಕುಡಿಸುತ್ತಾನೆ, ಈ ಫೋಟೋ ಸುಖವಿರಲಿ-ಕಷ್ಟವಿರಲಿ ಜೊತೆಯಾಗಿ ಇರುವೆವು ಎಂದು ಹೇಳುವಂತಿದೆ.

 ಯಾರೂ ಈ ರೀತಿ ಯೋಚನೆ ಮಾಡಿರಲಿಲ್ಲ

ಯಾರೂ ಈ ರೀತಿ ಯೋಚನೆ ಮಾಡಿರಲಿಲ್ಲ

ಎಷ್ಟೊಂದು ಪ್ರೀವೆಡ್ಡಿಂಗ್‌ ಫೋಟೋಶೂಟ್‌ ನೋಡಿದ್ದೇವೆ, ಅದರಲ್ಲಿ ಜೋಡಿಗಳ ರೊಮ್ಯಾಂಟಿಕ್ ಪೋಸ್ ಅಷ್ಟೇ ಕಾಣ ಸಿಗುತ್ತದೆ. ಆದರೆ ಕಟ್ಟಡ ಕಟ್ಟುವ ಶ್ರಮಿಕ ಜೀವಿಗಳಂತೆ ಕಾಣಿಸಿಕೊಂಡಿರುವ ಪೋಟೋಶೂಟ್ ಇದೂವರೆಗೆ ಯಾರು ಮಾಡಿಸಿರಲ್ಲ. ಈ ಫೋಟೋ ಶೂಟ್ ತುಂಬಾ ಅರ್ಥ ಪೂರ್ಣವಾಗಿರುವುದರ ಜೊತೆಗೆ ಯಾವುದೇ ಆಡಂಬರ ಇಲ್ಲದ ಕಾರಣ ಖರ್ಚು ಕೂಡ ಕಡಿಮೆಯಾಗಿರುತ್ತೆ. ಈ ಜೋಡಿ ಭಲೇ ಜೋಡಿನೇ ಸರಿ, ಅಲ್ವಾ?

Photo courtesy-FB

English summary

Couple Recreates Scenes From House Construction in Pre-Wedding Photoshoot

Couple recreates scenes from house construction in pre wedding photoshoot, read on.
Story first published: Thursday, November 19, 2020, 17:00 [IST]
X