For Quick Alerts
ALLOW NOTIFICATIONS  
For Daily Alerts

ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ, ಗಂಡು-ಹೆಣ್ಣು ಈ ವಿಚಾರಗಳ ಬಗ್ಗೆ ಒಮ್ಮೆ ಚರ್ಚಿಸಿ

|

ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ, ಆದರೆ ಅದರ ಹೊಳಪು ಮಾಸಿದಂತೆ, ದಂಪತಿಗಳ ನಡುವೆ ನಾನಾ ಕಾರಣಗಳಿಂದಾಗಿ ಮನಸ್ತಾಪಗಳು ಹುಟ್ಟಿಕೊಳ್ಳಲು ಪ್ರಾರಂಭವಾಗುತ್ತದೆ. ಅದು, ಮಗುವಿನ ಬಗ್ಗೆ ಆಗಿರಬಹುದು ಅಥವಾ ಮನೆ ನಡೆಸುವ ವಿಚಾರವಾಗಿರಬಹುದು. ಸಣ್ಣಪುಟ್ಟ ಕಾರಣಗಳಿಗಾಗಿ ವಾದ ಶುರುವಾಗುತ್ತವೆ. ಆದರೆ, ಈ ಬಗ್ಗೆ ಮದುವೆಗೂ ಮುನ್ನವೇ ಚರ್ಚಿಸಿದ್ದರೆ, ಇಂತಹ ಸ್ಥಿತಿ ಬರುವುದಿಲ್ಲ.

ಆದ್ದರಿಂದ ನಾವಿಂದು, ಮದುವೆಗೂ ಮುನ್ನ ಹುಡುಗ-ಹುಡುಗಿ ಮಾತನಾಡಬೇಕಾದ ಕೆಲವು ವಿಚಾರಗಳ ಬಗ್ಗೆ ಹೇಳಿದ್ದೇವೆ, ಇದರಿಂದ ವೈವಾಹಿಕ ಜೀವನದಲ್ಲಿ ಉಂಟಾಗುವ ಬಹುದೊಡ್ಡ ಬಿರುಗಾಳಿಗಳನ್ನು ತಡೆಯಬಹುದು.

ಮದುವೆಗೂ ಮುನ್ನ ಇಬ್ಬರೂ ಮಾತನಾಡಿಕೊಳ್ಳಬೇಕಾದ ವಿಚಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ಹಣಕಾಸು ಸ್ಥಿತಿ:

1. ಹಣಕಾಸು ಸ್ಥಿತಿ:

ಮದುವೆಯ ಮೊದಲು ಮಾತನಾಡಬೇಕಾದ ಪ್ರಮುಖ ವಿಷಯವೆಂದರೆ ಹಣಕಾಸು. ಚರ್ಚಿಸಲು ಹಣಕಾಸು ರೋಮಾಂಚನಕಾರಿ ವಿಷಯವಲ್ಲ, ಆದರೆ ನೀವು ಮೊದಲು ಈ ಬಗ್ಗೆ ಮಾತನಾಡಿದರೆ ಉತ್ತಮ. ಅಧ್ಯಯನವೊಂದರ ಪ್ರಕಾರ , "ಒಬ್ಬ ಸಂಗಾತಿಯು ಹಣವನ್ನು ಹೇಗೆ ನಿಭಾಯಿಸುತ್ತಾರೆ" ಎಂಬುದು ವಿಚ್ಛೇದನಕ್ಕೆ ಮೂರನೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ನಿಮ್ಮ ಆದಾಯ, ಖರ್ಚು, ಉಳಿತಾಯದ ಬಗ್ಗೆ ಸರಿಯಾಗಿ ಪರಸ್ಪರ ಮೊದಲೇ ಮಾತನಾಡಿಕೊಳ್ಳುವುದು ಉತ್ತಮ.

2. ಲೈಂಗಿಕ ದೃಷ್ಟಿಕೋನ:

2. ಲೈಂಗಿಕ ದೃಷ್ಟಿಕೋನ:

ನಿಮ್ಮ ಮದುವೆಯಲ್ಲಿ ಲೈಂಗಿಕ ವಿಚಾರಗಳು ಸಹ ನಿರ್ಣಾಯಕ ಅಂಶವಾಗಿದೆ. ನಿಮ್ಮ ಲೈಂಗಿಕ ಹೊಂದಾಣಿಕೆ ಹೇಗಿದೆ? ನಿಮ್ಮ ಅಗತ್ಯಗಳು ಮತ್ತು ಬಯಕೆಗಳು ಪರಸ್ಪರ ಚೆನ್ನಾಗಿ ಹೊಂದಿಕೊಳ್ಳುತ್ತವೆಯೇ? ಎಂಬುದು ಪರಸ್ಪರ ಮೊದಲೇ ಮಾತನಾಡಿಕೊಂಡು, ತಿಳಿದುಕೊಳ್ಳಬೇಕು. ಮದುವೆಗೂ ಮುನ್ನ ಈ ವಿಚಾರ ಮಾತನಾಡುವುದು ಕೆಲವರಿಗೆ ಆಗದಿದ್ದರೂ, ಇದು ತಿಳಿದುಕೊಳ್ಳುವುದು ತುಂಬಾ ಮುಖ್ಯ.

3. ಮಕ್ಕಳ ಬಗ್ಗೆ:

3. ಮಕ್ಕಳ ಬಗ್ಗೆ:

'ಮಗುವನ್ನು ಹೇಗೆ ಬೆಳೆಸುವುದು' ಎಂಬುದರ ಕುರಿತು ಸಂಭಾಷಣೆಯನ್ನು ನಡೆಸುವ ಮೊದಲು, ನಿಮ್ಮ ಸಂಗಾತಿಯು ನಿಮ್ಮಂತೆಯೇ ಮಗು ಮಾಡಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ತಮ್ಮ ಕುಟುಂಬ ವಿಸ್ತರಿಸುವ ಬಗ್ಗೆ ಇಬ್ಬರಲ್ಲೂ ಎಂತಹ ಅಭಿಪ್ರಾಯವಿದೆ? ಮದುವೆಯಾದ ಎಷ್ಟು ಸಮಯಗಳ ಕಾಲ ಇಬ್ಬರೇ ಇರಲು ಬಯಸುತ್ತಾರೆ? ಎಲ್ಲವನ್ನೂ ತಿಳಿದುಕೊಳ್ಳುವುದು ಮುಖ್ಯ. ಇಲ್ಲವಾದಲ್ಲಿ ಮುಂದೆ ಇದೇ ವಿಚಾರಕ್ಕಾಗಿ ನಿಮ್ಮಿಬ್ಬರ ನಡುವೆ ವಾದಗಳು ಹುಟ್ಟಿಕೊಳ್ಳಬಹುದು.

4. ಕೆಲಸಗಳ ವಿಭಾಗ :

4. ಕೆಲಸಗಳ ವಿಭಾಗ :

ಹೆಚ್ಚಿನ ದಂಪತಿಗಳು ಮದುವೆಯಾಗುವ ಮೊದಲು ಜಗಳಾಡುವುದು ಕಡಿಮೆ, ಆದರೆ ಮದುವೆಯಲ್ಲಿ ಮನೆಕೆಲಸಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ ನಂತರ ಅಸಮಾಧಾನವು ಬೆಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ ಕೆಲಸವನ್ನು ಹೇಗೆ ಹಂಚಿಕೊಳ್ಳಬೇಕು? ನಿಮ್ಮ ಸಂಗಾತಿ ಕೆಲಸದಲ್ಲಿ ಸಹಾಯ ಮಾಡುವಂತಹ ಮನಸ್ಥಿತಿಯುಳ್ಳವರೇ ಅಥವಾ ನೀವು ಕೆಲಸಗಳನ್ನು ಹಂಚಿಕೊಳ್ಳಲು ಬಯಸುತ್ತೀರಾ? ಇಂತಹ ಪ್ರಶ್ನೆಗಳನ್ನು ಮೊದಲೇ ಕೇಳಿ, ತಿಳಿದುಕೊಂಡರೆ ಉತ್ತಮ. ಇಲ್ಲವಾದಲ್ಲಿ, ಮುಂದೆ ನೀವೊಬ್ಬರೇ ಕೆಲಸ ಮಾಡಿಕೊಂಡು, ನಿಮ್ಮ ಸಂಗಾತಿ ಸುಮ್ಮನೇ ಕೂತಿದ್ದನ್ನು ಸಹಿಸಲಾರದೇ, ಜಗಳಗಳು ಹುಟ್ಟಿಕೊಳ್ಳುತ್ತದೆ.

5. ಪೋಷಕರ ಜವಾಬ್ದಾರಿಯ ಬಗ್ಗೆ:

5. ಪೋಷಕರ ಜವಾಬ್ದಾರಿಯ ಬಗ್ಗೆ:

ತಾಳಿ ಕಟ್ಟುವ ಮೊದಲು, ಮಕ್ಕಳ ಬಗ್ಗೆ ಮತ್ತು ಅವರ ಭವಿಷ್ಯದ ಜವಾಬ್ದಾರಿಗಳು ತುಂಬಾ ದೂರದಲ್ಲಿದ್ದರೂ, ಮುಂದೆ ತಪ್ಪು ತಿಳುವಳಿಕೆ ಉಂಟಾಗದಿರಲು ಮದುವೆಗೆ ಮೊದಲು ಚರ್ಚಿಸಬೇಕಾದ ವಿಷಯಗಳು ಇವು. ಇಂದಿನ ಬ್ಯುಸಿ ಜೀವನದಲ್ಲಿ ಈ ಪ್ರಶ್ನೆ ಅಗತ್ಯವಾಗಿ ಬೇಕಾಗಿದೆ. ಏಕೆಂದರೆ, ಗಂಡ-ಹೆಂಡತಿ ಇಬ್ಬರೂ ದುಡಿಯುವಾಗ, ಮಗುವಿನ ಭವಿಷ್ಯದ ಜವಾಬ್ದಾರಿಗಳನ್ನು ಸಮನಾಗಿ ಹಂಚಿಕೊಳ್ಳಬೇಕು. ಒಬ್ಬರು ಹೆಚ್ಚು, ಇನ್ನೊಬ್ಬರು ಕಡಿಮೆ ಆದರೆ, ಖಂಡಿತವಾಗಿಯೂ ಇಬ್ಬರ ನಡುವೆ ಮನಸ್ತಾಪಗಳು ಹುಟ್ಟಿಕೊಂಡೇ ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಈ ಬಗ್ಗೆ ಮೊದಲೇ ಚರ್ಚಿಸುವುದು ಉತ್ತಮ.

English summary

Conversations To Ask Before Marriage To Avoid Complications Later in Kannada

Here we talking about Conversations To Ask Before Marriage To Avoid Complications Later in Kannada, read on
Story first published: Thursday, December 30, 2021, 10:47 [IST]
X
Desktop Bottom Promotion