For Quick Alerts
ALLOW NOTIFICATIONS  
For Daily Alerts

ಚಾಣಕ್ಯ ಪ್ರಕಾರ ಪತ್ನಿಗೆ ಈ 5 ಗುಣಗಳಿದ್ದರೆ ಆ ಮನೆ ನೆಮ್ಮದಿಯ ಸ್ವರ್ಗವಾಗಿರುತ್ತೆ

|

ಭಾರತದ ಕಂಡ ಅತ್ಯಂತ ಮೇಧಾವಿ ಅರ್ಥಶಾಸ್ತ್ರಜ್ಞ ಚಾಣಕ್ಯ ಬರೀ ಹಣಕಾಸಿನ ಬಗ್ಗೆಯಷ್ಟೇ ಹೇಳಿಲ್ಲ, ಮನೆ, ಕುಟುಂಬ ಎಲ್ಲದರ ಬಗ್ಗೆಯೂ ಹೇಳಿದ್ದಾರೆ. ಚಾಣಕ್ಯ ಮನೆಯಾದರೆ, ಆ ಮನೆಯಲ್ಲಿ ಸಂತೋಷ ಇರಬೇಕೆಂದರೆ ಆ ಮನೆಯ ಗೃಹಿಣಿ/ ಯಜಮಾನಿಯ ಪಾತ್ರ ಎಷ್ಟು ಮುಖ್ಯ ಎಂಬುವುದನ್ನೂ ಹೇಳಿದ್ದಾರೆ. ಚಾಣಕ್ಯ ಒಂದು ಮನೆಯಲ್ಲಿ ಗೃಹಿಣಿ ಹೇಗಿದ್ದರೆ ಆ ಮನೆ ಸಂತೋಷದ ಮನೆಯಾಗುತ್ತದೆ, ದೇವಾಲಯಕ್ಕೆ ಹೋದಾಗ ಸಿಗುವಷ್ಟು ನೆಮ್ಮದಿ ಸಿಗುತ್ತದೆ ಎಂಬುವುದನ್ನು ವಿವರವಾಗಿ ತಿಳಿಸಿದ್ದಾರೆ.

Chanikya

ಚಾಣಕ್ಯ ಹೇಳಿರುವುದು ನೂರಕ್ಕೆ ನೂರು ಸತ್ಯ. ಮನೆ ದೊಡ್ಡದಿರಲಿ-ಚಿಕ್ಕದಿರಲಿ, ಮನೆಯೊಡತಿ ಮನಸ್ಸು, ನಡವಳಿಕೆ ಹೇಗಿರುತ್ತದೆ ಎಂಬುವುದರ ಮೇಲೆ ಆ ಮನೆಯಲ್ಲಿ ಸಂತೋಷ ನೆಮ್ಮದಿ ಇರುತ್ತದೆ, ಹೌದಲ್ವಾ? ವಿಚಿತ್ರ ಸ್ವಭಾವದ ಹೆಂಗಸು ಆ ಮನೆ-ಮಂದಿಯ ನೆಮ್ಮದಿಯನ್ನೇ ಹಾಳು ಮಾಡಿ ಬಿಡಬಲ್ಲಳು. ಆದರೆ ಈ ಗುಣವಿರುವ ಗೃಹಿಣಿ ಮನೆಯನ್ನು ಸ್ವರ್ಗವಾಗಿಸುತ್ತಾಳೆ, ಅವಳಿರುವ ಮನೆ ದೇವತೆಯೇ ನೆಲೆಸಿರುವಷ್ಟು ನೆಮ್ಮದಿಯ ತಾಣವಾಗಿರುತ್ತದೆ.

ಈ ಗುಣಗಳಿರುವ ಹೆಣ್ಣಿಗಷ್ಟೇ ಮನೆಯನ್ನು ನೆಮ್ಮದಿ ಸ್ವರ್ಗ ತಾಣ ಮಾಡಲು ಸಾಧ್ಯವಾಗುವುದು ನೋಡಿ:

 * ಮನೆಯಲ್ಲಿ ದೇವರಿಗೆ ದೀಪ ಬೆಳಗಬೇಕು

* ಮನೆಯಲ್ಲಿ ದೇವರಿಗೆ ದೀಪ ಬೆಳಗಬೇಕು

ದೇವರಿಗೆ ದೀಪ ಬೆಳಗುವುದು ಒಂದು ಆಚರಣೆಯಷ್ಟೇ ಅಲ್ಲ, ಇದರಿಂದ ಮನೆಯಲ್ಲಿ ಪಾಸಿಟಿವ್‌ ಶಕ್ತಿ ಹೆಚ್ಚುವುದು. ದೇವರಿಗೆ ದೀಪ ಬೆಳಗಿ ದೇವರನ್ನು ನೆನೆಯಬೇಕು. ಇನ್ನೊಂದು ಅರ್ಥದಲ್ಲಿ ನೋಡುವುದಾದರೆ ಅವಳು ಆ ಮನೆಯ ಬೆಳಕಾಗಬೇಕು. ಎಲ್ಲವನ್ನೂ ಸರಿದೂಗಿಸಿಕೊಂಡು, ಮನೆ-ಮಂದಿಯನ್ನು ಖುಷಿಯಾಗಿಡುವ ಜವಾಬ್ದಾರಿ ಅವಳ ಮೇಲಿರುತ್ತೆ. ಗಂಡನಿಗೆ ಉಪಚಾರ ಮಾಡಬೇಕು, ಹಿರಿಯರನ್ನು ನೋಡಿಕೊಳ್ಳಬೇಕು, ಮಕ್ಕಳ ಆರೈಕೆ ಮಾಡಬೇಕು, ಇವೆಲ್ಲವನ್ನೂ ಖುಷಿ-ಖುಷಿಯಾಗಿ ನಿಭಾಯಿಸಿಕೊಂಡು ಹೋಗಬೇಕು.

ಪೂರ್ವಜರನ್ನು ಆರಾಧಿಸಬೇಕು

ಪೂರ್ವಜರನ್ನು ಆರಾಧಿಸಬೇಕು

ಪ್ರತಿಯೊಂದು ಮನೆಯ ಏಳಿಗೆಗೆ ಆ ಮನೆಯವರು ಪೂರ್ವಜರನ್ನು ನೆನೆಯಬೇಕು. ಆದ್ದರಿಂದಲೇ ಹಿಂದೂ ಧರ್ಮದಲ್ಲಿ ಪಿತೃಕರ್ಮ ಅಥವಾ ಶ್ರಾದ್ಧ ಎಂದು ಮಾಡಲಾಗುವುದು. ಪೂರ್ವಜರನ್ನು ಆರಾಧಿಸುವವರು ಹಿರಿಯರನ್ನು ಗೌರವಿಸುತ್ತಾರೆ. ಮನೆಯ್ಲಿ ಹಿರಿಯರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಅವರನ್ನು ಗೌರವಿಸುತ್ತಾರೆ.

ಮನೆಯ ಪರಂಪರೆ ಕಾಪಾಡಬೇಕು

ಮನೆಯ ಪರಂಪರೆ ಕಾಪಾಡಬೇಕು

ಮನೆಯೊಡತಿಗೆ ಆ ಮನೆಯ ಪರಂಪರೆ ಕಾಪಾಡಿಕೊಂಡು ಹೋಗುವವಳು ಆಗಿರಬೇಕು. ಪ್ರತಿಯೊಂದು ಅದರದ್ದೇ ಆದ ಘನತೆ ಇರುತ್ತದೆ. ಆ ಘನತೆ ಕಾಪಾಡಿಕೊಂಡು ಹೋಗುವ, ಮಕ್ಕಳಿಗೆ ಅದರ ಮಹತ್ವದ ಬಗ್ಗೆ ತಿಳಿಸುವ ಜವಾಬ್ದಾರಿ ಅವಳ ಮೇಲಿರುತ್ತದೆ. ಗಂಡನ ಒಳ್ಳೆಯ ಕಾರ್ಯಗಳಿಗೆ ಒತ್ತಾಸೆಯಾಗಿ ನಿಲ್ಲುವ ಗುಣ ಅವಳಲ್ಲಿ ಇರಬೇಕು. ಮನೆಗೆ ಯಾವುದು ಸರಿ, ಯಾವುದು ತಪ್ಪು, ಮನೆ ಸದಸ್ಯರ ನಡವಳಿಕೆ ಬದಲಾದಾಗ ಅದನ್ನುಸರಿಪಡಿಸುವ ಗುಣ ಅವಳಲ್ಲಿ ಇರಬೇಕು. ಒಟ್ಟಿನಲ್ಲಿ ಒಂದು ಮನೆಯ ಘನತೆ ಮನೆಯೊಡತಿಯ ಕೈಯಲ್ಲಿರುತ್ತದೆ.

ಮನೆಗೆ ಬಂದ ಅತಿಥಿಗಳನ್ನು ಸತ್ಕಾರ ಮಾಡಬೇಕು

ಮನೆಗೆ ಬಂದ ಅತಿಥಿಗಳನ್ನು ಸತ್ಕಾರ ಮಾಡಬೇಕು

ಅತಿಥಿ ದೇವೋಭವ ಅಂತಾರೆ, ಅದರಂತೆ ಉತ್ತಮ ಗೃಹಿಣಿಯಾದವಳು ಮನೆಗೆ ಬಂದ ಅತಿಥಿಯರನ್ನು ಸತ್ಕರಿಸಿ ಕಳುಹಿಸಬೇಕು. ಅವರಿಗೆ ಒಳ್ಳೆಯ ಆತಿಥ್ಯ ನೀಡಬೇಕು. ಮನೆಯೊಡತಿ ಅತಿಥಿಗಳನ್ನು ಹೇಗೆ ಸತ್ಕಾರ ಮಾಡುತ್ತಾರೆ ಎಂದು ಗಮನಿಸಿದರೆ ಆ ಹೆಂಗಸಿನ ಸ್ವಭಾವ ತಿಳಿಯಬಹುದು.

ಮನೆಯವರಿಗೆ ಉಡುಗೊರೆ ನೀಡಿ, ಉಳಿದಿದ್ದು ತಾನು ತಿನ್ನಬೇಕು

ಮನೆಯವರಿಗೆ ಉಡುಗೊರೆ ನೀಡಿ, ಉಳಿದಿದ್ದು ತಾನು ತಿನ್ನಬೇಕು

ಸಾಮಾನ್ಯವಾಗಿ ಮನೆಗಳಲ್ಲಿ ಅಮ್ಮನ ನೀವು ಗಮನಿಸಿ ನೋಡಿ, ಒಳ್ಳೆಯ ಆಹಾರ ಮಾಡಿ ಮೊದಲು ಗಂಡ-ಮಕ್ಕಳಿಗೆ ಬಡಿಸುತ್ತಾಳೆ, ಅವರು ಹೊಟ್ಟೆ ತುಂಬಾ ತಿಂದು ಖುಷಿ ಪಡುವುದನ್ನು ಕಣ್ತುಂಬಿಕೊಂಡು ನಂತರ ಉಳಿದಿದ್ದರೆ ತಾನು ತಿನ್ನುತ್ತಾಳೆ, ಅವಳಿಗೆ ಸಿಗದಿದ್ದರೆ ಬೇಸರ ಪಡಲ್ಲ, ತಾನು ಮಾಡಿರುವುದನ್ನು ಮನೆ-ಮಂದಿ ಸಂತೋಷದಿಂದ ತಿಂದರೆ ಅವಳಿಗೆ ಅಷ್ಟೇ ಸಾಕು.

English summary

Chanakya Says These Type Of Women Make House Into Home

Chanikya Says These Type Of Women Make House Into Home, Read on...
X
Desktop Bottom Promotion