For Quick Alerts
ALLOW NOTIFICATIONS  
For Daily Alerts

Father's Day 2023 : ಅಪ್ಪಂದಿರ ದಿನಕ್ಕೆ ಶುಭ ಕೋರಲು ಇಲ್ಲಿದೆ ವಿಶೇಷ ಸಂದೇಶಗಳು!

|

ಅಮ್ಮ ಬದುಕು ನೀಡಿದರೆ ಆ ಬದುಕಿಗೆ ಭರವಸೆ ತುಂಬುವವನೇ ಅಪ್ಪ... ಅಮ್ಮನ ಪ್ರೀತಿ ಆಕೆ ತೋರುವ ಮಮತೆಯಲ್ಲಿ ಕಾಣುತ್ತದೆ. ಆದರೆ ಅಪ್ಪ ಆಗಲ್ಲ, ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರಲ್ಲಿ ಪ್ರೀತಿ ತೋರಿಸಲು ಪ್ರಯತ್ನಿಸುತ್ತಾನೆ.

ಅಮ್ಮಂದಿರ ದಿನವನ್ನು ನಾವು ಎಷ್ಟು ಸ್ಪೆಷಲ್ ಆಗಿ ಆಚರಿಸುತ್ತೇವೆಯೋ ಅಷ್ಟೇ ಸ್ಪೆಷಲ್ ಆಗಿ ಅಪ್ಪಂದಿರ ದಿನವನ್ನು ಆಚರಣೆ ಮಾಡಬೇಕು. ಸಾಮಾನ್ಯವಾಗಿ ಅಪ್ಪನಿಗೆ ನಮ್ಮ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಕೂಡ ಅವರು ಅದನ್ನು ತೋರ್ಪಡಿಸೋದಿಲ್ಲ. ಆದ್ರೆ ಮಗ/ಮಗಳಾಗಿ ನೀವು ನಿಮ್ಮ ಅಪ್ಪನಿಗೆ ಈ ದಿನ ಅಕ್ಕರೆಯಿಂದ ಅಪ್ಪಂದಿರ ದಿನಕ್ಕೆ ಶುಭ ಕೋರಬಹುದು. ಈ ಮೂಲಕ ನಿಮ್ಮ ಪ್ರೀತಿಯನ್ನು ತೋರ್ಪಡಿಸಬಹುದು.

Happy Fathers Day 2023 Quotes, Wishes, Lines, Thoughts, Messages, Images, Greetings, Whatsapp Status in Kannada

ಕೆಲ ಅಪ್ಪಂದಿರುವ ಮಕ್ಕಳ ಜೊತೆ ಸ್ನೇಹಿತರಂತೆ ಇರುತ್ತಾರೆ, ಇನ್ನು ಕೆಲವರು ತುಂಬಾ ಸ್ಟ್ರಿಕ್ಟ್, ಹಾಗಂತ ಅವರಿಗೆ ಮಕ್ಕಳ ಮೇಲೆ ಪ್ರೀತಿಯಿಲ್ಲ ಎಂದಲ್ಲ, ಆದರೆ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಅದಾಗಿರುತ್ತದೆ ಅಷ್ಟೇ...ಒಬ್ಬ ಅಪ್ಪನ ಪ್ರೀತಿ ಎಂಥದ್ದು ಮಗಳಿಗೆ ತಿಳಿಯುವುದು ಅವಳು ಮದುವೆಯಾಗಿ ಹೀಗುವಾಗ, ಅದೇ ಮಗನಿಗೆ ತಿಳಿಯುವುದು ತಾನು ತಂದೆಯಾದಾಗ.

ಒಬ್ಬ ತಂದೆಗೆ ತನ್ನ ಮಕ್ಕಳ ಎಲ್ಲಾ ಜವಾಬ್ದಾರಿಗಳಿರುತ್ತದೆ. ಅದನ್ನು ನಿಭಾಯಿಸುವುದರಲ್ಲಿಯೇ ತನ್ನ ಬದುಕನ್ನು ಸವೆಸುತ್ತಾನೆ. ತನ್ನ ಮಕ್ಕಳು ತಾನು ಬಯಸಿದಂತೆ ಉತ್ತಮ ವ್ಯಕ್ತಿಗಳಾಗಿ ಬೆಳೆದರೆ ಆ ಸಾರ್ಥಕತೆ ತಂದೆಯ ಕಣ್ಣುಗಳಲ್ಲಿ ಕಾಣಬಹುದು. ಜೂನ್‌ 18ಕ್ಕೆ ವಿಶ್ವ ತಂದೆಯರ ದಿನವನ್ನು ಆಚರಿಸಲಾಗುವುದು. ಇಲ್ಲಿ ನಾವು ಕೆಲವೊಂದು ಕೋಟ್ಸ್ ನೀಡಿದ್ದೇವೆ. ನಿಮ್ಮ ತಂದೆಗೆ ಸೂಟ್ ಆಗುವ ಕೋಟ್ ಅವರಿಗೆ ಕಳುಹಿಸಿ, ಖಂಡಿತ ಅವರು ಖುಷಿ ಪಡುತ್ತಾರೆ...

 ಕೋಟ್‌ 1

ಕೋಟ್‌ 1

1. ನನಗೆ ತಾಯಿ ಬದುಕು ನೀಡಿದರೆ, ತಂದೆ ಬದುಕುವ ಕನಸುಗಳನ್ನು ತುಂಬಿದ್ದಾರೆ, ನನ್ನ ಕೈ ಹಿಡಿದು ಭವಿಷ್ಯ ಕಟ್ಟುವ ಭರವಸೆ ತುಂಬಿದ್ದಾರೆ, ಅಪ್ಪಾ ನನ್ನ ಒಬ್ಬ ಉತ್ತಮ ವ್ಯಕ್ತಿಯನ್ನಾಗಿಸಿದ್ದಕ್ಕೆ ಧನ್ಯವಾದಗಳು...

 ಕೋಟ್ 2

ಕೋಟ್ 2

2. ಇಂದಿಗೂ, ಎಂದೆಂದಿಗೂ ನನ್ನ ಅತ್ಯಾಪ್ತ ಸ್ನೇಹಿತನಾಗಿರುವ ಅಪ್ಪಾ, ನಿನ್ನ ಪಡೆದ ನಾನು ತುಂಬಾ ಅದೃಷ್ಟಶಾಲಿ... ಹ್ಯಾಪಿ ಫಾದರ್ಸ್ ಡೇ

ಕೋಟ್ 3

ಕೋಟ್ 3

3. ನೀವು ನನಗೆ ಹೇಗೆ ಬದುಕಬೇಕೆಂದು ಹೇಳಿಕೊಡಲಿಲ್ಲ, ಬದಲಿಗೆ ತೋರಿಸಿಕೊಟ್ಟಿದ್ದೀರಿ, ಬದುಕುವ ಕಲೆ ಕಲಿಸಿದ ನನ್ನಪ್ಪನಿಗೆ ಪ್ರೀತಿಯ ಅಪ್ಪುಗೆ ಜೊತೆಗೆ ಅಪ್ಪಂದಿರ ದಿನದ ಶುಭಾಶಯಗಳು

ಕೋಟ್ 4

ಕೋಟ್ 4

4. ಯಾರು ಬೇಕಾದರೂ ಅಪ್ಪನಾಗಬಹುದು, ಆದರೆ ಒಳ್ಳೆಯ ಅಪ್ಪನಾಗುವುದು ಕೆಲವರಷ್ಟೇ, ಅದರಲ್ಲೊಬ್ಬರು ನೀವು, ಅಪ್ಪಾ ನೀವು ತುಂಬಾ ಸ್ಪೆಷಲ್, ನೀವು ನನಗೆ ಆಟ ಕಲಿಸಿದ್ದೀರಿ, ಅದರಲ್ಲೂ ಸರಿಯಾಗಿ ಆಡುವುದು ಹೇಗೆ ಎಂದು ಕಲಿಸಿಕೊಟ್ಟಿದ್ದೀರಿ, ಲವ್‌ ಯೂ ಅಪ್ಪಾ.... ಅಪ್ಪಂದಿರ ದಿನದ ಶುಭಾಶಯಗಳು

ಕೋಟ್ 5

ಕೋಟ್ 5

5. ನೀನು ನಮಗಾಗಿ ಹರಿಸುವ ಒಂದೊಂದು ಬೆವರಿನ ಹನಿಯ ಋಣ ಹೇಗಪ್ಪಾ ತೀರಿಸಲಿ, ನೀನು ಆ ದೇವರು ನನಗೆ ಕೊಟ್ಟ ಅಮೂಲ್ಯವಾದ ಗಿಫ್ಟ್, ಅದಕ್ಕಾಗಿ ಆ ದೇವರಿಗೆ ಒಂದು ಥ್ಯಾಂಕ್ಸ್.. ಅಪ್ಪಾ ನೀನು ಹೆಮ್ಮೆ ಪಡುವ ಮಗಳು ನಾನಾಗುವೆ, ಇದು ನನ್ನ ಪ್ರಾಮಿಸ್... ಹ್ಯಾಪಿ ಫಾದರ್ಸ್ ಡೇ..

ಕೋಟ್ 6

ಕೋಟ್ 6

6. ನೀನು ನಮಗಾಗಿ ಹರಿಸುವ ಒಂದೊಂದು ಬೆವರಿನ ಹನಿಯ ಋಣ ಹೇಗಪ್ಪಾ ತೀರಿಸಲಿ, ನೀನು ಆ ದೇವರು ನನಗೆ ಕೊಟ್ಟ ಅಮೂಲ್ಯವಾದ ಗಿಫ್ಟ್, ಅದಕ್ಕಾಗಿ ಆ ದೇವರಿಗೆ ಒಂದು ಥ್ಯಾಂಕ್ಸ್.. ಅಪ್ಪಾ ನೀನು ಹೆಮ್ಮೆ ಪಡುವ ಮಗ ನಾನಾಗುವೆ, ಇದು ನನ್ನ ಪ್ರಾಮಿಸ್... ಹ್ಯಾಪಿ ಫಾದರ್ಸ್ ಡೇ..

ಕೋಟ್ 7

ಕೋಟ್ 7

7. ಯಾರು ನನಗೆ ಯಾರು ನಿನ್ನ ಫೇವರೆಟ್ ಹೀರೋ ಎಂದು ಕೇಳುತ್ತಾರೋ ಅವರಿಗೆ ನಾನು ಹೇಳುವೆ, ನನ್ನ ಬದುಕಿನಲ್ಲಿ ನಾನು ಕಂಡ ಅತ್ಯಂತ ಸೂಪರ್‌ ಹೀರೋ ಅಂದರೆ ನನ್ನಪ್ಪ ಎಂದು.. ಅಪ್ಪಾ ನನಗಾಗಿ ನಿನ್ನ ಬದುಕು ಸವೆಸುತ್ತಿರುವ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು, ಅಪ್ಪಂದಿರ ದಿನದ ಶುಭಾಶಯಗಳು, ಲವ್ ಯೂ.....

ಕೋಟ್ 8

ಕೋಟ್ 8

8. ಒಬ್ಬ ಒಳ್ಳೆಯ ತಂದೆಯಾಗಲು ಮೊದಲು ಹೆಂಡತಿಗೆ ಒಳ್ಳೆಯ ಗಂಡನಾಗಿರಬೇಕು ಅಂತಾರೆ, ಅದು ನೀನಾಗಿದ್ದೀಯಾ, ನಿನ್ನ ಪಡೆದ ನಾವು ಅದೃಷ್ಟವಂತರು, ಹ್ಯಾಪಿ ಫಾದರ್ಸ್ ಡೇ...

ಕೋಟ್ 9

ಕೋಟ್ 9

9. ದೇಶ ಕಾಯುವ ಸೈನಿಕನಂತೆ ನಮ್ಮ ರಕ್ಷಣೆ ಮಾಡುವ ಯೋಧ ನೀನು, ನನಗೆ ನೀನು ದಿ ಬೆಸ್ಟ್ ಅಪ್ಪಾ... ಅಪ್ಪಂದಿರ ದಿನದ ಶುಭಾಶಯಗಳು

ಕೋಟ್ 10

ಕೋಟ್ 10

10. ತಾಯಿ ಮಮತೆಯ ಮಡಿಲು ನೀಡಿದರೆ, ತಂದರೆ ರಕ್ಷಣೆಯ ಭುಜ ನೀಡುತ್ತಾನೆ...ಅಪ್ಪಂದಿರ ದಿನದ ಶುಭಾಶಯಗಳು

English summary

Happy Father's Day 2023 Quotes, Wishes, Lines, Thoughts, Messages, Images, Greetings, Whatsapp Status in Kannada

Here are beautiful quotes to wish to your father on fathers day, Read On.
X
Desktop Bottom Promotion