For Quick Alerts
ALLOW NOTIFICATIONS  
For Daily Alerts

ಸುಂದರ ದಾಂಪತ್ಯಕ್ಕೆ ಆರೋಗ್ಯಕರ ಸೆಕ್ಸ್ ಲೈಫ್‌ ಇರಲೇಬೇಕು

|

ಬೆಡ್ ಮೇಲೆ ಮಲಗಿದ್ದ ಅವರಿಬ್ಬರಿಬ್ಬರ ನಡುವಿನ ಅಂತರವೇ ಅವರ ಮನಸ್ಥತಿಯನ್ನು ಹೇಳುತ್ತಿರುತ್ತದೆ. ಯಾಕೋ ಇಬ್ಬರಿಗೂ ಮಾತುಕತೆ ಬೇಡ ಅನಿಸಿರುತ್ತದೆ. ಇಬ್ಬರೂ ಕೆಲಸ ಮಾಡಿ ಬಳಲಿರುತ್ತಾರೆ. ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುದ್ದಾಡಬೇಕೆಂದು ಇಬ್ಬರಿಗೂ ಅನಿಸುವುದಿಲ್ಲ. ಗಟ್ಟಿಯಾಗಿ ಅಪ್ಪಿಕೊಂಡು ಮುದ್ದಾಡುತ್ತಾ ಮಿಲನದಲ್ಲಿ ತೊಡಗಿದ ದಿನಗಳೇ ಮರೆತು ಹೋಗಿರುತ್ತದೆ.

ಇನ್ನು ಕೆಲ ದಂಪತಿಗಳು ಯಾವುದೋ ಚಿಕ್ಕ ಕಾರಣಕ್ಕೆ ಮುನಿಸಿಕೊಂಡು ಸರಿಯಾಗಿ ಮಾತನಾಡದೆ ಇರುತ್ತಾರೆ. ಅದು ಹಾಗೇ ಮುಂದುವರೆದು ಹಾಸಿಗೆಯಲ್ಲೂ ಕೂಡ ಅಂತರ ಕಾಯ್ದುಕೊಳ್ಳುತ್ತಾರೆ. ಕೊನೆಗೆ ತಾವು ಏಕೆ ಮುನಿಸಿಕೊಂಡಿದ್ದೇವೆ ಎನ್ನುವುದಕ್ಕಿಂತ ಹಾಸಿಗೆಯಲ್ಲಿ ಆತ/ ಆಕೆ ನನ್ನೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂಬ ಅತೃಪ್ತಿಯೇ ಕೋಪ, ಮನಸ್ತಾಪವನ್ನು ಹೆಚ್ಚು ಮಾಡುತ್ತಾ ಹೋಗುತ್ತದೆ.

7 Ways To End A Dry Spell In Your Relationship And Have A Healthy Sex life

ದಾಂಪತ್ಯ ಎಂದ ಮೇಲೆ ಅಲ್ಲಿ ಭಾವನಾತ್ಮಕವಾದ ಸಂಬಂಧ ಮಾತ್ರವಲ್ಲ, ದೈಹಿಕ ತೃಪ್ತಿ ಕೂಡ ಮುಖ್ಯವಾಗಿರುತ್ತದೆ. ದಾಂಪತ್ಯದ ಅಡಿಪಾಯವೇ ಲೈಂಗಿಕ ತೃಪ್ತಿ. ಸಂಗಾತಿಯಲ್ಲಿ ಲೈಂಗಿಕ ವಿಷಯದಲ್ಲಿ ಏನಾದರೂ ಅತೃಪ್ತಿ, ನಿರಾಸೆ ಉಂಟಾದರೆ ಕುಟುಂಬದಲ್ಲಿ ಸಮಸ್ಯೆಗಳು ಶುರುವಾಗುವುದು. ಆದ್ದರಿಂದ ದಾಂಪತ್ಯದಲ್ಲಿ ಲೈಂಗಿಕ ತೃಪ್ತಿ ಮುಖ್ಯವಾಗಿರುತ್ತದೆ.

ಜತೆಯಾಗಿ ಜೀವಿಸುತ್ತಿದ್ದು ತುಂಬಾ ದಿನಗಳಿಂದ ನಿಮ್ಮಿಬ್ಬರ ನಡುವೆ ಯಾವುದೇ ದೈಹಿಕ ಸಂಬಂಧಯಿಲ್ಲ ಎಂದಾದರೆ ಅದು ನಿಮ್ಮ ಸಂಬಂಧ ಶಿಥಿಲವಾಗುತ್ತದೆ ಎನ್ನುವುದರ ಲಕ್ಷಣವಾಗಿದೆ. ದಾಂಪತ್ಯ ಜೀವನದಲ್ಲಿ ಮತ್ತೆ ಮಧುರ ಗೀತೆ ಹಾಡಲು ನೀವು ಸಂಗಾತಿಯೊಂದಿಗೆ ಸೆಕ್ಸ್ ಲೈಫ್‌ ಉತ್ತಮ ಪಡಿಸಿಕೊಳ್ಳಬೇಕು. ಇಲ್ಲಿ ನೀವು ಕೆಲವೊಂದು ಟಿಪ್ಸ್ ನೀಡಿದ್ದೇವೆ, ಅವುಗಳು ನಿಮ್ಮ ಸಂಗಾತಿಯೊಂದಿಗೆ ಮತ್ತೆ ಡ್ಯುಯೆಟ್‌ ಹಾಡಲು ಸಹಕಾರಿಯಾಗಿವೆ ನೋಡಿ:

1. ಲೈಂಗಿಕ ವಿಷಯದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ

1. ಲೈಂಗಿಕ ವಿಷಯದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ

ಈ ವಿಷಯದಲ್ಲಿ ಏನು ಕೇಳುವುದು, ಹೇಗೆ ಕೇಳುವುದು ಎಂದು ಸಂಕೋಚ ಪಡಲೇಬೇಡಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಯಕೆಗಳನ್ನು ಹೇಳಿಕೊಳ್ಳಿ. ನಮ್ಮಿಬ್ಬರ ನಡುವೆ ಏಕೆ ಇಷ್ಟು ಅಂತರ ಬಂದಿದೆ ಎಂಬುವುದನ್ನು ಚರ್ಚೆ ಮಾಡಿ. ನಿಮ್ ಸಂಗಾತಿಯಲ್ಲಿ ಲೈಂಗಿಕ ಅತೃಪ್ತಿಯಿದ್ದರೆ ಅವರ ಭಾವನೆಗಳನ್ನೂ ಗೌರವಿಸಿ. ಏನಾದರೂ ಲೈಂಗಿಕ ಸಮಸ್ಯೆಗಳಿದ್ದರೆ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಲೈಂಗಿಕ ವಿಷಯ ಹುಶ್... ಹುಶ್‌ ವಿಷಯವೇ ಆದರೂ ನಿಮ್ಮಿಬ್ಬರ ನಡುವೆ ಈ ವಿಷಯದ ಬಗ್ಗೆ ಮಾತನಾಡಲು ಯಾವುದೇ ಮುಜುಗರ, ಹಿಂಜರಿಕೆ ಬೇಡ.

2. ನಿಮ್ಮಲ್ಲಿರುವ ಭಿನ್ನಾಭಿಪ್ರಾಯ ಹೋಗಲಾಡಿಸಿ

2. ನಿಮ್ಮಲ್ಲಿರುವ ಭಿನ್ನಾಭಿಪ್ರಾಯ ಹೋಗಲಾಡಿಸಿ

ನಿಮ್ಮ ಹಾಗೂ ಸಂಗಾತಿ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೆ ಆ ಕುರಿತು ಮಾತನಾಡಿ ಬಗೆಹರಿಸಿಕೊಳ್ಳಿ. ಹೊಂದಾಣಿಕೆಯೇ ಜೀವನ, ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗಿ. ನಾನೇ ಸರಿ ಎಂಬ ಧೋರಣೆ ಮೊದಲು ಬಿಡಿ. ಅವರ ದೃಷ್ಟಿಕೋನದಿಂದಲೂ ಆಲೋಚಿಸಿ ಆಗ ಸಮಸ್ಯೆಗಳು ದೂರವಾಗುವುದು. ಕೆಲವೊಮ್ಮೆ ಯಾವುದೋ ಚಿಕ್ಕ ಕಾರಣಕ್ಕೆ ಭಿನ್ನಾಭಿಪ್ರಾಯ ಮೂಡಿರುತ್ತದೆ, ಅದೇನು ಅಷ್ಟು ಗಂಭೀರವಾದ ವಿಷಯವೇ ಆಗಿರುವುದಿಲ್ಲ, ಆದರೆ ನಿಮ್ಮಲ್ಲಿನ ಈಗೋ ಸಮಸ್ಯೆಯಿಂದಾಗಿ ಸಮಸ್ಯೆ ದೊಡ್ಡದಾಗಿ ಕಾಣುತ್ತಿರುತ್ತದೆ. ಇಬ್ಬರು ಕೂತು ಮಾತನಾಡಿದರೆ ಛೇ ಇಷ್ಟು ಸಣ್ಣ ವಿಷಯಕ್ಕೆ ನಮ್ಮ ಒಳ್ಳೆಯ ಕ್ಷಣಗಳು ವ್ಯರ್ಥವಾಯಿತು ಎಂದು ಅನಿಸದೆ ಇರಲ್ಲ.

3. ಭಾವನಾತ್ಮಕವಾಗಿ ಬೆಸೆಯಿರಿ

3. ಭಾವನಾತ್ಮಕವಾಗಿ ಬೆಸೆಯಿರಿ

ದೈಹಿಕವಾಗಿ ಒಂದಾಗಲು ಮೊದಲು ಭಾವನಾತ್ಮಕವಾಗಿ ಒಂದಾಗಬೇಕು. ಎಲ್ಲಿಗಾದರೂ ಟ್ರಿಪ್ ಹೋಗಿ, ಇಷ್ಟದ ಅಡುಗೆ ಮಾಡಿ ತಿನ್ನಿ, ಸಂಗಾತಿ ಖುಷಿ ಕೊಡುವಂತೆ ನಡೆದುಕೊಳ್ಳಿ. ಹೀಗೆ ಮಾಡಿದರೆ ನಿಮ್ಮಲ್ಲಿದ್ದ ಕಾರ್ಮೋಡ ಮಾಯವಾಗಿ ಮತ್ತೆ ನೀವಿಬ್ಬರು ಖುಷಿ-ಖುಷಿಯಾಗಿ ಕಾಲ ಕಳೆಯಬಹುದು.

4. ಉಡುಗೊರೆ ಕೊಡಿ

4. ಉಡುಗೊರೆ ಕೊಡಿ

ನಿಮ್ಮ ಸಂಗಾತಿಯನ್ನು ಖುಷಿ ಪಡಿಸಲು ಅವರಿಗೆ ಸರ್‌ಪ್ರೈಸ್‌ ಗಿಫ್ಟ್ ನೀಡಿ. ನೀವು ಚೆನ್ನಾಗಿ ಅಲಂಕಾರ ಮಾಡಿಕೊಳ್ಳಿ, ನಿಮ್ಮ ಸಂಗಾತಿ ಅತ್ತಿತ್ತ ಓಡಾಡುವಾಗ ತುಂಟ ನೋಟ ಬೀರುವುದು, ಅವರಿಗೆ ರೊಮ್ಯಾಂಟಿಕ್ ಆದ ಮೆಸೇಜ್‌ ಕಳುಹಿಸುವುದು ಮಾಡಿ. ಸಂಗಾತಿ ಜತೆ ಫ್ಲರ್ಟ್ ಮಾಡಬಾರದು ಎಂದೇನು ಇಲ್ಲವಲ್ಲ, ಫ್ಲರ್ಟ್‌ ಮಾಡಿ. ಇಬ್ಬರು ರೊಮ್ಯಾಂಟಿಕ್‌ ಕ್ಷಣಗಳನ್ನು ಕಳೆಯಲು ಬೆಡ್‌ರೂಂ ಅನ್ನು ಸಿದ್ಧಗೊಳಿಸಿ. ರೊಮ್ಯಾಂಟಿಕ್‌ ಕ್ಯಾಂಡಲ್‌ ಲೈಟ್‌ ಡಿನ್ನರ್‌ ರೆಡಿ ಮಾಡಿ. ಇದರಿಂದ ಅವರಿಗೂ ಮೂಡ್‌ ಬರುತ್ತದೆ.

5. ಸ್ವಲ್ಪ ನಾಟಿ ಟಾಕ್‌ ಓಕೆ

5. ಸ್ವಲ್ಪ ನಾಟಿ ಟಾಕ್‌ ಓಕೆ

ಮಿಲನಕ್ರಿಯೆಗೆ ಮುನ್ನ ಅದನ್ನು ಉತ್ತೇಜಿಸುವ ಕೆಲವೊಂದು ತುಂಟತನದ ಮಾತುಗಳನ್ನಾಡಿ. ಲೈಂಗಿಕ ಕ್ರಿಯೆಗೆ ಮುನ್ನ ಸ್ವಲ್ಪ ಹೊತ್ತು ರೊಮ್ಯಾಂಟಿಕ್‌ ಆಗಿ ಕಳೆಯಿರಿ. ನೀವು ನಿಮ್ಮ ಪ್ರೀತಿ, ಅವರ ಮೇಲಿರುವ ಕಾಳಜಿ ಇವೆಲ್ಲವನ್ನೂ ರೊಮ್ಯಾಂಟಿಕ್‌ ಆಟದಲ್ಲಿ ವ್ಯಕ್ತ ಪಡಿಸಿ. ಅವರಿಗೆ ಖುಷಿ ನೀಡುವಂತೆ ನಡೆದುಕೊಳ್ಳಿ.

6. ಸೆಕೆಂಡ್‌ ಹನಿಮೂನ್‌ ಪ್ಲಾನ್ ಮಾಡಿ

6. ಸೆಕೆಂಡ್‌ ಹನಿಮೂನ್‌ ಪ್ಲಾನ್ ಮಾಡಿ

ಮದುವೆಯಾದ ಹೊಸತರಲ್ಲಿ ಹನಿಮೂನ್‌ಗೆ ಹೋಗುವುದು ಸಾಮಾನ್ಯ, ನಂತರ ಹೋಗಬಾರದು ಎಂದೇನು ಇಲ್ಲ ತಾನೆ? ನೀವು ನಿಮ್ಮ ಸಂಬಂಧ ಮತ್ತಷ್ಟು ರೊಮ್ಯಾಂಟಿಕ್‌ ಆಗಿಸಲು, ನಿಮ್ಮಿಬ್ಬರ ಬಂಧ ಗಟ್ಟಿಯಾಗಲು ಎಲ್ಲಿಗಾದರೂ ಸುಂದರ ಸ್ಥಳಕ್ಕೆ ಸೆಕೆಂಡ್‌ ಹನಿಮೂನ್‌ ಪ್ಲಾನ್ ಮಾಡಿ. ಹೀಗೆ ಮಾಡುವುದರಿಂದ ನೀವಿಬ್ಬರೇ ಕಳೆಯುವಂಥ ಸಂದರ್ಭ ಒದಗುವುದು, ನಿಮ್ಮಿಬ್ಬರ ಸಂಬಂಧದಲ್ಲಿ ಮೂಡಿದ್ದ ನೀರವತೆ ದೂರವಾಗುವುದು.

7. ಸಿಗುವ ಸಮಯವನ್ನು ಉತ್ತಮವಾಗಿ ಕಳೆಯಿರಿ

7. ಸಿಗುವ ಸಮಯವನ್ನು ಉತ್ತಮವಾಗಿ ಕಳೆಯಿರಿ

ದಾಂಪತ್ಯ ಜೀವನ ಮಧುರವಾಗಿರಲು ಸೆಕ್ಸ್ ತುಂಬಾ ಮುಖ್ಯ. ಹಾಗಾಗಿ ಪ್ರತಿದಿನ ಸೆಕ್ಸ್ ಮಾಡಬೇಕೆಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಆಗಾಗ ಮಿಲನಕ್ರಿಯೆದಲ್ಲಿ ತೊಡಗುವುದಕ್ಕಿಂತ ಅಪರೂಪಕ್ಕೆ ಮಾಡಿದರೂ ಕಳೆಯುವ ಸಮಯವನ್ನು ಚೆನ್ನಾಗಿ ಕಳೆಯಬೇಕು, ಇಬ್ಬರಲ್ಲೂ ತೃಪ್ತಿ ಇರಬೇಕು, ಇದು ಆರೋಗ್ಯಕರ ಸಂಬಂಧಕ್ಕೆ ಒಳ್ಳೆಯದು.

English summary

7 Ways To End A Dry Spell In Your Relationship And Have A Healthy Sex life

A dry spell in a relationship is a situation where couples don't engage in sexual acts for a long time. But if you are living together and are still going through a dry spell for a long time, you must look into the matter.
X
Desktop Bottom Promotion