For Quick Alerts
ALLOW NOTIFICATIONS  
For Daily Alerts

ನೀವು ವಿವಾಹವಾಗುವ ಮುನ್ನ ಕುಂಡಲಿಯ ಪ್ರಕಾರ 36 ಗುಣಗಳು ಇವೆಯೇ ಎಂದು ನೋಡಿ

|

ವಿವಾಹ ಎನ್ನುವ ಮೂರು ಅಕ್ಷರದ ಪದವು ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ಜೀವನದ ಪಥವನ್ನು ಬದಲಿಸಿ ಜೀವನ ನಡೆಸುವ ಪರಿ ಎಂದು ಸಹ ಹೇಳಬಹುದು. ವಿವಾಹ ಎನ್ನುವುದು ಎರಡು ಜೀವಗಳ ನಡುವೆ ನಡೆಯುವ ಒಪ್ಪಂದ ಹಾಗೂ ಜೀವನ ಪರ್ಯಂತ ಜೊತೆ ಜೊತೆಯಾಗಿ ಕಷ್ಟ-ಸುಖಗಳಿಗೆ ಪಾಲುದಾರರಾಗಿರುತ್ತೇವೆ ಎನ್ನುವ ವಚನವನ್ನು ನೀಡುವ ಸಮಯ. ಎರಡು ಜೀವಗಳ ಸುಖ ಸಂತೋಷದೊಂದಿಗೆ ಎರಡು ಸಂಸಾರಗಳು ಸಂಬಂಧವನ್ನು ಬೆಸೆಯುವ ಸಮಯವು ಹೌದು. ಹೊಸ ಬಾಂಧವ್ಯ ಹೊಸ ಜೀವನದ ಮೂಲಕ ಸಂತೋಷವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಮಾಡಿಕೊಂಡ ಪದ್ಧತಿ ಎನ್ನಬಹುದು.

ಬೇರೆ ಬೇರೆ ಸಂಪ್ರದಾಯ, ಆಹಾರ ಪದ್ಧತಿ, ಪರಿಸರ, ಜನಗಳ ಒಡನಾಟ, ಭಾಷೆ, ಧಾರ್ಮಿಕ ಸಂಪ್ರದಾಯ ಹೀಗೆ ವಿವಿಧ ಬಗೆಯ ವಿಭಿನ್ನತೆಯಲ್ಲಿ ವಧು-ವರರು ಬೆಳೆದು ಬಂದಿರುತ್ತಾರೆ. ಇವರು ತಮ್ಮ ಆಸೆ-ಆಕಾಂಕ್ಷೆಗಳಿಗಾಗಿ ಈ ಎಲ್ಲಾ ಸಂಗತಿಗಳಲ್ಲೂ ಹೊಂದಾಣಿಕೆ ಹಾಗೂ ಪ್ರೀತಿ ವಿಶ್ವಾಸದಿಂದ ಜೀವನದ ಕೊನೆಯ ಕ್ಷಣದ ವರೆಗೂ ಒಂದಾಗಿ ಬಾಳಬೇಕು ಅಂದರೆ ಅದೇನು ಸುಲಭದ ಸಂಗತಿಯಲ್ಲ. ಅಲ್ಲಿ ವ್ಯಕ್ತಿ ಸ್ವಾರ್ಥ ಭಾವನೆಯಿಂದ ಆಚೆ ಬಂದು ಸಂಗಾತಿಗಾಗಿ ಅವರ ಕಷ್ಟ-ಸುಖಗಳಿಗೆ ಆಸರೆಯಾಗಿ ನಿಲ್ಲಬೇಕಾಗುವುದು. ವಧು ವರನ ಮನೆಯವರೊಂದಿಗೆ, ವರನೊಂದಿಗೆ ಹೊಂದಿಕೊಂಡು ಬಾಳಬೇಕು. ಹಾಗೆಯೇ ವರನು ತನ್ನನ್ನು ನಂಬಿ ಬಂದ ವಧುವಿಗೆ ಯಾವುದೇ ರೀತಿಯಲ್ಲೂ ಮನಸ್ಸಿಗೆ ನೋವುಂಟಾಗದಂತೆ ನೋಡಿಕೊಳ್ಳಬೇಕು. ಆಕೆಯ ತವರು ಮನೆಯವರನ್ನು ಗೌರವಿಸುವುದು, ಅವರಿಗೆ ಅಗತ್ಯವಿರುವಾಗ ಮಗನ ಸ್ಥಾನದಲ್ಲಿ ನಿಂತು ಕೆಲಸ ಕಾರ್ಯಗಳನ್ನು ನೆರವೇರಿಸಬೇಕಾಗುವುದು.

ಯಾವ ದಂಪತಿಗಳಲ್ಲಿ ಈ ಎಲ್ಲಾ ಬಗೆಯ ಜವಾಬ್ದಾರಿಗಳನ್ನು ನಿರ್ವಹಿಸಲು ಕಷ್ಟವಾಗುವುದು ಇಲ್ಲವೇ ಪರಸ್ಪರ ಹೊಂದಾಣಿಕೆಯಲ್ಲಿ ಕಷ್ಟವನ್ನು ಹೊಂದುವರು ಅವರ ದಾಂಪತ್ಯದ ಜೀವನ ಸುಂದರವಾಗಿರಲು ಸಾಧ್ಯವಿಲ್ಲ. ಅಂತಹ ಸಂಸಾರದಲ್ಲಿ ಸದಾ ಕಲಹ ಹಾಗೂ ನೋವುಗಳು ಸಂಭವಿಸುತ್ತಲೇ ಇರುತ್ತವೆ. ಜೊತೆಗೆ ಸಂಸಾರದಲ್ಲಿ ನೆಮ್ಮದಿ ಇಲ್ಲದೆ ಮಾನಸಿಕ ಒತ್ತಡ ಅಥವಾ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತದೆ. ಇನ್ನೂ ಕೆಲವು ಬಾರಿ ಮಾನವೀಯತೆಯನ್ನು ಮರೆತು ಕ್ರೂರತೆಯ ಸ್ವಭಾವವನ್ನು ತೋರುವ ಸಾಧ್ಯತೆಗಳು ಇರುತ್ತವೆ. ಈ ಎಲ್ಲಾ ಸಂಗತಿಗಳನ್ನು ಮನದಲ್ಲಿ ಇಟ್ಟುಕೊಂಡು ಹಿಂದೂ ಧರ್ಮದಲ್ಲಿ ಜಾತಕದ ಹೊಂದಾಣಿಕೆಯನ್ನು ನೋಡುತ್ತಾರೆ. ವಧು-ವರರ ಕುಂಡಲಿಯಲ್ಲಿ ಹೊಂದಾಣಿಕೆ ಇದೆ ಎಂದಾದರೆ ವಿವಾಹ ಮಾಡಲು ಮುಂದಾಗುವರು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರು ಹುಟ್ಟಿದ ಸಮಯಕ್ಕೆ ಅನುಗುಣವಾಗಿ ವಿಶೇಷವಾದ ನಕ್ಷತ್ರ, ರಾಶಿ ಹಾಗೂ ಕುಂಡಲಿಯನ್ನು ಹೊಂದಿರುತ್ತಾರೆ. ಅವರ ಗ್ರಹಗತಿಗಳಿಗೆ ಅನುಗುಣವಾಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯಗಳು ಮತ್ತು ವರ್ತನೆಗಳು ಕೂಡಿರುತ್ತವೆ. ವ್ಯಕ್ತಿಗಳ ನಡುವೆ ಏರ್ಪಡುವ ಪ್ರೀತಿ, ಸ್ನೇಹ ಹಾಗೂ ಬಾಂಧವ್ಯವು ಅವರವರ ಕುಂಡಲಿಯ ಹೊಂದಾಣಿಕೆಯಿಂದ ನೆರವೇರುವುದು ಎನ್ನುವ ನಂಬಿಕೆ ಇದೆ. ಅದರಂತೆಯೇ ವಧು-ವರರ ಕುಂಡಲಿಯಲ್ಲಿ ಹೊಂದಾಣಿಕೆ ನೋಡಿ ವಿವಾಹ ಮಾಡುವರು. ಕುಂಡಲಿಯ ಹೊಂದಾಣಿಕೆಯಲ್ಲಿ 36 ಗುಣಗಳು ಹೊಂದಾಣಿಕೆಯನ್ನು ಪಡೆದುಕೊಂಡಿವೆ ಎಂದಾದರೆ ಉತ್ತಮ ದಾಂಪತ್ಯ ಜೀವನ ನಡೆಸುವರು ಎಂದು ಹೇಳಲಾಗುವುದು. ಕುಂಡಲಿಯ ಹೊಂದಾಣಿಕೆಯಲ್ಲಿ ಕನಿಷ್ಠ ಎಂದರೂ 18 ಗುಣವನ್ನು ಹೊಂದಿರಬೇಕು ಎಂದು ಹೇಳಲಾಗುವುದು. 18 ಗುಣಕ್ಕಿಂತ ಮೇಲ್ಪಟ್ಟ ಹೊಂದಾಣಿಕೆ ಗುಣಗಳು ವಿವಾಹಕ್ಕೆ ಯೋಗ್ಯ ಎಂದು ಹೇಳಲಾಗುವುದು.

ಜಾತಕದಲ್ಲಿ ತೋರುವ ಕೆಲವು ಪ್ರಮುಖ ಸಂಗತಿಗಳು

ಜಾತಕದಲ್ಲಿ ತೋರುವ ಕೆಲವು ಪ್ರಮುಖ ಸಂಗತಿಗಳು

ಜಾತಕದಲ್ಲಿ ತೋರುವ ಕೆಲವು ಪ್ರಮುಖ ಸಂಗತಿಗಳನ್ನು ಪರಿಗಣಿಸಿ ಗುಣಗಳನ್ನು ಲೆಕ್ಕ ಮಾಡುವರು. 36 ಗುಣಗಳು ದೊರೆತವು ಎಂದರೆ ಆ ಜಾತಕದಾರರು ಜೀವನದಲ್ಲಿ ಅತ್ಯಂತ ಪ್ರೀತಿಯಿಂದ ಸಂಸಾರ ನಡೆಸುವರು. ಅವರಲ್ಲಿ ವಿರಸಗಳ ಪ್ರಮಾಣ ಕಡಿಮೆಯಾಗಿರುತ್ತದೆ. ಹಾಗಾದರೆ ಆ 36 ಗುಣಗಳು ಯಾವವು? ಅವುಗಳ ಹೊಂದಾಣಿಕೆ ಹೇಗೆ ನೋಡುವರು? ಅದರಿಂದ ಯಾವೆಲ್ಲಾ ರೀತಿಯ ಅನುಕೂಲ ಸಂಸಾರದಲ್ಲಿ ಇರುತ್ತದೆಯೇ? ಹೊಂದಾಣಿಕೆಗೂ ಗುಣಗಳಿಗೂ ಏನು ಸಂಬಂಧ ಎನ್ನುವಂತಹ ಅನೇಕ ಸಂಗತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎನ್ನುವ ಆಶಯವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಕುಂಡಲಿಯ ಹೊಂದಾಣಿಕೆ

ಕುಂಡಲಿಯ ಹೊಂದಾಣಿಕೆ

ಕುಂಡಲಿಯ ಹೊಂದಾಣಿಕೆ ಅಥವಾ ಪರಿಶೀಲನೆಯು ವಿವಾಹದ ಮೊದಲ ಹಂತ ಎಂದು ಪರಿಗಣಿಸಲಾಗುವುದು. ವೈದಿಕ ಸಂಪ್ರದಾಯ ಹಾಗೂ ಜ್ಯೋತಿಷ್ಯದ ಅನುಸಾರ ಕುಂಡಲಿಯಲ್ಲಿ ಇರುವ ಕೆಲವು ಪ್ರಮುಖ ವಿಷಯಗಳನ್ನು ಆಧರಿಸಿ ಗುಣವನ್ನು ಲೆಕ್ಕ ಹಾಕಲಾಗುವುದು. ಕುಂಡಲಿಯ ಹೊಂದಾಣಿಕೆಯ ಪ್ರಕಾರ ವರನ ನಡುವೆ ಮತ್ತು ವಧುವಿನ ನಡುವೆ ಹೊಂದಾಣಿಕೆ ಇದೆಯೇ? ವಧುವಿನ ಕುಂಡಲಿಯಿಂದ ವರನ ಆಯುಷ್ಯದಲ್ಲಿ ತೊಂದರೆ ಉಂಟಾಗುವುದೇ? ಎಷ್ಟು ಹೋಲಿಕೆಗಳು ಸಮಾನತೆಯನ್ನು ತೋರುತ್ತವೆ ಎನ್ನುವುದನ್ನು ಮೊದಲು ಪರಿಶೀಲಿಸಲಾಗುವುದು.

Most Read: ಕನ್ಯಾದಾನ ಮಾಡಲಾರೆ ಎಂದ ತಂದೆ.. ಕಾರಣ ತಿಳಿದರೆ ಕರುಳು ಚುರ್ ಎನ್ನದಿರದು..

36 ಗುಣಗಳ ಅವಲೋಕನ

36 ಗುಣಗಳ ಅವಲೋಕನ

ಕುಂಡಲಿಗೆ ಅನುಸಾರವಾಗಿ 8 ವಿಭಾಗಗಳನ್ನು ಮಾಡಲಾಗುತ್ತದೆ. ಅದನ್ನು ಅಷ್ಟ ಕೂಟಗಳ ಹೊಂದಾಣಿಕೆ ಎಂತಲೂ ಕರೆಯುವರು. ಅಷ್ಟ ಕೂಟದ ಹೊಂದಾಣಿಕೆಯಲ್ಲಿ ಒಟ್ಟು 36 ಗುಣಗಳು ಹೊಂದಾಣಿಕೆ ಆಗಬೇಕು. ಅವುಗಳೆಂದರೆ...

*ನಾಡಿ: 8 ಗುಣಗಳು

*ಭಕೋಟ್: 7 ಗುಣಗಳು

*ಗಣ: 6 ಗುಣ

*ಮೈತ್ರಿ: 5 ಗುಣ

*ಯೋನಿ: 4 ಗುಣ

*ತಾರ: 3 ಗುಣ

*ವೈಶ್ಯ: 2 ಗುಣ

*ವರ್ಣ : 1 ಗುಣ

*ಇವುಗಳನ್ನು ಒಟ್ಟು ಗೂಡಿಸಿದಾಗ 36 ಸಂಖ್ಯೆ ಬರುತ್ತವೆ

Most Read: ಜಾತಕ-ಕುಂಡಲಿ ತಾಳೆಯಾಗಿಲ್ಲ. ಆದರೂ ನಮ್ಮ ದಾಂಪತ್ಯ ಸುಖವಾಗಿದೆ

ಮೂಲ ಹೊಂದಾಣಿಕೆಯ ಅವಶ್ಯಕತೆ

ಮೂಲ ಹೊಂದಾಣಿಕೆಯ ಅವಶ್ಯಕತೆ

ಕುಂಡಲಿಯ ಹೊಂದಾಣಿಕೆಯಲ್ಲಿ 36 ಗುಣಗಳು ಶ್ರೇಷ್ಠತೆಯನ್ನು ಸೂಚಿಸುವುದು. ವಿವಾಹ ಆಗಲು ಕನಿಷ್ಠ 18 ಗುಣಗಳ ಹೊಂದಾಣಿಕೆಯಾದರೂ ಆಗಲೇ ಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಇವು ಮಾನಸಿಕ ಹೊಂದಾಣಿಕೆಯನ್ನು ಸಂಬಂಧಿಸಿರುತ್ತದೆ. ಕುಂಡಲಿಯಲ್ಲಿ ಮಂಗಲಿಕ್ ದೋಶ ಇದ್ದರೆ ಅಂತಹ ವಿವಾಹದ ಹೊಂದಾಣಿಕೆಯನ್ನು ಕೈಬಿಡಲಾಗುವುದು. ಪರಸ್ಪರ ಇಬ್ಬರ ಕುಂಡಲಿಯಲ್ಲಿ ಮಾಂಗಲಿಕ್ ದೋಷವಿದ್ದರೆ ಅದು ಹೊಂದಾಣಿಕೆ ಆಗುವುದು ಎಂದು ಸಹ ಹೇಳಲಾಗುವುದು. ಮಾನ್ಯತೆ, ಮಕ್ಕಳು, ಆರೋಗ್ಯ, ಲೈಂಗಿಕ ಹೊಂದಾಣಿಕೆಗಳ ವಿಚಾರದಲ್ಲಿ ಸಾಮ್ಯತೆಯ ಗುಣ ಬಂದರೂ ವಿವಾಹ ಮಾಡಲಾಗುವುದು.

ಹೊಂದಾಣಿಕೆ ಸೂಕ್ತವಾಗಿಲ್ಲದೆ ಇದ್ದಾಗ

ಹೊಂದಾಣಿಕೆ ಸೂಕ್ತವಾಗಿಲ್ಲದೆ ಇದ್ದಾಗ

ವಧು ಮತ್ತು ವರನ ಜಾತಕ ಅಥವಾ ಕುಂಡಲಿಯ ಹೊಂದಾಣಿಕೆಯಲ್ಲಿ 18 ಗುಣಗಳ ಹೊಂದಾಣಿಕೆಗಿಂತ ಕಡಿಮೆ ಇದೆ ಎಂದಾದರೆ ಆಗ ಆ ವಿವಾಹವನ್ನು ಕೈಬಿಡಲಾಗುವುದು. 25 ಗುಣಗಳಿದ್ದರೆ ಅದು ಉತ್ತಮ ವಿವಾಹ ಎಂದು ಪರಿಗಣಿಸಲಾಗುವುದು. 32ರಡಕ್ಕೂ ಅಧಿಕವಾದ ಗುಣಗಳ ಹೊಂದಾಣಿಕೆ ಆಗುವುದು ಅತ್ಯಂತ ಅಪರೂಪ ಎಂದು ಹೇಳಲಾಗುವುದು. 32 ಗುಣಕ್ಕಿಂತ ಅಧಿಕವಾಗಿದ್ದರೆ ಅವರು ಅತ್ಯಂತ ಶ್ರೇಷ್ಠ ರೀತಿಯಲ್ಲಿ ವಿವಾಹ ಜೀವನವನ್ನು ಹೊಂದುವರು ಎಂದು ಹೇಳಲಾಗುವುದು.

Most Read: ದಯವಿಟ್ಟು ನವದಂಪತಿಗಳ ಬಳಿ 'ಮಗು ಯಾವಾಗ' ಎಂದು ಮಾತ್ರ ಕೇಳಬೇಡಿ!!

ಅಷ್ಟ ಕೂಟದ ಗುಣಗಳ ವಿವರಣೆ

ಅಷ್ಟ ಕೂಟದ ಗುಣಗಳ ವಿವರಣೆ

1. ನಾಡಿ ಆರೋಗ್ಯ ಮತ್ತು ಸಂತಾನೋತ್ಪತ್ತಿ ಅಂಶಗಳನ್ನು ಸೂಚಿಸುತ್ತದೆ. ಒಂದೇ ನಾಡಿಯ ವ್ಯಕ್ತಿಗಳು ಮದುವೆಯಾಗಬಾರದು. ಇದು ಖಾತ್ರಿಪಡಿಸದಿದ್ದರೆ, ದಂಪತಿಗಳ ಮಕ್ಕಳು ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಹೊಂದಿರುತ್ತಾರೆ.

2. ಭಕೋಟ್ ಈ ಚಿಹ್ನೆಗಳ ಸ್ವಭಾವದ ಪ್ರಕಾರ 12 ರಾಶಿಚಕ್ರ ಚಿಹ್ನೆಗಳನ್ನು ಹೋಲುತ್ತದೆ. ಹೊಂದಾಣಿಕೆಯ ರಾಶಿಚಕ್ರ ಚಿಹ್ನೆಗಳ ನಡುವೆ ಮದುವೆಗಳು ಅಂಗೀಕರಿಸಲ್ಪಡುತ್ತವೆ.

3. ಗಣಗಳಲ್ಲಿ ದೇವ, ರಾಕ್ಷಸ ಹಾಗೂ ಮನುಷ್ಯ ಎಂದು ವಿಂಗಡಿಸಲಾಗುವುದು. ಆಯಾ ಗಣದ ಹೊಂದಾಣಿಕೆಯಲ್ಲಿ ವಿವಾಹ ಆದರೆ ಅತ್ಯಂತ ಸಾಮರಸ್ಯದ ಜೀವನ ನಡೆಯುವುದು ಎಂದು ಹೇಳಲಾಗುವುದು. ಅದೇ ಗುಣವನ್ನು ಸೇರಿಸುವುದು ಉತ್ತಮ ಪಂದ್ಯವಾಗಿದೆ.

4. ಕುಟುಂಬ ಜೀವನದಲ್ಲಿ ಹೊಂದಾಣಿಕೆಯ ಸಂಬಂಧ ಹೊಂದಲು ದಂಪತಿಗಳ ಸಾಮರ್ಥ್ಯವನ್ನು ಮೈತ್ರಿ ಎತ್ತಿ ತೋರಿಸುತ್ತಾನೆ.

5. ಯೋನಿ ಅಥವಾ ಲೈಂಗಿಕ ಹೊಂದಾಣಿಕೆಯು ಮದುವೆಯಲ್ಲಿ ಒಟ್ಟಿಗೆ ಬರುವ ವ್ಯಕ್ತಿಗಳ ದೈಹಿಕ ಅಥವಾ ಲೈಂಗಿಕ ಹೊಂದಾಣಿಕೆಯನ್ನು ಪರೀಕ್ಷಿಸುತ್ತದೆ.

6. ತಾರಾ ಅಥವಾ ನಕ್ಷತ್ರಪುಂಜವು ನಕ್ಷತ್ರಪುಂಜ ಅಥವಾ ವ್ಯಕ್ತಿಗಳ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು ಸರಿಹೊಂದಿಸುತ್ತದೆ. ಇದು ಒಟ್ಟು ಜೀವಿತಾವಧಿ ಮತ್ತು ವಿಧವೆಯತೆಯ ಸಾಧ್ಯತೆಯನ್ನು ಸೂಚಿಸುತ್ತದೆ.

7. ವೈಶ್ಯ ವ್ಯಕ್ತಿಗಳ ಗುಣಲಕ್ಷಣಗಳನ್ನು ಪರಿಗಣಿಸುತ್ತಾನೆ ಮತ್ತು ಸಂಬಂಧವನ್ನು ನಿಯಂತ್ರಿಸುತ್ತಾನೆ.

8. ವರ್ಣವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಗಗಳ ಆಧಾರದ ಮೇಲೆ ವಿವಾಹಿತ ವ್ಯಕ್ತಿಗಳ ಒಲವುಗಳನ್ನು ಪರಿಗಣಿಸುತ್ತದೆ.

English summary

What are 36 Gunas in Hindu Marriage

Hindu marriages are still performed as per the Vedic tradition of horoscope matching. Horoscope or the birth chart of the individual is an important document for predicting the future of an individual and ascertaining his or her compatibility with the proposed marriage partner. 36 Gunas are the aspects that need to be considered by comparing the horoscopes of the bride and groom to ascertain their compatibility with each other. Here is an overview of the 36 Gunas compared for approving a marriage as per the astrological tradition in India.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X