Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸಂಗಾತಿ ಮೋಸ ಮಾಡುತ್ತಿರುವ ಬಗ್ಗೆ ತಿಳಿಯಬೇಕೇ? ಸತ್ಯ ತಿಳಿಯಲು ಹೀಗೆ ಮಾಡಿ...
ಜೀವನದಲ್ಲಿ ಕೆಲ ಬಾರಿ ಅಪರಿಚಿತರು ಹಾಗೂ ಇನ್ನೂ ಕೆಲ ಬಾರಿ ನಮ್ಮವರೇ ನಮ್ಮನ್ನು ವಂಚಿಸುತ್ತಾರೆ. ಇಂಥ ಮೋಸ ಹೋದ ಅನುಭವ ಬಹುತೇಕ ಎಲ್ಲರ ಜೀವನದಲ್ಲಿಯೂ ಒಮ್ಮೆಯಾದರೂ ಘಟಿಸಿರುತ್ತದೆ. ಹೀಗೆ ನಮ್ಮವರೇ ನಮಗೆ ಮೋಸ ಮಾಡಿದಾಗ ಆಗುವ ನೋವು ಅಷ್ಟಿಷ್ಟಲ್ಲ. ಇನ್ನು ಯಾರನ್ನು ನಂಬುವುದು ಎಂಬ ಪ್ರಶ್ನೆ ಮನದಲ್ಲಿ ಸುಳಿದು ಹೋಗುತ್ತದೆ. ಅದರಲ್ಲೂ ನಂಬಿದ ಸಂಗಾತಿಯೇ ಮೋಸ ಮಾಡಿದಾಗಲಂತೂ ತಡೆಯಲಾಗುವುದಿಲ್ಲ.
ಕೆಲ ಬಾರಿ ಸಂಗಾತಿಯು ಮೋಸ ಮಾಡುತ್ತಿದ್ದಾಳೆ/ ತ್ತಿದ್ದಾನೆ ಎನಿಸಿದರೂ ಅದನ್ನು ಪ್ರಮಾಣೀಕರಿಸಲು ಕಷ್ಟವಾಗುತ್ತದೆ. ಆದರೂ ಸಂಗಾತಿಯ ಕೆಲ ಚಟುವಟಿಕೆಗಳ ಗಮನವಿಡುವುದರ ಮೂಲಕ ಆತ ಅಥವಾ ಅವಳು ನಮಗೆ ಮೋಸ ಮಾಡುತ್ತಿರುವ ಬಗ್ಗೆ, ಇನ್ನೊಬ್ಬರ ಬಗ್ಗೆ ಒಲವು ಬೆಳೆಸಿಕೊಂಡಿರುವ ಬಗ್ಗೆ ತಿಳಿಯಲು ಸಾಧ್ಯವಿದೆ. ಸಂಗಾತಿಯು ವಂಚನೆ ಮಾಡುತ್ತಿದ್ದರೆ ಹೇಗೆ ಅದನ್ನು ತಿಳಿಯಲು ಸಾಧ್ಯ ಎಂಬ ಬಗ್ಗೆ ಈ ಅಂಕಣದಲ್ಲಿ ಕೆಲ ಪ್ರಮುಖ ಟಿಪ್ಸ್ಗಳನ್ನು ನೀಡಲಾಗಿದೆ.
ಸತ್ಯದ ಬೆನ್ನತ್ತಿ ಹೋಗುವುದು
ಕೆಲ ವರ್ಷಗಳ ಹಿಂದೆ ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಎಷ್ಟು ಅನ್ಯೋನ್ಯವಾಗಿದ್ದರು ಈಗ ಆ ಸೆಳೆತ ಕಂಡು ಬರುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೆ? ಅಥವಾ ಸಂಗಾತಿಯು ಇನ್ನಾರ ಮೇಲೆಯೋ ಹೆಚ್ಚಿನ ಒಲವು ಬೆಳೆಸಿಕೊಂಡಿದ್ದಾನೆ ಎನಿಸುತ್ತಿದೆಯೆ? ಇಂದಿನ ಆಧುನಿಕ ಜಗತ್ತಿನಲ್ಲಿ ಸಂಬಂಧಗಳಲ್ಲಿ ವಂಚನೆ ಮಾಡುವುದು ಹಳೆಯ ವಿಷಯವಾಗಿದೆ. ಆದರೆ ನಿಜವಾಗಿಯೂ ವಂಚನೆಯಾಗುತ್ತಿದೆ ಎಂಬುದನ್ನು ಮನಸ್ಸು ತಕ್ಷಣಕ್ಕೆ ಒಪ್ಪಿಕೊಳ್ಳುವುದು ಕಷ್ಟ. ಮಾನವ ಸಂಬಂಧಗಳ ಮನಃಶಾಸ್ತ್ರಜ್ಞರ ಪ್ರಕಾರ ಹೀಗೊಂದು ಸಂಶಯ ಉಂಟಾದಾಗ ಅದನ್ನು ನೇರವಾಗಿ ಕೇಳಿ ಸಂಶಯ ಪರಿಹರಿಸಿಕೊಳ್ಳುವುದು ಉತ್ತಮ. ಆದರೆ ಹಾಗೆ ಮಾಡುವುದಕ್ಕಿಂತಲೂ ಮುನ್ನ ನಿಜವಾಗಿಯೂ ನಿಮ್ಮ ಸಂಗಾತಿಯು ನಿಮಗೆ ದ್ರೋಹವೆಸಗುತ್ತಿದ್ದಾರೆಯೆ ಎಂಬುದನ್ನು ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸುವುದು ಸೂಕ್ತ. ಅಂಥ ಯಾವೆಲ್ಲ ವಿಧಾನಗಳನ್ನು ಅನುಸರಿಸಬಹುದು ಎಂಬುದನ್ನು ಕೆಳಗೆ ತಿಳಿಸಲಾಗಿದೆ.
ದೈಹಿಕ ಆಪ್ತ ಕ್ಷಣಗಳ ಬಗ್ಗೆ ನಿಗಾ ವಹಿಸಿ
ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯ ಕ್ಷಣಗಳನ್ನು ಅನುಭವಿಸುವ ಸಂದರ್ಭಗಳು ಕಡಿಮೆಯಾಗುತ್ತಿವೆಯೆ ಅಥವಾ ನೀವು ಹತ್ತಿರ ಹೋದರೂ ಸಂಗಾತಿಯು ನಿಮ್ಮನ್ನು ದೂರವಿಡಲು ಪ್ರಯತ್ನಿ ಸುತ್ತಿದ್ದಾನೆಯೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಒಂದೊಮ್ಮೆ ಸಂಗಾತಿಯು ಇನ್ನೊಬ್ಬ ಯಾರಾದರೊಂದಿಗೆ ಒಲವು ಬೆಳೆಸಿಕೊಂಡಿದ್ದಲ್ಲಿ ಅದರ ಪರಿಣಾಮ ಸಾಮಾನ್ಯವಾಗಿ ಮಿಲನ ಸಂದರ್ಭದಲ್ಲಿ ಕಂಡು ಬರುತ್ತದೆ. ನಿಮ್ಮಿಂದ ಆತನಿಗೆ ಕಿರಿಕಿರಿಯ ಭಾವನೆ ಮೂಡುತ್ತಿರಬಹುದು. ಇಂಥ ಯಾವುದಾದರೂ ಬದಲಾವಣೆಗಳು ನಿರಂತರವಾಗಿ ಕಂಡು ಬಂದಲ್ಲಿ ಅವನ್ನು ಗಮನದಲ್ಲಿಟ್ಟುಕೊಳ್ಳಿ.
Most Read:ಹೆಂಡತಿಯು ತನ್ನ ಗಂಡನಲ್ಲಿ ಎಂದೂ ಹಂಚಿಕೊಳ್ಳದ ಕೆಲವೊಂದು ಗುಟ್ಟುಗಳು
ಬಿಲ್ಗಳನ್ನು ಪರಿಶೀಲಿಸಿ
ನಿಮ್ಮ ಸಂಗಾತಿಯೊಂದಿಗೆ ನೀವು ಡೇಟಿಂಗ್ ಆರಂಭಿಸಿದ ದಿನಗಳನ್ನು ನೆನಪು ಮಾಡಿಕೊಂಡು ನೋಡಿ. ಆಗ ಸಹಜವಾಗಿಯೇ ಹೊರಗೆ ತಿನ್ನುವುದು, ಸುತ್ತಾಡುವುದು ಮುಂತಾದುವುಗಳ ಮೇಲೆ ಹೆಚ್ಚು ಖರ್ಚು ಮಾಡುತ್ತಿದ್ದೀರಿ ಅಲ್ಲವೆ? ಒಂದು ವೇಳೆ ನಿಮ್ಮ ಸಂಗಾತಿಯು ಇನ್ನೊಬ್ಬರೊಂದಿಗೆ ಆಪ್ತತೆ ಬೆಳೆಸಿಕೊಂಡಿದ್ದಲ್ಲಿ ಈ ಸಂಗತಿಗಳು ಪುನರಾವರ್ತನೆ ಆಗುತ್ತಿರಬಹುದು. ಸಂಗಾತಿಯ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡಗಳಲ್ಲಿ ತಿಳಿಯಲಾರದ ದೊಡ್ಡ ಮೊತ್ತದ ಖರ್ಚುಗಳು ಕಾಣಿಸುತ್ತಿದ್ದಲ್ಲಿ ನೀವು ಹುಷಾರಾಗುವುದು ಸೂಕ್ತ.
ಸಂಗಾತಿಯ ಸಹೋದ್ಯೋಗಿಗಳೊಂದಿಗೆ ಮಾತನಾಡಿ
ಉದ್ಯೋಗದಲ್ಲಿರುವ ಕನಿಷ್ಠ ಶೇ.50 ರಷ್ಟು ಜನ ಜೀವನದಲ್ಲಿ ಒಂದಿಲ್ಲೊಂದು ಬಾರಿ ಕೆಲಸದ ಸ್ಥಳದಲ್ಲಿ ಬೇರೊಬ್ಬರೊಂದಿಗೆ ರೋಮಾನ್ಸ್ ಮಾಡಿರುತ್ತಾರೆ ಎಂಬುದು ಅಧ್ಯಯನವೊಂದರಲ್ಲಿ ತಿಳಿದ ಸಂಗತಿಯಾಗಿದೆ. ಆಫೀಸ್ ಪಾರ್ಟಿಗಳಿಗೆ ಅಥವಾ ಅವರ ಸಹೋದ್ಯೋಗಿಗಳ ಮನೆಗೆ ಕರೆದೊಯ್ಯಲು ನಿಮ್ಮ ಸಂಗಾತಿಯು ಹಿಂಜರಿಯಲಾರಂಭಿಸಿದ್ದರೆ ಇದನ್ನೊಂದು ಎಚ್ಚರಿಕೆಯ ಲಕ್ಷಣವನ್ನಾಗಿ ಪರಿಗಣಿಸಿ. ಸಾಧ್ಯವಾದರೆ ಆಗಾಗ ಪಾರ್ಟಿ ಆಯೋಜಿಸಿ ನಿಮ್ಮ ಸಂಗಾತಿಯ ಸಹೋದ್ಯೋಗಿಗಳನ್ನೂ ಆಮಂತ್ರಿಸಿ ಅವರೊಂದಿಗೆ ಮಾತನಾಡಲು ಯತ್ನಿಸಿ.
Most Read:25ರ ಹರೆಯಕ್ಕಿಂತ ಸಣ್ಣ ವಯಸ್ಸಿನ ಹುಡುಗಿಯರು ಸೆಕ್ಸ್ ಬಗ್ಗೆ ತಿಳಿಯಬೇಕಾದ ವಿಚಾರಗಳು
ಫೋನ್ ಬಗ್ಗೆ ವಿಪರೀತ ಒಲವು ಬೆಳೆಸಿಕೊಂಡಿದ್ದರೆ ಗಮನಿಸಿ
ನಿಮ್ಮ ಸಂಗಾತಿಯ ದಿನನಿತ್ಯದ ವರ್ತನೆಗಳಲ್ಲಿ ಬದಲಾವಣೆಗಳಾಗುತ್ತಿವೆಯಾ ಎಂಬುದನ್ನು ಗಮನಿಸಿ. ತಿಳಿಸಲಾರದ ಖರ್ಚುಗಳಂತೆ ತನ್ನ ಫೋನ್ ಬಗ್ಗೆ ವಿಪರೀತ ಪೊಸೆಸಿವ್ನೆಸ್ ಬೆಳೆಸಿಕೊಂಡಿದ್ದರೆ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿರಿ. ಸಂಗಾತಿಯ ಫೋನ್ನಲ್ಲಿ ಪಾಸ್ ವರ್ಡ ಇದ್ದರೆ ಯಾವಾಲಾದರೊಮ್ಮೆ ಲೋಕಾಭಿರಾಮವಾಗಿ ಪಾಸ್ ವರ್ಡ ಕೇಳಿ ನೋಡಿ. ಒಂದು ವೇಳೆ ಸಂಗಾತಿಯು ನಿಮ್ಮ ಮಾತನ್ನು ಬೇರೆಡೆ ತಿರುಗಿಸಲು ಯತ್ನಿಸಿದಲ್ಲಿ ಏನೋ ಸಮಸ್ಯೆ ಇದೆ ಎಂಬುದು ಖಚಿತ. ಪಾಸ್ ವರ್ಡ ಶೇರ್ ಮಾಡದೆ ಇರುವುದು ಸರಿಯಾದ ಕ್ರಮವೇ ಆದರೂ, ಕೇಳಿದಾಗ ನೇರವಾಗಿ ಇಲ್ಲವೆನ್ನದೆ ಮಾತು ಬದಲಾಯಿಸಲು ಯತ್ನಿಸುವುದು ಮಾತ್ರ ಯಾವುದೋ ವಂಚನೆಯ ಸುಳಿವು ನೀಡಿದಂತಾಗುತ್ತದೆ.
ಆಪ್ತರೊಂದಿಗೆ ಚರ್ಚಿಸಿ
ಕೆಲ ಬಾರಿ ಸಂಶಯದ ಗೂಡಾದ ಮನಸ್ಸು ಏನೂ ಇಲ್ಲದಿದ್ದರೂ ಏನೋ ಇದೆ ಎಂದು ನಂಬಲಾರಂಭಿಸುತ್ತದೆ. ಸಂಬಂಧಗಳಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದ್ದರಿಂದ ನಿಮಗೆ ಅತ್ಯಂತ ಆಪ್ತರಾದವರೊಂದಿಗೆ ಸಮಸ್ಯೆಯನ್ನು ಚರ್ಚಿಸಿ ನೋಡಿ. ಅವರ ದೃಷ್ಟಿಕೋನದ ಸಹಾಯದಿಂದ ಪರಿಸ್ಥಿತಿಯನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ತಕ್ಷಣದ ತಪ್ಪು ನಿರ್ಧಾರಕ್ಕೆ ಬರುವುದರಿಂದ ಪಾರಾಗಬಹುದು.
Most Read:ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗಬೇಕಂತೆ! ಸಂಬಂಧ ಇನ್ನಷ್ಟು ಅನ್ಯೋನ್ಯತೆಯಾಗಿ ಇರುತ್ತದೆಯಂತೆ!
ನೇರವಾಗಿ ಮಾತನಾಡುವ ಸಂದರ್ಭದಲ್ಲಿ ತಾಳ್ಮೆ ಇರಲಿ
ಇನ್ನೇನು ನನಗೆ ಎಲ್ಲ ಗೊತ್ತಾಗಿದೆ ಎನ್ನುವ ಸಂದರ್ಭ ಬಂದಾಗ ಸಂಗಾತಿಗೆ ನೇರವಾಗಿಯೇ ಕೇಳಿ ಬಿಡಬೇಕು ಎನ್ನುವ ನಿರ್ಧಾರ ಮಾಡುವುದು ಸಹಜ. ಆದರೆ ಹೀಗೆ ಕೇಳುವ ಸಮಯದಲ್ಲಿ ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಂಡು ಏನೇನೋ ಮಾತನಾಡಬೇಡಿ. ಅಲ್ಲದೆ ನೇರವಾಗಿ ಸಂಗಾತಿಯ ವಿರುದ್ಧ ಆರೋಪಗಳನ್ನು ಮಾಡದಿರಿ. ಇಂಥ ವಿಷಯಗಳನ್ನು ಮಾತನಾಡುವಾಗ ವಿಷಯದ ತೀರಾ ಆಳವನ್ನು ಕೆದಕದೆ ಸೂಕ್ಷ್ಮವಾಗಿ, ಚಿಕ್ಕದಾಗಿ ಹಾಗೂ ನೇರವಾಗಿ ಮಾತನಾಡುವುದು ಸರಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ವಿಷಯಗಳನ್ನು ಕೆದಕಿದಷ್ಟೂ ಹೆಚ್ಚು ವಿವರಣೆಗಳು ಬರಲಾರಂಭಿಸುತ್ತವೆ. ಇದರಿಂದ ವಿಷಯ ಹಾಳಾಗುತ್ತದೆ. ಆತ ಅಥವಾ ಆಕೆ ಇನ್ನೊಬ್ಬರೊಂದಿಗೆ ಸಂಬಂಧ ಹೊಂದಿದ್ದಾರೆಯೆ ಎಂಬುದನ್ನು ಚುಟುಕಾಗಿ ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ಕೇಳುವುದೇ ಸರಿ.
ಎಲ್ಲ ಆದ ನಂತರ ಮುಂದೇನು?
ನಿಮ್ಮ ಸಂಗಾತಿಯೊಂದಿಗೆ ಎದುರು ಬದುರಾದ ನಂತರ ಜೀವನ ಮೊದಲಿನಂತಿರದು ಎಂಬುದು ಗೊತ್ತಿರಲಿ. ಒಂದು ವೇಳೆ ತಪ್ಪು ಮಾಡಿದ್ದನ್ನು ಸಂಗಾತಿಯು ನೇರವಾಗಿ ಒಪ್ಪಿಕೊಂಡಲ್ಲಿ ಅದೊಂದು ದೊಡ್ಡ ರಿಲೀಫ್. ನಿಮಗೆ ಆ ಕ್ಷಣಕ್ಕೆ ಕೋಪ ಬರಬಹುದು ಅಥವಾ ನೋವುಂಟಾಗಬಹುದಾದರೂ ಹೆಗಲ ಮೇಲಿನಿಂದ ದೊಡ್ಡ ಹೊರೆ ಇಳಿದ ಅನುಭವವಾಗುವುದು ಮಾತ್ರ ಸತ್ಯ. ಆದರೆ ಒಂದೊಮ್ಮೆ ನಿಮ್ಮ ಆರೋಪಗಳನ್ನು ಸಂಗಾತಿಯು ಒಪ್ಪಿಕೊಳ್ಳದಿದ್ದಲ್ಲಿ ನೀವು ಅಥವಾ ನಿಮ್ಮ ಸಂಗಾತಿಯು ಪರಸ್ಪರ ಮೊದಲಿನಂತೆ ಇರಲು ಸಾಧ್ಯವೆ? ಮೊದಲಿನ ಪ್ರೀತಿ, ವಿಶ್ವಾಸ, ನಂಬಿಕೆಗಳು ಉಳಿಯಬಲ್ಲವೆ? ಸಂಬಂಧಗಳು ಬಲು ಸೂಕ್ಷ್ಮ. ಹೀಗಾಗಿ ಅದರಲ್ಲಿ ಏನೇ ಮಾಡುವ ಮುನ್ನ ನೂರು ಬಾರಿ ಯೋಚಿಸಿ ನಂತರ ಹೆಜ್ಜೆ ಇಡಿ. ಇಲ್ಲದ ವಿಷಯಕ್ಕೆ ಸಂಬಂಧವನ್ನು ಬಲಿ ಕೊಡುವುದು ಬೇಡ.