For Quick Alerts
ALLOW NOTIFICATIONS  
For Daily Alerts

ಮದುವೆಗೆ ಮೊದಲು ನೀವು ಮಾಡಲೇಬೇಕಾದ ಕೆಲವು ಕೆಲಸಗಳು

|

ಮದುವೆ ಎನ್ನುವುದು ಜೀವನದಲ್ಲಿ ಒಂದೇ ಸಲ ಆಗುವುದು ಎನ್ನುವ ಮಾತಿದೆ. ಆದರೆ ಇಂದಿನ ದಿನಗಳಲ್ಲಿ ಈ ಮಾತು ಸುಳ್ಳು ಎಂದು ಸಾಬೀತು ಆಗಿದೆ. ಮದುವೆ ಜೀವನದ ಹೊಸ ಆರಂಭ. ವೈವಾಹಿಕ ಜೀವನದಲ್ಲಿ ನಾವು ಹಲವಾರು ರೀತಿಯ ಬದಲಾವಣೆಗಳನ್ನು ಮಾಡಬೇಕು ಮತ್ತು ಸಂಗಾತಿಗೆ ಹೊಂದಿಕೊಂಡು ಬದುಕಬೇಕು. ಹೊಂದಾಣಿಕೆ ಕೊರತೆಯಿಂದಾಗಿ ಇಂದಿನ ದಿನಗಳಲ್ಲಿ ಮದುವೆಗಳು ಮುರಿದು ಬೀಳುತ್ತಿರುವುದನ್ನು ಕಾಣಬಹುದು.

ವಿವಾಹದ ಬಳಿಕ ಜವಾಬ್ದಾರಿ ಕೂಡ ಇಮ್ಮಡಿಯಾಗುವುದು. ಸಂಬಂಧಗಳು ಮತ್ತಷ್ಟು ಬೆಸೆದುಕೊಳ್ಳುವುದು ಮತ್ತು ಅವುಗಳನ್ನು ನಿಭಾಯಿಸಲು ಕಲಿಯಬೇಕು. ಈ ವೇಳೆ ಯಾವುದೇ ತಪ್ಪು ಕೂಡ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ಮದುವೆ ಮೊದಲು ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಬೇಕು. ಮದುವೆಗೆ ಮೊದಲು ಇರುವಂತಹ ಕೆಲವೊಂದು ಪ್ರೀತಿ ಪ್ರೇಮ, ನಡವಳಿಕೆಗಳು ಬದಲಾವಣೆ ಮಾಡಿಕೊಳ್ಳಬೇಕು. ತಜ್ಞರ ಪ್ರಕಾರ ವಿವಾಹಕ್ಕೆ ಮೊದಲು ನೀವು ಮಾಡಲೇಬೇಕಾದ ಕೆಲವೊಂದು ವಿಚಾರಗಳನ್ನು ಈ ಲೇಖನದಲ್ಲಿ ಸೂಚಿಸಲಾಗಿದೆ. ಅದು ಯಾವುದು ಎಂದು ಈ ಮೂಲಕ ತಿಳಿಯಿರಿ.

ವಿವಾಹಪೂರ್ವ ಸಂಬಂಧಗಳನ್ನು ಕೊನೆಗೊಳಿಸಿ

ವಿವಾಹಪೂರ್ವ ಸಂಬಂಧಗಳನ್ನು ಕೊನೆಗೊಳಿಸಿ

ಮದುವೆಗೆ ಮೊದಲು ಪ್ರೀತಿ ಪ್ರೇಮ ಎನ್ನುವುದು ಸಾಮಾನ್ಯವಾಗಿರುವುದು. ಅದರಲ್ಲೂ ಕಾಲೇಜು ಮೆಟ್ಟಿಲು ಹತ್ತುವ ಮೊದಲೇ ಇಂತಹ ಪ್ರೇಮ ಪ್ರಸಂಗವು ಕಂಡುಬರುವುದು. ಆದರೆ ಈ ಸಂಬಂಧವು ವಿವಾಹದ ಬಳಿಕವೂ ಮುಂದುವರಿದರೆ ಆಗ ದೊಡ್ಡ ಮಟ್ಟದ ಸಮಸ್ಯೆಯು ಎದುರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿಸಬಹುದು. ದುರಾದೃಷ್ಟದಿಂದ ವಿವಾಹಪೂರ್ವ ಸಂಬಂಧದ ಬಗ್ಗೆ ಯಾವುದೇ ಒಂದು ನಿರ್ಧಾರ ಮಾಡದೆ ಕೆಲವರು ಮದುವೆಯಾಗಲು ಅವಸರ ಪಡುವರು. ನೀವು ಮದುವೆಯಾಗಲು ಯೋಜನೆ ಹಾಕಿಕೊಂಡಿದ್ದರೆ ಆಗ ನೀವು ಈ ವಿಚಾರವನ್ನು ಸಂಗಾತಿ ಜತೆಗೆ ಹಂಚಿಕೊಳ್ಳಿ.

Most Read: ಮದುವೆ ಬಳಿಕವೂ ಇಂತಹ ಸಂಗತಿಗಳೆಲ್ಲಾ ಬದಲಾವಣೆ ಆಗುವುದಿಲ್ಲವಂತೆ!!

ನಿಮ್ಮ ಹಿಂದಿನ ಪ್ರೀತಿಯ ಜೀವನ

ನಿಮ್ಮ ಹಿಂದಿನ ಪ್ರೀತಿಯ ಜೀವನ

ಪ್ರತಿಯೊಬ್ಬರಿಗೂ ಹಿಂದಿನ ಜೀವನ ಎಂದು ಇದ್ದೇ ಇರುತ್ತದೆ ಮತ್ತು ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಆಗಲ್ಲ. ನಾವೆಲ್ಲರೂ ಪ್ರೀತಿಯನ್ನು ಅನುಭವಿಸಿರುತ್ತೇವೆ ಮತ್ತು ಹಲವಾರು ಪಾಠಗಳನ್ನು ಕೂಡ ಕಲಿತುಕೊಂಡಿರುತ್ತೇವೆ. ಇದರಲ್ಲಿ ಒಳ್ಳೆಯದು ಹಾಗೂ ಕೆಟ್ಟದು ಎರಡೂ ಇದೆ. ಆದರೆ ಈ ಪ್ರೀತಿಯನ್ನು ಬಿಟ್ಟು ಬೇರೆಯವರೊಂದಿಗೆ ಜೀವನ ಸಾಗಿಸಲು ಮುಂದಾಗುವ ವೇಳೆ ನಿಮ್ಮ ಪ್ರೀತಿಯ ಬಗ್ಗೆ ಅವರಿಗೆ ತಿಳಿಸಬೇಕು ಮತ್ತು ಇದು ನಿಮ್ಮ ಜೀವನದ ಮೇಲೆ ಯಾವ ಪರಿಣಾಮ ಬೀರುವುದು ಎಂದು ತಿಳಿದುಕೊಳ್ಳಬೇಕು.

ಮದುವೆ ಬಳಿಕದ ಜವಾಬ್ದಾರಿಗಳು

ಮದುವೆ ಬಳಿಕದ ಜವಾಬ್ದಾರಿಗಳು

ಪತ್ನಿಯಾದವಳು ಮನೆಯ ಎಲ್ಲಾ ಜವಾಬ್ದಾರಿಯನ್ನು ಹೆಗಲಿಗೆ ಹಾಕಿಕೊಳ್ಳಬೇಕು ಮತ್ತು ಪತಿಯು ಆರ್ಥಿಕ ವ್ಯವಹಾರವನ್ನು ನೋಡಿಕೊಳ್ಳಬೇಕು ಎಂದು ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿ. ಆದರೆ ಈಗ ಸಮಯ ಬದಲಾಗುತ್ತಿದೆ ಮತ್ತು ಯಾರಿಗೂ ಇದೇ ಜವಾಬ್ದಾರಿ ಎಂದು ಹೇಳಲು ಆಗದು. ಸಂಗಾತಿಗಳಿಬ್ಬರು ವೃತ್ತಿಪರರಾಗಿದ್ದರೆ ಆಗ ಜೀವನ ನಿರ್ವಹಣೆಗೆ ಇಬ್ಬರು ದುಡಿಯಬಹುದು. ಮದುವೆಗೆ ಮೊದಲು ಅವರಿಬ್ಬರು ತಮ್ಮ ಜವಾಬ್ದಾರಿ ಬಗ್ಗೆ ಅರಿತುಕೊಳ್ಳಬೇಕು.

ಆರ್ಥಿಕ ಪರಿಸ್ಥಿತಿ

ಆರ್ಥಿಕ ಪರಿಸ್ಥಿತಿ

ಇದನ್ನು ನೀವು ಒಪ್ಪಿಕೊಳ್ಳಬಹುದು ಅಥವಾ ಒಪ್ಪದೇ ಇರಬಹುದು. ಆದರೆ ಹಣವು ಸಂಬಂಧವನ್ನು ಮುರಿಯಬಹುದು ಅಥವಾ ಜೋಡಿಸಬಹುದು. ಇದರಿಂದಾಗಿ ನಿಮ್ಮ ಭವಿಷ್ಯದ ಸಂಗಾತಿಗೆ ಆರ್ಥಿಕ ವಿಚಾರದ ಬಗ್ಗೆ ತಿಳಿಸುವುದು ತುಂಬಾ ಒಳ್ಳೆಯದು. ಇಬ್ಬರು ಒಂದೇ ರೀತಿಯಲ್ಲಿ ಇದ್ದಾಗ ಜತೆಯಾಗಿ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬಹುದು.

Most Read: ಹಿಂದಿನ ಮಾಜಿ ಸಂಗಾತಿಯ ಕನಸುಗಳೇಕೆ ಕಾಡುತ್ತವೆ? ಇಲ್ಲಿದೆ ಉತ್ತರ..

ಅತ್ತೆಮಾವಂದಿರ ನಿರೀಕ್ಷೆ

ಅತ್ತೆಮಾವಂದಿರ ನಿರೀಕ್ಷೆ

ಮದುವೆ ಎನ್ನುವುದು ಕೇವಲ ಎರಡು ಜೀವಗಳನ್ನು ಮಾತ್ರ ಬೆಸೆಯುವುದಲ್ಲ. ಇಲ್ಲಿ ಎರಡು ಕುಟುಂಬಗಳು ಒಂದಾಗುವುದು. ನಿಮ್ಮ ಪೋಷಕರ ಬಗ್ಗೆ ಮತ್ತು ಅವರಿಗೆ ಇರುವಂತಹ ನಿರೀಕ್ಷೆ ಬಗ್ಗೆ ಸಂಗಾತಿಗೆ ನೀವು ಹೇಳಬೇಕು. ಭವಿಷ್ಯಕ್ಕೆ ಸಂಗಾತಿಯನ್ನು ತಯಾರು ಮಾಡುವುದು ನಿಮ್ಮ ಜವಾಬ್ದಾರಿ ಮತ್ತು ಆಕೆ ಅಥವಾ ಆತ ನಿಮ್ಮ ಕುಟುಂಬದವರು ಮತ್ತು ಜೀವನಶೈಲಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ.

ಸಂಗಾತಿಗಳಿಬ್ಬರು ಭಿನ್ನ ಸಂಪ್ರದಾಯದವರಾಗಿದ್ದರೆ…

ಸಂಗಾತಿಗಳಿಬ್ಬರು ಭಿನ್ನ ಸಂಪ್ರದಾಯದವರಾಗಿದ್ದರೆ…

ಇಬ್ಬರು ವ್ಯಕ್ತಿಗಳು ಭಿನ್ನ ಸಂಪ್ರದಾಯದ ಹಿನ್ನೆಲೆಯುಳ್ಳವರು ಆಗಿದ್ದರೆ ಆಗ ಹೊಸ ಕುಟುಂಬ ಸದಸ್ಯರಿಗೆ ಹೊಂದಿಕೊಳ್ಳಲು ತುಂಬಾ ಕಷ್ಟವಾಗುವುದು. ಇದು ಮನೆಗೆ ಬಂದ ಹೊಸ ಸದಸ್ಯರಿಗೆ ಕೂಡ ಸವಾಲಿನ ಕೆಲಸ. ಮದುವೆಗೆ ಮೊದಲು ಪರಸ್ಪರ ತಮ್ಮ ಸಂಪ್ರದಾಯದ ಬಗ್ಗೆ ಅರಿತುಕೊಳ್ಳಲು ನೆರವಾದರೆ ಆಗ ಮದುವೆ ಬಳಿಕದ ಸಮಯವು ತುಂಬಾ ಸುಲಭವಾಗುವುದು.

Most Read: ದಯವಿಟ್ಟು ನವದಂಪತಿಗಳ ಬಳಿ 'ಮಗು ಯಾವಾಗ' ಎಂದು ಮಾತ್ರ ಕೇಳಬೇಡಿ!!

ನಿರೀಕ್ಷೆಗಳು

ನಿರೀಕ್ಷೆಗಳು

ನಮ್ಮ ಜೀವನದ ಅಂಗವಾಗಿರುವ ಜನರು ಮತ್ತು ನಮ್ಮ ಜೀವನದಿಂದ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಜೀವನ ಹಂಚಿಕೊಳ್ಳಲಿರುವ ವ್ಯಕ್ತಿಯಿಂದ ನೀವು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಕೆಲವೊಂದು ಸಲ ನಿರೀಕ್ಷೆಗಳು ಈಡೇರದೆ ಇದ್ದಾಗ ನಿರಾಶೆ ಆಗುವುದು. ಇದರಿಂದ ವೈವಾಹಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

English summary

Things You have to do fist, before getting to marriage

According to experts, premarital issues, when not addressed on time, can have an irreversible impact on a married couple’s life. Unfortunately, in our excitement and eagerness to tie the knot, most people ignore these issues. If you are planning to get married, ensure that you discuss these issues with your partner.
Story first published: Saturday, February 23, 2019, 15:21 [IST]
X
Desktop Bottom Promotion