For Quick Alerts
ALLOW NOTIFICATIONS  
For Daily Alerts

ನೀವು ಸಹ ಅವಲಂಬನೆ ಸಂಬಂಧದಲ್ಲಿ ಇದ್ದೀರಿ ಎನ್ನುವ ಲಕ್ಷಣಗಳು

|

ಸಂಬಂಧದಲ್ಲಿ ಹಲವಾರು ರೀತಿಯ ಏಳುಬೀಳುಗಳು ಇದ್ದೇ ಇರುತ್ತದೆ. ಯಾವುದೇ ರೀತಿಯ ಸಂಬಂಧವಾಗಲಿ ಅದು ಉತ್ತಮವಾಗಿದ್ದರೆ ಆಗ ಅದೊಂದು ದೇವರು ಕೊಟ್ಟಿರುವಂತಹ ವರ ಎಂದು ಹೇಳಬಹುದು. ಸಂಬಂಧಕ್ಕಾಗಿ ನೀವು ಭರವಸೆಗಳು, ಒಳ್ಳೆಯ ನೆನಪುಗಳನ್ನು ನಿರ್ಮಿಸುತ್ತೀರಿ ಮತ್ತು ಯಾವತ್ತಿಗೂ ಸೋಲು ಒಪ್ಪಿಕೊಳ್ಳದೆ ಇರುವಂತಹ ಮನೋಭಾವ ಸೃಷ್ಟಿಸಿಕೊಳ್ಳೂವಿರಿ. ನೀವು ಬಯಸಿದಂತೆ ಎಲ್ಲವೂ ಹೋಗುತ್ತಲಿರುತ್ತದೆ. ಆದರೆ ಸಂಬಂಧವನ್ನು ಯಶಸ್ವಿಗೊಳಿಸಲು ನೀವು ಪ್ರಯತ್ನ ಎಲ್ಲಾ ಶ್ರಮ ವಹಿಸುತ್ತಿದ್ದೀರಿ ಮತ್ತು ಸಂಗಾತಿಗೆ ಇದರ ಬಗ್ಗೆ ಆಸಕ್ತಿಯೇ ಇಲ್ಲ ಎಂದು ನಿಮಗೆ ಅನಿಸುತ್ತಿದೆಯಾ? ಎಲ್ಲವೂ ಸರಿಯಾಗಿದೆ, ಆದರೆ ಏನೋ ಒಂದುಕಡೆ ತಪ್ಪಾಗಿದೆ ಎಂದು ಅನಿಸುತ್ತಿದೆಯಾ? ಸಹ ಅವಲಂಬನೆಯ ಸಂಬಂಧದಲ್ಲಿ ಇದ್ದೀರಾ?

Codependent Relationship

ನೀವು ಸಹ ಅವಲಂಬನೆಯ ಸಂಬಂಧದಲ್ಲಿ ಇದ್ದೀರಿ ಎನ್ನುವುದಕ್ಕೆ ಐದು ಚಿಹ್ನೆಗಳು

ಅವರು ಏನು ಮಾಡುತ್ತಿದ್ದಾರೆ ಮತ್ತು ಯೋಚಿಸುತ್ತಿದ್ದಾರೆ ಎಂದು ಯಾವಾಗಲೂ ನೋಡಲು ಬಯಸುತ್ತಿದ್ದೀರಾ? ಆರೋಗ್ಯಕಾರಿ ಸಂಬಂಧದಲ್ಲಿ ಇದ್ದಾಗ ಸಂಗಾತಿ ಮತ್ತು ನಿಮಗೆ ಪರಸ್ಪರರ ಕೆಲಸಗಳು ಏನು ಮತ್ತು ವೇಳಾಪಟ್ಟಿ ಹೇಗಿರುವುದು ಎಂದು ತಿಳಿದಿರುವುದು. ಆದರೆ ಸಂಗಾತಿಯು ಏಣು ಮಾಡುತ್ತಲಿದ್ದಾರೆ ಅಥವಾ ಅವರ ತಲೆಯಲ್ಲಿ ಯಾವ ಆಲೋಚನೆಗಳು ಇವೆ ಎಂದು ನಿಮಗೆ ಅನಿಸುತ್ತಿದ್ದರೆ ಆಗ ಖಂಡಿತವಾಗಿಯೂ ನೀವು ಸಹ ಅವಲಂಬನೆ ಸಂಬಂಧದಲ್ಲಿ ಇದ್ದೀರಿ ಎನ್ನುವುದರ ಸುಳಿವು ಇದಾಗಿದೆ. ನಿಮ್ಮಿಬ್ಬರ ನಡುವೆ ಯಾವುದೇ ವಿಚಾರಗಳು ಮುಚ್ಚಿಡಲ್ಪಟ್ಟಿಲ್ಲ. ಆದರೆ ಅವರಿಗೆ ಕೂಡ ವೈಯಕ್ತಿಕ ಬದುಕನ್ನು ನೀಡಿ.

ಅವರ ಬೇಡಿಕೆಯ ಮೊದಲು ನಿಮ್ಮದು

ಸಂಗಾತಿಗೆ ಏನು ಬೇಕೆಂದು ಅರ್ಥ ಮಾಡಿಕೊಳ್ಳುವುದು ಮತ್ತು ಅವರ ಬೇಡಿಕೆಗಳು ಏನು ಎಂದು ಅರಿತುಕೊಳ್ಳುವುದು ಒಳ್ಳೆಯದು. ಆದರೆ ಪ್ರತೀ ಸಲ ಅವರ ಬೇಡಿಕೆಗೆ ಮೊದಲ ಆದ್ಯತೆ ನೀಡುವುದು ಮತ್ತು ನಿಮ್ಮ ಬೇಡಿಕೆಗಳನ್ನು ಕಡೆಗಣಿಸುವುದು ಸರಿಯಲ್ಲ. ಇದು ಕೂಡ ಸಹ ಅವಲಂಬನೆಯ ಒಂದು ಲಕ್ಷಣವಾಗಿದೆ. ನೀವು ಏಕಾಂಗಿಯಾಗಿ ಇರಲು ಸಾಧ್ಯವಿಲ್ಲದ ಕಾರಣದಿಂದಾಗಿ ನೀವು ಬೇರೆಯವರ ಬೇಡಿಕೆಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತೀರಿ. ಸಂಗಾತಿಯು ಉತ್ತಮವಾಗಿಲ್ಲದೆ ಇದ್ದರೆ ನೀವು ಒಳ್ಳೆಯದಾಗಿ ಇರಲ್ಲ ಎಂದು ನೀವು ಭಾವಿಸುತ್ತೀರಿ. ಯಾಕೆಂದರೆ ಅವರ ಬೇಡಿಕೆಗಳು ಮೊದಲು ಬರುವುದು.

ಸಂಗಾತಿ ಇಲ್ಲ ಎಂದು ಹೇಳದೆ ಇರುವುದು

ಸಂಗಾತಿಗೆ ನೋವುಂಟು ಮಾಡಲು ನೀವು ಬಯಸುವುದಿಲ್ಲ ಅಥವಾ ಅವರ ಭಾವನೆಗಳಿಗಾಗಿ ನೀವು ಏನು ಬೇಕಾದರೂ ಮಾಡುತ್ತೀರಿ. ಇದನ್ನು ಮಾಡಲು ನಿಮಗೆ ಇಷ್ಟವಿಲ್ಲದೆ ಇದ್ದರೂ ಕೂಡ. ಪ್ರತಿಯೊಂದು ಸಂಬಂಧದಲ್ಲಿ ಗಡಿ ಎನ್ನುವುದು ಮುಖ್ಯವಾಗಿರುವುದು. ಆದರೆ ಸಹ ಅವಲಂಬನೆ ಸಂಬಂಧದಲ್ಲಿ ಇರುವ ವೇಳೆ ನೀವು ಇದನ್ನು ಕಾಪಾಡಲು ತುಂಬಾ ಪರದಾಡುವಿರಿ. ತಮಗೆ ಇಷ್ಟವಿಲ್ಲದೆ ಇರುವುದನ್ನು ನಾನು ಮಾಡುವುದಿಲ್ಲ ಎಂದು ಆರೋಗ್ಯಕಾರಿ ಸಂಬಂಧದಲ್ಲಿ ಸಂಗಾತಿಗ ಹೇಳಬಹುದು.

Most Read: ನೀವು ತಿಳಿಯದೇ ಇರುವ ಪ್ರೀತಿಯ ಬಗೆಗಿನ ಆರು ಅಚ್ಚರಿಯ ಸಂಗತಿಗಳು

ಸಂಗಾತಿ ಜತೆಗಿರಲು ನಿಮ್ಮ ಎಲ್ಲಾ ಯೋಜನೆಗಳನ್ನು ಬದಿಗಿರುಸುವಿರಿ

ಆರೋಗ್ಯಕಾರಿ ಸಂಬಂಧದಲ್ಲಿ ಕೆಲವೊಂದು ಸಲ ಯೋಜನೆಗಳನ್ನು ರದ್ದು ಮಾಡುವುದು ಮುಖ್ಯವಾಗಿರುವುದು. ಆದರೆ ಇದು ಗುಣಮಟ್ಟದ ಸಮಯವನ್ನು ಸಂಗಾತಿ ಜತೆಗೆ ಕಳೆಯುವ ಸಲುವಾಗಿ. ಆದರೆ ನೀವು ಎಲ್ಲಾ ಸಲ ನಿಮ್ಮ ಯೋಜನೆಗಳನ್ನು ರದ್ದು ಮಾಡುತ್ತಲೇ ಇದ್ದರೆ ಆಗ ನಿಮಗೋಸ್ಕರ ಮತ್ತು ಬೇರೆ ಸಂಬಂಧಗಳೀಗೆ ಯಾವುದೇ ಗೌರವಿಲ್ಲ ಎಂದು ಹೇಳಬಹುದು.

ಸಂಗಾತಿಯ ಕೆಲಸಗಳನ್ನು ಮಾಡುತ್ತಿರುತ್ತೀರಿ
ಸಂಗಾತಿಯ ಕೆಲಸಗಳಲ್ಲಿ ನೆರವಾಗುವುದು ಮತ್ತು ಮಗುವಿನಂತೆ ಅವರ ಆರೈಕೆ ಮಾಡುವುದರಲ್ಲಿ ತುಂಬಾ ವ್ಯತ್ಯಾಸವಿದೆ ಎಂದು ನೀವು ಸರಿಯಾಗಿ ತಿಳಿದುಕೊಳ್ಳಬೇಕು. ಸಂಗಾತಿಯ ಕೆಲವೊಂದು ಜವಾಬ್ದಾರಿಗಳಾಗಿರುವಂತಹ ಬೆಳಗ್ಗೆ ಏಳುವುದು ಮತ್ತು ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಹೋಗುವುದು ಮತ್ತು ಇತರ ಕೆಲವೊಂದು ಕೆಲಸಗಳನ್ನು ಮಾಡಲು ಇದೆ ಎಂದು ಅವರಿಗೆ ನೆನಪಿಸುತ್ತಾ ಇರುವುದು ನೀವು ಯಾವಾಗಲೂ ಮಾಡುತ್ತಲಿದ್ದರೆ ಆಗ ಇದು ಖಂಡಿತವಾಗಿಯೂ ಸರಿಯಲ್ಲ. ಈ ಚಿಹ್ನೆಗಳು ನೀವು ಯಾವಾಗಲೂ ಸಹ ಅವಲಂಬನೆ ಸಂಬಂಧದಲ್ಲಿ ತೊಡಗಿಕೊಂಡಿದ್ದೀರಿ ಮತ್ತು ಸಂಗಾತಿಯ ಮನರಂಜನೆ ಮಾಡಲು ಬಯಸಿದ್ದೀರಿ ಎಂದು ಹೇಳುತ್ತದೆ. ಬೇರೆ ಯಾವುದೇ ಸಂಬಂಧಕ್ಕಿಂತಲೂ ಹೆಚ್ಚಿನ ಮಹತ್ವ ನೀಡುತ್ತಿರಬಹುದು.

English summary

Signs You are in Codependent Relationship

Being in a relationship with the right person feels like a blessing of God. You make promises, create memories and have “never give up” attitude for your relationship, no matter how much fights you both have in a day. Everything is going as you wanted it to go. But have you ever felt like you are the only one who is making all the efforts to make your relationship successful and your partner is not at all interested in it? Did you ever got the feeling like everything is right but still something is wrong?
X
Desktop Bottom Promotion