For Quick Alerts
ALLOW NOTIFICATIONS  
For Daily Alerts

ಲೈಂಗಿಕತೆಯ ವಿಷಯದಲ್ಲಿ ಪುರುಷ ಮತ್ತು ಮಹಿಳೆಯ ಮನಗಳು ಭಿನ್ನವಾಗಿರುತ್ತವೆಯೇ?

|

'Fifty Shades of Grey'ಎಂಬ ಪುಸ್ತಕ ಅತಿಯಾದ ಲೈಂಗಿಕತೆಯನ್ನು ಆಧರಿಸಿದ್ದರೂ ಇದರಲ್ಲಿ ಭಾವನಾತ್ಮಕ ಸಂಬಂಧಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದ ಕಾರಣ ವಿಶ್ವದಾದ್ಯಂತ ಹತ್ತು ಕೋಟಿಗೂ ಹೆಚ್ಚು ಪುಸ್ತಕಗಳು ಮಾರಾಟವಾಗಿವೆ. ವಿಶೇಷವಾಗಿ ಈ ಪುಸ್ತಕವನ್ನು ಮಹಿಳೆಯರೇ ಹೆಚ್ಚಾಗಿ ಕೊಂಡಿರುವುದು ಗಮನಕ್ಕೆ ಬಂದಿದೆ. ಇದರ ಅರ್ಥವೇನು?ಮಹಿಳೆಯರು ಲೈಂಗಿಕತೆಯ ಕುರಿತಾಗಿ ಹೆಚ್ಚಿನ ಉತ್ಸುಕತೆ ಅಥವಾ ಆಸಕ್ತಿ ತೋರುತ್ತಾರೆ ಎಂದೇ? ಅಥವಾ ದೃಶ್ಯಮಾಧ್ಯಮದ ಮೂಲಕ ಕಾಣಬರುವ ಲೈಂಗಿಕ ಮಾಹಿತಿಗಿಂತಲೂ ಮನಸ್ಸಿನ ಕಲ್ಪನೆಯನ್ನೇ ಆಧರಿಸಿದ ಪುಸ್ತಕವೇ ಇವರಿಗೆ ಹೆಚ್ಚು ಇಷ್ಟವಾಗುತ್ತದೆ ಎಂದೋ? ವಾಸ್ತವದಲ್ಲಿ ಹೆಣ್ಣಿನ ಮನಸ್ಸನ್ನು ಅರಿಯುವುದು ಬ್ರಹ್ಮನಿಂದಲೂ ಸಾಧ್ಯವಿಲ್ಲ ಎಂದು ನಾವೆಂದೋ ಒಪ್ಪಿಕೊಂಡಾಗಿದೆ.

ಒಂದು ವೇಳೆ ಲೈಂಗಿಕವಾಗಿ ಪ್ರಚೋದನೆ ನೀಡುವ ಚಿತ್ರವೊಂದನ್ನು ಪ್ರತ್ಯೇಕವಾಗಿ ಮಹಿಳೆ ಹಾಗೂ ಪುರುಷನಿಗೆ ತೋರಿಸಿದರೆ ಇಬ್ಬರ ಪ್ರತಿಕ್ರಿಯೆಯೂ ಬೇರೆ ಬೇರೆಯಾಗಿರಬಹುದು. ಇದರಲ್ಲಿ ಜೋಡಿ ತನ್ಮಯತೆಯನ್ನು ಹಂಚಿಕೊಂಡ, ಚುಂಬನ ಅಪ್ಪುಗೆಯ ವಿವರಗಳನ್ನು ಮಹಿಳೆ ಗಮನಿಸಿದರೆ ಪುರುಷರು ಕೇಂದ್ರಭಾಗವನ್ನು ಮಾತ್ರವೇ ಗಮನಿಸುತ್ತಾರೆ. ಹಾಗಾಗಿ ಲೈಂಗಿಕತೆಯ ವಿಷಯದಲ್ಲಿ ಪುರುಷ ಮತ್ತು ಮಹಿಳೆಯ ಮನಗಳು ಬೇರೆ ಬೇರೆಯಾಗಿವೆ ಎಂದು ತಿಳಿದುಕೊಳ್ಳಬಹುದು ಹಾಗೂ ವಿಶೇಷವಾಗಿ ಜೋಡಿಯೊಂದು ಸರಸದಲ್ಲಿದ್ದಾಗಲೂ ಈ ಮನಗಳು ಸ್ಪಂದಿಸುವ ರೀತಿಯೂ ಭಿನ್ನವಾಗಿರುತ್ತವೆ....

ಈ ಬಗ್ಗೆ ನಡೆದ ಸಂಶೋಧನೆ

ಈ ಬಗ್ಗೆ ನಡೆದ ಸಂಶೋಧನೆ

A New Nerve Centre for Neurology ಎಂಬ ಸಂಸ್ಥೆ ಈ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ಖ್ಯಾತ ನರತಜ್ಞರ ಜೊತೆಗೇ ವೈಜ್ಞಾನಿಕ ಸಲಹಾಕಾರ ಕ್ಲಾರಾ ಕ್ಲರ್ಕ್ ರವರು ನೂರಾರು ವ್ಯಕ್ತಿಗಳ ಮನಸ್ಸಿನ ವಿವರಗಳನ್ನು ಕಲೆಹಾಕಿ ಭಾರೀ ಮಾಹಿತಿಯನ್ನು ಪಡೆದು ವಿಶ್ಲೇಷಿಸಿದ್ದಾರೆ. ಫಲಿತಾಂಶ ಅಚ್ಚರಿಗಳ ಆಗರವನ್ನೇ ಪ್ರಕಟಿಸಿದೆ. ಈ ಸಂಶೋಧನೆಯಲ್ಲಿ ಏನೇನು ವಿವರಗಳಿವೆ ಎಂಬುದನ್ನು ತಿಳಿದುಕೊಂಡರೆ ಮಿಲನದ ಸಮಯದಲ್ಲಿ ನಿಮ್ಮ ಸಂಗಾತಿಯ ಮನದಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಮೂಡುತ್ತದೆ ಹಾಗೂ ಇದು ದಾಂಪತ್ಯ ಸುಗಮಗೊಳ್ಳಲು ಇನ್ನಷ್ಟು ನೆರವಾಗಲಿದೆ.

ಮಿಲನ ಕ್ರಿಯೆಯಲ್ಲಿ ಕೆಲವು ಭಾಗಗಳು ಮಾತ್ರವೇ ಅಥವಾ ಇಡಿಯ ದೇಹವೇ?

ಮಿಲನ ಕ್ರಿಯೆಯಲ್ಲಿ ಕೆಲವು ಭಾಗಗಳು ಮಾತ್ರವೇ ಅಥವಾ ಇಡಿಯ ದೇಹವೇ?

ಸಾಮಾನ್ಯವಾಗಿ ಪುರುಷರು ಮಿಲನಕ್ರಿಯೆಯಲ್ಲಿ ತಮ್ಮ ಗಮನವನ್ನು ಬಿಟ್ಟುಕೊಡುವುದಿಲ್ಲ. ಪುರುಷರಿಗೆ ಕೇವಲ ಮಹಿಳೆಯರ ದೇಹದ ಕೆಲವು ಅಂಗಗಳ ಚಿತ್ರವನ್ನು ತೋರಿಸಿದರೂ ಸಾಕು, ಉದ್ರೇಕ ಪಡೆಯುತ್ತಾರೆ ಹಾಗೂ ಮಿಲನದ ಸಮಯ ದಲ್ಲಿಯೂ ಇವರು ಕೇವಲ ಒಂದು ಅಂಗದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿರುತ್ತಾರೆ. ಪುರುಷರ ಮಟ್ಟಿಗೆ ಲೈಂಗಿಕ ಕ್ರಿಯೆ ಎಂದರೆ ಮಹಿಳೆಯ ಪ್ರತಿ ಅಂಗಕ್ಕೂ ಮೀಸಲಾದ ಭಿನ್ನ ಕ್ರಿಯೆಗಳಾಗಿವೆ. ವಿಶೇಷವಾಗಿ ಸ್ತನಗಳತ್ತ ಪುರುಷರು ಅತಿ ಹೆಚ್ಚು ಉತ್ಸುಕರಾಗಿದ್ದು ಮಿಲನಕ್ರಿಯೆಯಲ್ಲಿ ಈ ಅಂಗಕ್ಕೆ ನೀಡುವ ಮಹತ್ವ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ, ಮಹಿಳೆಯರಿಗೆ ಪರಿಪೂರ್ಣವಾದ ಅನುಭವ ಬೇಕಾಗಿರುತ್ತದೆ. ಇದರಲ್ಲಿ ಆತ್ಮೀಯ ಅಪ್ಪುಗೆ, ಚುಂಬನ, ತೃಪ್ತಿತರುವ ದೈಹಿಕ ಸಂಬಂಧ ಮೊದಲಾದ, ಒಟ್ಟಾರೆ ತಮ್ಮ ಪುರುಷ ಎಲ್ಲಾ ವಿಭಾಗಗಳಿಂದಲೂ ತಮ್ಮನ್ನು ಆವರಿಸಿಕೊಳ್ಳಬೇಕು ಎಂದು ಬಯಸುತ್ತಾರೆ.

ಸಂಬಂಧ ಮತ್ತು ಲೈಂಗಿಕತೆ

ಸಂಬಂಧ ಮತ್ತು ಲೈಂಗಿಕತೆ

ಮೇಲೆ ವಿವರಿಸಿದಂತೆ, ಪುರುಷರು ಲೈಂಗಿಕ ಕ್ರಿಯೆಯ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಸಂಗಾತಿಯ ಭಿನ್ನ ಅಂಗಗಳನ್ನು ಆಸ್ವಾದಿಸಿ ಲೈಂಗಿಕ ಕ್ರಿಯೆಯನ್ನು ಹೇಗೆ ನಿರ್ವಹಿಸಿ ಮುಂದುವರೆಸಬೇಕು ಎಂಬ ಬಗ್ಗೆ ಇವರ ಚಿಂತನೆ ಇದ್ದರೆ ಮಹಿಳೆಯರು ಸಂಬಂಧದ ತನ್ಮಯತೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ. ಸಾಮಾನ್ಯವಾಗಿ ಆತ್ಮೀಯ ಸ್ಪರ್ಷ, ಚುಂಬನ, ಅಪ್ಪುಗೆ ಮೊದಲಾದ ಸರಳ ಕ್ರಿಯೆಗಳಿಂದಲೇ ಮಹಿಳೆಯರು ಪ್ರಚೋದನೆ ಪಡೆಯುತ್ತಾರೆ ಹಾಗೂ ಸಂತೃಪ್ತ ಲೈಂಗಿಕತೆಯನ್ನು ಆಸ್ವಾದಿಸುತ್ತಾರೆ.

Most Read:ಸಣ್ಣ ವಯಸ್ಸಿನಲ್ಲಿ ಸೆಕ್ಸ್‌ನಲ್ಲಿ ಭಾಗಿಯಾದರೆ ಏನೆಲ್ಲಾ ಸಮಸ್ಯೆಗಳಾಗುತ್ತದೆ ನೋಡಿ...

ಮಿಲನಕ್ರಿಯೆ ಹಾಗೂ ಸಂಬಂಧಿತ ಮಾಹಿತಿಗಳು

ಮಿಲನಕ್ರಿಯೆ ಹಾಗೂ ಸಂಬಂಧಿತ ಮಾಹಿತಿಗಳು

ಹೆಚ್ಚಿನ ಮಹಿಳೆಯರಿಗೆ ಮಿಲನ ಕ್ರಿಯೆ ಎಂದರೆ ಕೇವಲ ಯಾಂತ್ರಿಕ ಕ್ರಿಯೆಯಲ್ಲ, ಇದೊಂದು ಭಾವನಾತ್ಮಕ ಬೆಸುಗೆಯಾಗಿದ್ದು ಪರಸ್ಪರ ಭಾವನೆಗಳನ್ನು, ನೆನಪುಗಳನ್ನು ಹಂಚಿಕೊಳ್ಳುವ ಕಥೆಯಾಗಿದೆ. ಈ ಮೂಲಕ ಸಂಗಾತಿಯನ್ನು ಅವರು ಮನದಾಳದಿಂದ ತನ್ನವನು ಎಂದು ಒಪ್ಪಿಕೊಂಡು ತಮ್ಮನ್ನು ತಾವೇ ಅರ್ಪಿಸಿಕೊಳ್ಳುವ ಕ್ರಿಯೆಯಾಗಿರುತ್ತದೆ. ಆದರೆ ಪುರುಷರು ಮಿಲನಕ್ರಿಯೆಯಲ್ಲಿ ಅಂತಿಮ ನಿರ್ಣಯಕ್ಕೆ ಬರುವುದಕ್ಕೇ ಕಾಯುತ್ತಿರುತ್ತಾರೆ. ಪುರುಷರ ಪಾಲಿಗೆ ಲೈಂಗಿಕತೆ ಹಾಗೂ ಪ್ರೀತಿ ಭಿನ್ನವಾದ ವಿಷಯಗಳಾಗಿವೆ ಹಾಗೂ ಇವೆರಡನ್ನೂ ಇವರು ಬೆಸೆಯಲು ಇಷ್ಟಪದುವುದಿಲ್ಲ. ವಾಸ್ತವವಾಗಿ, ಪುರುಷರಿಗೆ ಸೆಕ್ಸ್ ಎಂದರೆ ಕೇವಲ ಸೆಕ್ಸ್ ಅಷ್ಟೇ.

ಸ್ವಸಂತೃಪ್ತಿಗೆ ಬೇರೆ ಬೇರೆ ವ್ಯಾಖ್ಯಾನಗಳಿವೆ

ಸ್ವಸಂತೃಪ್ತಿಗೆ ಬೇರೆ ಬೇರೆ ವ್ಯಾಖ್ಯಾನಗಳಿವೆ

ಲೈಂಗಿಕ ಮಾಧ್ಯಮ ಪುರುಷರಿಗೂ ಮಹಿಳೆಯರಿಗೂ ಸಮಾನವಾದ ಗೀಳು ಆಗಿದೆ. ಪುರುಷರಷ್ಟೇ ಮಹಿಳೆಯರೂ ಈ ಮಾಧ್ಯಮವನ್ನು ಇಷ್ಟಪಡುತ್ತಾರೆ. ಆದರೆ ಸ್ವ ಸಂತೃಂಪ್ತಿಯ ವಿಷಯಕ್ಕೆ ಬಂದಾಗ, ಮಹಿಳೆಯರು ಈ ಕ್ರಿಯೆಯಲ್ಲಿ ಭಾವನಾತ್ಮಕ ಅಂಶಗಳನ್ನು ಪರಿಗಣಿಸುತ್ತಾರೆ ಹಾಗೂ ತಮಗೆ ಉದ್ರೇಕ ನೀಡುವ ವಿಷಯಗಳತ್ತ ಗಮನ ಕೇಂದ್ರೀಕರಿಸುತ್ತಾರೆ. ಆದರೆ ಪುರುಷರಿಗೆ ಈ ಮಾಧ್ಯಮದಲ್ಲಿರುವ ಪುರುಷನ ಪೌರುಷ ಮತ್ತು ಆಕ್ರಮಣ ಶೀಲತೆಯೇ ಪ್ರಮುಖ ಆಕರ್ಷಣೆಯಾಗುತ್ತದೆ ಹಾಗೂ ಲೈಂಗಿಕ ಕ್ರಿಯೆಯ ತೀವ್ರಭಾಗ ಹೆಚ್ಚು ಉದ್ರೇಕಕಾರಿಯಾಗಿದ್ದು ಹಸ್ತಮೈಥುನದ ಜೊತೆಗೆ ಇದರಲ್ಲಿ ಭಾಗಿಯಾಗಿರುವಂತೆ ಭಾವಿಸಿ ಸಂತೃಪ್ತಿ ಪಡೆಯುತ್ತಾರೆ.

ಕಾಮಪರಾಕಾಷ್ಠೆಯೇ ಲೈಂಗಿಕತೆ ಅಥವಾ ಅಲ್ಲವೇ?

ಕಾಮಪರಾಕಾಷ್ಠೆಯೇ ಲೈಂಗಿಕತೆ ಅಥವಾ ಅಲ್ಲವೇ?

ಹೆಚ್ಚಿನ ಪುರುಷರ ಅನಿಸಿಕೆಯ ಪ್ರಕಾರ ಮಹಿಳೆಯರಿಗೆ ಕಾಮಪರಾಕಾಷ್ಠೆ ಕೇವಲ ಲೈಂಗಿಕ ಕ್ರಿಯೆಯ ಮೂಲಕವೇ ಲಭಿಸುತ್ತದೆ. ವಾಸ್ತವವಾಗಿ ಇದು ಸರಿಯಲ್ಲ. ಮಹಿಳೆಯರು ಭಾವನಾತ್ಮಕವಾಗಿ ಸ್ಪಂದಿಸುವವರಾಗಿದ್ದು ಲೈಂಗಿಕ ಕ್ರಿಯೆಯ ಮೂಲಕ ಈ ಭಾವನಾತ್ಮಕ ಸಂಬಂಧ ಇನ್ನಷ್ಟು ಬಲಗೊಳ್ಳ ಬಹುಬೇ ವಿನಃ ಲೈಂಗಿಕತೆಯೇ ಭಾವನಾತ್ಮಕ ಸಂಬಂಧವಲ್ಲ. ಹಾಗಾಗಿ ಭಾವನಾತ್ಮಕವಾಗಿರುವ ಅಂಶದಿಂದದಲೂ ಇವರಿಗೆ ಕಾಮಪರಾಕಾಷ್ಠೆ ದೊರಕಬಹುದು.

Most Read:ಅಧ್ಯಯನ ವರದಿ: ಹೆಚ್ಚಾಗಿ ಮಹಿಳೆಯರೇ ಸೆಕ್ಸ್‌ನ ಆರೋಗ್ಯದ ಲಾಭ ಕಡೆಗಣಿಸುತ್ತಾರಂತೆ!

ಲೈಂಗಿಕ ಮನಗಳು

ಲೈಂಗಿಕ ಮನಗಳು

ಮೇಲೆ ವಿವರಿಸಿದಂತೆ, ಪುರುಷರಿಗೆ ಪ್ರೀತಿ ಮತ್ತು ಲೈಂಗಿಕತೆಯ ನಡುವೆ ಸಂಬಂಧ ಕಲ್ಪಿಸುವುದು ಕಷ್ಟಕರವಾದ ಸಂಗತಿಯಾಗಿದೆ. ಈ ವಿಷಯದಲ್ಲಿ ಪುರುಷರಿಗೂ ಮಹಿಳೆಯರಿಗೂ ಬೇರೆಯೇ ವ್ಯಾಖ್ಯಾನಗಳಿವೆ ಹಾಗೂ ಪರಸ್ಪರರ ಜೀವನದಲ್ಲಿ ಬೇರೆಯೇ ಮೌಲ್ಯಗಳಿವೆ. ಇದೇ ಕಾರಣಕ್ಕೆ ಸಂಬಂಧದಲ್ಲಿರುವ ಪುರುಷರು ಬಾಹ್ಯಸಂಬಂಧಗಳನ್ನು ಪಡೆಯುವ ಮೂಲಕ ತಮ್ಮ ಸಂಗಾತಿಗೆ ಮೋಸ ಎಸಗಿದರೂ ಈ ಬಗ್ಗೆ ಕೀಳರಿಮೆ ಇರುವುದಿಲ್ಲ ಹಾಗೂ ಒಂದು ರಾತ್ರಿಯ ಸಂಬಂಧವನ್ನು ಇವರು ಮರುದಿನ ಬೆಳಿಗ್ಗೆ ಮರೆಯುವವರಾಗಿರುತ್ತಾರೆ. ಏಕೆಂದರೆ ಕಳೆದ ರಾತ್ರಿ ಕಳೆದ ಸಮಯ ಕೇವಲ ಲೈಂಗಿಕವಾಗಿತ್ತೇ ವಿನಃ ಇದರಿಂದ ಪ್ರಸ್ತುತ ಪ್ರೀತಿಯ ಜೀವನಕ್ಕೆ ಸಂಬಂಧವಿರುವುದಿಲ್ಲ. ಪುರುಷರ ಮನದಲ್ಲಿ ಸೆಕ್ಸ್ ಎಂಬುದು ಒಂದು ಪ್ರತ್ಯೇಕ ವಿಭಾಗವಾಗಿದ್ದು ಇದನ್ನು ಬೇರೆ ವಿಷಯಗಳೊಂದಿಗೆ ಇವರು ಮಿಶ್ರಣ ಮಾಡುವುದಿಲ್ಲ. ವ್ಯತಿರಿಕ್ತವಾಗಿ, ಮಹಿಳೆಯರಿಗೆ, ಸೆಕ್ಸ್ ಎಂಬುದು ಸಂಬಂಧದ ಒಂದು ಅಂಗವಾಗಿದೆ. ಇದೇ ಕಾರಣಕ್ಕೆ ತಮ್ಮನ್ನು ವಂಚಿಸಿದ ಸಂಗಾತಿಯನ್ನು ಇವರೆಂದೂ ಕ್ಷಮಿಸುವುದಿಲ್ಲ.

English summary

Are the sexual minds of man and woman different?

Does that mean women like highly objectified hard-core pornography than soft sexual fantastical encounter? Well, the sexual mind of a woman is far more complicated than men. If you show a picture of a couple having sex to a woman and a man separately, they will notice different things. The man will focus on the nudity and the action imagining what could he have done in the situation and the woman will focus on the intimacy shared, kissing and cuddling of bodies feeling the sensations.
Story first published: Saturday, January 19, 2019, 14:22 [IST]
X
Desktop Bottom Promotion