For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಇಂತಹ ವಿಷಯದಲ್ಲಿ ತುಂಬಾನೇ ಸ್ಟ್ರಿಕ್ಟ್! ಅಷ್ಟು ಬೇಗ ಅವರು ಹೊಂದಾಣಿಕೆ ಮಾಡಿಕೊಳ್ಳಲ್ಲ!

|

ಸಂಬಂಧವೆನ್ನುವುದು ಹೀಗೆ ಇರುತ್ತದೆ ಎಂದು ಹೇಳಲಾಗದು. ಯಾಕೆಂದರೆ ಇಬ್ಬರು ಜತೆಯಾಗಿ, ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋದರಷ್ಟೇ ಸಂಬಂಧವೆನ್ನುವುದು ದೀರ್ಘಕಾಲ ತನಕ ಉಳಿಯುವುದು. ಅದರಲ್ಲೂ ಮಹಿಳೆಯರ ವಿಚಾರಕ್ಕೆ ಬಂದಾಗ ಅವರಿಗೆ ನೀವು ಎಷ್ಟೇ ಪ್ರೀತಿ, ಕಾಳಜಿ ಮತ್ತು ಬದ್ಧತೆ ತೋರಿಸಿದರೂ ಅವರು ಕೆಲವೊಂದು ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದೇ ಇಲ್ಲ.

ಇದು ವೃತ್ತಿಯ ವಿಚಾರವಾಗಿರಬಹುದು, ನಿಮ್ಮ ಅಭಿಪ್ರಾಯಕ್ಕೆ ಬೆಂಬಲವಾಗಿ ನಿಲ್ಲುವುದು, ನಿಮ್ಮ ಬೇಕುಬೇಡಗಳನ್ನು ಈಡೇರಿಸುವುದು ಹೀಗೆ ಒಬ್ಬ ಬಲಿಷ್ಠ ಮಹಿಳೆಗೆ ಆಕೆ ತನಗೆ ಸಿಗಬೇಕಾದ ಹಕ್ಕನ್ನು ಪಡೆದೇ ತೀರುವಳು. ಹೀಗಾಗಿಯೇ ನಾವು ಇತಿಹಾಸವನ್ನು ನೋಡಿದಾಗ ಹಲವಾರು ಮಂದಿ ಮಹಿಳೆಯರು ರಾಜ್ಯವನ್ನು ಆಳಿರುವುದನ್ನು ನೋಡಿದ್ದೇವೆ. ಇಂತಹ ಬಲಿಷ್ಠ ಮಹಿಳೆಯರು ಇಂದಿನ ಯುಗದಲ್ಲೂ ಇದ್ದಾರೆ. ಅವರು ತಮಗೆ ಬೇಕಾಗಿರುವುದನ್ನು ಪಡೆದು ಯಶಸ್ವಿಯಾಗುವರು. ಮಹಿಳೆಯರು ಸಂಬಂಧದಲ್ಲೂ ಇದನ್ನು ಅಳವಡಿಸಿಕೊಳ್ಳುವುದು. ಮಹಿಳೆಯರು ಹೊಂದಾಣಿಕೆ ಮಾಡಿಕೊಳ್ಳದೆ ಇರುವಂತಹ ಆರು ವಿಚಾರಗಳು ಯಾವುದು ಎಂದು ಈ ಲೇಖನ ಮೂಲಕ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಂಡು ತಿಳಿಯಿರಿ.

ಸ್ವಾತಂತ್ರ್ಯ

ಸ್ವಾತಂತ್ರ್ಯ

ಸಂಬಂಧವೆನ್ನುವುದು ಎರಡು ಚಕ್ರಗಳಿದ್ದಂತೆ. ಇದು ಒಂದೇ ರೀತಿಯಲ್ಲಿ ಸಾಗಿದರೆ ಮಾತ್ರ ಗಾಡಿಯು ಮುಂದೆ ಹೋಗುವುದು. ಅದೇ ರೀತಿ ನೀವು ಸಂಗಾತಿಗೆ ಹೊಂದಿಕೊಂಡು ಹೋಗಬೇಕು. ಆದರೆ ಇದರರ್ಥ ನೀವು ನಿಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಜೀವನದಲ್ಲಿ ಮುಂದೆ ಸಾಗಬೇಕು ಎಂದಲ್ಲ ಅಥವಾ ನಿಮ್ಮ ಜೀವನದ ಬೇಕುಬೇಡಗಳನ್ನು ಬಲಿಕೊಡಬೇಕೆಂದಲ್ಲ. ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ಅನಗತ್ಯವಾಗಿ ನೀವು ಪ್ರಾಬಲ್ಯ ಮೆರೆಯಬೇಡಿ ಅಥವಾ ಮೆರೆಸಲು ಬಿಡಬೇಡಿ. ನೀವು ಏನು ಮತ್ತು ನಿಮಗೆ ಏನು ಬೇಡ ಎನ್ನುವುದನ್ನು ನೀವು ಸ್ಪಷ್ಟಪಡಿಸಿಕೊಳ್ಳಿ.

ಸಮಾಜ ಕೆಲಸ ಹಾಗೂ ಜವಾಬ್ದಾರಿ

ಸಮಾಜ ಕೆಲಸ ಹಾಗೂ ಜವಾಬ್ದಾರಿ

ಮನೆಯಲ್ಲಿನ ಎಲ್ಲಾ ಕೆಲಸಗಳು, ಮಕ್ಕಳ ಆರೈಕೆ ಮತ್ತು ಸಂಪೂರ್ಣ ಕುಟುಂಬದ ಜವಾಬ್ದಾರಿ ವಹಿಸುವುದು ಮಹಿಳೆಯ ಕೆಲಸ ಎಂದು ಇಂದಿಗೂ ಸಮಾಜದಲ್ಲಿ ಒಂದು ವರ್ಗವು ಭಾವಿಸಿದೆ. ಆದರೆ ಅವರು ಶಿಲಾಯುಗದಲ್ಲಿ ಜೀವಿಸುತ್ತಿದ್ದಾರೆಂದು ನೀವು ತಿಳಿಯಿರಿ. ಯಾಕೆಂದರೆ ಅವರಿಗೆ ಈ ಆಧುನಿಕ ಯುಗದ ಬಗ್ಗೆ ಖಂಡಿತವಾಗಿಯೂ ತಿಳಿದಿಲ್ಲ. ನೀವು ಯಾವುದೇ ಹಿಂಜರಿಕೆಯಿಲ್ಲದೆ ಪ್ರತಿಯೊಂದು ಜವಾಬ್ದಾರಿಯನ್ನು ಕೂಡ ಹಂಚಿಕೊಳ್ಳಿ. ಪಾತ್ರೆಗಳನ್ನು ತೊಳೆಯುವುದು, ಅಡುಗೆ ಮಾಡುವುದು, ಬಟ್ಟೆ ಹೊಗೆಯುವುದು, ಮಗುವಿನ ಆರೈಕೆ ಹೀಗೆ ಪ್ರತಿಯೊಂದರಲ್ಲೂ ಸಮಾನವಾಗಿ ಕೆಲಸ ಮಾಡಿ. ನಿಮ್ಮ ಸಂಗಾತಿಯು ಲಿಂಗ ತಾರತಮ್ಯ ಮಾಡಿಕೊಂಡು, ಕೆಲಸ ಮಾಡಲು ನಿರಾಕರಿಸಿದರೆ, ಆತನ ಅಹಂಗೆ ಇದರಿಂದ ಧಕ್ಕೆಯಾಗುತ್ತಲಿದ್ದರೆ ಆಗ ನೀವೊಬ್ಬ ಪುರುಷ ಚಳುವಳಿಗಾರನೊಂದಿಗೆ ಬದುಕುತ್ತಿದ್ದೀರಿ ಎಂದರ್ಥ.

ವೃತ್ತಿ

ವೃತ್ತಿ

ಮದುವೆ ಬಳಿಕ ನೀವು ಉದ್ಯೋಗ ಬದಲಾಯಿಸಬೇಕು ಅಥವಾ ನೀವು ಬೇರೆ ರೀತಿಯ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು ಎಂದು ಆತ ಬಯಸಬಹುದು. ಯಾಕೆಂದರೆ ಆತನಿಗೆ ನೀವು ತಡವಾಗಿ ಮನೆಗೆ ಬರುವುದು ಇಷ್ಟವಾಗದೆ ಇರಬಹುದು. ಇಂತಹ ಸಮಯದಲ್ಲಿ ನೀವು ಗಂಭೀರವಾಗಿ ಆತನೊಂದಿಗೆ ಮಾತುಕತೆ ನಡೆಸಿ. ಯಾಕೆಂದರೆ ನಿಮ್ಮ ಸಂಗಾತಿಯು ಯಾವುದೋ ಒಂದು ಸಮಸ್ಯೆಯಿಂದಾಗಿ ನಿಮ್ಮ ಬಿಟ್ಟು ಹೋಗಬಹುದು. ಆದರೆ ವೃತ್ತಿ ಹಾಗಲ್ಲ. ವೃತ್ತಿಯು ನಿಮ್ಮನ್ನು ಸ್ವತಂತ್ರವಾಗಿಸುವುದು, ನಿಮ್ಮ ಸಾಮರ್ಥ್ಯ ವೃದ್ಧಿಸುವುದು, ವ್ಯಕ್ತಿತ್ವ ಬೆಳೆಸುವುದು ಮತ್ತು ಮನೆಯಿಂದ ಹೊರಗಡೆ ಇರುವ ಜಗತ್ತಿಗೆ ನಿಮ್ಮ ಪರಿಚಯಿಸುವುದು. ಕೆಲಸ ಮಾಡಬೇಕು ಅಥವಾ ಮಾಡದೆ ಇರುವುದು ಅದು ನಿಮ್ಮ ಆಯ್ಕೆಯಾಗಿರಬೇಕು.

Most Read:ಒನ್ ಸೈಡ್ ಲವ್ ಸಮಸ್ಯೆಯಲ್ಲಿ ಸಿಲುಕಿದ್ದೀರಾ? ಹಾಗಾದರೆ ಹೀಗೆ ಮಾಡಿ ನೋಡಿ

ಪ್ರೀತಿ ಮತ್ತು ಗೌರವ

ಪ್ರೀತಿ ಮತ್ತು ಗೌರವ

ಪರಸ್ಪರ ಪ್ರೀತಿ ಮತ್ತು ಗೌರವ ತೋರಿಸುವುದು ಯಶಸ್ವಿ ಸಂಬಂಧದ ಸೂತ್ರವಾಗಿದೆ. ಸಂಗಾತಿಯೊಬ್ಬರು ಹಿಂದೆ ಹೆಜ್ಜೆಯನ್ನಿಟ್ಟರೆ ಆಗ ಸಂಬಂಧದ ಅಡಿಪಾಯವೇ ಅಲುಗಾಡಬಹುದು. ನಿಮ್ಮಂತೆ ನಿಮ್ಮ ಸಂಗಾತಿಯು ಪ್ರೀತಿ ಹಾಗೂ ಗೌರವ ಸೂಚಿಸದೆ ಇದ್ದರೆ ಆಗ ನೀವು ಈ ಸಂಬಂಧದಿಂದ ದೂರವಾಗಿ, ಮತ್ತೆ ಎಂದಿಗೂ ಇದರತ್ತ ತಿರುಗಿ ನೋಡಬೇಡಿ.

ವೈಯಕ್ತಿಕ ಸಮಯ

ವೈಯಕ್ತಿಕ ಸಮಯ

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆಗಿರುವಂತಹ ವೈಯಕ್ತಿಕ ಸಮಯವು ಬೇಕಾಗಿರುವುದು. ಇದರಿಂದಾಗಿ ದೇಹವು ಆರಾಮ ಮಾಡಲು, ತಾಜಾತನ ಪಡೆಯಲು ಮತ್ತು ಶಕ್ತಿ ಗಳಿಸಲು ನೆರವಾಗುವುದು. ದಿನನಿತ್ಯ ಮಾಡುವಂತಹ ಕೆಲಸಗಳಿಂದ ಸ್ವಲ್ಪ ಸಮಯ ದೂರವಾಗಿ ಏಕಾಂಗಿಯಿದ್ದರೆ ಆಗ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಹಾಗೂ ಹೊಸ ವಿಚಾರಗಳು ಬರುವುದು. ಒಂದು ಕಪ್ ಕಾಫಿ ಹಿರುತ್ತಾ ಪುಸ್ತಕ ಓದುವುದು, ಲಾಂಗ್ ಡ್ರೈವ್ ಗೆ ಹೋಗುವುದು, ದೇಹಕ್ಕೆ ಮಸಾಜ್, ಸ್ನೇಹಿತರೊಂದಿಗೆ ಹರಟೆ ಅಥವಾ ಏಕಾಂಗಿಯಾಗಿಯೇ ಕಾಲ ಕಳೆಯುವುದು ಇತ್ಯಾದಿ ಮಾಡುವುದು. ನಿಮ್ಮ ವೈಯಕ್ತಿಕ ಜಾಗವನ್ನು ಬೇರೆ ಯಾವುದರೊಂದಿಗೆ ವ್ಯಾಪಾರ ಮಾಡಿಕೊಳ್ಳಬೇಡಿ. ಇದಕ್ಕಾಗಿ ನೀವು ಬೇರೆಯವರ ಒಪ್ಪಿಗೆ ಕೂಡ ಪಡೆಯಬೇಕೆಂದಿಲ್ಲ.

ನೀವು ಹೇಗಿದ್ದೀರೋ ಹಾಗೆ ಇರಿ

ನೀವು ಹೇಗಿದ್ದೀರೋ ಹಾಗೆ ಇರಿ

ನೀವು ನೇರವಾಗಿ ಜಿಮ್ ನಲ್ಲಿ ಹಾಕಿರುವ ಬಟ್ಟೆಯಲ್ಲಿ ರೆಸ್ಟೋರೆಂಟ್ ಗೆ ಹೋಗುತ್ತೀರಾ? ನಿಮ್ಮ ಇಷ್ಟದ ಹಾಡು ಬಂದಾಗ ಡ್ಯಾನ್ಸ್ ಮಾಡುತ್ತೀರಾ? ಒಂದು ದಿನ ಅಂಟಾರ್ಟಿಕಾಗೆ ಭೇಟಿ ನೀಡಬೇಕೆಂದು ಬಯಸಿದ್ದೀರಾ? ಯಾವುದಾದರೂ ಭಾವನಾತ್ಮಕ ಸಿನಿಮಾ ನೋಡಿದ ಬಳಿಕ ನಿಮಗೆ ಮಗುವಿನಂತೆ ಅಳಬೇಕೆಂದು ಅನಿಸಿದೆಯಾ? ಒಳ್ಳೆಯ ಸಂಗಾತಿಯು ನೀವು ಹೇಗಿದ್ದೀರೋ ಹಾಗೆ ಇರಬೇಕು ಎಂದು ಬಯಸುವರು. ಅವರ ಜೀವನದ ಭಾಗವಾಗಿರುವ ನೀವು ಯಾವುದೇ ರೀತಿಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕೆಂದು ಬಯಸುವುದಿಲ್ಲ. ಸಂಬಂಧದಲ್ಲಿ ಯಾವತ್ತಿಗೂ ಸಂಗಾತಿಯು ಬದಲಾಗಬೇಕೆಂದು ಬಯಸುವುದು ಸರಿಯಾದ ನಿರ್ಧಾರವಲ್ಲ. ನೀವು ಹೇಗಿದ್ದೀರೋ ಹಾಗೆ ಇರಿ. ಬದಲಾಗಬೇಕಿದ್ದರೆ ಅದು ಹೊರಗಿನ ಜಗತ್ತು ಬದಲಾಗಲಿ. ಏನು ಹೇಳುತ್ತೀರಾ ನಾರಿಮಣಿಗಳೇ?

English summary

things that every strong woman needs in a relationship

No matter how loving, caring or understanding your partner is, there are some places where no woman should ever compromise in a relationship. Whether it is making professional choices, standing up for what you feel is right or taking care of your own needs, a strong woman never settles for anything less than what she deserves. Why? Because, you get what you demand and you encourage what you tolerate! Here are six things that are every woman’s prerogative in a relationship.
Story first published: Tuesday, November 13, 2018, 18:36 [IST]
X
Desktop Bottom Promotion