ಸೈಲೆಂಟಾಗಿ ನಿಮ್ಮ ಸಂಬಂಧವನ್ನು ಹಾಳು ಮಾಡುತ್ತಿರುವ ಲೈಂಗಿಕ ಸಮಸ್ಯೆಗಳು!

Subscribe to Boldsky

"ಲೈಂಗಿಕ ತೊಂದರೆ" ಎಂದರೇನು? ಎಲ್ಲಾ ಜೀವಿಗಳಿಗೂ ನಿಸರ್ಗದತ್ತವಾಗಿ ಬೇಕಾಗಿರುವ ಬಯಕೆಯನ್ನು ದಂಪತಿಗಳು ಪರಸ್ಪರರಿಂದ ಪಡೆಯದೇ ಹೋದಾಗ ಇದಕ್ಕೆ ಕಾರಣವಾಗುವ ನ್ಯೂನ್ಯತೆಗಳೇ ಲೈಂಗಿಕ ತೊಂದರೆಗಳಾಗಿವೆ. ಈ ನ್ಯೂನ್ಯತೆಗಳು ಲೈಂಗಿಕ ಚಟುವಟಿಕೆಯ ಮುನ್ನ, ಅವಧಿಯಲ್ಲಿ ಅಥವಾ ನಂತರ ಕಾಣಬರುವ ತೊಂದರೆಗಳಲ್ಲಿ ಯಾವುದೂ ಆಗಬಹುದು.

ಇನ್ನೂ ಸ್ಪಷ್ಟವಾಗಿ ವಿವರಿಸಬೇಕೆಂದರೆ, ಲೈಂಗಿಕ ಚಟುವಟಿಕೆಯ ಮುನ್ನಲಿವು, ಸಮಾಗಮ ಅಥವಾ ಪರಾಕಾಷ್ಠೆ ಒಟ್ಟಾರೆ ಎಲ್ಲಾ ಹಂತಗಳಲ್ಲಿ ಯಾವುದೋ ಒಂದು ಹಂತವನ್ನು ಪೂರ್ಣಗೊಳಿಸಲು ಅಥವಾ ಸಮರ್ಪಕವಾಗಿ ಪೂರೈಸಲು ದಂಪತಿಗಳಲ್ಲೊಬ್ಬರಿಗೂ ಸಾಧ್ಯವಾಗದೇ ಹೋದರೆ ಲೈಂಗಿಕ ಬಯಕೆ ಪೂರ್ಣಗೊಳ್ಳದೇ ಹೋಗುತ್ತದೆ.

ಸಂಶೋಧನೆಯಲ್ಲಿ ಕಂಡುಕೊಂಡಂತೆ

ಸಂಶೋಧನೆಯಲ್ಲಿ ಕಂಡುಕೊಂಡಂತೆ

ಇತ್ತೀಚಿನ ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಹೆಚ್ಚಿನವರಲ್ಲಿ ತಾವು ಅಂದುಕೊಂಡಂದಕ್ಕಿಂತಲೂ ಹೆಚ್ಚಾಗಿ ಈ ಲೈಂಗಿಕ ವೈಫಲ್ಯಗಳು ಕಾಣಬರುತ್ತವೆ. ವಾಸ್ತವವಾಗಿ, ಕೇವಲ 30% ರಷ್ಟು ಪುರುಷರು ಹಾಗೂ 40% ರಷ್ಟು ಮಹಿಳೆಯರು ಈ ವೈಫಲ್ಯತೆಯನ್ನು ತಮ್ಮ ತಮ್ಮ ಸಂಗಾತಿಯಲ್ಲಿ ಕಂಡುಕೊಂಡಿದ್ದಾರೆ. ನಿರಾಶಾದಾಯಕ ವಾಸ್ತವವೆಂದರೆ ನಮ್ಮಲ್ಲಿ ಹೆಚ್ಚಿನವರು ಈ ಬಗ್ಗೆ ಯಾವುದೇ ಚಕಾರವೆತ್ತದೆ ಮೌನವಾಗಿ ಪಾಲಿಗೆ ಬಂದದ್ದೇ ಪಂಚಾಮೃತವೆಂಬಂತೆ ಜೀವನ ಸವೆಸುತ್ತಿದ್ದಾರೆ.

Most Read: ಪುರುಷನೊಬ್ಬನನ್ನು ನೋಡಿದಾಗ ಮಹಿಳೆಯರು ಸೂಕ್ಷ್ಮವಾಗಿ ಗಮನಿಸುವುದು ಏನು ಗೊತ್ತಾ?

ಆದರೆ ಇಂತಹ ಸಮಸ್ಯೆಗೆ ಪರಿಹಾರವಿದೆ

ಆದರೆ ಇಂತಹ ಸಮಸ್ಯೆಗೆ ಪರಿಹಾರವಿದೆ

ಆದರೆ ಸಂತೋಷಕರ ವಿಷಯವೆಂದರೆ, ಈ ತೊಂದರೆ ಅಥವಾ ವೈಫಲ್ಯಗಳಲ್ಲಿ ಬಹುತೇಕವನ್ನು ಸುಲಭವಾಗಿ ಮತ್ತು ಯಶಸ್ವಿಯಾಗಿ ಗುಣಪಡಿಸಬಹುದು. ಆದರೆ ಇದಕ್ಕಾಗಿ ಈ ತೊಂದರೆಗಳ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸುವುದು ತುಂಬಾ ಅಗತ್ಯ. ಈ ಚರ್ಚೆ ನಡೆಯದೇ ಹೋದರೆ ಅಥವಾ ಚಕಾರವೆತ್ತದೇ ಹೋದರೆ ಲೈಂಗಿಕ ನಿರಾಶೆ ಕೊನೆಗೊಮ್ಮೆ ಸಂಬಂಧಕ್ಕೇ ಕೊಳ್ಳಿ ಇಡಬಹುದು!

ಪ್ರತಿ ದಂಪತಿಗಳೂ ಅರಿತುಕೊಳ್ಳಬೇಕಾದ ಸಂಗತಿಗಳು

ಪ್ರತಿ ದಂಪತಿಗಳೂ ಅರಿತುಕೊಳ್ಳಬೇಕಾದ ಸಂಗತಿಗಳು

ಒಂದು ವೇಳೆ ನಿಮ್ಮ ಸಂಗಾತಿ ಲೈಂಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ತೀರಾ ಮಡಿವಂತಿಕೆ ಅನುಸರಿಸಿದರೆ ಈ ಲೇಖನವನ್ನು ಅವರು ಸ್ವತಃ ಓದುವಂತೆ ಮಾಡಿ (ಸಾಧ್ಯವಾದರೆ ಒಂದೆರಡು ಬಾರಿ) ಬಳಿಕ ಸರಳವಾಗಿ ಬಹಳಷ್ಟು ಪ್ರಶ್ನೆಗಳನ್ನು ಕೇಳಿ. ಇದಕ್ಕೆ ಅವರಿಂದ ವಿರೋಧ ವ್ಯಕ್ತವಾದಾರೂ ಸರಿ, ಕೆಲವು ಪ್ರಶ್ನೆಗಳಿಗಾದರೂ ಅವರಿಂದ ಉತ್ತರಗಳನ್ನು ನಿರೀಕ್ಷಿಸಬಹುದು ಹಾಗೂ ನಿಮಗೆ ಈ ಕೊರತೆಗಳಿರುವ ಬಗ್ಗೆ ಸಾಕಷ್ಟು ವಿವರ ದೊರಕಬಹುದು. ಈ ಸಂಶೋಧನೆಯಲ್ಲಿ ಕಂಡುಕೊಂಡ ನಾಲ್ಕು ಪ್ರಮುಖ ತೊಂದರೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಇವುಗಳ ಬಗ್ಗೆ ಪ್ರತಿ ದಂಪತಿಗಳೂ ಅರಿತುಕೊಳ್ಳುವುದು ಅಗತ್ಯ. ಅರಿವಿಲ್ಲದೇ ಈ ತೊಂದರೆಗಳು ಸಂಬಂಧವನ್ನು ಕದಡುತ್ತಿರಬಹುದು.

ಕಾಮಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗದಿರುವುದು

ಕಾಮಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗದಿರುವುದು

ಈ ತೊಂದರೆ ಖಚಿತವಾಗಿ ಮತ್ತು ಖಂಡಿತವಾಗಿಯೂ ಸಂಬಂಧವನ್ನು ಮತ್ತು ಲೈಂಗಿಕ ಜೀವನವನ್ನು ಕದಡಲು ನೇರವಾದ ಕಾರಣವಾಗಿದೆ. ಸಾಮಾನ್ಯವಾಗಿ ಇಪ್ಪತ್ತು ಮತ್ತು ಇಪ್ಪತ್ತನಾಲ್ಕರ ನಡುವಣ ವಯಸ್ಸಿನ ಯುವತಿಯರಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಮೂವತ್ತು ಮತ್ತು ನಲವತ್ತರ ಹರೆಯದಲ್ಲಿ ಇದು ಸ್ವಾಭಾವಿಕವಾಗಿ ಕೊನೆಗೊಳ್ಳುತ್ತಾ ಹೋಗುತ್ತದೆ. ಆದರೆ, ಐವತ್ತಾದ ಬಳಿಕ ಮತ್ತೆ ಭುಗಿಲೇಳುತ್ತದೆ. ಮಹಿಳೆಯರ ದೇಹದ ರಸದೂತಗಳ ಬದಲಾವಣೆಯೇ ಇದಕ್ಕೆ ಕಾರಣ. ಈ ತೊಂದರೆಗೆ ಸಂಭಾವ್ಯ ಕಾರಣವೆಂದರೆ ಮಹಿಳೆಯರು ಇಪ್ಪತ್ತರ ಹರೆಯದಲ್ಲಿ ಹೆಚ್ಚು ಹೆಚ್ಚಾಗಿ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ತನ್ಮೂಲಕ ಕಾಮಪರಾಕಾಷ್ಠೆಯ ಪ್ರಮಾಣವೂ ಕಡಿಮೆ ಇರುತ್ತದೆ.

Most Read: ಪತ್ನಿಯರು ತಮ್ಮ ಪತಿಯಂದಿರ ಬಳಿ ಏನನ್ನು ಅಪೇಕ್ಷಿಸುತ್ತಾರೆ?

ಸಂಗಾತಿಯಲ್ಲಿ ಆಕರ್ಷಣೆಯನ್ನು ಕಳೆದುಕೊಳ್ಳುವುದು

ಸಂಗಾತಿಯಲ್ಲಿ ಆಕರ್ಷಣೆಯನ್ನು ಕಳೆದುಕೊಳ್ಳುವುದು

ಇತರ ಕಾರಣಗಳೆಂದರೆ ಲೈಂಗಿಕವಾಗಿ ಇವರು ತಮ್ಮ ಸಂಗಾತಿಯಲ್ಲಿ ಆಕರ್ಷಣೆಯನ್ನು ಕಳೆದು ಕೊಂಡಿರುವುದು, ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಕಾಮಪರಾಕಾಷ್ಠೆಯ ಬಗ್ಗೆ ಅತಿ ಹೆಚ್ಚಿನ ನಿರೀಕ್ಷೆಗಳನ್ನಿರಿಸಿ ಕೊಳ್ಳುವುದು, ಲೈಂಗಿಕ ಕ್ರಿಯೆಯ ಬಗ್ಗೆ ತಪ್ಪಿತಸ್ಥ ಭಾವನೆ ಅಥವಾ ಲೈಂಗಿಕ ಕ್ರಿಯೆಯ ಬಗ್ಗೆ ಇರುವ ಇತರ ಭಾವನೆಗಳೂ ಈ ತೊಂದರೆಯನ್ನು ಹುಟ್ಟುಹಾಕಬಹುದು.

ಕಾಮಪರಾಕಾಷ್ಠೆಯ ಕೊರತೆ

ಕಾಮಪರಾಕಾಷ್ಠೆಯ ಕೊರತೆ

ಇನ್ನೊಂದು ಕಡೆಯಲ್ಲಿ, ಲೈಂಗಿಕ ಕ್ರಿಯೆಯ ಸಮಯದಲ್ಲಿ ನಿಮ್ಮ ಸಂಗಾತಿ 'ತೀರಾ ಆಕ್ರಮಣಕಾರಿ' ರೂಪ ತಳೆಯಬಹುದು. ಕಾರಣವೇನೇ ಇದ್ದರೂ ಕಾಮಪರಾಕಾಷ್ಠೆಯ ಕೊರತೆ ಸಂಬಂಧ ಕದಡುವುದಂತೂ ಖಚಿತ. ಏಕೆಂದರೆ ಪ್ರತಿಯೊಬ್ಬರೂ ತಮ್ಮ ಸಂಗಾತಿಯನ್ನು ಲೈಂಗಿಕವಾಗಿ ತೃಪ್ತಿಪಡಿಸಬೇಕೆಂಬ ಬಯಕೆ ಹೊಂದಿರುತ್ತಾರೆ. ಇದು ಸಾಧ್ಯವಾಗದೇ ಹೋದಾಗ ಖಿನ್ನತೆ ಆವರಿಸಿ ಇದೂ ಸಂಬಂಧವನ್ನು ಕದಡಬಹುದು. ನಾಚಿಕೆ, ಅವಮಾನ, ತಪ್ಪಿತಸ್ಥ ಭಾವನೆ, ಧಾರ್ಮಿಕ ಕಟ್ಟುಪಾಡು, ಮುಜುಗರ ಮೊದಲಾದವೂ ದಂಪತಿಗಳ ನಡುವೆ ಕಂದರವನ್ನು ಹೆಚ್ಚಿಸಬಹುದು.

ಶೀಘ್ರಸ್ಖಲನ (PE)

ಶೀಘ್ರಸ್ಖಲನ (PE)

ಸ್ಖಲನವೆಂದರೆ ದ್ರವವನ್ನು ದೇಹದಿಂದ ಹೊರಕ್ಕೆ ಚಿಮುಕಿಸುವ ಕ್ರಿಯೆಯಾಗಿದೆ. ಪುರುಷ ಜನನಾಂಗದಿಂದ ಚಿಮುಕಿಸಲ್ಪಡುವ ವೀರ್ಯಾಣುಗಳಿಗೆ ವೀರ್ಯಸ್ಖಲನ ಎಂದು ಕರೆಯುತ್ತಾರೆ. ಈ ಕ್ರಿಯೆ ಲೈಂಗಿಕ ಚಟುವಟಿಕೆಯ ಕೊನೆಯಲ್ಲಿ ನಡೆಯಬೇಕಾಗಿದ್ದು ಒಂದು ವೇಳೆ ಪ್ರಾರಂಭದ ಹಂತದಲ್ಲಿಯೇ ನಡೆದು ಹೋದರೆ ಅಥವಾ ಪ್ರವೇಶದ ನಂತರದ ಒಂದು ನಿಮಿಷದ ಒಳಗೇ ಸ್ಖಲನವಾದರೆ ಇದಕ್ಕೆ ಶೀಘ್ರಸ್ಖಲನವೆಂದು ಕರೆಯುತ್ತಾರೆ.

ಶೀಘ್ರಸ್ಖಲನಕ್ಕೆ ಹಲವಾರು ಕಾರಣಗಳಿವೆ

ಶೀಘ್ರಸ್ಖಲನಕ್ಕೆ ಹಲವಾರು ಕಾರಣಗಳಿವೆ

ಶೀಘ್ರಸ್ಖಲನಕ್ಕೆ ಹಲವಾರು ಕಾರಣಗಳಿದ್ದು ವಾಸ್ತವ ಕಾರಣ ಪ್ರತಿ ಪುರುಷನಿಗೂ ಬೇರೆಬೇರೆಯಾಗಿರಬಹುದು. ಸಂತೋಷಕರ ಸುದ್ದಿ ಎಂದರೆ ಕಾರಣವೇನೇ ಇದ್ದರೂ ಬಹುತೇಕ ಸಂದರ್ಭಗಳಲ್ಲಿ ಈ ನ್ಯೂನ್ಯತೆಗಳನ್ನು ಸರಿಪಡಿಸಬಹುದು! ಬಹುತೇಕ ಪುರುಷರು ನೀಡುವ ಕಾರಣವೂ ಇದೇ ಅಗಿದೆ. ಖ್ಯಾತ ಸಮಾಜಶಾಸ್ತ್ರಜ್ಞ ಡಾ. ಎಡ್ವರ್ಡ್ ಲಾವ್ಮನ್ ರವರ ಪ್ರಕಾರ ಅಮೇರಿಕಾದ ಒಟ್ಟಾರೆ ಪುರುಷರಲ್ಲಿ ಪ್ರತಿ ಮೂವರಲ್ಲೊಬ್ಬರಿಗೆ ಈ ತೊಂದರೆ ಇದೆ.

ಪುರುಷರಲ್ಲಿ ಈ ತೊಂದರೆ ಇದೆ ಎಂದು ತಿಳಿದುಕೊಳ್ಳುವುದು ಹೇಗೆ?

ಪುರುಷರಲ್ಲಿ ಈ ತೊಂದರೆ ಇದೆ ಎಂದು ತಿಳಿದುಕೊಳ್ಳುವುದು ಹೇಗೆ?

ಸಾಮಾನ್ಯವಾಗಿ ಈ ಪುರುಷರು ಸದಾ ಕಡಿಮೆ ಅಥವಾ ಲೈಂಗಿಕ ಅನುಭವವೇ ಇಲ್ಲದ ಮಹಿಳೆಯರೊಂದಿಗೇ ಹೆಚ್ಚು ಸಂಬಂಧವನ್ನು ಬೆಳೆಸಬಯಸುತ್ತಾರೆ. ಏಕೆಂದರೆ ಈ ಪುರುಷರಿಗೆ ಈ ಕೊರತೆ ಇದೆ ಎಂದು ತಿಳಿದೇ ಇರದ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದುವ ಮೂಲಕ ತಮಗಾಗುವ ಅವಮಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.. ಅಚ್ಚರಿ ಎಂದರೆ, ಅನನುಭವಿ ಮಹಿಳೆಯರು ತಮ್ಮ ಸಂಗಾತಿಯಲ್ಲಿ ಈ ತೊಂದರೆ ಇದೆ ಎಂದು ತಿಳಿದ ಬಳಿಕವೂ ಸಂಬಂಧದಿಂದ ಹೊರಬರಲು ಇಚ್ಛಿಸುವುದಿಲ್ಲ. ಒಂದು ವೇಳೆ ನೀವೊಬ್ಬ ಮಹಿಳೆಯಾಗಿದ್ದು ನಿಮ್ಮ ಪುರುಷನಲ್ಲಿ ಈ ತೊಂದರೆ ಇದೆಯೇ ಎಂಬ ಕುತೂಹಲವಿದ್ದರೆ ಈ ಪ್ರಶ್ನೆಯನ್ನು ಕೇಳಿಕೊಳ್ಳಿ "ನನ್ನ ಸಂಗಾತಿ ನಾನು ಸಾಕು ಎನ್ನುವವರೆಗೂ ಮುಂದುವರೆಯಲು ಶಕ್ತನಿದ್ದಾನೆಯೇ" ಹಾಗೂ "ಕಾಮಪರಾಕಾಷ್ಠೆಯತ್ತ ಕರೆದೊಯ್ಯಲು ಈತನಿಗೆಷ್ಟು ಸಮಯ ಬೇಕು?" ಒಂದು ವೇಳೆ ಎರಡನೆಯ ಪ್ರಶ್ನೆಗೆ ಒಂದು ನಿಮಿಷಕ್ಕೂ ಕಡಿಮೆ ಎಂಬ ಉತ್ತರ ದೊರಕಿದರೆ ನಿಮ್ಮ ಸಂಗಾತಿಯಲ್ಲಿ ಶೀಘ್ರಸ್ಖಲನದ ತೊಂದರೆ ಇದೆ ಎಂದು ಖಚಿತವಾಗಿ ಹೇಳಬಹುದು.

ಕುಸಿದ ಲೈಂಗಿಕ ಬಯಕೆ

ಕುಸಿದ ಲೈಂಗಿಕ ಬಯಕೆ

ದಂಪತಿಗಳಲ್ಲಿಬ್ಬರಲ್ಲಿಯೂ ಸಮಾನವಾಗಿ ಕಾಣಬರುವ ಇನ್ನೊಂದು ತೊಂದರೆ ಎಂದರೆ ಕುಸಿಯುವ ಲೈಂಗಿಕ ಬಯಕೆ ಅಥವಾ ಲೈಂಗಿಕಾಸಕ್ತಿ. ಇದಕ್ಕೆ ಕಾರಣವೇನು? ಪುರುಷರ ಲಕ್ಷಣಕ್ಕೆ (ಮೀಸೆ, ಗಡ್ಡ, ಗಡಸು ಧ್ವನಿ ಮೊದಲಾದವು) ಕಾರಣವಾಗುವ ಟೆಸ್ಟಾಸ್ಟೆರೋನ್ ಎಂಬ ರಸದೂತದ ಕೊರತೆ ಈ ತೊಂದರೆಗೆ ಕಾರಣವಾಗಿದೆ. ಅಲ್ಲದೇ ವೀರ್ಯಾಣುಗಳ ಉತ್ಪತ್ತಿ, ಸಾಂದ್ರತೆಗೂ ಈ ರಸದೂತ ಅಗತ್ಯ. ಇದರ ಕೊರತೆಯಿಂದ ಕೇವಲ ಲೈಂಗಿಕ ಆಸಕ್ತಿಯ ಕೊರತೆ ಎದುರಾಗುವುದು ಮಾತ್ರವಲ್ಲ ನಿಮಿರುದೌರ್ಬಲ್ಯ ಹಾಗೂ ನಪುಂಸಕತನವೂ ಕಾಡಬಹುದು.

ಮಹಿಳೆಯರಲ್ಲಿ ಕೆಲವಾರು ರಸದೂತಗಳ ಏರುಪೇರು, ಹಿಂದಿನ ಲೈಂಗಿಕ ದೌರ್ಜನ್ಯ, ಮಾನಸಿಕ ಒತ್ತಡ ಮೊದಲಾದವು ಕಾರಣವಾಗಬಹುದು. ಈ ತೊಂದರೆ ಸಂಬಂಧವನ್ನು ಹೇಗೆ ಕದಡಬಹುದು? ನಿರಾಸಕ್ತಿಯಿಂದ ಸಂಗಾತಿ ಲೈಂಗಿಕ ಕ್ರಿಯೆಗೇ ಮುಂದಾಗದೇ ಹೋಗಬಹುದು ಹಾಗೂ ಸಾಮೀಪ್ಯವನ್ನೂ ತೊರೆಯಬಹುದು. ಇದು ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಸಂಬಂಧವನ್ನು ಕದಡುವಂತಹದ್ದಾಗಿದ್ದು ಸಂಗಾತಿಯಲ್ಲಿ ಆತ್ಮವಿಶ್ವಾಸದ ಕುಸಿತ, ಅಸಮಾಧಾನ, ಹಗೆತನ ಮೊದಲಾದವು ಹೆಡೆಯೆತ್ತಬಹುದು. ಪರಿಣಾಮ? ಸಂಬಂಧದ ಕುಸಿತ!

Most Read: ಸೆಕ್ಸ್ ಬಗೆಗಿನ ಸೀಕ್ರೆಟ್ಸ್‌ನ್ನು ಪುರುಷರು ಅರಿತಿರಬೇಕು ಎಂದು ಮಹಿಳೆಯರು ಬಯಸುತ್ತಾರಂತೆ!

ಲೈಂಗಿಕ ಕ್ರಿಯೆಯಲ್ಲಿ ನೋವು

ಲೈಂಗಿಕ ಕ್ರಿಯೆಯಲ್ಲಿ ನೋವು

ನೋವಿನಿಂದ ಕೂಡಿದ ಲೈಂಗಿಕ ಕ್ರಿಯೆ ಯಾರಿಗೂ ಇಷ್ಟವಾಗದು. ಇದು ಸಹಾ ಸಂಬಂಧವನ್ನು ಕದಡಬಹುದು. ಹೇಗೆ? ಲೈಂಗಿಕ ಕ್ರಿಯೆ ಇಷ್ಟವೇ ಆದರೂ ಸರಿ, ನೋವಿನಿಂದ ಕೂಡಿದ್ದರೆ ಹೆಚ್ಚಿನವರಿಗೆ ಇದು ಬೇಡವಾಗುತ್ತದೆ. ವಿಶೇಷವಾಗಿ ನೋವುಣ್ಣುವ ಮಹಿಳೆಯರು ಈ ಬಗ್ಗೆ ಚಕಾರವೆತ್ತದೇ ಇದ್ದರೂ ಮಿಲನಕ್ರಿಯೆಗೆ ನಿರಾಕರಿಸತೊಡಗುತ್ತಾರೆ. ನೋವಿಗಾಗಿ ಮಾತ್ರವೇ ಇವರು ಬೇಡ ಎಂದರೂ ಸರಿ, ಇವರ ಸಂಗಾತಿಗೆ ಈ ಕಾರಣ ತನ್ನನ್ನು ತಿರಸ್ಕರಿಸಲು ಸುಳ್ಳು ನೆಪವೆಂದೇ ತೋರುತ್ತದೆ ಹಾಗೂ ಈ ಅನುಮಾನವೇ ಸಂಬಂಧದಲ್ಲಿ ಹುಳಿಹಿಂಡತೊಡಗುತ್ತದೆ. ನೋವು ಎಂಬ ಕಾರಣಕ್ಕೆ ಲೈಂಗಿಕ ಕ್ರಿಯೆಯಿಂದ ವಿಮುಖರಾದರೆ, ನಿಮಗರಿವಿಲ್ಲದಂತೆಯೇ ನಿಮ್ಮ ಸಂಗಾತಿಯ ಮನದಲ್ಲಿ ಅಸಮಾಧಾನ ಅಥವಾ ಹಗೆತನದ ಭಾವನೆ ಮೂಡಬಹುದು ಹಾಗೂ ಸಾಮೀಪ್ಯ ದೂರವಾಗಬಹುದು.

ಇಂತಹ ಸಮಸ್ಯೆಗೆ ಕಾರಣಗಳು

ಇಂತಹ ಸಮಸ್ಯೆಗೆ ಕಾರಣಗಳು

ಮಿಲನಕ್ರಿಯೆ ಅತ್ಯಂತ ಸಹಜ, ನೈಸರ್ಗಿಕವಾದ ಹಾಗೂ ಕಲಿಸದೇ ಬರುವ ವಿದ್ಯೆಯಾಗಿದ್ದು ಇದರಲ್ಲಿ ನೋವು ಇರಬಾರದು. ಆದರೆ ನೋವು ಇದೆ ಎಂದಾದರೆ ಇದಕ್ಕೂ ಕಾರಣವಿರಬೇಕಲ್ಲವೇ? ಆರೋಗ್ಯ ಸಂಬಂಧಿತ ಕಾರಣಗಳನ್ನು ಹೊರತುಪಡಿಸಿದರೆ ಉಳಿದ ಸಂದರ್ಭದಲ್ಲಿ ನಿಮ್ಮ ಸಂಗಾತಿಯ ಮಿಲನಸಮಯದಲ್ಲಿ 'ವಿಜೃಂಭಿಸುವ' ಅಭಿಲಾಶೆಯೇ ಪ್ರಮುಖ ಕಾರಣವಾಗಿರಬಹುದು (ಅತಿ ವೇಗದ ಹಾಗೂ ಬಲವಾದ ಘರ್ಷಣೆ). ಕೆಲವೊಮ್ಮೆ ಜಾರುಕದ್ರವದ ಕೊರತೆ, ರಸದೂತನಗಳ ಏರುಪೇರು, ಬದಲಾವಣೆ, ಅಗತ್ಯಕ್ಕೂ ಕಡಿಮೆ ನಿಮಿರುತನ, ಅತಿ ಕಡಿಮೆ ಮುನ್ನಲಿವೆ ಮೊದಲಾದವುಗಳು ಈ ನೋವಿಗೆ ಕಾರಣವಾಗಿರಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಸಂಗಾತಿ ನೋವನ್ನನುಭವಿಸುತ್ತಿರುವುದು ಕೆಲವರ ಗಮನಕ್ಕೇ ಬರುವುದಿಲ್ಲ. ಹಾಗಾಗಿ ಈ ಬಗ್ಗೆ ಮುಕ್ತವಾದ ಚರ್ಚೆ ನಡೆಸುವುದು ಹಾಗೂ ನಿಜವಾಗಿಯೂ ಇತರ ಕಾರಣಗಳಿಂದ ತೊಂದರೆ ಇದ್ದು ನೋವು ಮುಂದುವರೆದರೆ ಇದಕ್ಕೆ ಸೂಕ್ತ ಸಲಹೆ ಪಡೆಯುವುದು ಅಗತ್ಯವಾಗಿದೆ. ಒಟ್ಟಾರೆಯಾಗಿ, ಲೈಂಗಿಕ ತೊಂದರೆಗಳು ದಂಪತಿಗಳಲ್ಲಿ ಒಬ್ಬರಲ್ಲಿ ಅಥವಾ ಇಬ್ಬರಲ್ಲಿಯೂ ಇದ್ದರೂ ಪರಿಣಾಮವನ್ನು ಮಾತ್ರ ದಂಪತಿಗಳಿಬ್ಬರೂ ಅನುಭವಿಸಬೇಕಾಗುತ್ತದೆ ಹಾಗೂ ವೈಮನಸ್ಯ ಮೂಡಿದರೆ ಸಂಬಂಧ ಕದಡಲೂಬಹುದು.

ಮಾನಸಿಕವಾಗಿಯೇ ಕೊರಗುತ್ತಾರೆ

ಮಾನಸಿಕವಾಗಿಯೇ ಕೊರಗುತ್ತಾರೆ

ಮಿಲನಕ್ರಿಯೆ ನೋವಿನಿಂದ ಕೂಡಿದ್ದು ಅಹ್ಲಾದಕರವಾಗಿಲ್ಲ ಅಥವಾ ತೃಪ್ತಿ ನೀಡುತ್ತಿಲ್ಲ ಎಂದು ಕಂಡು ಬಂದಾಗ ದಂಪತಿಗಳಲ್ಲೊಬ್ಬರು ಅಥವಾ ಇಬ್ಬರಿಗೂ ಲೈಂಗಿಕ ಕಾಮನೆಯೇ ಉಡುಗುತ್ತದೆ. ಕಾಲಕ್ರಮೇಣ ನಿಸರ್ಗಸಹಜವಾದ ಈ ಅಗತ್ಯತೆ ಪೂರೈಸದೇ ಹೋಗುವ ಮೂಲಕ ದೈಹಿಕ ಹಾಗೂ ಮಾನಸಿಕ ವೇದನೆ ಅನುಭವಿಸುವಂತಾಗುತ್ತದೆ ಹಾಗೂ ದಂಪತಿಗಳು ದೂರಾಗುತ್ತಾರೆ ಅಥವಾ ಹತ್ತಿರವಿದ್ದರೂ ಪರಸ್ಪರರಿಂದ ಮಾನಸಿಕವಾಗಿ ದೂರವಾಗಿಯೇ ಇರತೊಡಗುತ್ತಾರೆ.

Most Read: ಆಕೆ ನಿಮ್ಮೊಟ್ಟಿಗೆ ಹೀಗೆಲ್ಲಾ ಮಾಡುತ್ತಿದ್ದರೆ, ಆಕೆಗೆ ಸೆಕ್ಸ್ ಬೇಕೆ೦ದರ್ಥ!

ಮುಕ್ತ ಮನಸ್ಸಿನಿಂದ ಚರ್ಚಿಸಿ

ಮುಕ್ತ ಮನಸ್ಸಿನಿಂದ ಚರ್ಚಿಸಿ

ತೊಂದರೆ ಏನೇ ಇರಲಿ, ಈ ಬಗ್ಗೆ ಯಾರಲ್ಲಿಯೂ ಹೇಳದೇ, ಸಲಹೆ-ಸಹಾಯ ಪಡೆಯದೇ ಇದ್ದರೆ ಇದು ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಮಾಡುವುದು ಹೆಚ್ಚು. ಆದ್ದರಿಂದ, ಲೈಂಗಿಕ ತೊಂದರೆ ಇದೆ ಎಂದು ಕಂಡುಬಂದಾಗ, ಪ್ರಾಮಾಣಿಕವಾಗಿ ಇದನ್ನು ಒಪ್ಪಿಕೊಂಡು ಸಂಗಾತಿಯೊಂದಿಗೆ ಮುಕ್ತ ಮನಸ್ಸಿನಿಂದ ಚರ್ಚಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳುವತ್ತ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪರಸ್ಪರರಲ್ಲಿ ವಿಶ್ವಾಸ, ನಂಬಿಕೆ ಹಾಗೂ ಅನ್ಯೋನ್ಯತೆ ಹೆಚ್ಚುತ್ತದೆ ಹಾಗೂ ತೊಂದರೆ ಇದ್ದರೂ ಸಹಾ ದಾಂಪತ್ಯ ಇನ್ನಷ್ಟು ಗಟ್ಟಿಗೊಳ್ಳುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Sex Problems That May Be Hurting Your Relationship

    According to current research, sexual dysfunctions occur more often than you may think. In fact, approximately 30% of men and 40% of women experience some level of “sexual dysfunction” with their partners during sexual activity. Unfortunately, however, most of us are reluctant to talk about these types of “issues” for fear of being judged. The great news is that most sexual problems can be successfully treated – which explains why it is so important to discuss your concerns with your partner. Ignoring or pushing sexual issues aside can lead your relationship down a very rocky path.
    Story first published: Wednesday, November 14, 2018, 15:45 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more