For Quick Alerts
ALLOW NOTIFICATIONS  
For Daily Alerts

  ಸಂಗಾತಿಯೊಡನೆ ಸಂಸಾರ ಪ್ರಾರಂಭಿಸಿದ ಬಳಿಕ ಅನುಸರಿಸಬೇಕಾದ ನಿಯಮಗಳು

  |

  ಸಂಗಾತಿಯೊಡನೆ ಜೀವಿಸಲು ಪ್ರಾರಂಭಿಸುವುದೆಂದರೆ ಒಂದು ಹೊಸ ಮತ್ತು ಸುಂದರ ಜೀವನದ ಪ್ರಾರಂಭದಂತೆಯೇ ಸರಿ. ಆದರೆ ಇದು ಕೆಲವೊಮ್ಮೆ ಹೊರಗೆ ತೋರಿದಷ್ಟು ಸುಲಭವಾಗಿರದೇ ಕ್ಲಿಷ್ಟಕರವಾಗಿ ಪರಿಣಮಿಸಬಹುದು. ನಿಮ್ಮ ಈ ಸಂಬಂಧ ಸಂತೋಷಕರ, ಆರೋಗ್ಯರವಾಗಿರಬೇಕೆಂದರೆ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ.

  ಸಂಗಾತಿಯೊಡನ ಸಹಜೀವನ ಒಂದು ಪ್ರಮುಖ ನಿರ್ಧಾರವಾಗಿದ್ದು ಇದಕ್ಕೂ ಮುನ್ನ ಇಬ್ಬರೂ ಪರಸ್ಪರ ಎಷ್ಟು ಆಪ್ತ ಮತ್ತು ಆತ್ಮೀಯರಾಗಿದ್ದರೂ ಸರಿ, ಪರಸ್ಪರರಿಂದ ಏನನ್ನು ಅಪೇಕ್ಷಿಸುತ್ತಿದ್ದರೂ ಸರಿ. ಕಾರಣ, ಅಪೇಕ್ಷೆ, ಪರಿಸ್ಥಿತಿಗಳೆಲ್ಲಾ ಏನೇ ಇರಲಿ, ಇದು ಪ್ರಮುಖ ನಿರ್ಧಾರವೇ ಆಗಿದ್ದು ಇದಕ್ಕಾಗಿ ಹಲವಾರು ಯೋಜನೆಗಳನ್ನೂ, ಪರಸ್ಪರರಿಗೆ ಬದ್ದತೆಯನ್ನೂ, ಮುಂದಿನ ಜೀವನದ ಬಗ್ಗೆ ಚಿಂತನೆ, ಅನ್ಯೋನ್ಯತೆ ಮತ್ತು ಮುಖ್ಯವಾಗಿ ಪ್ರೀತಿಯನ್ನೂ ಪ್ರಕಟಿಸಬೇಕಾಗುತ್ತದೆ.

  rules to follow in relationship

  ಯಾವಾಗ ಇಬ್ಬರೂ ಮುಂದಿನ ಜೀವನವನ್ನು ಜೊತೆಯಾಗಿ ಕಳೆಯಲು ಇಚ್ಛಿಸುವ ಬಯಕೆಯನ್ನು ಪ್ರಕಟಿಸಿದಿರೋ, ಆಗಲೇ ಹಣಕಾಸು, ಇತರ ವಿಷಯಗಳು, ಹೊಸ ಯೋಜನೆಗಳು ಮತ್ತು ಭವಿಷ್ಯದ ಬಗ್ಗೆ ನಿರ್ಧಾರಗಳನ್ನೂ ಪ್ರಕಟಿಸಬೇಕಾಗುತ್ತದೆ. ಜೊತೆಯಾಗಿ ಇರುವುದಕ್ಕೂ ಮೊದಲು ಈ ನಿರ್ಧಾರದ ಮಾತುಗಲು ಬಾಲಿಶವೆಂಬಂತೆ ಕಂಡುಬಂದರೂ ಜೊತೆಯಾಗಿ ಇರಲು ತೊಡಗಿದ ಬಳಿಕವೇ ಈ ಮಾತುಗಳ ಗಾಂಭೀರ್ಯದ ಬಗ್ಗೆ ಅರಿವಾಗತೊಡಗುತ್ತದೆ. ಹೊಸ ಜೀವನ ಹೊಸ ವಾತಾವರಣಕ್ಕೆ ದಬ್ಬುತ್ತದೆ ಹಾಗೂ ಚಿಂತನೆಗಳು ಬದಲಾಗುತ್ತವೆ, ಹೊಸ ಪ್ರಶ್ನೆಗಳು ಅವಕಾಶಗಳು ಉದ್ಭವಿಸುತ್ತವೆ, ಜೊತೆಗೆ ಸಮಸ್ಯೆಗಳು ಕೂಡಾ, ಇಬ್ಬರಿಗೂ ಹೊಸದಾಗಿ ಎದುರಾಗುವ ಕೆಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಪಡೆಯಬೇಕಾದಾಗಲೂ ಇಬ್ಬರಿಗೂ ಅನಿವಾರ್ಯವಾಗಿ ಕೆಲವು ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.

  ಇದುವರೆಗೆ ಪರಸ್ಪರರನ್ನು ಕಾಣಲು ಅವರ ಮನೆಗೆ ನೀಡುತ್ತಿದ್ದ ಭೇಟಿಗೂ, ಈಗ ಒಂದೇ ಕೋಣೆಯಲ್ಲಿ ಇಬ್ಬರೂ ಒಟ್ಟಿಗೇ ಇರುವುದಕ್ಕೂ ಬಹಳ ವ್ಯತ್ಸಾಸವಿದೆ. ಈ ಕ್ಷಣದಿಂದಲೇ ಕೆಲವು ಪ್ರಮುಖ ನಿಯಮಗಳಿಗೆ ಬದ್ದರಾಗುವ ಮೂಲಕ ಮುಂದಿನ ಜೀವನದಲ್ಲಿ ಸಂತೋಷ, ನೆಮ್ಮದಿಯನ್ನು ಕಾಣಬಹುದು ಹಾಗೂ ಸಂತೋಷ ತುಂಬಿ ತುಳುಕುತ್ತಾ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಜೀವನವೇ ಸಾರ್ಥಕವೆನಿಸಬಹುದು. ಯಾವಾಗ ಈ ನಿಯಮಗಳನ್ನು ರೂಪಿಸುತ್ತೀರೋ, ಆಗಲೇ ಇವುಗಳನ್ನು ಒಂದು ಮಾದರಿಯಂತೆ ಪರಿಗಣಿಸಿ ಇಬ್ಬರೂ ಇದಕ್ಕೆ ಬದ್ದರಾಗಿ ವಿಧೇಯತೆ ಪ್ರಕಟಿಸುವ ಮೂಲಕ ಸಂಬಂಧಕ್ಕೂ ವಿಧೇಯತೆಯನ್ನು ನೀಡಿದಂತಾಗುತ್ತದೆ. ಅಲ್ಲದೇ ಈ ನಿಯಮಗಳು ಇಬ್ಬರಿಗೂ ಸಮಾನವಾಗಿ ಅನ್ವಯವಾಗುವುದರಿಂದ ಇವುಗಳಿಂದ ನುಣುಚಿಕೊಳ್ಳುವುದಾಗಲೀ, ತನಗೆ ಅನ್ವಯಿಸುವುದಿಲ್ಲವೆಂದು ಹಾರಿಕೆಯ ಉತ್ತರ ನೀಡುವುದಾಗಲೇ ಮಾಡಕೂಡದು. ಇವುಗಳಿಂದ ಸಂಬಂಧ ಸದಾ ಶಾಂತ, ತರ್ಕಬದ್ಧ ಹಾಗೂ ಅನ್ಯೋನ್ಯತೆಯಿಂದ ಕೂಡಿರುತ್ತದೆ ಹಾಗೂ ಇಬ್ಬರೂ ಪರಸ್ಪರರಿಗೆ ಬದ್ಧರಾಗಿರಲು ಸಾಧ್ಯ. ಬನ್ನಿ, ಈ ನಿಯಮಗಳು ಯಾವುವು ನೋಡೋಣ:

  1. ರಾತ್ರಿ ಮಲಗುವ ಮುನ್ನ ಎಂದಿಗೂ ಸಿಟ್ಟ ಮಾಡಕೂಡದು

  ಸಿಟ್ಟು ನಿಮ್ಮ ಜೀವನದಲ್ಲೆಂದೂ ಇಣುಕದಿರಲಿ ಎಂದು ಇಬ್ಬರೂ ಅಪೇಕ್ಷಿಸಬೇಕು. ಅದರಲ್ಲೂ ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಸಂಗಾತಿಯಲ್ಲಿ ಯಾವುದೇ ಬಗೆಯ ಸಿಟ್ಟು ಉಳಿಸಿಕೊಳ್ಳಬಾರದು. ಇದು ಸಂಬಂಧದಲ್ಲಿ ಹುಳಿ ಹಿಂಡುತ್ತದೆ. ಇಬ್ಬರೂ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಸಿಟ್ಟಿನಿಂದಲೇ ಮಲಗುವ ಮೂಲಕ ಮರುದಿನ ಬೆಳಿಗ್ಗೆಯೂ ಈ ಸಿಟ್ಟು ಮುಂದುವರೆಯುತ್ತದೆ ಹಾಗೂ ಮುಂದಿನ ಸಮಯದಲ್ಲೆಲ್ಲಾ ಹುಳಿಯನ್ನು ಹೆಚ್ಚಿಸುತ್ತಾ ಬರುತ್ತದೆ.. ಹುಳಿ ಹೆಚ್ಚುತ್ತಿದ್ದಂತೆಯೇ ಅಸಹನೆಯೂ ಹೆಚ್ಚುತ್ತಾ, ಚಿಕ್ಕ ಪುಟ್ಟ ತಪ್ಪುಗಳೆಲ್ಲಾ ಮಹಾಪರಾಧವೆಂಬಂತೆ ಕಾಣಬರುತ್ತವೆ. ಜಗಳಕ್ಕೆ ಯಾವುದೋ ಕ್ಷುಲ್ಲುಕ ತಪ್ಪೇ ಸಾಕಾಗುತ್ತದೆ. ಮರುದಿನ ಈ ಹುಳಿ ಯಾವ ಬಗೆಯಲ್ಲಿ ದಿನವನ್ನು ಕೆಡಿಸಬಹುದು ಎಂದು ಹೇಳಲು ಸಾಧ್ಯವಿಲ್ಲ. ಜಗಳ ಕದನಕ್ಕೆ ತಿರುಗಲು ಹೆಚ್ಚು ಕಾಲ ಬೇಕಾಗಿಲ್ಲ. ಕದನ, ವಾಗ್ಯುದ್ದಗಳೆಲ್ಲಾ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ ಹಾಗೂ ಶಕ್ತಿಯನ್ನೆಲ್ಲಾ ಉಡುಗಿಸುತ್ತವೆ. ಇದು ಆ ದಿನದ ಚಟುವಟಿಕೆಗಳನ್ನೂ ಬಾಧಿಸುವುದರಿಂದ ನಿತ್ಯದ ಕೆಲಸಗಳೂ ಏರುಪೇರಾಗಬಹುದು. ಆದ್ದರಿಂದ ವೈಮನಸ್ಸಿಗೆ ಆಗಿರುವ ಕಾರಣವನ್ನು ಆ ದಿನವೇ ಅರಿತು ಇದಕ್ಕೊಂದು ಪರಿಹಾರವನ್ನು ಸೂಚಿಸಿ ಸಿಟ್ಟನ್ನೆಲ್ಲಾ ಅಂದೇ ತೀರಿಸಿ ಶುಭರಾತ್ರಿಯ ಸಿಹಿಚುಂಬನದೊಂದಿಗೆ ಮನಸ್ಸನ್ನು ತಿಳಿಮಾಡಿಕೊಂಡೇ ಮುಂದುವರೆಯಬೇಕು

  2. ಮನೆಯ ಅಲಂಕಾರವ ನಿರ್ಧಾರಗಳನ್ನು ಜೊತೆಯಾಗಿಯೇ ನಿರ್ವಹಿಸಿ

  ಇದು ಪರಸ್ಪರರ ಪ್ರತಿ ಪ್ರೀತಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಪರಸ್ಪರರ ಅಭಿರುಚಿ, ಹವ್ಯಾಸ ಹಾಗೂ ಇಷ್ಟವಾಗುವ ವಿಷಯಗಳ ಬಗ್ಗೆ ಹೆಚ್ಚು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮನೆಯನ್ನು ಅಲಂಕರಿಸುವ ವಸ್ತುಗಳಲ್ಲಿ ಇಬ್ಬರಲ್ಲಿ ಒಬ್ಬರಿಗೆ ಇಷ್ಟವಾಗದನ್ನು ಖಂಡಿತವಾಗಿಯೂ ಆರಿಸಿಕೊಳ್ಳಬಾರದು, ಬದಲಿಗೆ ಇಬ್ಬರಿಗೂ ಒಪ್ಪಿಗೆಯಾಗುವುದನ್ನೇ ಆರಿಸಿಕೊಳ್ಳಬೇಕು. ಹಲವಾರು ವಿಷಯಗಳಲ್ಲಿ ಇಬ್ಬರ ಆಯ್ಕೆಗೆ ಭಿನ್ನವಾದ ಮಾನದಂಡವಿರಬಹುದು, ಆದರೂ, ಆಯ್ಕೆಗೆ ಇಬ್ಬರಿಗೂ ಸೂಕ್ತವಾಗುವ ಮಾನದಂಡಗಳನ್ನೇ ಪರಿಗಣಿಸಬೇಕು. ಹಲವೊಮ್ಮೆ ನಿಮ್ಮ ಸಂಗಾತಿಯ ಆಯ್ಕೆ ನಿಮಗೆ ಇಷ್ಟವಾಗದೇ ಹೋಗಬಹುದು, ಆಗ ಈ ಆಯ್ಕೆಗೆ ಇರುವ ಕಾರಣವನ್ನು ಸಂಗಾತಿಯೇ ವಿವರಿಸಿ ಇದರ ಅಗತ್ಯತೆಯನ್ನು ಮನದಟ್ಟು ಮಾಡಬೇಕು. ಒಂದು ವೇಳೆ ಈ ವಿಷಯವನ್ನು ಅಂದೇ ಪ್ರಕಟಿಸದೇ ಹೋಗಿ ಇಬ್ಬರಲ್ಲೊಬ್ಬರಿಗೆ ಇಷ್ಟವಾಗದ ವಸ್ತುವನ್ನು ಮನೆಗೆ ತಂದರೆ ಆ ವಸ್ತುವನ್ನು ನೋಡಿದಾಗೆಲ್ಲಾ ಇಬ್ಬರಲ್ಲೊಬ್ಬರಿಗೆ ಇದರ ಬಗ್ಗೆ ಸಿಟ್ಟು ಬಂದು ಇದನ್ನು ಸಂಗಾತಿಯ ವಿರುದ್ದ ಪ್ರಕಟಿಸಲೂ ಸಾಧ್ಯವಾಗಬಹುದು. ಆದ್ದರಿಂದ ಮನೆಯಲ್ಲಿರುವ ಅಷ್ಟೂ ವಸ್ತುಗಳು ಇಬ್ಬರ ಅಭಿರುಚಿ ಹಾಗೂ ಒಪ್ಪಿಗೆಯ ಮೇರೆಗೇ ಇರಲಿ.

  3. ಮನೆಗೆಲಸಗಳನ್ನು ಹಂಚಿಕೊಳ್ಳಿ

  ಮನೆ ಎಂದ ಮೇಲೆ ನೂರಾರು ಕೆಲಸಗಳಿರುತ್ತವೆ. ಆದರೆ ಎಲ್ಲಾ ಕೆಲಸಗಳನ್ನೂ ಒಬ್ಬರೇ ಮಾಡಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಇಬ್ಬರೂ ಪರಸ್ಪರರಿಗೆ ನೆರವಾಗುವ ನಿಟ್ಟಿನಲ್ಲಿ ಸಾಧ್ಯವಾದಷ್ಟೂ ಕೆಲಸಗಳನ್ನು ಹಂಚಿಕೊಳ್ಳಬೇಕು. ಕನಿಷ್ಟ ಪಕ್ಷ, ಯಾವ ಕೆಲಸ ಹಂಚಿಕೊಳ್ಳಬೇಕೆಂದು ಗೊತ್ತಾಗದೇ ಹೋದರೆ, ಯಾವ ಕೆಲಸ ಮಾಡಲಿ ಎಂದು ಕೇಳಿ ಪಡೆದುಕೊಳ್ಳಬೇಕು. ಇದರಿಂದ ಇಬ್ಬರಿಗೂ ಪರಸ್ಪರರಲ್ಲಿ ಗೌರವ ಹೆಚ್ಚುತ್ತದೆ ಹಾಗೂ ಸಂಬಂಧದಲ್ಲಿ ಸುಖ ಶಾಂತಿ ಸಂತೋಷ ನೆಲೆಸುತ್ತದೆ. ಅದರಲ್ಲೂ ಸಂಗಾತಿಯ ಪಾಲಿನ ಕೆಲಸವನ್ನು ಕೈಗೆತ್ತಿಕೊಂಡು ಅವರ ಭಾರವನ್ನು ಕಡಿಮೆ ಮಾಡುವ ಮೂಲಕ ಹೆಚ್ಚು ಬದ್ದತೆಯನ್ನು ಪ್ರಕಟಿಸಬಹುದು.

  4. ಖಾಸಗಿ ಸಮಯವನ್ನು ಪಡೆಯಿರಿ

  ಇಬ್ಬರೂ ಜೊತೆಯಾಗಿದ್ದರೂ, ಇಬ್ಬರಿಗೂ ಸಮಯದ ವಿಷಯದಲ್ಲಿ ತಮ್ಮದೇ ಆದ ಆದ್ಯತೆಗಳಿರುತ್ತವೆ. ಇಬ್ಬರಿಗೂ ತಮ್ಮದೇ ಆದ ಖಾಸಗಿ ಸಮಯವನ್ನು ಕಳೆಯುವುದು ಅಗತ್ಯವಾಗಿದೆ. ಹೇಗೂ ಜೊತೆಯಾಗಿಯೇ ಇದ್ದೇವೆಲ್ಲಾ, ಇನ್ನೇಕೆ ಪ್ರತ್ಯೇಕ ಸಮಯ ಎಂಬ ಭಾವನೆ ತಪ್ಪು. ಈ ಸಮಯದಲ್ಲಿ ಇಬ್ಬರೂ ತಮ್ಮ ಅಭಿರುಚಿಗಳನ್ನು ಆಸ್ವಾದಿಸಬಹುದು. ಉದಾಹರಣೆಗೆ ತಮ್ಮ ನೆಚ್ಚಿನ ಸಂಗೀತ ಆಲಿಸುವುದು, ಪುಸ್ತಕವೊಂದನ್ನು ಓದುವುದು, ತಮ್ಮ ಹವ್ಯಾಸದ ಕೆಲಸಗಳನ್ನು ಮಾಡುವುದು ಇತ್ಯಾದಿ. ತಮ್ಮದೇ ಆದ ಖಾಸಗಿ ಸಮಯವನ್ನು ತಮಗೆ ಇಷ್ಟಬಂದಂತೆ ಕಳೆಯುವುದು ಇಬ್ಬರಿಗೂ ಅಗತ್ಯವಾಗಿದ್ದು ಈ ಸಮಯದಲ್ಲಿ ಇಬ್ಬರೂ ಪರಸ್ಪರರಿಗೆ ತೊಂದರೆ ನೀಡದೇ ಅವರ ಸಮಯವನ್ನು ಅವರಿಗೆ ಇಷ್ಟಬಂದಂತೆ ಕಳೆಯಲು ಅನುವು ಮಾಡಿಕೊಡಬೇಕು.

  5. ಸಮರ್ಥವಾಗಿ ಸಂಭಾಷಿಸಿ

  ಸಂಬಂಧದಲ್ಲಿ ಇದು ಅತಿ ಮುಖ್ಯವಾದ ನಿಯಮವಾಗಿದೆ. ಯಾವುದೇ ಸಂಬಂಧದಲ್ಲಿ ಸಂಭಾಷಣೆ ಮುಖ್ಯವಾಗಿದ್ದು ಸಂಬಂಧವನ್ನು ಉಳಿಸಿಕೊಳ್ಳಲೂ, ಕೆಡಿಸಲೂ ಕಾರಣವಾಗಬಹುದು. ಕೆಲವೊಮ್ಮೆ ಸಂಭಾಷಣೆ ದಿಕ್ಕು ತಪ್ಪಿದಾಗ ಇದು ಸಂಬಂಧದಲ್ಲಿ ಹುಳಿ ಹಿಂಡಬಹುದು. ಕೆಲವು ವಿಷಯಗಳು ನಿಮಗೆ ಇಷ್ಟವಾಗದೇ ಇದ್ದರೆ ಈ ಬಗ್ಗೆ ನೇರವಾಗಿ ನಿಮ್ಮ ಸಂಗಾತಿಯಲ್ಲಿ ತಿಳಿಸಬೇಕು. ಇದರ ಹಿಂದೆ ಇರುವ ಕಾರಣವನ್ನೂ ನೀವು ಸ್ಪಷ್ಟಪಡಿಸಬೇಕಾದುದು ಅಗತ್ಯ. ಇದರಿಂದ ಪರಸ್ಪರರಿಗೆ ತಮ್ಮ ಸಂಗಾತಿಗೆ ಯಾವ ವಿಷಯ ಇಷ್ಟವಿಲ್ಲವೆಂಬ ಅರಿವು ಮೂಡುತ್ತದೆ ಹಾಗೂ ತಮ್ಮನ್ನು ಈ ನಿಟ್ಟಿನಲ್ಲಿ ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸುವ ಮೂಲಕ ಸಂಬಂಧದಲ್ಲಿ ಹುಳಿ ಹಿಂಡದಂತೆ ತಡೆಯಬಹುದು. ಉತ್ತಮ ಸಂಬಂಧಕ್ಕೆ ಈ ನಿಯಮಗಳನ್ನು ಪಾಲಿಸುವುದು ಪ್ರತಿ ಜೋಡಿಗೂ ಅಗತ್ಯವಾಗಿದೆ. ಇದರಿಂದ ಸುಖಮಯ ಸಂಸಾರ ನಿಮ್ಮದಾಗುತ್ತದೆ.ಈ ಲೇಖನ ನಿಮಗೆ ಇಷ್ಟವಾದರೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

  Read more about: marriage
  English summary

  Rules To Follow When You Start Living With Your Partner

  Living with your partner is a great start for a relationship but it can also be quite nerve-wracking. It is very important to follow certain rules or parameters in order to keep your relationship healthy and fun. Living with your partner is one big step in a relationship, no matter how long you and your partner have been in a relationship for or what the two of you desire from each other and from the relationship. No matter the reasons, it is still a big decision which requires lots of planning, commitment, thoughts, dedication, and love.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more