For Quick Alerts
ALLOW NOTIFICATIONS  
For Daily Alerts

ನೋಡಿ ಇದೇ ಕಾರಣಕ್ಕೆ , ಕೆಲವೊಮ್ಮೆ ಪುರುಷರು 'ಸೆಕ್ಸ್' ಬೇಡ ಎನ್ನುತ್ತಾರಂತೆ!

|

ಲಲಿತಾ (ಹೆಸರು ಬದಲಾಯಿಸಲಾಗಿದೆ) ಎಂಬುವರ ಪತಿ ವಿವಾಹದ ಬಳಿಕ ಹಲವು ವರ್ಷಗಳಾದರೂ ಒಮ್ಮೆಯೂ ಲೈಂಗಿಕ ಕ್ರಿಯೆಗೆ ಒಲವೇ ತೋರದಿರಲು ಆತ ತನ್ನ ಬಗ್ಗೆ ಆಕರ್ಷಣೆ ಹೊಂದಿಲ್ಲ ಎಂದೇ ಇವರು ಭಾವಿಸಿದ್ದರು. ಈ ಬಗ್ಗೆ ಕೇಳಿದಾಗ ಇವರ ಪತಿ ಇದನ್ನು ನಿರಾಕರಿಸದೇ ನಿರ್ಲಿಪ್ತರಾಗಿದ್ದರು.

ಯಾವುದೇ ಮಹಿಳೆ ಲೈಂಗಿಕ ಸುಖದಿಂದ ವಂಚಿತಳಾದರೆ ಒಳಗಾಗುವ ದ್ವಂದ್ವ ಮತ್ತು ಹತಾಶೆಗೆ ಜೆನ್ನಿಯವರೂ ಒಳಗಾಗಿದ್ದರು. ಇದು ಕೇವರ ಜೆನ್ನಿ ದಂಪತಿಗಳ ವಿಷಯವಲ್ಲ, ವೈದ್ಯರಲ್ಲಿ ತೊಂದರೆ ಹೇಳಿಕೊಂಡು ಬರುವ ದಂಪತಿಗಳಲ್ಲಿ ಸುಮಾರು ಇಪ್ಪತ್ತು ಶೇಖಡಾದಷ್ಟು ದಂಪತಿಗಳದ್ದು ಇದೇ ಕಥೆ.

ಹೊರನೋಟಕ್ಕೆ ಇದು ಕೇವಲ ಆಕರ್ಷಣೆ ಅಥವಾ ಮಾನಸಿಕ ತೊಂದರೆ ಎಂದು ಕಂಡುಬಂದರೆ, ಇವರ ಸಂಬಂಧವನ್ನು ಸೂಕ್ಷ್ಮವಾಗಿ ಅವಲೋಕಿಸಿದ ವೈದ್ಯರಿಗೆ ಇದರ ನಿಜವಾದ ಕಾರಣಗಳು ಗೊತ್ತಾಗುತ್ತದೆ. ಇವುಗಳಲ್ಲಿ ಪ್ರಮುಖವಾದ ಆರು ಕಾರಣಗಳನ್ನು ವಿವರಿಸಲಾಗಿದೆ...

ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟ

ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟ

ಪುರುಷರ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿರಬೇಕಾದ ಟೆಸ್ಟೋಸ್ಟೆರಾನ್ ಎಂಬ ಈ ರಸದೂತ "ಲೈಂಗಿಕ ಹಸಿವಿಗೆ" ಪ್ರಮುಖವಾಗಿ ಅಗತ್ಯವಾಗಿದೆ. ಯಾವಾಗ ಪುರುಷರಲ್ಲಿ ಆಸಕ್ತಿ ಕಡಿಮೆಯಾಯಿತೋ ಅಥವಾ ಮೊದಲಿನಷ್ಟು ಸಂಬಂಧದಲ್ಲಿ ರಸಿಕತೆ ಕಾಣದೇ ಹೋಗುತ್ತಿದೆಯೋ ಆಗ ವೈದ್ಯರ ಬಳಿ ತೆರಳುವುದು ಅಗತ್ಯವಾಗಿದೆ. ಕೆಲವೊಮ್ಮೆ ಆರೋಗ್ಯ ಸಂಬಂಧಿತ ಕಾರಣಗಳಿಂದ ಪುರುಷರ ದೇಹದಲ್ಲಿ ಕನಿಷ್ಟ ಅಗತ್ಯಕ್ಕೂ ಕಡಿಮೆ ಪ್ರಮಾಣದಲ್ಲಿ ಟೆಸ್ಟೋಸ್ಟೆರಾನ್ ಉತ್ಪತ್ತಿಯಾಗುತ್ತದೆ. ಹಾಗಾಗಿ ಇವರಿಗೆ ಲೈಂಗಿಕತೆಯಲ್ಲಿ ಆಸಕ್ತಿಯೇ ಉಡುಗಿ ಹೋಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಕೊರತೆಗೆ ಕಾರಣ ಸುಲಭವಾಗಿ ಗೊತ್ತಾಗುವುದಿಲ್ಲ ಹಾಗೂ ಪರಿಣಾಮವಾಗಿ ಉದ್ರೇಕವೂ ಅತಿ ಕಡಿಮೆಯಾಗಿಬಿಡುತ್ತದೆ.

ಆಕರ್ಷಣೆಯೇ ಇಲ್ಲವಾಗುವುದು

ಆಕರ್ಷಣೆಯೇ ಇಲ್ಲವಾಗುವುದು

ಕೆಲವು ಸಂದರ್ಭಗಳಲ್ಲಿ ಪುರುಷ ತನ್ನ ಸಂಗಾತಿಯ ಪ್ರತಿ ಆಕರ್ಷಣೆಯನ್ನೇ ಕಳೆದುಕೊಳ್ಳುತ್ತಾನೆ. ಹೀಗಿರುವಾಗ ಲೈಂಗಿಕ ಸಂಪರ್ಕವಂತೂ ದೂರದ ಮಾತೇ ಸರಿ. ಅಸಂಭವ ಎಂದೆನಿಸಿದರೂ ಇದು ಸತ್ಯ! ಆದರೆ ಮರೆಯಬಾರದ ಮುಖ್ಯ ಸಂಗತಿ ಎಂದರೆ ದೀರ್ಘಾವಧಿಯ ಸಂಬಂಧದಲ್ಲಿ ಆಕರ್ಷಣೆಗೆ ಬೇರೆಯೇ ಅರ್ಥವಿದೆ. ಇದು ದೈಹಿಕ ಆಕರ್ಷಣೆ ಮತ್ತು ಲೈಂಗಿಕ ಬಯಕೆ ಹಾಗೂ ಇಬ್ಬರ ನಡುವಣ ಭಾವನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಉದಾಹರಣೆಗೆ ಇಬ್ಬರೂ ಪರಸ್ಪರ ಹೇಗೆ ಹೊಂದಿಕೊಂಡಿದ್ದಾರೆ, ಜೊತೆಯಾಗಿದ್ದಾಗಲೂ ನಿರಾಳರಾಗಿರುತ್ತಾರೆ ಹಾಗೂ ಪರಸ್ಪರ ಗೌರವಿಸುತ್ತಾರೆ. ಹಾಗಾಗಿ ಆಕರ್ಷಣೆ ಕಳೆದುಕೊಳ್ಳುವುದು ಎಂದರೆ ಇದೊಂದು ಮಾನಸಿಕರೂಪದ ರಕ್ಷಣೆ ಎಂದೂ ಹೇಳಬಹುದು. ಒಂದು ವೇಳೆ ಸಂಬಂಧದಲ್ಲಿ ಉಸಿರುಕಟ್ಟಿದ ವಾತಾವರಣವನ್ನು ಪುರುಷ ಅನುಭವಿಸಿದರೆ ಈ ವಾತಾವರಣದಿಂದ ಹೊರಬರಲು ಆಕರ್ಷಣೆಯಿಂದ ದೂರವಿದ್ದು ಒಂದು ವೇಳೆ ಲೈಂಗಿಕ ಸಂಪರ್ಕಕ್ಕೆ ಮುಂದಾದರೆ ಮತ್ತೆ ಈ ಉಸಿರುಗಟ್ಟಿದ ವಾತಾವರಣೆಕ್ಕೇ ಹೋಗಿಬಿಡಬಹುದು ಹಾಗಾಗಿ ಇದರಿಂದ ವಿಮುಕ್ತಿಯೇ ಸೂಕ್ತ ಎಂಬ ತೀರ್ಮಾನಕ್ಕೆ ಪುರುಷ ಬಂದುಬಿಡಬಹುದು. ಕೆಲವೊಮ್ಮೆ ಸ್ವಪ್ರಶಂಸೆಯೂ ಲೈಂಗಿಕ ನಿರಾಸಕ್ತಿಗೆ ಕಾರಣವಾಗಬಹುದು. ಕೆಲವೊಮ್ಮೆ ಮಹಿಳೆಯರ ವಯೋಸಹಜ ಮತ್ತು ಅನಿವಾರ್ಯವಾದ ದೈಹಿಕ ಬದಲಾವಣೆ ಪುರುಷನಿಗೆ ಸಹಿಸದೇ ಹೋಗಬಹುದು. ಈ ಮೂಲಕ ತನ್ನ ಸೌಂದರ್ಯವೂ ಕುಂದುತ್ತಾ ಹೋಗುತ್ತದೆಯೋ ಎಂದೂ ಆತಂಕ ಎದುರಾಗಿ ಇದರ ಪರಿಣಾಮವಾಗಿಯೂ ಲೈಂಗಿಕ ನಿರಾಸಕ್ತಿ ಎದುರಾಗಬಹುದು.

ಸ್ವಸಾಮರ್ಥ್ಯದ ಬಗ್ಗೆ ಆತಂಕ

ಸ್ವಸಾಮರ್ಥ್ಯದ ಬಗ್ಗೆ ಆತಂಕ

ಓರ್ವ ಪ್ರೇಮಿಯಾಗಿ ತನ್ನ ಸಾಮರ್ಥ್ಯವನ್ನು ಹೆಚ್ಚಿನ ಪುರುಷರು ತಮ್ಮ ಲೈಂಗಿಕ ಉದ್ರೇಕದ ಮಟ್ಟದಿಂದ ಅಳೆಯುತ್ತಾರೆ. ಹೆಚ್ಚು ಹೊತ್ತಿನ ಕಾಲ ಹೆಚ್ಚಿನ ಉದ್ರೇಕತೆಯನ್ನು ಕಾಪಾಡಿಕೊಂಡಷ್ಟೂ ಇವರಿಗೆ ಇದು ಹೆಚ್ಚಿನ ಸಾಮರ್ಥ್ಯ ಎಂದೇ ಪರಿಗಣಿಸುತ್ತಾರೆ. ಆದರೆ ಯಾವುದೇ ಪುರುಷನಿಗೆ ತಾನು ಅಂದುಕೊಂಡಷ್ಟು ಸಮಯ ಉದ್ರೇಕತೆಯನ್ನು ತಡೆದುಹಿಡಿದುಕೊಳ್ಳಲು ಸಾಧ್ಯವಿಲ್ಲ ಹಾಗೂ ಲೈಂಗಿಕ ಕ್ರಿಯೆಯ ನಡುವೆಯೇ ಈ ಸಾಮರ್ಥ್ಯ ಕುಂದುವುದು ಕಂಡುಬರಬಹುದು. ಹೀಗಾದರೆ ಮುಂದಿನ ಬಾರಿ ನಡುವಿನಲ್ಲಿ ವಿಫಲನಾದರೆ ಎಂಬ ಭಯ ಕಾಡತೊಡಗಿ ಈ ಭಯವನ್ನು ಸಂಗಾತಿಯಲ್ಲಿ ಹೇಳಿಕೊಳ್ಳಲು ಧೈರ್ಯವಾಗದೇ ತಾನೇ ಕಣದಿಂದ ಹಿಂದೆ ಸರಿಯುವ ನಿರ್ಧಾರ ತಳೆಯುತ್ತಾರೆ. ಈ ನಿರ್ಧಾರವನ್ನು ಅರಿಯದ ಮಹಿಳೆಯರು ತಮ್ಮಲ್ಲಿ ಈತ ಆಕರ್ಷಣೆಯನ್ನೇ ಕಳೆದುಕೊಂಡಿದ್ದಾನೆ ಎಂದು ಅರ್ಥೈಸಿಕೊಳ್ಳುತ್ತಾರೆ. ಪರಿಣಾಮವಾಗಿ ಇಬ್ಬರ ನಡುವೆ ಗೊಂದಲ, ಕಲಹ ಹೆಚ್ಚುತ್ತಾ ಲೈಂಗಿಕ ಸಂಬಂಧ ಹಳಸುತ್ತದೆ.

ಸ್ವಪರ್ಯಾಪ್ತತೆ

ಸ್ವಪರ್ಯಾಪ್ತತೆ

ಲೈಂಗಿಕ ಕ್ರಿಯೆಯನ್ನು ಪ್ರಾರಂಭಿಸಲು ಎದುರಾಗುವ ದುರ್ಬಲತೆ ಅಥವಾ ಲೈಂಗಿಕ ಬಯಕೆಯನ್ನು ಪೂರ್ಣಗೊಳಿಸಲು ಸಂಗಾತಿಯ ಮೇಲೆ ಅವಲಂಬಿತವಾಗಿರುವುದು ಇಷ್ಟವಾಗದೇ ಕೆಲವು ಪುರುಷರು ಸಮಾಗಮದ ಬದಲು ಹಸ್ತಮೈಥುನವನ್ನೇ ಆರಿಸಿಕೊಳ್ಳುತ್ತಾರೆ. ಇವರು ಗುಪ್ತವಾಗಿ ನೀಲಿಚಿತ್ರಗಳನ್ನು ವೀಕ್ಷಿಸಿ ತಮ್ಮ ಬಯಕೆಯನ್ನು ಪೂರ್ಣಗೊಳಿಸುತ್ತಾರೆ. ಏಕೆಂದರೆ ಇದು ಸುಲಭವಾಗಿ ದಕ್ಕುವಂತಹದ್ದೂ ರೋಮಾಂಚಕವೂ ಆಗಿರುತ್ತದೆ ಹಾಗೂ ಸಂಗಾತಿ ಬಯಸುವ ಲೈಂಗಿಕ ಕಾಮನೆಗಳು ತಮ್ಮ ಸಾಮರ್ಥ್ಯಕ್ಕೂ ಮೀರಿದ್ದು ಇದನ್ನು ಪೂರೈಸಲಾಗದೇ ಸ್ವಪರ್ಯಾಪ್ತತೆಯತ್ತ ಒಲವು ತೋರುತ್ತಾರೆ. ಕೆಲವೊಮ್ಮೆ ಇವರ ಸಂಗಾತಿ ಹೆಚ್ಚು ಲೈಂಗಿಕ ಸಂಪರ್ಕವನ್ನು ಹೊಂದಲು ಇವರಿಗಿಂತಲೂ ಹೆಚ್ಚು ಆಸಕ್ತರಾಗಿದ್ದರೂ ಪುರುಷ ಯಾವುದೋ ಅವ್ಯಕ್ತ ಹಾಗೂ ಒಂಟಿಯಾಗಿ ಲೈಂಗಿಕಬಯಕೆಯನ್ನು ಪೂರ್ಣಗೊಳಿಸುವ ಇಚ್ಛೆಯಿಂದ ಸಂಗಾತಿಯೊಡನೆ ಕೂಡಲು ಒಲವು ತೋರದೇ ಹೋಗಬಹುದು.

ಬೇಸರ

ಬೇಸರ

ಸಾಮಾನ್ಯವಾಗಿ ಮಹಿಳೆಯರು ಲೈಂಗಿಕ ಆಸಕ್ತಿಯನ್ನು ನಿಧಾನವಾಗಿ ಮೂಡಿಸಿಕೊಂಡು ಕೊಂಚ ಹೊತ್ತಿನ ಬಳಿಕವೇ ಉದ್ರೇಕಸ್ಥಿತಿಗೆ ತಲುಪುತ್ತಾರೆ. ಇದೇ ಕಾರಣಕ್ಕೆ ಮುನ್ನಲಿವಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದರೆ ಪುರುಷರ ವಿಷಯದಲ್ಲಿ ಹಾಗಲ್ಲ. ಇವರ ಮನಸ್ಸಿನಲ್ಲಿ ಯಾವಾಗ ಲೈಂಗಿಕ ಬಯಕೆ ಮೂಡಿತೋ, ಮರುಕ್ಷಣದಲ್ಲಿಯೇ ಇವರು ಸಿದ್ದರಾಗಿಬಿಟ್ಟಿರುತ್ತಾರೆ. ಈ ಸಮಯದಲ್ಲಿ ಗರಿಷ್ಟ ಪ್ರಮಾಣದ ಟೆಸ್ಟಾಸ್ಟೆರಾನ್ ರಸದೂತ ಸ್ರವಿಸುತ್ತದೆ ಹಾಗೂ ಸುತ್ತಮುತ್ತಲ ಎಲ್ಲದರಲ್ಲಿಯೂ ಇವರಿಗೆ ಕಾಮವೇ ಕಾಡುತ್ತದೆ. (ಆನೆ ಮೊದಲಾದ ಗಂಡು ಸಸ್ತನಿಗಳಲ್ಲಿ ಈ ಪರಿ ಅತಿ ಹೆಚ್ಚಾಗಿ ಕಾಡುತ್ತದೆ, ಇದನ್ನೇ ಮದ ಎಂದು ಕರೆಯುತ್ತೇವೆ). ಆದರೆ ಪುರುಷರ ಈ ಬಯಕೆಯನ್ನು ತಕ್ಷಣವೇ ಪೂರೈಸಲು ಈ ಕ್ಷಣದಲ್ಲಿ ಮಹಿಳೆ ತಯಾರಾಗಿಯೇ ಇರುವುದಿಲ್ಲ ಹಾಗೂ ಸ್ವಾಭಾವಿಕವಾಗಿಯೇ ಆಕೆ 'ಈಗ ಬೇಡ' ಅಥವಾ 'ಸದಾಶಿವನಿಗೆ ಸದಾ ಅದೇ ಚಿಂತೆ' ಎಂದು ದೂರ ಮಾಡುತ್ತಾಳೆ. ಈ ನಿರಾಕರಣೆ ಮದದ ಸ್ಥಿತಿಯಲ್ಲಿರುವ ಪುರುಷನಿಗೆ ಭಾರೀ ಆಘಾತಕಾರಿಯಾಗಿ ಕಾಣುತ್ತದೆ. ವಾಸ್ತವವೆಂದರೆ ಪುರುಷರಿಗೆ ಕಾಮಾಸಕ್ತಿ ಉತ್ತುಂಗದಲ್ಲಿದ್ದಾಗ ಆತನ ಮನಸ್ಸು ಸಹಾ ಇದನ್ನು ಪಡೆಯಲು ಸನ್ನದ್ಧವಾಗಿರುತ್ತದೆ. ಈ ಸಮಯದಲ್ಲಿ ಕೂಡುವ ಮೂಲಕ ಆತ ತನ್ನ ಸಂಗಾತಿಯ ಮೇಲಿರುವ ಪ್ರೇಮ ಹಾಗೂ ಆಕೆಯಿಂದ ಪಡೆಯಬೇಕಾದ ಸುಖವನ್ನು ಪ್ರಕಟಿಸುತ್ತಾನೆ. ಇದು ಸಾಧ್ಯವಾಗದೇ ಹೋದಾಗ ಎದುರಾಗುವ ಬೇಸರ ಈ ವಿಷಯದಲ್ಲಿ ತನ್ನ ಸಂಗಾತಿಯ ಬಗ್ಗೆ ಋಣಾತ್ಮಕ ಭಾವನೆ ತಳೆಯಲು, ತನ್ಮೂಲಕ ಆಕೆಯಲ್ಲಿ ಲೈಂಗಿಕ ನಿರಾಸಕ್ತಿ ಪಡೆಯಲು ಸಾಧ್ಯವಾಗುತ್ತದೆ.

ಲೈಂಗಿಕ ಅವ್ಯವಹಾರ

ಲೈಂಗಿಕ ಅವ್ಯವಹಾರ

ಯಾವಾಗ ಮೇಲಿನ ಯಾವುದೇ ಕಾರಣಗಳು ಅಥವಾ ಅನಾರೋಗ್ಯದ ಕಾರಣವಿಲ್ಲದೇ ಲೈಂಗಿಕ ನಿರಾಸಕ್ತಿಯನ್ನು ಪುರುಷ ಪ್ರಕಟಿಸುತ್ತಿದ್ದರೆ ಇದಕ್ಕೆ ಈತನ ಲೈಂಗಿಕ ಅವ್ಯವಹಾರ ಕಾರಣವಾಗಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಪುರುಷ ತನ್ನ ವೈವಾಹಿಕ ಸಂಬಂಧಕ್ಕೂ ಹೊರಗಿನ ಸಂಬಂಧವನ್ನು ಹಾತೊರೆಯಲು ಮನೆಯಲ್ಲಿ ಲೈಂಗಿಕ ಸುಖದಿಂದ ವಂಚಿತನಾಗಿರುವುದೇ ಕಾರಣವಾಗಿರುತ್ತದೆ. ಆದರೆ ಹೊರಗಿನ ಸಂಬಂಧದ ಕಾರಣ ವೈವಾಹಿಕ ಸಂಬಂಧದಲ್ಲಿ ಮೂಡುವ ಬಿರುಕು ಸರಿಪಡಿಸಲು ಅಸಾಧ್ಯವೆನಿಸುವಷ್ಟು ಕಷ್ಟವಾಗಿದೆ. ಸಂಬಂಧದಲ್ಲಿ ಪರಸ್ಪರ ನಿಷ್ಠೆ ತೋರಿದಾಗ ಹೊರಗಿನ ಸಂಬಂಧ ವಿವಿಧ ರೂಪಗಳನ್ನು ತಳೆಯಬಹುದು. ಮೂರನೆಯ ವ್ಯಕ್ತಿಯೊಂದಿಗೆ ಪ್ರೇಮಸಂಬಂಧ, ಒಂದೇ ರಾತ್ರಿಯ ಮಟ್ಟಿಗಿನ ಸಂಬಂಧ, ಆನ್ಲೈನ್ ಚಾಟಿಂಗ್, ಕೆಲವು ದಿನಗಳವರೆಗೆ ಒಟ್ಟಿಗಿರುವುದು ಮೊದಲಾದವು ಕಾಣಬರಬಹುದು ಹಾಗೂ ಕೆಲವು ಸಂದರ್ಭಗಳಲ್ಲಿ ಈ ಹೊರಗಿನ ಸಂಬಂಧಗಳಲ್ಲಿ ಕಾಣಬರುವ ರೋಚಕತೆ ವೈವಾಹಿಕ ಸಂಬಂಧಕ್ಕೂ ಹೆಚ್ಚು ಅಪ್ಯಾಯಮಾನವಾಗಿ ಕಂಡು ಮನೆಯಲ್ಲಿ ಲೈಂಗಿಕ ನಿರಾಸಕ್ತಿ ತೋರಲು ಕಾರಣವಾಗಬಹುದು. ಹೊರಗಿನ ಸಂಬಂಧ ಎಂದಿದ್ದರೂ ಸಂಸಾರದ ನಡುವೆ ಹುಳಿಯನ್ನೇ ಹಿಂಡುತ್ತದೆ. ಆದರೂ, ದಂಪತಿಗಳು ಪರಸ್ಪರ ಈ ಬಗ್ಗೆ ಚರ್ಚಿಸಿ ಏಕಾಗಿ ಹೊರಗಿನ ಸಂಬಂಧಕ್ಕೆ ಪುರುಷ ಒಲವು ತೋರುತ್ತಿದ್ದಾನೆ ಎಂಬುದನ್ನು ಪರಾಮರ್ಶಿಸಿ ಸೂಕ್ತ ಬದಲಾವಣೆಗಳನ್ನು ತಮ್ಮಲ್ಲಿ ಅಳವಡಿಸುವ ಮೂಲಕ ಖಂಡಿತವಾಗಿಯೂ ದಾಂಪತ್ಯ ಮತ್ತೊಮ್ಮೆ ಸುಖಕರವಾಗುತ್ತದೆ.

ತಜ್ಞ ಸಲಹಾಕಾರರ ಸಲಹೆ ಪಡೆಯಿರಿ

ತಜ್ಞ ಸಲಹಾಕಾರರ ಸಲಹೆ ಪಡೆಯಿರಿ

ಒಂದು ವೇಳೆ ನಿಮ್ಮ ದಾಂಪತ್ಯದಲ್ಲಿಯೂ ಲೈಂಗಿಕ ನಿರಾಸಕ್ತಿ ಅಡಿಯಿಟ್ಟಿದ್ದರೆ ಹಾಗೂ ಈ ಪರಿಸ್ಥಿತಿಯನ್ನು ನೀವು ಸುಧಾರಿಸಬಯಸಿದರೆ ನೀವು ಏನು ಅನುಭವಿಸುತ್ತಿದ್ದೀರಿ ಅಥವಾ ಏನನ್ನು ಕಳೆದುಕೊಳ್ಳುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ಮತ್ತು ನೇರವಾದ ಮಾತುಗಳಿಂದ ನಿಮ್ಮ ಭಾವನೆಗಳನ್ನು ಪ್ರಕಟಿಸಿ. ಪರಸ್ಪರ ಎದುರುಬದುರಾಗಿ ಕುಳಿತು ಎಲ್ಲಾ ವಿಷಯಗಳನ್ನು ಪರಾಮರ್ಶಿಸಿ ತಪ್ಪು ಕಲ್ಪನೆಗಳನ್ನೆಲ್ಲ ತೊಡೆಯಿರಿ. ಒಂದು ವೇಳೆ ಸಂವಹನ ಸರಿಯಾಗಿ ಆಗುತ್ತಿಲ್ಲ ಎನಿಸಿದರೆ ತಜ್ಞ ಸಲಹಾಕಾರರ ಸಲಹೆ ಪಡೆಯಿರಿ.

English summary

Reasons Why a Man May Not Want Sex

When lalitha husband of several years barely ever initiated sex, she started to believe he wasn’t attracted to her anymore. He claimed he was, but he still never seemed to make a move. Jenny was, understandably, confused and frustrated. about 20 percent of the couples I counsel are in situations like Jenny and her husband. And though loss of attraction may be the first explanation that comes to mind for the female partner, as it did Jenny, there are several other possible reasons why a man isn’t initiating sex
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more