For Quick Alerts
ALLOW NOTIFICATIONS  
For Daily Alerts

ಸಂಗಾತಿ ದೂರವಿದ್ದಾಗ ಸಂತೋಷಕ್ಕಿಂತ-ಸಮಸ್ಯೆಯೇ ಜಾಸ್ತಿ

By Hemanth
|

ವಿರಹ ವೇದನೆ ಎನ್ನುವುದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಮದುವೆಯಾದ ಕೆಲವೇ ಸಮಯದಲ್ಲಿ ಸಂಗಾತಿಗಳು ಪರಸ್ಪರ ದೂರವಿದ್ದುಕೊಂಡು ಬದುಕುವುದು ತುಂಬಾ ನೋವು ಉಂಟು ಮಾಡುವುದು. ಇದು ಮನಸ್ಸಿಗೆ ಅತಿಯಾಗಿ ಘಾಸಿ ಉಂಟು ಮಾಡುವಂತಹ ವಿಚಾರ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯವಾಗಿ ದೂರವಿರಬೇಕಾಗುತ್ತದೆ. ಯಾಕೆಂದರೆ ಭವಿಷ್ಯಕ್ಕಾಗಿ ಉದ್ಯೋಗ ಕೂಡ ಅನಿವಾರ್ಯವಾಗಿರುವ ಕಾರಣ ಸಂಗಾತಿಯನ್ನು ಬಿಟ್ಟು ದೂರ ಉಳಿಯಬೇಕಾಗಬಹುದು.

ಸಾವಿರಾರು ಮೈಲು ದೂರವಿರುವಂತಹ ಸಂಗಾತಿಗಳು ಸಂಬಂಧ ಉಳಿಸಿಕೊಳ್ಳಲು ತುಂಬಾ ಕಷ್ಟಪಡುವರು ಮತ್ತು ಇದಕ್ಕೆ ಸಂಗಾತಿಗಳಲ್ಲಿ ಬದ್ಧತೆ ಕೂಡ ಬೇಕಾಗುವುದು. ಸಂಗಾತಿ ದೂರವಿದ್ದಾಗ ಸಂತೋಷದಿಂದ ಇರುವುದು ತುಂಬಾ ಕಠಿಣ. ಸಂಗಾತಿಯಿಂದ ದೂರವಿದ್ದುಕೊಂಡಾಗ ಹಲವಾರು ರೀತಿಯ ಸಮಸ್ಯೆಗಳು ಬರುವುದು ಮತ್ತು ಇದಕ್ಕಾಗಿ ನೀವು ಕೆಲವೊಂದು ಒಪ್ಪಂದಗಳನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ. ದೀರ್ಘಕಾಲದ ಸಂಬಂಧದಲ್ಲಿ ಬರುವಂತಹ ಸಂಬಂಧಗಳನ್ನು ಎದುರಿಸಲು ಏನು ಮಾಡಬೇಕು ಎಂದು ನೀವು ಇಲ್ಲಿ ತಿಳಿಯಿರಿ.

ದೂರ ದೂರವಿದ್ದಾಗ ಮಾತ್ರ, ಆ ಪ್ರೀತಿಯ ಬೆಲೆ ಗೊತ್ತಾಗುವುದು...!

long-distance relationship

ಹೊಟ್ಟೆಕಿಚ್ಚು ಎನ್ನುವುದು ದೆವ್ವವಿದ್ದಂತೆ!

ಹೊಟ್ಟೆಕಿಚ್ಚು ದೊಡ್ಡ ಸಮಸ್ಯೆ. ಯಾವುದೇ ಸಂಬಂಧದ ಬುಡವನ್ನೇ ಇದು ಅಲುಗಾಡಿಸಬಹುದು. ಹೊಟ್ಟೆಕಿಚ್ಚಿನಿಂದ ನೀವು ದೂರವಿರಬೇಕಾದರೆ ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕಾಗಬಹದು. ನೀವು ಅಥವಾ ನಿಮ್ಮ ಸಂಗಾತಿಯು ಹೊಟ್ಟೆಕಿಚ್ಚು ಪಡುವಂತಹ ಪರಿಸ್ಥಿತಿಯಿಂದ ದೂರವಿರಿ. ನಿಮಗೆ ಹೊಟ್ಟೆಕಿಚ್ಚು ಉಂಟಾಗಿದ್ದರೆ ಇದನ್ನು ಸಂಗಾತಿ ಜತೆ ಚರ್ಚಿಸಿ. ಮುಚ್ಚಿಡುವುದು ಒಳ್ಳೆಯದಲ್ಲ. ಇದನ್ನು ನೀವು ಮುಚ್ಚಿಟ್ಟರೆ ಅದರಿಂದ ಮುಂದೆ ದೀರ್ಘಕಾಲಕ್ಕೆ ಅದು ಆಕ್ರಮಣಕಾರಿಯಾಗಬಹುದು. ಸಣ್ಣ ಹೊಟ್ಟೆಕಿಚ್ಚು ಸಂಬಂಧದಲ್ಲಿ ಕಿಡಿ ಹಚ್ಚುವುದು. ಆದರೆ ಇದು ನಿಯಂತ್ರಣದಲ್ಲಿ ಇರಬೇಕು. ಹೊಟ್ಟೆಕಿಚ್ಚನ್ನು ನಿಯಂತ್ರಣ ಮಾಡಿಕೊಳ್ಳದೆ ಇದ್ದರೆ ಆಗ ಸ್ವಾಮ್ಯತ್ವ, ಸಂಶಯ, ಕೋಪ ಮತ್ತು ಅಸುರಕ್ಷತೆ ಭಾವ ಕಾಡುವುದು. ನೆನಪಿಡಿ,

ಮೋಸ

ದೀರ್ಘದೂರದ ಸಂಬಂಧದಲ್ಲಿ ಮೋಸವು ತುಂಬಾ ಕಡಿಮೆ ಎನ್ನಬಹುದು. ಆದರೆ ಇದು ಯಾವುದೇ ಸಂಬಂಧದಲ್ಲೂ ದೊಡ್ಡ ಸಮಸ್ಯೆ. ಕೆಲವು ಸಂಗಾತಿಗಳು ವೈಯಕ್ತಿಕ ಕಾರಣಗಳಿಂದಾಗಿ ಮೋಸ ಮಾಡುವರು. ಇದು ದೂರದೂರಿನ ಸಂಬಂಧ ಅಥವಾ ಅದೇ ಊರಿನಲ್ಲಿ ಇಬ್ಬರು ಸಂಗಾತಿಗಳು ಇದ್ದರೂ ಮೋಸ ಸಾಮಾನ್ಯವಾಗಿರುವುದು. ಮೋಸಕ್ಕೆ ಯಾವುದೇ ರೀತಿಯ ಪರಿಹಾರವಿಲ್ಲ. ಸಂಗಾತಿಗಳು ಒಳ್ಳೆಯ ಸಂವಹಕರಾಗಿದ್ದರೆ ಆಗ ಇದನ್ನು ಬಗೆಹರಿಸಬಹುದು. ನಿಮ್ಮ ಸಂಗಾತಿ ಜತೆ ಮಾತನಾಡಿ, ಅವರಿಗೆ ನಿಮ್ಮ ಆಕಾಂಕ್ಷೆಗಳನ್ನು ತಿಳಿಸಿ ಮತ್ತು ಲೈಂಗಿಕವಾಗಿ ಅನ್ಯೋನ್ಯವಾಗಿರಲು ಎಷ್ಟು ಕಾತರಿಸಿದ್ದೀರಿ ಎಂದು ತಿಳಿಸಿ. ನೀವು ಮಾತನಾಡದೆ ಇದ್ದರೆ ಸಂಗಾತಿಗಳ ತಲೆಯಲ್ಲಿ ಸೆಕ್ಸ್ ನ ವಿಚಾರವು ಸುತುತ್ತಲಿರುವುದು ಮತ್ತು ಅವರು ಮೋಸ ಮಾಡಲು ಮುಂದಾಗುವರು. ಸಂಬಂಧಲ್ಲಿ ಮೋಸ ಮಾಡುವುದು ಅನೈತಿಕ ಹಾಗೂ ತಪ್ಪು. ಪರಸ್ಪರ ಪ್ರೀತಿಸುವುದು ಇಬ್ಬರು ಸೇರಿಕೊಂಡು ಮಾಡಿರುವ ನಿರ್ಧಾರವಾಗಿರುವುದು. ಅದೇ ಮೋಸ ಎನ್ನುವುದು ಒಬ್ಬನಿಂದ ಆಗುವಂತದ್ದಾಗಿದೆ. ಸಂಗಾತಿ ಜತೆಗಿನ ಸಂಬಂಧ ಕಳೆದುಕೊಳ್ಳಲು ಬಯಸದೆ ಇದ್ದರೆ ಆಗ ನೀವು ಮೋಸ ಮಾಡಲೇಬಾರದು. ಈ ಎಂಟು ವಿಚಾರಗಳನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸುಖ, ಸಂತೋಷವಿರುವುದು. ಇನ್ನು ಸಂಗಾತಿಯು ನಿಮ್ಮ ಜತೆಯಲ್ಲಿ ಇಲ್ಲದೆ ಇರುವಾಗ ನೀವು ಗೂಢಚಾರಿಕೆ ಮಾಡುವುದು ಸಂಬಂಧದಲ್ಲಿ ಸರಿಯಾದ ವಿಧಾನವಲ್ಲ. ನೀವು ಗೂಢಚಾರಿಕೆ ಮಾಡುತ್ತಾ ಇರುವಾಗ ಸಿಕ್ಕಿ ಬೀಳಬಹುದು ಅಥವಾ ನಿಮಗೆ ಚಿಂತೆ ಮೂಡಿಸುವಂತಹ ವಿಷಯ ಸಿಗಬಹುದು. ಇದರಿಂದ ಸಂಬಂಧದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಬಹುದು. ನೀವು ಭಾವಿಸಿರುವ ರೀತಿಯು ಬೇರೆ ಆಗಿರುವ ಕಾರಣದಿಂದ ಅದು ಸಂಬಂಧದಲ್ಲಿ ಹಲವಾರು ಸಮಸ್ಯೆ ಉಂಟು ಮಾಡಬಹುದು. ನಿಮ್ಮ ಸಂಗಾತಿಯು ಹೇಗೆ ಮತ್ತು ಯಾವ ರೀತಿಯಲ್ಲಿ ಇದ್ದರೂ ನೀವು ಅದನ್ನು ಸ್ವೀಕರಿಸಬೇಕು. ಕೆಲವರು ಪ್ರೀತಿಯಲ್ಲಿ ಬಿದ್ದ ಬಳಿಕ ತಮ್ಮ ಸಂಗಾತಿಯಲ್ಲಿರುವ ತಪ್ಪುಗಳನ್ನು ಹುಡುಕಲು ಆರಂಭಿಸುವರು. ಈ ಜಗತ್ತಿನಲ್ಲಿ ಯಾರು ಕೂಡ ಪರಿಪೂರ್ಣರಾಗಿಲ್ಲ. ಸಂಗಾತಿಯನ್ನು ಬದಲಾಯಿಸುವುದು ತಪ್ಪು. ಇದು ಸಂಬಂಧದ ಮೇಲೆ ಪರಿಣಾಮ ಬೀರಬಹುದು.

ಜಗಳ ಮತ್ತು ವಾಗ್ವಾದ

ಪ್ರತಿಯೊಂದು ಸಂಬಂಧದಲ್ಲೂ ಜಗಳ ಮತ್ತು ವಾಗ್ವಾದವು ಇದ್ದೇ ಇರುತ್ತದೆ. ಆದರೆ ಇದು ಅತಿಯಾದಾಗ ಆ ಸಂಬಂಧವು ಉಳಿಯದು. ಜಗಳ ಮತ್ತು ವಾಗ್ವಾದವನ್ನು ಸಾಮಾನ್ಯವೆಂದು ಪರಿಗಣಿಸಲಾಗಿದೆ. ಆದರೆ ದೂರದೂರಿನ ಸಂಬಂಧದಲ್ಲಿ ಇದು ಯಾವಾಗಲೂ ಇದ್ದದ್ದೆ. ಇಬ್ಬರು ಸಂಗಾತಿಗಳು ಕೂಡ ದೈನಂದಿನ ಜಗಳ ಮತ್ತು ವಾಗ್ವಾದದಿಂದಾಗಿ ಕಂಗೆಡುವರು. ಇದರಿಂದ ಸಂಬಂಧಕ್ಕೆ ತಿಲಾಂಜಲಿ ಇಡಲು ಬಯಸುವರು. ಒಂದು ವೇಳೆ ನಿಮ್ಮ ಸಂಗಾತಿಯೊಂದಿಗೆ ಯಾವುದೋ ವಿಷಯದ ಕುರಿತು ಜಗಳವಾಡಿದರೆ ಈ ಜಗಳದ ಬಗ್ಗೆ ನಿಮ್ಮ ಆತ್ಮೀಯ ಸ್ನೇಹಿತರಲ್ಲಿ ಹೇಳಿಕೊಳ್ಳುತ್ತಿದ್ದೀರಾ? ಇದು ಅತ್ಯಂತ ದೊಡ್ಡ ತಪ್ಪು. ಏಕೆಂದರೆ ಜಗಳವಾಡದ ಪತಿ ಪತ್ನಿಯರು ಈ ಜಗತ್ತಿನಲ್ಲಿಯೇ ಇಲ್ಲ. ಜೀವನದ ಎಲ್ಲಾ ಸ್ವಾದಗಳಂತೆ ಚಿಕ್ಕಪುಟ್ಟ ಜಗಳವೂ ದಾಂಪತ್ಯಕ್ಕೆ ಅಗತ್ಯ. ಆದ್ದರಿಂದ ನಿಮ್ಮ ಜಗಳದ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳದೇ ಕೇವಲ ಉತ್ತಮ ಗುಣಗಳ ಬಗ್ಗೆ ಮಾತ್ರವೇ ಹೇಳುವುದು ಸಂಬಂಧ ಹಸಿರಾಗಿರಲು ಅಗತ್ಯ. ಇದರ ಹೊರತಾಗಿ ನಿಮ್ಮ ಜಗಳದ ಬಗ್ಗೆ ಸ್ನೇಹಿತರಲ್ಲಿ ಹೇಳಿಕೊಳ್ಳಲು ಪ್ರಾರಂಭಿಸಿದಿರಿ ಎಂದರೆ ನೀವು ನಿಮ್ಮ ಸಂಬಂಧವನ್ನು ಗೌರವಿಸುವ ಮಟ್ಟದಿಂದ ಹೊರಬಂದಿದ್ದೀರಿ ಎಂದು ಅರ್ಥೈಸಿಕೊಳ್ಳಬೇಕು.

ಪರಸ್ಪರರನ್ನು ಕಡೆಗಣಿಸುವುದು

ದೂರದೂರಿನ ಸಂಬಂಧದಲ್ಲಿ ಇದು ತುಂಬಾ ದೊಡ್ಡ ಸಮಸ್ಯೆಯಾಗಿದೆ. ನೀವು ನಿಮ್ಮ ಕೆಲಸದಲ್ಲಿ ವ್ಯಸ್ತರಾಗಿರುತ್ತೀರಿ. ಅದೇ ರೀತಿಯಲ್ಲಿ ನಿಮ್ಮ ಸಂಗಾತಿ ಕೂಡ. ಇದು ನಿಮ್ಮಿಬ್ಬರ ಮಧ್ಯೆ ಒಂದು ಕಂದಕವನ್ನು ನಿರ್ಮಾಣ ಮಾಡುವುದು. ನೀವು ಸಂಗಾತಿ ಜತೆಗೆ ಮಾತನಾಡಲು ಒಂದು ಸಮಯ ನಿಗದಿ ಮಾಡಿರುತ್ತೀರಿ. ಆದರೆ ಇದನ್ನು ಕಡೆಗಣಿಸುತ್ತೀರಿ. ನೀವು ದಿನನಿತ್ಯವು ಪರಸ್ಪರ ಮಾತನಾಡುವ ಮೂಲಕ ಈ ಸಮಸ್ಯೆ ಬಗೆಹರಿಸಬಹುದು. ಪೋನ್ ಮೂಲಕ, ವಿಡಿಯೋ ಕಾಲ್ ಅಥವಾ ಮೆಸೇಜ್ ಗಳ ಮೂಲಕ ನೀವು ಪರಸ್ಪರ ಸಂಪರ್ಕದಲ್ಲಿರಬಹುದು. ನೀವು ಮಾತನಾಡಿಕೊಂಡು ಪರಸ್ಪರರ ದೈನಂದಿನ ಚಟುವಟಿಕೆಗಳ ಬಗ್ಗೆ ಮಾತನಾಡಿ.

ಸ್ವಾಮ್ಯತ್ವ

ನಮಗೆ ಸಂಬಂಧಪಟ್ಟ ವಸ್ತುಗಳು ಮತ್ತು ಜನರಲ್ಲಿ ನಮಗೆ ಸ್ವಾಮ್ಯತ್ವ ಇದೆ ಎಂದು ಮನುಷ್ಯರಾಗಿರುವಂತಹ ನಾವು ಭಾವಿಸುವುದು ಸಹಜ. ಒಂದು ಮಿತಿಯಲ್ಲಿನ ಸ್ವಾಮ್ಯತ್ವವು ಒಳ್ಳೆಯದು. ಆದರೆ ಇದು ಅತಿಯಾದಾಗ ಅದನ್ನು ಜನರಿಗೆ ಸಹಿಸಿಕೊಳ್ಳಲು ಆಗಲ್ಲ. ದೀರ್ಘದೂರಿನ ಸಂಬಂಧದಲ್ಲಿ ಇದು ತುಂಬಾ ಹಾನಿಕಾರಕ. ಎಲ್ಲಾ ಸಮಯದಲ್ಲೂ ನಿಮ್ಮ ಸಂಗಾತಿ ಬೇಕೆಂದು ಬಯಸುವಿರಿ. ಇದರಿಂದ ಸಂಬಂಧದಲ್ಲಿ ಸಮಸ್ಯೆ ಉಂಟಾಗಬಹುದು. ಸ್ವಾಮ್ಯತ್ವದಿಂದಾಗಿ ಸಂಗಾತಿಗೆ ಸಂಬಂಧದಲ್ಲಿ ಸಿಲುಕಿಕೊಂಡಿರುವ ಭಾವನೆ ಉಂಟಾಗಬಹುದು. ಈ ಸಮಸ್ಯೆ ಬಗೆಹರಿಸಲು ಸಂಗಾತಿಗಳಿಬ್ಬರು ತುಂಬಾ ಆರೋಗ್ಯಕಾರಿ ಮಾತುಕತೆಯಲ್ಲಿ ತೊಡಗಿಕೊಳ್ಳಬೇಕು. ನಿಮ್ಮ ನೋವು ಮತ್ತು ಜತೆಯಾಗಿರದೆ ನಿಮ್ಮ ಸಂಗಾತಿಗೆ ಯಾವ ಭಾವನೆಯಾಗುವುದು, ಸ್ವಾಮ್ಯತ್ವವು ಎಲ್ಲಾ ಸಮಯದಲ್ಲಿ ನೆರವಾಗುವುದಿಲ್ಲ ಎನ್ನುವ ಬಗ್ಗೆ ನೀವು ಮಾತನಾಡಿಕೊಳ್ಳಬೇಕು.

English summary

problems couples face in a long distance relationships

Long distance relationships are considered as tough relationships. Couples feel scared to get into a long distance relationship. Maintaining a relationship is a lot of hard work and it requires dedication from a couple. But when a couple lives hundreds of miles apart, keeping the love between them becomes even more difficult. Problems persist and it eventually becomes hard for couples to maintain the relationship.
X
Desktop Bottom Promotion