For Quick Alerts
ALLOW NOTIFICATIONS  
For Daily Alerts

ಪತ್ನಿಯರು ತಮ್ಮ ಪತಿಯಂದಿರ ಬಳಿ ಏನನ್ನು ಅಪೇಕ್ಷಿಸುತ್ತಾರೆ?

|

ಇಬ್ಬರು ವ್ಯಕ್ತಿಗಳ ನಡುವಿನ ಪರಸ್ಪರ ಒಪ್ಪಂದದ ಮೇಲೆ ಮದುವೆಗಳನ್ನು ಮಾಡಲಾಗುತ್ತದೆ.ಪ್ರತಿಯೊಂದು ಮದುವೆಯಲ್ಲೂ ತಿಳಿದುಕೊಳ್ಳಬೇಕಾದ ಅತ್ಯಗತ್ಯ ವಿಷಯಗಳೆಂದರೆ ನಂಬಿಕೆ, ಪ್ರೀತಿ, ಗೌರವ ಮತ್ತು ಪ್ರಾಮಾಣಿಕತೆ. ಆದರೆ ಸ್ತ್ರೀಯರಿಗೆ ಇವೆಲ್ಲವನ್ನು ಮದುವೆಯಲ್ಲಿ ಕೊಟ್ಟ ನಂತರವೂ ಅವರು ಸಂತೋಷವಾಗಿಲ್ಲ ಎಂಬುದನ್ನು ಪುರುಷರು ಕಂಡುಕೊಂಡಿದ್ದಾರೆ. ತಮ್ಮ ಪತ್ನಿಯರ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಅವರನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿದ್ದೇವೆ ಎನ್ನುವುದಕ್ಕೆ ಉತ್ತರಗಳನ್ನು ಹುಡುಕುತ್ತಿದ್ದಾರೆ. ಈ ಲೇಖನದಲ್ಲಿ ಸ್ತ್ರೀಯರು ತಮ್ಮ ಪತಿಯರಿಂದ ಏನನ್ನು ಅಪೇಕ್ಷಿಸುತ್ತಾರೆ ಮತ್ತು ಯಾವ ಕಾರಣಕ್ಕಾಗಿ ಅಪೇಕ್ಷಿಸುತ್ತಾರೆ ಎಂಬುದರ ಬಗ್ಗೆ ನಾವು ತಿಳಿಯೋಣ.

ಪ್ರತಿಯೊಂದು ಮದುವೆಯೂ ಕೂಡ ಹಲವಾರು ಬೇರೆ ಬೇರೆ ರೀತಿಯ ಅಂಶಗಳಿಂದ ಕೂಡಿದ್ದು ಅವು ಬಾಂಧವ್ಯವನ್ನು ಕಾಪಾಡುತ್ತವೆ. ಆದರೆ ಒಬ್ಬ ವ್ಯಕ್ತಿಯು ತನ್ನ ಜೀವನದ ಸಂಗಾತಿಯ ಬಗ್ಗೆ ತಿಳಿಯಬೇಕಾದ ಹಲವಾರು ಹೆಚ್ಚಿನ ವಿಷಯಗಳಿವೆ. ಇವುಗಳು ಇಬ್ಬರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ತನ್ನ ಸಂಗಾತಿ ತನ್ನ ಬಳಿ ಏನನ್ನು ಬಯಸುತ್ತಿದ್ದಾಳೆ ಎಂಬುದನ್ನು ಕೂಡ ಅವಳು ಹೇಳದೇ ಇದ್ದರೂ ಪತಿಗೆ ತಿಳಿಯುವಂತೆ ಮಾಡುತ್ತವೆ.

women need from their men

ಪ್ರತಿಯೊಬ್ಬ ಸ್ತ್ರೀಯೂ ಸಹ ತಾನು ಮದುವೆಯಾಗುವವನ ಬಳಿ ಅವಳಿಗೆ ಇಷ್ಟವಾಗುವಂತಹ ಕೆಲವೊಂದು ವೈಯುಕ್ತಿಕ ಅಂಶಗಳು ಇರಬೇಕು ಎಂದು ಬಯಸುತ್ತಾಳೆ .ಈ ಅಂಶಗಳು ಮದುವೆಯಿಂದ ಸಂಪೂರ್ಣಗೊಂಡರೆ ಅವಳು ಖುಷಿಯಾಗಿ ಇರುತ್ತಾಳೆ .ಈ ಅವಶ್ಯಕತೆಗಳು ಖಂಡಿತವಾಗಿಯೂ ಒಂದು ಹೆಣ್ಣಿಗೆ ಅತ್ಯಗತ್ಯವಾಗಿವೆ.ನೀವು ನಿಮ್ಮ ಪತ್ನಿಯನ್ನು ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು ಮತ್ತು ಮದುವೆಯಿಂದ ಅವಳಿಗೆ ಸಂತೃಪ್ತಿ ಸಿಗಬೇಕು ಎಂದು ಬಯಸಿದರೆ, ಈ ಅಂಶಗಳನ್ನು ಪರಿಗಣಿಸಿ ಅವಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ನೀವು ನಿಮ್ಮ ಸಂಗಾತಿಗೆ ಎಷ್ಟು ಹತ್ತಿರವಾಗಿ ಅವಳ ಇಷ್ಟ ಮತ್ತು ಅವಶ್ಯಕತೆಗಳ ಬಗ್ಗೆ ತಿಳಿದುಕೊಳ್ಳುತ್ತಿರೋ,ಅಷ್ಟು ನಿಮ್ಮ ಮದುವೆಯ ಜೀವನ ಸಂತೋಷದಾಯಕವಾಗಿರುತ್ತದೆ.ವೈವಾಹಿಕ ಜೀವನವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಲು ಬಹಳಷ್ಟು ಸಮಯ ಬೇಕು,ಒಂದು ಚಿಕ್ಕ ತಪ್ಪು ಕೂಡ ಮದುವೆ ಎಂಬ ಬಂಧವನ್ನು ಬೆಟ್ಟದ ತುತ್ತ ತುದಿಯಿಂದ ಕೆಳಗಿನ ಪ್ರಪಾತಕ್ಕೆ ತಳ್ಳುವಂತೆ ಮಾಡಿ ಬಿಡುತ್ತದೆ. ಕಾಯಿಲೆ ಬರುವ ಮುಂಚೆಯೇ ಮುಂಜಾಗ್ರತೆಯ ಕ್ರಮ ತೆಗೆದುಕೊಳ್ಳುವುದು ಯಾವಾಗಲೂ ಒಳ್ಳೆಯದಲ್ಲವೆ? ವಿಲ್ಲರ್ಡ್ ಹಾರ್ಲೆ ಅವರ ಪುಸ್ತಕ "ಹಿಸ್ ನೀಡ್ಸ್, ಹರ್ ನೀಡ್ಸ್" ಪ್ರಕಾರ, ಮಹಿಳೆಯರು ತಮ್ಮ ಪುರುಷರ ಬಳಿ ಈ ೫ ವಿಷಯಗಳನ್ನು ಬಯಸುತ್ತಾರೆ.

1.ಪ್ರೀತಿ

ಮಹಿಳೆಯರು ತುಂಬಾ ಅಪೇಕ್ಷಿಸುವ ಅಂಶವೆಂದರೆ ಪ್ರೀತಿ.ವೈವಾಹಿಕ ಜೀವನದಲ್ಲಿ ಎಲ್ಲವನ್ನು ಕೊಟ್ಟ ನಂತರವೂ ನಿಮ್ಮ ಪತ್ನಿಗೆ ಏನಾದರೂ ಚಿಂತೆ ಕಾಡುತ್ತಿದೆಯೇ ಎಂಬ ಯೋಚನೆ ನಿಮಗೆ ಬಂದರೆ ನೀವು ಅವಳಿಗೆ ಕೊಡುತ್ತಿರುವ ಪ್ರೀತಿ ಅವಳಿಗೆ ಸಾಕಾಗುತ್ತಿದೆಯೇ ಎಂದು ತಿಳಿದುಕೊಳ್ಳಬೇಕು.ಪ್ರೀತಿ ಎನ್ನುವುದು ಒಂದು ಉತ್ಕೃಷ್ಟವಾದ ಪದವಾಗಿದ್ದು ,ಅದು ಜೊತೆಗಾರನು ತನ್ನನ್ನು ಎಷ್ಟು ಇಷ್ಟ ಪಡುತ್ತಿದ್ದಾನೆ ಎಂದು ಅವಳಿಗೆ ತಿಳಿಸುತ್ತದೆ.
ನೀವು ವೈವಾಹಿಕ ಜೀವನದಲ್ಲಿ ಅವಳಿಗೆ ಪ್ರೀತಿಯನ್ನು ಕೊಡುವುದೇನೋ ನಿಜ ,ಆದರೆ ನೀವು ಅವಳಿಗೆ ಎಷ್ಟು ಪ್ರೀತಿಯನ್ನು ನೀಡಿದರೂ ಅವಳಿಗೆ ಪ್ರೀತಿಯ ಕೊರತೆ ಕಾಣಬಹುದು.ಪ್ರತಿಯೊಬ್ಬ ಮಹಿಳೆಯೂ ತನ್ನನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುವ ಪುರುಷನ ಸಾಂಗತ್ಯವನ್ನು ಬಯಸುತ್ತಾಳೆ.ಮದುವೆಯಾಗಿಯೂ ಕೂಡ ಅವಳಿಗೆ ಸರಿಯಾದ ಪ್ರೀತಿ ಸಿಗದೇ ಹೋದರೆ ಅದು ಅವಳ ಮನಸ್ಸಿನಲ್ಲಿ ನಿರರ್ಥಕವಾದ ಭಾವನೆಗಳನ್ನು ಮೂಡಿಸುತ್ತದೆ.ಇದರಿಂದ ಮದುವೆಯ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗುತ್ತವೆ.ಆದ್ದರಿಂದ ಇದನ್ನು ತಪ್ಪಿಸಲು ನಿಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಗಳಲ್ಲೂ ನಿಮ್ಮ ಸಂಗಾತಿಗೆ ಪ್ರೀತಿಯನ್ನು ನೀಡಿ.

2. ಸಂಭಾಷಣೆ

ನಿಮ್ಮ ಸಂಗಾತಿಯು ನಿಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರಲು ಇಚ್ಛಿಸುತ್ತಾಳೆ . ನೀವಿಬ್ಬರು ಯಾವಾಗಲೂ ಕೆಲವು ವಿಷಯಗಳ ಬಗ್ಗೆ ಸಂಭಾಷಣೆ ನಡೆಸುತ್ತಾ ಇರಬೇಕೆಂದು ಅವಳು ಬಯಸುತ್ತಾಳೆ.ಅವುಗಳೆಂದರೆ ನಿಮ್ಮ ದೈನಂದಿನ ಚಟುವಟಿಕೆಗಳು, ಹಿಂದಿನ, ಭವಿಷ್ಯದ, ಮತ್ತು ಮನಸ್ಸಿನ ಆಲೋಚನೆಗಳು. ಈ ಸಂವಾದಗಳು ಬಹಳ ವೈಯಕ್ತಿಕವಾಗಿರಬೇಕು ಹಾಗೂ ಇಬ್ಬರು ಪರಸ್ಪರ ಅರ್ಥಮಾಡಿಕೊಳ್ಳುವಷ್ಟು ಮುಕ್ತವಾಗಿರಬೇಕು. ನೀವು ಅವಳೊಂದಿಗೆ ಹೆಚ್ಚು ಮುಕ್ತವಾಗಿ ಮಾತನಾಡುವುದನ್ನು ಅವಳು ಬಯಸುತ್ತಾಳೆ.ನಿಮ್ಮ ಮನಸ್ಸನ್ನು ಹಾದು ಹೋಗುವ ಹಲವು ವಿಷಯಗಳಾದ ಜೀವನ, ಮದುವೆ ಮತ್ತು ಅವಳ ಬಗ್ಗೆ ಬರುವ ಪ್ರತಿಯೊಂದು ಆಲೋಚನೆಗಳನ್ನು ನೀವು ಅವಳೊಂದಿಗೆ ಹಂಚಿಕೊಳ್ಳಬೇಕೆಂದು ಇಷ್ಟಪಡುತ್ತಾಳೆ.

3. ಪ್ರಾಮಾಣಿಕತೆ ಮತ್ತು ಮುಕ್ತತೆ

ಮದುವೆಯಾಗುವ ಪ್ರತಿಯೊಬ್ಬ ಮಹಿಳೆಯರು ತಮ್ಮ ಗಂಡನಿಂದ ಇದನ್ನು ಅಪೇಕ್ಷಿಸುತ್ತಾರೆ . ಪ್ರಾಮಾಣಿಕತೆ ಅವರಿಗೆ ತುಂಬಾ ಪ್ರಿಯವಾದದ್ದು ಮತ್ತು ಮದುವೆಯ ಮೂಲಕ ಅವರ ಪತಿ ಅವರೊಂದಿಗೆ ಪ್ರಾಮಾಣಿಕ ವಾಗಿರಲು ಬಯಸುತ್ತಾರೆ. ಪ್ರಾಮಾಣಿಕತೆ ಎನ್ನುವುದು ರಾಜಿಯಾಗುವ ವಿಷಯವೇ ಅಲ್ಲ ಅಲ್ಲವೇ? ನಿಮ್ಮ ಜೊತೆಗಾತಿ ನಿಮ್ಮೊಂದಿಗೆ ಪ್ರಾಮಾಣಿಕವಾಗಿರಬೇಕು ಎಂದು ನೀವು ಬಯಸುವುದಾದರೆ ನೀವು ಮೊದಲು ಅವಳೊಂದಿಗೆ ಪ್ರಾಮಾಣಿಕವಾಗಿರಿ. ನೀವು ಅವಳೊಂದಿಗೆ ಮುಕ್ತವಾಗಿ ಇರುವುದು ನಿಮ್ಮಿಬ್ಬರ ವಿವಾಹ ಜೀವನದಲ್ಲಿ ಅವಳಿಗೆ ಸಿಗಬೇಕಾದ ಇನ್ನೊಂದು ಮೂಲಭೂತ ಅವಶ್ಯಕತೆಯಾಗಿದೆ. ಅವಳು ತನ್ನ ಪತಿ ತನ್ನೊಂದಿಗೆ ಮುಕ್ತವಾಗಿ ಇರಬೇಕು ಎಂಬುದನ್ನು ಯಾವಾಗಲೂ ಬಯಸುತ್ತಾಳೆ. ಮುಕ್ತವಾಗಿ ಇರುವುದೆಂದರೆ ಅವಳ ಪಾಲಿಗೆ ನೀವೇ ಅವಳ ಪ್ರಪಂಚ ಮತ್ತು ಅವಳು ಆ ಪ್ರಪಂಚದಲ್ಲಿ ವಾಸಿಸುವಂತೆ ಯೋಚಿಸುತ್ತಾಳೆ .ನಿಮ್ಮ ವೈವಾಹಿಕ ಜೀವನ ಯಶಸ್ವಿಯಾಗಬೇಕು ಮತ್ತು ನೀವು ಸಂತೋಷವಾಗಿರಬೇಕು ಎಂದು ಇಚ್ಚಿಸುವುದಾದರೆ ಮೊದಲು ನೀವು ಅವಳೊಂದಿಗೆ ನಿಮ್ಮ ಬಗ್ಗೆ ಎಲ್ಲ ವಿಷಯಗಳಲ್ಲೂ ಮುಕ್ತವಾಗಿರಬೇಕು. ದಿನಗಳು ಕಳೆದಂತೆ ಅವಳು ನಿಮ್ಮೊಂದಿಗೆ ಹೆಚ್ಚು ಪ್ರೀತಿಯಲ್ಲಿ ಬೀಳುತ್ತಾ ಹೋಗುತ್ತಾಳೆ.

4. ಹಣಕಾಸಿನ ಬದ್ಧತೆ

ವಿಲ್ಲರ್ಡ್ ಹಾರ್ಲೆ ಪ್ರಕಾರ, ಮದುವೆಯಾದ ಪ್ರತಿಯೊಬ್ಬ ಸ್ತ್ರೀ ತನ್ನ ಪತಿಯಿಂದ ಆರ್ಥಿಕ ಬದ್ಧತೆಯನ್ನು ನಿರೀಕ್ಷಿಸುತ್ತಾಳೆ.ತನ್ನ ಆರ್ಥಿಕತೆಗೆ ಸಂಬಂಧಿಸಿದಂತೆ ಯಾವ ವಿಷಯವಿದ್ದರೂ ತನ್ನ ಪತಿಯ ಬಳಿಗೆ ಮೊದಲು ಹೋಗಬೇಕೆಂದು ಇಚ್ಛಿಸುತ್ತಾಳೆ.ಆಕೆ ತನ್ನ ಪತಿಯಿಂದ ಬದ್ಧತೆಯನ್ನು ನಿರೀಕ್ಷಿಸುವುದು ಖಂಡಿತವಾಗಿಯೂ ಅವಶ್ಯಕವಾಗಿದೆ.ನಿಮ್ಮ ಪ್ರೀತಿಯ ಪತ್ನಿಯ ಜೊತೆಗೆ ಸಂತೋಷದ ವೈವಾಹಿಕ ಬದುಕನ್ನು ನಡೆಸಲು ನೀವು ಅವಳೊಂದಿಗೆ ಮಾನಸಿಕವಾಗಿ,ದೈಹಿಕವಾಗಿ ಮತ್ತು ಆರ್ಥಿಕವಾಗಿಯೂ ಬದ್ಧರಾಗಿರಬೇಕು. ಮದುವೆಯೆಂದರೆ ಹಣಕಾಸಿನ ಬದ್ಧತೆಯ ಅಗತ್ಯವಿರುತ್ತದೆ ಹಾಗಾಗಿ ವೈವಾಹಿಕ ಜೀವನವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಮತ್ತು ಸಂತೋಷವನ್ನು ಉಳಿಸಿಕೊಳ್ಳಲು ನಿಮ್ಮ ಸಂಗಾತಿಗೆ ಆ ಬದ್ಧತೆಯನ್ನು ನೀವು ನೀಡಬೇಕು.

5. ಕೌಟುಂಬಿಕ ಬದ್ಧತೆ

ಕುಟುಂಬದ ಬದ್ಧತೆ ಪ್ರತಿಯೊಬ್ಬ ಮಹಿಳೆಗೂ ತುಂಬಾ ಅವಶ್ಯಕವಾಗಿರುತ್ತದೆ.ಮಹಿಳೆಯರು ಹೆಚ್ಚಾಗಿ ಜನರೊಂದಿಗೆ ಚೆನ್ನಾಗಿ ಬೆರೆಯುತ್ತಾರೆ.ಆದ್ದರಿಂದ ಅವರು ಒಳ್ಳೆಯ ಕುಟುಂಬದಲ್ಲಿ ಇರಲು ಬಯಸುತ್ತಾರೆ.ಕೌಟುಂಬಿಕ ಬದ್ಧತೆ ಎನ್ನುವುದು ಪ್ರೀತಿ ಹಾಗು ಮದುವೆಯ ವಿಷಯಗಳಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ.ಇದು ಮಹಿಳೆಯರಿಗೆ ಮೊದಲ ಪ್ರಾಮುಖ್ಯತೆಯಾಗಿದೆ.ಒಂದು ವೇಳೆ ಇದು ಪೂರೈಕೆಯಾಗದೇ ಇದ್ದರೆ ವೈವಾಹಿಕ ಜೀವನ ಅಪಾಯದ ಅಂಚಿಗೆ ಹೋಗುತ್ತದೆ. ಇವು ಮಹಿಳೆಯರು ತಮ್ಮನ್ನು ಮದುವೆಯಾಗುವ ಪುರುಷರಿಂದ ಬಯಸುವ 5 ಪ್ರಮುಖ ವಿಷಯಗಳು. ನಿಮ್ಮ ವೈವಾಹಿಕ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳಿ ಹಾಗು ನಿಮ್ಮ ಜೀವನದಲ್ಲಿ ಸಂತೋಷವು ಹೇಗೆ ದುಪ್ಪಟ್ಟುಗೊಳ್ಳುತ್ತದೆ ಎಂಬುದನ್ನು ನೋಡಿ.ಈ ಲೇಖನವು ನಿಮಗೆ ಇಷವಾಗಿದ್ದರೆ , ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ.

Read more about: relationship love
English summary

Marriage Advice; What Do Women Need From Their Men?

Marriages are made upon mutual agreement between two individuals. In every marriage, the most required things are trust, love, respect and honesty. But even after giving these to the women in a marriage, men have found women to be unhappy. They seek answers that would satisfy their understanding of their women. In this article, we will talk about what women need from their men and why they need them.
X
Desktop Bottom Promotion