For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿಯ ಸಂಬಂಧ ಹಾಳು ಮಾಡುವ ಕಾಯಿಲೆ-'ಸೆಕ್ಸ್ ಭಯ'!!

|

ಮನುಷ್ಯರಿಗೆ ಎದುರಾಗುವ ಹಲವಾರು ಭಯಗಳಲ್ಲಿ ಕಾಮಭಯ ಅಥವಾ ಸಂಗಾತಿಯೊಂದಿಗೆ ಮಿಲನಗೊಳ್ಳಲು ಪಡುವ ಭಯವೂ ಒಂದು. ವೈದ್ಯವಿಜ್ಞಾನದಲ್ಲಿ ಇದಕ್ಕೆ ಎರೋಟೋಫೋಬಿಯಾ (Erotophobia) ಎಂದು ಕರೆಯುತ್ತಾರೆ. ಈ ಭಯವುಳ್ಳ ವ್ಯಕ್ತಿ ಕಾಮಕೂಟ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಕ್ರಿಯೆ ಅಥವಾ ಯೋಚನೆಯಿಂದಲೇ ಭಯಪಡುತ್ತಾರೆ. ಈ ಭಯವನ್ನು ಮೂಲಭಯವನ್ನಾಗಿಸಿ ವೈದ್ಯವಿಜ್ಞಾನ ಭಯದ ರೂಪಗಳನ್ನು ಆಧರಿಸಿ ಉಪವರ್ಗಗಳನ್ನಾಗಿಯೂ ವಿಂಗಡಿಸಿದೆ. ಆ ಪ್ರಕಾರ ಈ ಭಯದಲ್ಲಿಯೂ ವ್ಯತಿರಿಕ್ತತೆಗಳನ್ನು ಕಾಣಬಹುದು.

ಆದರೆ ಎಲ್ಲದಲ್ಲಿಯೂ ಸಮಾನವಾದ ಅಂಶವೆಂದರೆ ಇಬ್ಬರು ವ್ಯಕ್ತಿಗಳ ನಡುವಣ ದೈಹಿಕ ಸಂಪರ್ಕದಲ್ಲಿ ಎದುರಾಗುವ ಭಯವೇ ಆಗಿದೆ. ಈ ಭಯ ದಂಪತಿಗಳ ನಡುವೆ ಆತ್ಮೀಯ ಸಂಬಂಧ ಏರ್ಪಡಿಸಲು, ವಿವಾಹ ಸಂಬಂಧ ಕುದುರಿಸಲು ಅಥವಾ ಬೇರಾವುದೇ ಆತ್ಮೀಯ ಸಂಬಂಧಗಳನ್ನು ಹೊಂದಲೂ ತಡೆಯೊಡ್ಡುತ್ತದೆ. ಈ ಭಯವನ್ನು ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು, ಆದರೆ ಇದಕ್ಕೆ ದೀರ್ಘಾವಧಿ ತಗಲುತ್ತದೆ. ಬನ್ನಿ, ಕಾಮಭಯದ ಉಪವರ್ಗಗಳನ್ನು ನೋಡೋಣ....

ದುರ್ಬಲನಾಗುವ ಭಯ (Fear of vulnerability)

ದುರ್ಬಲನಾಗುವ ಭಯ (Fear of vulnerability)

ಈ ಭಯ ಇರುವ ವ್ಯಕ್ತಿಗಳು ಏನಾದರೂ ತನ್ನ ಸ್ವಸಾಮರ್ಥ್ಯವನ್ನು ಎದುರಿನವರು ಕಂಡುಕೊಂಡುಬಿಟ್ಟರೆ ಹಾಗೂ ತನ್ನನ್ನು ಹೀಯಾಳಿಸಿದರೆ, ಅಥವಾ ತನ್ನನ್ನು ಇಷ್ಟಪಡದೇ ಹೋದರೆ ಎಂಬ ಭಾರೀ ಭಯವನ್ನು ಹೊಂದಿರುತ್ತಾರೆ. ಈ ಬಗೆಯ ಭಯವುಳ್ಳ ವ್ಯಕ್ತಿಗಳು ಯಾರೊಂದಿಗೂ ಆತ್ಮೀಯತೆಯನ್ನು ಸಾಧಿಸಲು ವಿಫಲರಾಗುತ್ತಾರೆ ಹಾಗೂ ಈ ಮೂಲಕ ಮಾನವ ಸಹಜ ಸಂಬಂಧಗಳನ್ನೂ ಕಳೆದುಕೊಳ್ಳುತ್ತಾರೆ. ಒಂದು ವೇಳೆ ಯಾವುದಾದರೊಂದು ಬಂಧನಕ್ಕೆ ಒಳಗಾದರೂ ಈ ಭಯ ಲೈಂಗಿಕ ಅಥವಾ ಲೈಂಗಿಕವಲ್ಲದ ಯಾವುದೇ ಸಂಬಂಧದಲ್ಲಿ ಹುಳಿ ಹಿಂಡಬಹುದು. ಈ ಭಯವಿರುವ ವ್ಯಕ್ತಿಗಳು ಎದುರಿನವರು ತಮ್ಮನ್ನು ಪರಿತ್ಯಕ್ತಗೊಳಿಸುತ್ತಾರೋ ಅಥವಾ ತಮ್ಮನ್ನು ಪರಿಪೂರ್ಣವಾಗಿ ಆವರಿಸಿಕೊಂಡುಬಿಡುತ್ತಾರೋ ಎಂಬ ದ್ವಂದ್ವದಲ್ಲಿಯೇ ಇರುತ್ತಾರೆ. ಕಾಮಭಯವಿರುವ ವ್ಯಕ್ತಿಗಳಲ್ಲಿ ಹೆಚ್ಚಿನವರಲ್ಲಿ ಸಾಮಾನ್ಯವಾಗಿ ಈ ಬಗೆಯ ಭಯ ಕಂಡುಬರುತ್ತದೆ.

ಪರಿತ್ಯಕ್ತಗೊಳ್ಳುವ ಭಯ (Fear of abandonment)

ಪರಿತ್ಯಕ್ತಗೊಳ್ಳುವ ಭಯ (Fear of abandonment)

ಮನೋವಿಜ್ಞಾನದಲ್ಲಿ ಅರಿತುಕೊಳ್ಳಲು ಈ ವಿಷಯ ಅತಿ ಕ್ಲಿಷ್ಟಕರವಾಗಿದೆ. ಈ ಭಯವುಳ್ಳ ವ್ಯಕ್ತಿಗೆ ಈ ಭಯವಿದೆಯೋ ಇಲ್ಲವೋ ಎಂದು ಕಂಡುಕೊಳ್ಳುವುದೇ ತುಂಬಾ ತ್ರಾಸಕರ, ಏಕೆಂದರೆ ಈ ವ್ಯಕ್ತಿಗಳು ಸಾಮಾನ್ಯರಿಗೂ ಈ ಭಯವುಳ್ಳವರಿಗೂ ನಡುವಣ ಗಡಿಯಲ್ಲಿ ತಮ್ಮ ಭಯದ ಸೂಚನೆಗಳನ್ನು ಪ್ರಕಟಿಸುತ್ತಾರೆ. ಈ ಭಯವುಳ್ಳ ವ್ಯಕ್ತಿಗಳು ಭಿನ್ನ ಬಗೆಯ ಯೋಚನಾಲಹರಿಗಳನ್ನು ಹೊಂದಿರುತ್ತಾರೆ ಹಾಗೂ ಹಿಂದೇಟುಹಾಕುವ ವರ್ತನೆಯನ್ನು ಪ್ರಕಟಿಸುತ್ತಾರೆ. ಈ ಹಿಂದೇಟಿನಿಂದ ಇವರು ಯಾರೊಂದಿಗೂ ಬೆರೆಯಲು ಸಾಧ್ಯವಾಗದೇ, ನಿಕಟವರ್ತನೆ ಪಡೆಯಲು ಸಾಧ್ಯವಾಗದೇ ಸಂಬಂಧಗಳಿಂದಲೇ ವಂಚಿತರಾಗುತ್ತಾರೆ. ಪರಿಣಾಮವಾಗಿ ಇವರು ಎಲ್ಲರಿಂದ ಪರಿತ್ಯಕ್ತಗೊಳ್ಳುವ ಭಯದಿಂದ ನರಳುತ್ತಾರೆ. ಈ ಬಗೆಯ ಭಯ ಆತಂಕಕಾರಿಯಾಗಿದ್ದು ಭೀಕರರೂಪ ತಳೆಯುವ ಸಾಧ್ಯತೆ ದಟ್ಟವಾಗಿರುತ್ತದೆ. ಈ ಭಯವುಳ್ಳ ವ್ಯಕ್ತಿಗಳು ತಮ್ಮೊಂದಿಗೆ ಸಂವಹನ ಅಥವಾ ಸಂಬಂಧವನ್ನು ನಡೆಸುವ ವಕ್ತಿಗಳನ್ನು ದೂರ ಹೋಗಲು ಬಿಡುತ್ತಾರೆ ಹಾಗೂ ತಾವೇ ಸ್ವತಃ ಪರಿತ್ಯಕ್ತರಾಗುತ್ತಾರೆ ಹಾಗೂ ಇವರು ಯಾರನ್ನೂ ತಮ್ಮ ಹತ್ತಿರ ಬರಲು ಬಿಡದೇ ದಿನಗಳೆದಂತೆ ಹೆಚ್ಚು ಹೆಚ್ಚು ಒಬ್ಬಂಟಿಯಾಗುತ್ತಾ ಹೋಗುತ್ತಾರೆ.

ಅನ್ಯೋನ್ಯತೆಗೆ ಒಳಗಾಗುವ ಭಯ (Fear of intimacy)

ಅನ್ಯೋನ್ಯತೆಗೆ ಒಳಗಾಗುವ ಭಯ (Fear of intimacy)

ಯಾವುದೇ ವ್ಯಕ್ತಿಗಳೊಂದಿಗೆ ಬೆರೆತಾಗಲೂ ಇದು ಅನ್ಯೋನ್ಯತೆಗೆ ದಾರಿಯಾಗಬಹುದೆಂದು ಈ ವ್ಯಕ್ತಿಗಳು ಭಯಪಡುತ್ತಾರೆ. ಈ ಅನ್ಯೋನ್ಯತೆಯಲ್ಲಿ ದೈಹಿಕ ಸಂಪರ್ಕ ಅಗತ್ಯವಿಲ್ಲದೇ ಹೋಗಬಹುದು ಆದರೆ ಈ ವ್ಯಕ್ತಿಗಳೊಂದಿಗಿನ ಆತ್ಮೀಯತೆ ಹಾಗೂ ಭಾವನಾತ್ಮಕ ಸಂಬಂಧಗಳು ಇತರ ವ್ಯಕ್ತಿಯೊಂದಿಗಿನ ದೈಹಿಕ ಸಂಬಂಧದ ಸಮಯದಲ್ಲಿ ಮನದ ಮೇಲೆ ಆವರಿಸಿ ಆ ವ್ಯಕ್ತಿಗೆ ಮೋಸ ಮಾಡುತ್ತಿದ್ದೇನೆಂಬ ಭಯ ಆವರಿಸಬಹುದು.

ನಗ್ನರಾಗಲು ಅಡ್ಡಿಯಾಗುವ ಭಯ (Gymnophobia)

ನಗ್ನರಾಗಲು ಅಡ್ಡಿಯಾಗುವ ಭಯ (Gymnophobia)

ಈ ಭಯ ನಗ್ನತೆಗೆ ಸಂಬಂಧಿಸಿದೆ. ಈ ಭಯದಲ್ಲಿ ಎರಡು ಬಗೆಗಳಿವೆ. ಮೊದಲನೆಯದು ಇವರು ಯಾರೂ ತಮ್ಮನ್ನು ನಗ್ನರಾಗಿ ನೋಡಬಾರದು ಎಂಬ ಭಯವನ್ನು ಹೊಂದಿರುತ್ತಾರೆ ಹಾಗೂ ಎರಡನೆಯದಾಗಿ ಸ್ವತಃ ನಗ್ನರಾಗಲು ಇಷ್ಟಪಡದೇ ಭಯಪಡುತ್ತಾರೆ. ಈ ಭಯದಲ್ಲಿ ದೇಹದ ಆಕಾರದ ಬಗ್ಗೆ ಇರುವ ಭಯ, ತಮ್ಮ ಶರೀರ ಅಸಮರ್ಪಕವಾಗಿ ಪರಿಗಣಿಸಲ್ಪಡಬಹುದು ಎಂಬ ಭಯಗಳೂ ಸೇರಿವೆ. ಆದರೆ ಈ ಭಯವುಳ್ಳ ವ್ಯಕ್ತಿಗಳು ಲೈಂಗಿಕ ಸಂಬಂಧವನ್ನು ಇಷ್ಟಪಡುವುದಿಲ್ಲವೆಂದಲ್ಲ, ಆದರೆ ತಮ್ಮ ಶರೀರದ ಆಕಾರದ ಬಗ್ಗೆ ಈ ವ್ಯಕ್ತಿಗಳು ತೀರಾ ಅಸುರಕ್ಷಿತ ಭಾವನೆಯನ್ನು ಹೊಂದಿರುತ್ತಾರೆ.

ಚುಂಬನದ ಭಯ (Philemaphobia)

ಚುಂಬನದ ಭಯ (Philemaphobia)

ಈ ವ್ಯಕ್ತಿಗಳು ಚುಂಬನಕ್ರಿಯೆಗೆ ಭಯಪಡುತ್ತಾರೆ. ನಿರುಪದ್ರವಿಯದ ಸರಳ ಚುಂಬನಕ್ಕೂ ಹೆದರುವುದೇ ಎಂದು ಹೆಚ್ಚಿನವರು ಚಕಿತರಾಗಬಹುದು. ಆದರೆ ಈ ಭಯವೂ ಕಾಮಭಯದ ಒಂದು ಪ್ರವರ್ಗವೇ ಆಗಿದ್ದು ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಬಾಧಿಸುತ್ತದೆ. ವಾಸ್ತವವಾಗಿ ಈ ಭಯವಿರುವ ವ್ಯಕ್ತಿಗಳು ಸ್ವಚ್ಛತೆಗೆ ಅತಿ ಕಾಳಜಿ ನೀಡುವ ವ್ಯಕ್ತಿಗಳಾಗಿದ್ದು ಎದುರಿನವ ಬಾಯಿಯಿಂದ ಹೊರಡುವ ದುರ್ವಾಸನೆ ಅಥವಾ ಅವರ ಬಾಯಿಯಿಂದ ಹರಡಬಹುದಾದ ಸೋಂಕುಕಾರಕ ಕ್ರಿಮಿಗಳ ಬಗ್ಗೆಯೇ ಹೆಚ್ಚು ವ್ಯಾಕುಲರಾಗಿರುತ್ತಾರೆ.

ಸ್ಪರ್ಶಭಯ (Haphephobia)

ಸ್ಪರ್ಶಭಯ (Haphephobia)

ಈ ಭಯವುಳ್ಳ ವ್ಯಕ್ತಿಗಳು ಇತರರು ತಮ್ಮನ್ನು ಸ್ಪರ್ಶಿಸುವುದನ್ನು ಇಷ್ಟಪಡುವುದಿಲ್ಲ. ಈ ಭಯವಿರುವ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಬಂಧ ಪಡೆಯಲು ಈ ಭಯ ಭಾರೀ ದೊಡ್ಡ ತೊಡಕಾಗಿ ಪರಿಣಮಿಸುತ್ತದೆ. ಈ ಭಯವಿರುವ ವ್ಯಕ್ತಿಗಳ ಪಕ್ಕದಲ್ಲಿ ನಡೆದುಹೋದರೂ ಇವರು ದೇಹದ ಒಳಗಿನಿಂದ ಅವ್ಯಕ್ತ ನೋವು ಅನುಭವಿಸುತ್ತಾರೆ ಹಾಗೂ ಅತೀವ ಭಯಕ್ಕೊಳಗಾಗುತ್ತಾರೆ. ಈ ಭಯವನ್ನು ಗುಣಪಡಿಸಬಹುದಾದರೂ ಇದಕ್ಕೆ ಅಪಾರ ತಾಳ್ಮೆ ಹಾಗೂ ಸಮಯಾವಧಿ ತಗಲುತ್ತದೆ.

ಲೈಂಗಿಕ ಕ್ರಿಯೆಗೆ ಒಗ್ಗದ ಭಯ (Paraphobia)

ಲೈಂಗಿಕ ಕ್ರಿಯೆಗೆ ಒಗ್ಗದ ಭಯ (Paraphobia)

ಈ ಬಗೆಯ ಭಯ ಅತ್ಯಂತ ಜಟಿಲವಾಗಿದ್ದು ಈ ವ್ಯಕ್ತಿಗಳು ಲೈಂಗಿಕ ಸಂಪರ್ಕ ಹೊಂದಲು ಭಾರೀ ಭಯ ಪಡುತ್ತಾರೆ. ಈ ಭಯ ತನ್ನಿಂತಾನೇ ತನ್ನ ಮನದಲ್ಲಿಯೇ ಕಲ್ಪಿಸಿಕೊಂಡು ಬಂದಿದ್ದಿರಬಹುದು ಅಥವಾ ಯಾವುದೋ ಘಟನೆಯಿಂದ ಭಾರೀ ಮಾನಸಿಕ ಆಘಾತಕ್ಕೆ ಒಳಗಾಗಿ ತನ್ನನ್ನು ತಾನೇ ಈ ಭಯಕ್ಕೆ ಒಳಪಡಿಸಿಕೊಂಡಿರಬಹುದು. ಆದರೆ ಈ ಭಯವುಳ್ಳ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಪರ್ಕ ಸಾಧ್ಯವೇ ಇಲ್ಲ ಎನ್ನಲಾಗದು. ಈ ಭಯವುಳ್ಳ ವ್ಯಕ್ತಿಗಳು ತಮ್ಮ ಜೀವನಸಂಗಾತಿಯೊಂದಿಗೆ ಮಾತ್ರವೇ ಕೊಂಚ ಬಿಗುತನ ಸಡಿಲಿಸಿ ಹತ್ತು ಹಲವು ಕರಾರುಗಳ ಬಳಿಕ ಮಾತ್ರವೇ ಲೈಂಗಿಕ ಸಂಪರ್ಕಕ್ಕೆ ಮುಂದಾಗುತ್ತಾರೆ. ಕೆಲವರಲ್ಲಿ ಈ ಭಯ ಎಷ್ಟು ಹೆಚ್ಚಾಗಿರುತ್ತದೆ ಎಂದರೆ ಲೈಂಗಿಕ ಸಂಪರ್ಕದ ಮೂಲಕ ತಮ್ಮನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬ ಭಯ ಇವರನ್ನು ಲೈಂಗಿಕ ಸಂಪರ್ಕದಿಂದಲೇ ದೂರವಾಗಿಸುತ್ತದೆ.

ಮಿಲನಭಯ (Genophobia)

ಮಿಲನಭಯ (Genophobia)

ಈ ಭಯ ಹೊಂದಿರುವ ವ್ಯಕ್ತಿ ಲೈಂಗಿಕ ಕ್ರಿಯೆಗೆ ಒಳಗಾಗಲು ಭಯಪಡುತ್ತಾರೆ. ಈ ವ್ಯಕ್ತಿಗಳು ತಮ್ಮ ಸಂಗಾತಿ ಹಾಗೂ ಇತರ ಆತ್ಮೀಯರೊಂದಿಗೆ ಎಲ್ಲರಂತೆ ಸ್ನೇಹಪರ ಸಂಬಂಧವನ್ನು ಹೊಂದಿರುತ್ತಾರೆ ಹಾಗೂ ತಮ್ಮಲ್ಲಿ ಈ ಭಯವಿರುವ ಯಾವುದೇ ಸೂಚನೆಯನ್ನು ನೀಡದವರಾಗಿರುತ್ತಾರೆ. ಆದರೆ ಮಿಲನದ ಸಂದರ್ಭ ಬಂದಾಗ ಮಾತ್ರ ಇದು ಇವರಿಗೆ ಅತೀವ ಕಿರಿಕಿರಿ ಎನಿಸುತ್ತದೆ. ಇವರು ಚುಂಬನ, ಅಪ್ಪುಗೆ, ಒಟ್ಟಾರೆ ಯಾವುದೇ ಕ್ರಿಯೆಯನ್ನು ಇಷ್ಟಪಟ್ಟು ಭಾಗಿಯಾದರೂ ಸಂಭೋಗಕ್ಕೆ ಮಾತ್ರ ಮುಂದಾಗುವುದಿಲ್ಲ. ಈ ಭಯವನ್ನು ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದರೂ ಅಪಾರ ಸಮಯ ಹಾಗೂ ತಾಳ್ಮೆ ಅಗತ್ಯವಾಗಿದೆ.

ಒಂದು ವೇಳೆ ನಿಮ್ಮ ಸಂಗಾತಿ ಯಾವುದೇ ಬಗೆಯ ಕಾಮಭಯದಿಂದ ಬಾಧೆಗೊಳಗಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ, ಇಂದು ಎಲ್ಲಾ ಬಗೆಯ ಭಯಗಳಿಗೂ ಸೂಕ್ತ ಚಿಕಿತ್ಸೆಯಿದೆ ಹಾಗೂ ಈ ಕ್ಷೇತ್ರದಲ್ಲಿ ನುರಿತ ವ್ಯಕ್ತಿಗಳನ್ನು ಭೇಟಿಯಾಗಿ ಎಲ್ಲಾ ಮಾಹಿತಿಗಳನ್ನು ಒದಗಿಸಿ ಸಲಹೆಗಳನ್ನು ಪಾಲಿಸುವ ಮೂಲಕ ಸಹಜ ಜೀವನ ನಡೆಸಲು ಖಂಡಿತಾ ಸಾಧ್ಯವಿದೆ.

ಮಿಲನಭಯ (Genophobia)

ಮಿಲನಭಯ (Genophobia)

ಕಾಮಭಯ ಹುಟ್ಟಿದಾಗಿನಿಂದಲೇ ಬರುವುದಿಲ್ಲ, ಬದಲಿಗೆ ಹಲವಾರು ಸಂಗತಿಗಳು ಈ ಭಯಕ್ಕೆ ಕಾರಣವಾಗುತ್ತವೆ. ಯಾವುದಾದರೂ ಲೈಂಗಿಕ ದೌರ್ಜನ್ಯದ ಘಟನೆಯಲ್ಲಿ ಸ್ವತಃ ಪೀಡಿತನಾಗಿದ್ದರೆ ಅಥವಾ ಈ ಕ್ರಿಯೆಯನ್ನು ನೋಡಿದ ಸಾಕ್ಷಿಯಾಗಿದ್ದರೆ ಇದು ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನುಂಟು ಮಾಡಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಧಾರ್ಮಿಕ ಕಟ್ಟುಪಾಡುಗಳೂ ಈ ಭಯಕ್ಕೆ ಕಾರಣವಾಗಬಹುದು, ಸಾಂಸ್ಕೃತಿಕ ಸಿದ್ದಾಂತಗಳಿಗೆ ಕಟ್ಟುಬಿದ್ದು ಈ ಭಯ ತಳೆದಿರಬಹುದು. ಚಿಕ್ಕಂದಿನಲ್ಲಿ ಕಾಮಕ್ರಿಯೆ ತಪ್ಪು ಎಂದೆಲ್ಲಾ ಯಾರೋ ಹೇಳಿದುದನ್ನೇ ನಿಜವೆಂದು ನಂಬಿ ತನ್ನ ವಯೋಸಹಜ ಲೈಂಗಿಕ ಬಯಕೆಗಳನ್ನು ಅದುಮಿಟ್ಟು ಈ ಭಯಕ್ಕೆ ಒಳಗಾಗಿರಬಹುದು. ಕೆಲವು ಸಂದರ್ಭಗಳಲ್ಲಿ ತಾನು ಲೈಂಗಿಕ ಕ್ರಿಯೆಯಲ್ಲಿ ಅಗತ್ಯವಿದ್ದಷ್ಟು ಸಾಮರ್ಥ್ಯವನ್ನು ಪ್ರಕಟಿಸಲಾಗದೇ ಹೋದರೆ, ವಿಫಲಗೊಂಡರೆ ಎಂಬ ಭಯ ಮನಸ್ಸನ್ನು ಆವರಿಸಿರುತ್ತದೆ. ಕೆಲವರಿಗೆ ಲೈಂಗಿಕ ಕ್ರಿಯೆಯಿಂದ ಗಾಯಗೊಳ್ಳುವ ಭೀತಿಯೂ ಇರುತ್ತದೆ.ಕಾಮಭಯವನ್ನು ದೂರವಾಗಿಸಲು ಕೆಲವಾರು ಬಗೆಯ ಚಿಕಿತ್ಸೆಗಳು ಲಭ್ಯವಿದೆ. ಇದರಲ್ಲಿ ಪ್ರಮುಖವಾಗಿ: ಅರಿವಿನ ವರ್ತನೆಯ ಚಿಕಿತ್ಸೆ (Cognitive Behaviour Therapy), ವಶೀಕರಣ ಚಿಕಿತ್ಸೆ (Hypnotherapy), ಗುಂಪು ಚಿಕಿತ್ಸೆ (Group Therapy), ಮನೋಚಿಕಿತ್ಸೆ (Psychotherapy), ಸಾಮರ್ಥ್ಯ ಮನೋಚಿಕಿತ್ಸೆ (Energy Psychology), ಅರಿವಿನ ಚಿಕಿತ್ಸೆ (Cognitive Therapy), ಔಷಧಿಗಳು,(Medication), ಧ್ಯಾನ (Meditation), ಒಳ ಉತ್ಸಾಹ ಪ್ರಕಟಣಾ ಚಿಕಿತ್ಸೆ (In Vivo Exposure) ಹಾಗೂ ನಿರಾಳಗೊಳ್ಳಲು ರೂಢಿಸುವ ಅಭ್ಯಾಸ (Habit Strategies To Relax) ಮೊದಲಾದವುಗಳನ್ನು ವೈದ್ಯರು ಪ್ರಯೋಗಿಸುತ್ತಾರೆ.

ಮಿಲನಭಯ (Genophobia)

ಮಿಲನಭಯ (Genophobia)

ಒಂದು ವೇಳೆ ನಿಮ್ಮ ಸಂಗಾತಿ ಅಥವಾ ನಿಮ್ಮ ಆತ್ಮೀಯರಲ್ಲಿ ಯಾರಿಗಾದರೂ ಈ ಭಯ ಎದುರಾಗಿದ್ದರೆ ಇವರನ್ನು ವೈದ್ಯರು ಹಾಗೂ ಮನೋಚಿಕಿತ್ಸಕರಲ್ಲಿ ಸೂಕ್ತ ಸಮಾಲೋಚನೆಗೆ ಒಳಪಡಿಸಿ ಅಗತ್ಯವಿರುವ ಎಲ್ಲಾ ಬಗೆಯ ಸಹಕಾರವನ್ನು ಒದಗಿಸಿ ಹಾಗೂ ಶೀಘ್ರ ಗುಣವಾಗುತ್ತದೆ ಎಂದು ಹುರಿದುಂಬಿಸಿ. ಚಿಕಿತ್ಸೆ ನಡೆಯುವಷ್ಟೂ ಕಾಲ ತಾಳ್ಮೆ ವಹಿಸಿ, ಕಾಮಭಯ ಪೂರ್ಣವಾಗಿ ಗುಣಪಡಿಸಲು ಸಾಧ್ಯವಾದ ಕಾಯಿಲೆಯಾಗಿದೆ.

English summary

is-your-partner-having-fear-of-sex-erotophobia-facts-to-know

Erotophobia is the fear of sex. It is an abnormal fear towards sexual feelings and expressing it in physical form. It is the irrational fear of anything intimate and sexual and its activities. It is usually seen that there are many kinds of phobias associated with it. People suffering have varied symptoms, all related to physical activities between two individuals. It makes you avoid romantic relationships, marriages, and any other form of intimate relationship. It is curable \but takes ample amount of time. Phobias related to Erotophobia are...
X
Desktop Bottom Promotion