For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಯಾವತ್ತೂ ಆಶಾವಾದಿಯಾಗಿ ಬದುಕಲು ಕಲಿಯಬೇಕು

By Hemanth
|

ಜೀವನದಲ್ಲಿ ಆಶಾವಾದಿಯಾಗಿದ್ದರೆ ಏನು ಬೇಕಿದ್ದರೂ ಸಾಧಿಸಬಹುದು ಎನ್ನುವ ಮಾತಿದೆ. ನೀವು ಸಂಬಂಧದಲ್ಲಿ ಕೂಡ ಆಶಾವಾದ ಇಟ್ಟುಕೊಳ್ಳಬೇಕು. ಆಗ ಜೀವನವು ಸುಂದರವಾಗುವುದು. ಇದರಿಂದ ಜೀವನದಲ್ಲಿ ಮುಂದೆ ಸಾಗಲು ನಿಮಗೆ ನೆರವಾಗುವುದು. ಜೀವನದಲ್ಲಿ ಯಾವಾಗಲೂ ನಿರಾಶೆಯಿಂದ ಇದ್ದರೆ ಆಗ ಸಂಬಂಧವು ಸರಿಯಾಗಿರಲ್ಲ. ನೀವು ಆಶಾವಾದಿಯಾಗಿದ್ದುಕೊಂಡು ಜೀವನದಲ್ಲಿ ಪ್ರೀತಿ ಹಾಗೂ ಸಂಬಂಧವನ್ನು ವೃದ್ಧಿಸುವುದು ಹೇಗೆ ಎಂದು ಈ ಲೇಖನದ ಮೂಲಕ ತಿಳಿಯಿರಿ.

ಸಂಬಂಧದಲ್ಲಿ ಯಾವಾಗಲೂ ಧನಾತ್ಮಕವಾಗಿರುವುದು ತುಂಬಾ ಕಠಿಣ ಕೆಲಸ. ಆದರೆ ಧನಾತ್ಮಕ ಶಕ್ತಿ ಪಡೆಯಲು ನೀವು ಆಶಾವಾದಿಯಾಗಿರಬೇಕು. ನೀವು ನಂಬುವ, ಗೌರವಿಸುವ ಮತ್ತು ಪ್ರೀತಿಸುವ ವ್ಯಕ್ತಿಯೊಂದಿಗೆ ಇರುವುದೇ ಸಂಬಂಧ. ನಿಮ್ಮ ತುಂಬಾ ಕಠಿಣ ಸಮಯದಲ್ಲೂ ಅವರು ನಿಮ್ಮೊಂದಿಗೆ ಇರುವರು. ಯಾರನ್ನಾದರೂ ನೀವು ಪ್ರೀತಿಸುತ್ತಿದ್ದರೆ ಆಗ ನೀವು ಎಲ್ಲಾ ಹಿಂಜರಿಕೆಯನ್ನು ಬಿಟ್ಟು ನಿಮ್ಮ ಮನಸ್ಸಿನಿಂದ ಮಾತನಾಡುತ್ತೀರಿ. ಪ್ರತಿಯೊಬ್ಬರು ಕೂಡ ಒಳ್ಳೆಯ ಸಂಬಂಧ ಬೇಕೆಂದು ಬಯಸುವರು. ಆದರೆ ಪರಿಪೂರ್ಣವಾಗಿರುವ ಸಂಬಂಧವು ಪ್ರತಿಯೊಬ್ಬರಿಗೂ ಸಿಗುವುದಿಲ್ಲ.

ways to increase love in relationship

ಪ್ರತಿಯೊಬ್ಬರ ಮನೆಯ ದೋಸೆ ತೂತು ಎನ್ನುವಂತೆ ಪ್ರತಿಯೊಂದು ಸಂಬಂಧದಲ್ಲೂ ಏನಾದರೊಂದು ಸಮಸ್ಯೆಗಳು ಇದ್ದೇ ಇರುತ್ತದೆ. ಆದರೂ ಹೆಚ್ಚಿನ ಸಂಬಂಧಗಳು ಹಾಗೆ ಬದುಕಿ ಉಳಿಯುವುದು. ಇದು ಹೇಗೆ ಸಾಧ್ಯ? ಯಾಕೆಂದರೆ ಸಂಬಂಧದ ಬಗ್ಗೆ ನಾವು ಆಶಾವಾದಿಯಾಗಿರುವುದೇ ಇದಕ್ಕೆ ಕಾರಣವಾಗಿದೆ.

ಕೆಲವು ಜನರಿಗೆ ಆಶಾವಾದವೆನ್ನುವುದು ದುರ್ಬಲತೆ ಇದ್ದಂತೆ. ಇದರಿಂದ ವಿಶ್ವವನ್ನು ಅದು ಇದ್ದಂತೆ ನೋಡಲು ಸಾಧ್ಯವಾಗಲ್ಲ ಎನ್ನುವುದು ಅವರ ಭಾವನೆ. ಜೀವನದ ಸತ್ಯವನ್ನು ಮುಚ್ಚಿಟ್ಟುಕೊಂಡು ಬೇರೇನೋ ಹುಡುಕುವುದು. ಆಶಾವಾದಿಯಾಗಿದ್ದರೆ ಸಂಬಂಧವನ್ನು ಉಳಿಸಿಕೊಳ್ಳಬಹುದು. ಆಶಾವಾದಿಯಾಗಿದ್ದರೆ ನಿಮ್ಮ ಜೀವನವು ಪ್ರತಿನಿತ್ಯವು ಬಲವಾಗುತ್ತಾ ಸಾಗುವುದು. ಸಂಬಂಧವು ಬಲಗೊಳ್ಳುವುದು ಮತ್ತು ಪ್ರೀತಿ ಹೆಚ್ಚುವುದು.

1.ಭಾವನೆಗಳನ್ನು ಹೊರಹಾಕಿ

ಆಶಾವಾದಿಗಳಿಗೆ ಯಾವಾಗಲೂ ಲೋಟವು ಅರ್ಧ ತುಂಬಿರುವುದು. ಜೀವನದಲ್ಲಿ ಎಷ್ಟೇ ಕಠಿಣ ಪರಿಸ್ಥಿತಿಯಾದರೂ ಆಶಾವಾದಿಯಾಗಿರುವಾತ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸಂಬಂಧ ಉಳಿಸಿಕೊಳ್ಳುತ್ತಾನೆ. ಸಂಗಾತಿಯಲ್ಲಿ ಒಬ್ಬರು ಆಶಾವಾದಿಯಾಗಿದ್ದರೆ ಆಗ ನಕಾರಾತ್ಮಕತೆಗೆ ಪ್ರವೇಶವಿರುವುದಿಲ್ಲ. ಜೀವನದಲ್ಲಿ ಒಬ್ಬ ಸಂಗಾತಿಯು ತುಂಬಾ ಕಠಿಣ ಪರಿಸ್ಥಿತಿಯನ್ನು ಎದುರಿಸಿದರೆ ಆಗ ಆಶಾವಾದಿಯಾಗಿರುವ ಮತ್ತೊಬ್ಬ ಸಂಗಾತಿಯು ಎಲ್ಲವನ್ನು ಸಮತೋಲದಲ್ಲಿ ಇಡಬಹುದು.

2.ನಂಬಿಕೆಯ ವಾತಾವರಣ

ಆಶಾವಾದಿಯು ಪ್ರತಿಯೊಂದು ಸಂದರ್ಭದ ಒಳ್ಳೆಯ ಭಾಗವನ್ನು ನೋಡಲು ಬಯಸುತ್ತಾನೆ. ಆಶಾವಾದಿಗಳು ತಮ್ಮ ಸಂಗಾತಿ ಮೇಲಿನ ನಂಬಿಕೆ ಕಳೆದುಕೊಳ್ಳುವುದಿಲ್ಲ ಮತ್ತು ಅವರು ಕೂಡ ಇದೇ ರೀತಿಯಲ್ಲಿರುವರು. ಇದು ಸಂಬಂಧದಲ್ಲಿ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವುದು.

3.ಸಂತೋಷ ಉಳಿಯುವುದು

ನಕರಾತ್ಮಕತೆ ಮೀರಿ ನಂಬಿಕೆ ಇಟ್ಟುಕೊಳ್ಳುವುದು ಮಾತ್ರವಲ್ಲದೆ ಆಶಾವಾದಿಗಳು ಪ್ರತಿಯೊಂದು ಕ್ಷಣದಲ್ಲೂ ಸಂತೋಷವನ್ನು ಹಂಚಿಕೊಳ್ಳುವರು. ಸಂಬಂಧದಲ್ಲಿ ನಂಬಿಕೆ ಎನ್ನುವುದು ಇರುವಾಗ ಸಂತೋಷವು ಸಂಗಾತಿಗಳ ಆತ್ಮದಲ್ಲಿ ಉಳಿಯುವುದು ಮತ್ತು ದಿನ ಸಾಗಿದಂತೆ ಸಂತೋಷವು ಹೆಚ್ಚಾಗುತ್ತಾ ಹೋಗುವುದು.

4.ಪ್ರೀತಿ ಉಕ್ಕಿ ಹರಿಯುವುದು

ಒಬ್ಬ ವ್ಯಕ್ತಿಯ ಮೇಲೆ ನಿಮಗೆ ನಂಬಿಕೆ ಬಂದರೆ ಆಗ ಆ ವ್ಯಕ್ತಿಯನ್ನು ನೀವು ಪ್ರೀತಿಸಲು ಆರಂಭಿಸುತ್ತೀರಿ. ಸಂಬಂಧದ ಅಡಿಪಾಯಕ್ಕೆ ನಂಬಿಕೆ ಎನ್ನುವುದು ಅತೀ ಅಗತ್ಯವಾಗಿ ಬೇಕೇಬೇಕು. ಆಶಾವಾದಿ ವ್ಯಕ್ತಿಗಳು ಪ್ರತಿಯೊಂದರಲ್ಲೂ ಬೆಳಕನ್ನು ಕಾಣುವರು ಮತ್ತು ಇದರಿಂದ ಅವರಲ್ಲಿ ಪ್ರೀತಿ ಹೆಚ್ಚಾಗುವುದು.

5.ಸಂಕಷ್ಟದ ಸಮಯ ಕಳೆಯುವುದು

ಯಾವುದೇ ಪರಿಸ್ಥಿತಿಯನ್ನು ಅದನ್ನು ನಿಭಾಯಿಸಿದ ರೀತಿಯಲ್ಲಿ ಅದು ಕೆಟ್ಟದು ಅಥವಾ ಒಳ್ಳೆಯದು ಎಂದು ಹೇಳಬಹುದು. ನೀವು ನಿರಾಶವಾದಿಯಾಗಿದ್ದರೆ ನೀವು ಆ ಪರಿಸ್ಥಿತಿಯಲ್ಲಿ ಬೆಳಕನ್ನು ಕಾಣುವುದಿಲ್ಲ ಮತ್ತು ಪ್ರತಿಯೊಂದು ನಿಮಗೆ ಮಬ್ಬಾಗಿಯೇ ಕಾಣುವುದು. ನಿಮ್ಮ ನಿಲುವಿನ ಬದಲಾವಣೆ ಮತ್ತು ಸಂಗಾತಿಗೆ ಇದನ್ನು ಅರ್ಥ ಮಾಡಿಕೊಟ್ಟರೆ ಕಠಿಣ ಪರಿಸ್ಥಿತಿ ಬೇಗನೆ ನಿವಾರಣೆಯಾಗುವುದು. ಆಶಾವಾದಿಯಾಗಿದ್ದರೆ ಆಗ ನಿಮಗೆ ಧೈರ್ಯ ಬರುವುದು ಮತ್ತು ಸಂಬಂಧ ಉಳಿಸಲು ಇದು ನೆರವಾಗುವುದು.

6.ಪರಸ್ಪರ ಗೌರವಿಸುವುದು

ಪ್ರೀತಿ ಮತ್ತು ನಂಬಿಕೆಯಿಂದ ಸಂಬಂಧದಲ್ಲಿ ಕಠಿಣ ಸಮಯ ನಿವಾರಣೆ ಮಾಡಬಹುದು. ಪರಸ್ಪರರಿಗೆ ನೆರವಾಗುವುದು ಮತ್ತು ವಿಷಯಗಳನ್ನು ಹೊಸ ರೀತಿಯಿಂದ ನೋಡುವುದು ಕೂಡ ಪರಸ್ಪರರಲ್ಲಿ ಗೌರವ ಹೆಚ್ಚಿಸುವುದು. ಸಂಬಂಧದಲ್ಲಿ ಆಶಾವಾದಿಯಾಗಿದ್ದರೆ ಇದನ್ನು ಸಾಧಿಸಬಹುದು.

7.ಧನಾತ್ಮಕತೆ ಮೂಡಿಸುವುದು

ಸಂಬಂಧದಲ್ಲಿ ಯಾವುದೇ ಪರಿಸ್ಥಿತಿಯಿಂದ ಹೊರಬರುವುದು ಕಷ್ಟವೇನಲ್ಲ. ಸಮಸ್ಯೆಗಳಿಗೆ ಪರಿಹಾರವು ಬೇಗನೆ ಸಿಗುವುದು ಮತ್ತು ಕಠಿಣ ಸಮಯವು ಮಾಯವಾಗುವುದು. ಇದು ಸಂಬಂಧದಲ್ಲಿ ಧನಾತ್ಮಕ ವಾತಾವರಣ ನಿರ್ಮಿಸುವುದು ಮಾತ್ರವಲ್ಲದೆ ನಿಮ್ಮ ಸುತ್ತಲಿನವರಲ್ಲೂ ಇದು ಧನಾತ್ಮಕತೆ ಉಂಟು ಮಾಡುವುದು.

8.ಒತ್ತಡದ ಸ್ಥಿತಿ ಕಡಿಮೆ

ಸಂತೋಷ, ನಂಬಿಕೆ, ಧನಾತ್ಮಕತೆ ಮತ್ತು ಪ್ರೀತಿ ಸಂಬಂಧದಲ್ಲಿ ಇದ್ದರೆ ಆಗ ಒತ್ತಡದಕ್ಕೆ ಅಲ್ಲಿ ಯಾವುದೇ ಜಾಗವಿರುವುದಿಲ್ಲ. ಈ ಕಾರಣಗಳಿಂದಾಗಿ ನೀವು ಸಂಬಂಧದಲ್ಲಿ ತುಂಬಾ ಆಶಾವಾದಿಯಾಗಿರಬಹುದು. ಆಶಾವಾದಿಯಾಗಿದ್ದರೆ ಆಗ ಸಂಬಂಧವು ಮತ್ತಷ್ಟು ಬಲಗೊಳ್ಳುತ್ತಾ ಹೋಗುವುದು.

ಆಶಾವಾದಿಯಾಗಿದ್ದರೆ ಈ ವಿಧಾನಗಳ ಮೂಲಕವಾಗಿ ನೀವು ಸಂಬಂಧಲ್ಲಿ ಪ್ರೀತಿ ಹೆಚ್ಚಿಸಬಹುದು. ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿಕೊಂಡು ಹೋಗುವುದು ಕೂಡ ಸಂಬಂಧದಲ್ಲಿ ಆಶಾವಾದಿಯಾಗಿರಲು ಸಾಧ್ಯವಾಗುವುದು. ಇದು ಸಂಬಂಧದಲ್ಲಿ ಪ್ರೀತಿ ಹೆಚ್ಚಿಸುವುದು. ನೀವು ಆಶಾವಾದಿಯಾಗಿದ್ದು, ಜೀವನ ಹೇಗೆ ಸಾಗುತ್ತದೆ ಎಂದು ತಿಳಿಯಿರಿ.

English summary

How To Increase Love In the Relationship By Being Optimistic?

An optimistic way of life is the way to increase your self-worth and your self-esteem. It also helps in increasing love when it comes to a relationship. Think about how your way of optimism has got you till here? Don't you think it is tremendous growth? Now think the same way when it comes to your relationship. Think about ways to increase love in the relationship by being optimistic.
X
Desktop Bottom Promotion