For Quick Alerts
ALLOW NOTIFICATIONS  
For Daily Alerts

ಕಷ್ಟಕಾಲದಲ್ಲಿ ಸ್ನೇಹಿತನಿಗೆ ಸಹಾಯ ಮಾಡಲು ಹಿಂದೆ-ಮುಂದೆ ನೋಡಬೇಡಿ

|

ಸ್ನೇಹಕ್ಕೆ ಸ್ನೇಹ...ಪ್ರೀತಿಗೆ ಪ್ರೀತಿ...ನಾನು ಸ್ನೇಹಜೀವಿ....ಹೀಗೆ ಕನ್ನಡ ಸಿನಿಮಾವೊಂದರ ಹಾಡು ಸ್ನೇಹಿತರ ದಿನದಂದು ನೆನಪಿಗೆ ಬಂತು. ಸ್ನೇಹವೆನ್ನುವುದು ಎಲ್ಲಾ ಸಂಬಂಧ, ಕಟ್ಟುಪಾಡುಗಳನ್ನು ಮೀರಿರುವುದು. ಸ್ನೇಹಿತರು ಯಾವುದೇ ಸಮಯದಲ್ಲೂ ಸ್ನೇಹ ಉಳಿಸಿಕೊಳ್ಳಲು ಜೀವವನ್ನೇ ಪಣವಾಗಿಡುವರು. ನಿಮ್ಮ ಸಂಕಷ್ಟಗಳನ್ನು ಮೊದಲೇ ತಿಳಿದುಕೊಂಡು ನೆರವಾಗುವವನೇ ನಿಜವಾದ ಸ್ನೇಹಿತ. ನಿಮ್ಮ ಸ್ನೇಹಿತ/ಸ್ನೇಹಿತೆ ಒತ್ತಡದಲ್ಲಿರಬಹುದು, ಆಕೆ/ಆತನಿಗೆ ಆರ್ಥಿಕ ಸಮಸ್ಯೆಯಿರಬಹುದು, ಯಾವುದಾದರೂ ಚಟಕ್ಕೆ ಸಿಲುಕಿರಬಹುದು ಅಥವಾ ವೈವಾಹಿಕ ಸಮಸ್ಯೆಯಿರಬಹುದು. ಇಂತಹ ಸಂದರ್ಭಗಳಲ್ಲಿ ನೀವು ಸ್ನೇಹತ/ತೆಗೆ ನೆರವಾಗುವ ಮೊದಲು ಅವರು ಆ ಪರಿಸ್ಥಿತಿಯಲ್ಲಿ ಯಾವ ರೀತಿಯ ನೋವಿನಲ್ಲಿದ್ದಾರೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದಕ್ಕಾಗಿ ಅವರ ಜಾಗದಲ್ಲಿ ನೀವಿದ್ದುಕೊಂಡು ನೋಡಬೇಕು. ಆಗ ನಿಮಗೆ ನಿಜವಾದ ಪರಿಸ್ಥಿತಿಯು ಅರ್ಥವಾಗುವುದು. ಸ್ನೇಹವೆನ್ನುವುದು ಎರಡು ಜೀವಗಳ ನಡುವಿನ ಭಾಂದವ್ಯ. ನಂಬಿಕೆ, ವಿಶ್ವಾಸ ಹಾಗೂ ಪ್ರೀತಿ ಮೇಲೆ ಸ್ನೇಹವು ಇರುವುದು. ನಿಮ್ಮ ಸ್ನೇಹಿತನಿಗೆ ಕಷ್ಟಕಾಲದಲ್ಲಿ ನೆರವಾಗಬೇಕೆಂದು ನೀವು ಬಯಸಿರುವಿರಾದರೆ ಇದಕ್ಕೆ ತಡಮಾಡಬೇಡಿ. ನೀವು ತಕ್ಷಣ ಕಾರ್ಯಪ್ರವೃತ್ತರಾಗಿ...

How Can You Help Your Friend?

ಸ್ನೇಹಿತ/ತೆಗೆ ನಿಮ್ಮ ನೆರವು ಬೇಕಿದೆ ಎಂದು ತಿಳಿಯುವುದು ಹೇಗೆ?

ಸ್ನೇಹಿತ/ತೆಗೆ ನಿಮ್ಮ ನೆರವು ಬೇಕೆನ್ನುವ ಬಗ್ಗೆ ಹಲವಾರು ರೀತಿಯ ಸುಳಿವುಗಳು ನಿಮಗೆ ಸಿಗಬಹುದು. ಆಕೆ/ಆತನ ವರ್ತನೆಯಲ್ಲಿ ಹಠಾತ್ ಆಗಿ ಕೆಲವೊಂದು ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಪ್ರತಿನಿತ್ಯ ಮಾತನಾಡುತ್ತಿದ್ದ ಆತ/ಆಕೆ ಒಮ್ಮೆಲೆ ಕರೆ ಮಾಡುವುದನ್ನು ನಿಲ್ಲಿಸಬಹುದು. ಭಾವನಾತ್ಮಕವಾಗಿ ಬೆಸೆದಿರುವ ನಿಮಗೆ ಇದರಿಂದ ಗಲಿಬಿಲಿಯಾಗುವುದು ಸಹಜ. ಆಕೆ/ಆತನ ಕಾಂತಿಯುತ ಮತ್ತು ಉಲ್ಲಾಸದ ನಗುವು ನಿಸ್ತೇಜ ಮತ್ತು ಕಳೆಗುಂದಿದಂತೆ ಆಗುವುದು ಕೂಡ ನಿಮ್ಮ ನೆರವಿನ ಅಗತ್ಯವಿದೆ ಎನ್ನುವುದರ ಸುಳಿವು. ಕೆಲವೊಂದು ಸಣ್ಣ ಸುಳಿವುಗಳನ್ನು ತಿಳಿದುಕೊಂಡು ನೀವು ಗೆಳೆಯನಿಗೆ ನೆರವಾಗಬೇಕು.

ಸ್ನೇಹಿತರ ದಿನ ವಿಶೇಷ ಲೇಖನ-'ಗೆಳೆತನವೆಂಬ ಸಿರಿತನ'

ಸ್ನೇಹಿತ/ತೆಗೆ ನೆರವಾಗುವುದು ಹೇಗೆ?

ಇಂತಹ ಪರಸ್ಥಿತಿಯಲ್ಲಿ ಹೆಚ್ಚಿನ ಜನರಿಗೆ ತುಂಬಾ ಸಮಸ್ಯೆಯಾಗುವುದು. ತಮ್ಮ ಸ್ನೇಹಿತ/ತೆಗೆ ನೆರವು ಬೇಕಿದೆ ಎಂದು ಅವರಿಗೆ ತಿಳಿದಿರುವುದು. ಆದರೆ ಈ ಪರಿಸ್ಥಿತಿಯಿಂದ ಹೊರಗೆ ಬರಲು ಆತ/ಆಕೆಗೆ ಹೇಗೆ ನೆರವಾಗಬೇಕು ಎಂದು ಅವರಿಗೆ ತಿಳಿದಿರಲ್ಲ. ಈ ಲೇಖನದಲ್ಲಿ ಸ್ನೇಹಿತ/ತೆಗೆ ಹೇಗೆ ನೆರವಾಗಬೇಕು ಎಂದು ನಿಮಗೆ ತಿಳಿಸಿಕೊಡಲಿದ್ದೇವೆ.
ನಿಮ್ಮ ಸ್ನೇಹಿತ/ತೆಗೆ ನೆರವು ಬೇಕಿದ್ದರೆ, ಅವರು ಕಠಿಣ ಪರಿಸ್ಥಿತಿಯಲ್ಲಿದ್ದಾರೆ ಎಂದರೆ ಆಗ ನೀವು ನೆರವಾಗಲು ಮುಂದಾಗುವಿರಿ. ನೀವು ತುಂಬಾ ಆಪ್ತ ಸ್ನೇಹಿತ/ತೆಯಾಗಿದ್ದರೂ ಹೇಗೆ ನೆರವಾಗಬೇಕೆಂದು ನಿಮಗೆ ಅರ್ಥವಾಗಲ್ಲ. ಪ್ರತಿಯೊಬ್ಬರಿಗೂ ಹೀಗೆ ಆಗುತ್ತದೆ. ಇದರ ಬಗ್ಗೆ ಚಿಂತೆ ಮಾಡಬೇಡಿ. ಸ್ನೇಹಿತ/ತೆಗೆ ನೀವು ಕೆಲವೊಂದು ಒಳ್ಳೆಯ ವಿಧಾನದಿಂದ ನೆರವಾಗಬಹುದು ಮತ್ತು ಪರಿಸ್ಥಿತಿಯಿಂದ ಹೊರತರಬಹುದು. ನಿಮ್ಮ ನೆರವನ್ನು ಅವರು ಕೇಳದೆ ಇದ್ದರೂ ಪರಿಸ್ಥಿತಿ ತಿಳಿದು ನೆರವಾಗಿ...

1. ಕೆಲವು ವಿಚಾರಗಳಲ್ಲಿ ಮಾತ್ರ ನೀವು ನೆರವಾಗಿ

ಸ್ನೇಹಿತನಿಗೆ ನೆರವಾಗುವಾಗ ನೀವು ತುಂಬಾ ಸ್ಪಷ್ಟವಾಗಿರಬೇಕು. ನಿನಗೆ ಏನಾದರೂ ನೆರವು ಬೇಕಿದೆಯಾ ಎಂದು ಕೇಳಿದರೆ, ಆಗ ನೀವು ದೊಡ್ಡ ಮಟ್ಟದ ತಪ್ಪು ಮಾಡುತ್ತಿದ್ದೀರಿ ಎಂದು ಹೇಳಬಹುದು. ಸ್ನೇಹಿತ/ತೆ ಈಗಾಗಲೇ ಒತ್ತಡದಲ್ಲಿ ಇರುವರು ಮತ್ತು ನೀವು ನೆರವಿನ ಪ್ರಸ್ತಾವನ್ನಿಡುವುದರಿಂದ ಅವರಿಗೆ ಆರಾಮದ ಬದಲು ಮತ್ತಷ್ಟು ಒತ್ತಡಕ್ಕೆ ಸಿಲುಕಬಹುದು. ನೀವು ಯಾವ ಮಟ್ಟದಲ್ಲಿ ನೆರವಾಗಲು ಸಮರ್ಥರಾಗಿದ್ದೀರಿ ಎಂದು ಆತ/ಆಕೆಗೆ ತಿಳಿದಿರುವುದಿಲ್ಲ ಮತ್ತು ಇದರಿಂದ ನಿಮ್ಮನ್ನು ಕೇಳಬಾರದು ಎಂದು ಅಂದುಕೊಳ್ಳುವರು. ಅವರ ಪರಿಸ್ಥಿತಿ ತಿಳಿದಿದ್ದರೆ ಆಗ ನೀವು ಅದಕ್ಕೆ ಅನುಗುಣವಾಗಿ ನೆರವು ನೀಡಿ. ಉದಾಹರಣೆಗೆ ನಿಮ್ಮ ಸ್ನೇಹಿತನಿಗೆ ಗಿಟಾರ್ ಎಂದರೆ ತುಂಬಾ ಪ್ರೀತಿ. ಆದರೆ ಅದನ್ನು ಖರೀದಿಸಲು ಹಣವಿಲ್ಲ. ಈ ಸಮಯದಲ್ಲಿ ನೀವು ಆತನಿಗೆ ಹಣದ ನೆರವು ನೀಡಬಹುದು. ಇಂತಹ ನೆರವುಗಳು ಸ್ನೇಹದಲ್ಲಿ ಪ್ರಮುಖ ಪಾತ್ರ ವಹಿಸುವುದು.

2. ನೈಜ ಕಾಳಜಿಯಿಂದ ನೆರವಿನ ಹಸ್ತ ನೀಡಿ

ನೀವು ಯಾವುದೇ ವಿಚಾರದಲ್ಲಿ ಸ್ನೇಹಿತನಿಗೆ ನೆರವಾಗಬೇಕೆಂದು ಬಯಸಿದ್ದರೆ ಆಗ ನೀವು ಅವರಿಗೆ ತುಂಬಾ ಅಗತ್ಯವಿರುವಂತಹ ಸಮಯದಲ್ಲಿ ನೆರವಾಗುವ ಬಗ್ಗೆ ಆಲೋಚಿಸಿ. ಕೆಲವೊಂದು ಸಲ ನಾವು ಹೀಗೆ ಹೇಳಿ, ಮರು ಆಲೋಚಿಸದೆ ನೆರವು ನೀಡುತ್ತೇವೆ. ನಿಮ್ಮ ಸ್ನೇಹಿತ/ತೆ ಕಠಿಣ ಪರಿಸ್ಥಿತಿಯಿಂದ ಹೊರಬರಬೇಕೆಂದು ನಿಮಗೆ ಅನಿಸಿದ್ದರೆ, ಆಗ ನೀವು ನೈಜ ಕಾಳಜಿಯಿಂದ ನೆರವಾಗಲು ಮುಂದಾಗಿ. ನಿಮಗೆ ಪರಿಸ್ಥಿತಿ ಬಗ್ಗೆ ತಿಳಿವಳಿಕೆಯೇ ಇಲ್ಲದೆ ಇದ್ದರೆ ಆಗ ನೀವು ಸರಿಯಾಗಿ ಆಲೋಚನೆ ಮಾಡಿಕೊಂಡ ಬಳಿಕ ನೆರವಾಗಿ. ಸ್ನೇಹಿತ/ತೆಯು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದು ಮೊದಲು ಸರಿಯಾಗಿ ತಿಳಿದುಕೊಳ್ಳಿ. ಇದರ ಬಳಿಕ ಅವರಿಗೆ ನೆರವು ನೀಡಲು ಮುಂದಾಗಿ. ನೀವು ಅವರಿಗೆ ನಿಜವಾಗಿಯೂ ನೆರವಾಗಲು ಮುಂದೆ ಬರಬೇಕು ಮತ್ತು ನಿಮಗೆ ಸಾಧ್ಯವಾಗದೆ ಇರುವಂತಹ ನೆರವು ನೀಡಲು ಕೇವಲ ತೋರಿಕೆಗೆ ಸಹಾಯಹಸ್ತ ನೀಡಬಾರದು. ಇದು ನಿಮ್ಮ ಸ್ನೇಹದ ಮೇಲೆ ಪರಿಣಾಮ ಬೀರಬಹುದು. ನಿಜವಾಗಿಯೂ ನೀವು ನೆರವಾಗಬೇಕಿದ್ದರೆ ಆಗ ಸರಿಯಾಗಿ ಆಲೋಚನೆ ಮಾಡಿಕೊಳ್ಳಿ. ಸ್ನೇಹಿತ/ತೆಗೆ ನಿಮ್ಮ ನೆರವು ಬೇಕಿದ್ದರೆ ಆಗ ಅದು ಸ್ಪಷ್ಟ ಹಾಗೂ ನೈಜವಾಗಿರಬೇಕು. ನಿಮ್ಮಿಂದ ಸಾಧ್ಯವಾಗದೆ ಇರುವಂತಹ ನೆರವು ನೀಡಲು ಮುಂದೆ ಹೋಗಬೇಡಿ.

ಒಳ್ಳೆಯ ಸ್ನೇಹಿತ ಸಿಕ್ಕಿದರೆ, ಅದು ದೇವರು ನೀಡಿದ ವರ

3. ನೆರವಿಗೆ ನಿಮ್ಮ ಸ್ನೇಹಿತ/ತೆಗೆ ಒತ್ತಾಯಿಸಬೇಡಿ

ನೀವು ನಿಜವಾದ ಸ್ನೇಹಿತರೆ ಆಗಿದ್ದರೆ ಆಗ ಆತ/ಆಕೆಯ ವೈಯಕ್ತಿಕತೆಗೆ ನೀವು ಗೌರವ ನೀಡುವಿರಿ. ನಿಮ್ಮ ಸ್ನೇಹಿತ/ತೆಗೆ ನೆರವು ಬೇಕಿಲ್ಲದೆ ಇರುವಾಗ ನೀವು ನೆರವಾಗುತ್ತೇನೆಂದು ಒತ್ತಾಯ ಮಾಡಬೇಡಿ. ನೆರವು ನೀಡುವಾಗ ನೀವು ಸ್ನೇಹಿತನಿಗೆ ಒತ್ತಡ ಹಾಕದೆ ಸಭ್ಯ ಮತ್ತು ಸ್ನೇಹಪರವಾಗಿರಬೇಕು. ನಿಮ್ಮ ಸ್ನೇಹಿತನು ನೆರವನ್ನು ನಿರಾಕರಿಸುತ್ತಿದ್ದಾನೆ ಎಂದಾದರೆ ಆಗ ನೀವು ಅತಿಯಾಗಿ ಒತ್ತಾಯ ಮಾಡಬೇಡಿ. ನೀವು ಪದೇ ಪದೇ ನೆರವು ನೀಡುತ್ತೇನೆಂದು ಪೀಡಿಸಿದರೆ ಆಗ ಅವರು ಪರಿಸ್ಥಿತಿಯು ಮತ್ತಷ್ಟು ಹದಗೆಡುವುದು.

4. ಸಮಸ್ಯೆ ಆಲಿಸಿ

ಕೆಲವೊಂದು ಸಂದರ್ಭದಲ್ಲಿ ಆತ/ಆಕೆ ಸಮಸ್ಯೆಗಳ ಸುಳಿಯಲ್ಲಿ ಇರುವಾಗ, ಈ ಸಮಸ್ಯೆಯನ್ನು ಯಾರಾದರೂ ಆಲಿಸಬೇಕೆಂದು ಅವರು ಬಯಸುವುದು ಸಹಜ. ನಿಮ್ಮ ಸ್ನೇಹಿತ/ತೆ ಈ ಪರಿಸ್ಥಿತಿಯಲ್ಲಿದ್ದರೆ ಆಗ ನೀವು ಅವರೊಂದಿಗೆ ಕುಳಿತುಕೊಂಡು ಸಮಸ್ಯೆಗಳ ಬಗ್ಗೆ ಸರಿಯಾಗಿ ಆಲಿಸಿ. ಸಮಸ್ಯೆಗಳನ್ನು ನೀವು ಆಲಿಸಿದಾಗ ಅವರಿಗೆ ಕೂಡ ಒಳ್ಳೆಯ ಭಾವನೆಯಾಗುವುದು. ನೀವು ಕೇವಲ ಮಾತನಾಡಿದರೆ ಯಾವುದೇ ಪ್ರಯೋಜವಿಲ್ಲ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಂತೆ ವಿಶ್ವಾಸ ಮೂಡಿಸಿ. ಈ ಮೂಲಕ ಅವರ ಸಮಸ್ಯೆಗಳನ್ನು ತಿಳಿದುಕೊಂಡು, ಯಾವ ರೀತಿ ನೆರವಾಗಬಹುದು ಎಂದು ಅರ್ಥ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಅವರ ಸಮಸ್ಯೆಗಳನ್ನು ಸರಿಯಾಗಿ ಆಲಿಸಬೇಕು. ಈ ನಾಲ್ಕು ವಿಧಾನದಿಂದ ನೀವು ಸ್ನೇಹಿತ/ತೆಗೆ ನೆರವಾಗಬಹುದು. ನಿಮ್ಮ ಸ್ನೇಹಿತ/ತೆ ಯಾವುದೇ ರೀತಿಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದರೆ ಆಗ ನೀವು ಆತ/ಆಕೆಗೆ ನೆರವಾಗಿ. ಸ್ನೇಹವನ್ನು ಮತ್ತಷ್ಟು ಸುಭದ್ರವಾಗಿಸಲು ನೀವು ನೆರವಾಗಿ. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಇದನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ನಿಮ್ಮ ಸ್ನೇಹದ ಬಗ್ಗೆ, ಸ್ನೇಹಿತರಿಗೆ ನೆರವಾಗಿರುವ ಬಗ್ಗೆ ಏನಾದರೂ ವಿಶೇಷವಿದ್ದರೆ ಅದನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆದುಹಾಕಿ. ಸ್ನೇಹಿತರ ದಿನಾಚರಣೆಯನ್ನು ನೀವು ಸಂಭ್ರಮದಿಂದ ಆಚರಿಸಿಕೊಳ್ಳಿ. ಸ್ನೇಹಿತರ ದಿನದ ಶುಭಾಶಯಗಳು....

English summary

How Can You Help Your Friend?

If you want to be there for a friend who's in need, you're a great friend, indeed. But at times, when you have good intentions of helping your friend, it can be hard to know how to help a friend in the circumstances he/she is in. Your friend might be in stress, he/she might be in monetary constraint, he/she might be an addict or might have been through a break-up. He/she can also be in depression. In order to help your friend, you need to look into the depth of the pain they are in.
Story first published: Saturday, August 4, 2018, 15:10 [IST]
X
Desktop Bottom Promotion