For Quick Alerts
ALLOW NOTIFICATIONS  
For Daily Alerts

ದಾಂಪತ್ಯ ಜೀವನದಲ್ಲಿ ಖುಷಿ-ಖುಷಿಯಾಗಿರಬೇಕೇ? ಇಂತಹ ಸರಳ ಸೂತ್ರಗಳನ್ನು ಅನುಸರಿಸಿ

|

ವೈವಾಹಿಕ ಜೀವನವೆಂದ ಮೇಲೆ ಕೆಲವೊಂದು ಸಮಸ್ಯೆಗಳು ಇದ್ದೇ ಇರುತ್ತದೆ. ಸಮಸ್ಯೆಗಳು ದೊಡ್ಡದಾಗದಂತೆ, ಎಲ್ಲವನ್ನೂ ನಿಭಾಯಿಸಿಕೊಂಡು ಹೋದರೆ ಆಗ ಸಂಸಾರದಲ್ಲಿ ಸುಖ, ಸಂತೋಷವಿರುವುದು. ಈ ಲೇಖನದಲ್ಲಿ ದಂಪತಿಗಳು ಪಾಲಿಸಬೇಕಾದರೆ ಸಂಸಾರದ ಆರು ಸೂತ್ರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ಪಾಲಿಸಿಕೊಂಡು ಹೋದರೆ ಆಗ ನಿಮ್ಮ ವೈವಾಹಿಕ ಜೀವನವು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಸೂತ್ರಗಳನ್ನು ನೀವು ವೈವಾಹಿಕ ಜೀವನದಲ್ಲಿ ಅಳವಡಿಸಿಕೊಂಡರೆ ಆಗ ಅನ್ಯೋನ್ಯತೆಯು ಹೆಚ್ಚಾಗುವುದು ಮಾತ್ರವಲ್ಲದೆ ಜೀವನದಲ್ಲಿ ಸುಖಸಮೃದ್ಧಿ ನೆಲೆಸುವುದು. ವೈವಾಹಿಕ ಜೀವನದಲ್ಲಿ ಸುಖ, ಸಂತೋಷ ಪಡೆಯಬೇಕಾದರೆ ಆಗ ಏನು ಮಾಡಬೇಕು ಎಂದು ಮುಂದೆ ಓದುತ್ತಾ ತಿಳಿಯಿರಿ.

ನಂಬಿಕೆ

ನಂಬಿಕೆ ಇರುವ ಕಡೆ ಅನುಮಾನ ಇರುವುದಿಲ್ಲ, ಅನುಮಾನ ಇರುವ ಕಡೆ ನಂಬಿಕೆ ಇರುವುದಿಲ್ಲ- ಎಂಬ ನಾಣ್ಣುಡಿ ಚಾಲ್ತಿಯಲ್ಲಿದೆ. ಸಂಬಂಧದಲ್ಲಿ ಒಂದೊಮ್ಮೆ ಮೋಸ ಸಂಭವಿಸಿದಲ್ಲಿ, ಅದನ್ನು ನಿವಾರಿಸಿ ಹೇಗೆ ನಂಬಿಕೆಯನ್ನು ಮತ್ತೆ ತರಬೇಕು ಎಂಬುದು ಅತ್ಯಂತ ಕಷ್ಟದ ಕೆಲಸ. ಆದರೂ ಇದನ್ನು ಮತ್ತೆ ನಿರ್ಮಾಣ ಮಾಡಬಹುದು. ಆದರೆ ಅದು ಒಂದೇ ಕ್ಷಣದಲ್ಲಿ ನಡೆಯುವಂತದ್ದಲ್ಲ. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದನ್ನು ಅತ್ಯಂತ ನಾಜೂಕಿನಿಂದ ಮಾಡಬೇಕಾಗುತ್ತದೆ. ಏಕೆಂದರೆ ಸಂಬಂಧವು ಒಂದು ರಹಸ್ಯವಾದ ಅನೈತಿಕ ಸಂಬಂಧದಿಂದ, ನಿಂದನೆಯಿಂದ ಅಥವಾ ಯಾವುದಾದರೂ ಒಂದು ಅಚಾತುರ್ಯವಾದ ಘಟನೆಯಿಂದ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಕೆಲವೊಮ್ಮೆ ಸಂಬಂಧವು ಈ ನೋವಿನ ಘಟನೆಯ ನಂತರ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ದಾಂಪತ್ಯವು ಹೊಸದು ಅಥವಾ ಹಳೆಯದಾಗಿರಲಿ, ನಂಬಿಕೆಯು ಪ್ರಮುಖ ಪಾತ್ರ ವಹಿಸುವುದು. ಸುಖ, ಸಂತೋಷದ ವೈವಾಹಿಕ ಜೀವನದ ಅಡಿಪಾಯವೇ ನಂಬಿಕೆ. ನೀವು ನಂಬಿಕೆ ಬೆಳೆಸುವ ಮೊದಲು ಅದು ನಿಮ್ಮ ಸಂಗಾತಿಗೆ ಎಷ್ಟು ಅರ್ಥಪೂರ್ಣ ಮತ್ತು ನಂಬಿಕೆಯಿಂದ ಸಂಗಾತಿಯ ಜೀವನದಲ್ಲಿ ಹೇಗೆ ಧನಾತ್ಮಕತೆ ತರಲಿದ್ದೀರಿ ಎಂದು ತಿಳಿಯಬೇಕು. ಸುಳ್ಳು ಮತ್ತು ದಾಂಪತ್ಯದ್ರೋಹವು ಇಲ್ಲದೆ ಇದ್ದರೆ ಆಗ ನಂಬಿಕೆ ಮತ್ತು ನಂಬುವುದು ಕಷ್ಟವೇನಲ್ಲ.

marriage advice

ಸಂವಹನ

ದಂಪತಿ ಮಧ್ಯೆ ಸಂವಹನವು ಇರದೇ ಇದ್ದರೆ ಆಗ ದಾಂಪತ್ಯವು ಹೆಚ್ಚು ಸಮಯ ಬರುವುದಿಲ್ಲ. ಸಂವಹನವು ಅತೀ ಮುಖ್ಯವಾಗಿರುವುದು. ಪ್ರತಿಯೊಂದು ಸುಖಿ ಸಂಸಾರದಲ್ಲಿಯೂ ಸಂವಹನ ಅತೀ ಪ್ರಾಮುಖ್ಯತೆಯನ್ನು ಪಡೆದಿರುವುದು. ಆದರೂ ಕೆಲವರಿಗೆ ಸರಿಯಾಗಿ ಹಾಗೂ ಧನಾತ್ಮಕವಾಗಿ ಹೇಗೆ ಸಂವಹನ ನಡೆಸಬೇಕೆಂದು ತಿಳಿದಿಲ್ಲ. ಸಂತೋಷವಾಗಿರುವ ದಂಪತಿಗಳು ಹೇಗೆ ಸಂವಹನ ನಡೆಸಬೇಕೆಂದು ತಿಳಿದಿರುವರು. ನೆನಪಿಡಿ ಸಂಬಂಧದಲ್ಲಿ ಸಂವಹನವು ಸೇತುವೆಯಿದ್ದಂತೆ. ಸಂಗಾತಿಗಳ ಮಧ್ಯೆ ಯಾವುದೇ ರೀತಿಯ ಸಂವಹನ ಇಲ್ಲವೆಂದಾದರೆ ಆಗ ಆ ಸಂಬಂಧದಲ್ಲಿ ಏನೋ ಸಮಸ್ಯೆಯಿದೆ ಎಂದರ್ಥ. ಇಬ್ಬರು ವ್ಯಕ್ತಿಗಳು ಜತೆಯಾಗಿ ಬರುವ ಉದ್ದೇಶವೆಂದರೆ ಜತೆಯಾಗಿ ಬದುಕುವುದು. ಕೇವಲ ಲೈಂಗಿಕ ಆಕರ್ಷಣೆ ಮಾತ್ರ ಜೀವಮಾನವಿಡಿ ನಿಮ್ಮನ್ನು ಜತೆಯಾಗಿಡುವುದಿಲ್ಲ. ಸಂಬಂಧದಲ್ಲಿ ಅಸೂಯೆ ದೂರವಿರಿಸಲು ಸಂವಹನ ಅತ್ಯಂತ ಪರಿಣಾಮಕಾರಿ ವಿಧಾನ.

ಗೌರವ

ಪ್ರತಿಯೊಬ್ಬರನ್ನು ಗೌರವಿಸುವುದು ಅತೀ ಅಗತ್ಯ. ಅದರಲ್ಲೂ ಸುಖಿ ದಾಂಪತ್ಯ ಜೀವನದಲ್ಲಿ ಇದು ಅನಿವಾರ್ಯ. ಪರಸ್ಪರ ಗೌರವಿಸುವ ದಂಪತಿ ಒಬ್ಬರನೊಬ್ಬರು ಬೆಂಬಲಿಸುವರು. ಆರೋಗ್ಯಕರ ವೈವಾಹಿಕ ಜೀವನದಲ್ಲಿ ಗೌರವ ನೀಡುವುದು ಪ್ರಮುಖವಾಗಿರುವುದ. ಇದು ಅನ್ಯೋನ್ಯತೆ ಬಲಪಡಿಸುವುದು. ಸಂತೋಷ ಮತ್ತು ಆರೋಗ್ಯಕರ ದಂಪತಿಗಳು ಯಾವಾಗಲೂ ಪರಸ್ಪರರನ್ನು ಗೌರವಿಸುವರು ಮತ್ತು ಅಗತ್ಯಬಿದ್ದಾಗ ಇದನ್ನು ತೋರಿಸಿಕೊಡುವರು.

ಪರಸ್ಪರರಿಗೆ ಸಮಯ ನೀಡುವುದು

ಸುಖಿ ದಾಂಪತ್ಯ ಜೀವನ ನಡೆಸುವವರು ಇಡೀ ದಿನ ಜತೆಯಾಗಿರಬೇಕೆಂದು ಬಯಸುವುದಿಲ್ಲ. ಇದರಿಂದ ವೈವಾಹಿಕ ಜೀವನಕ್ಕೆ ಹಾನಿಯಾಗುವುದು ಮತ್ತು ಇದು ಹಿತಕರವಲ್ಲವೆಂದು ಅವರಿಗೆ ತಿಳಿದಿದೆ. ದಿನಪೂರ್ತಿ ಜತೆಯಾಗಿರುವ ಬದಲು ಅವರು ದಿನದ ಇಷ್ಟು ಸಮಯವನ್ನು ಜತೆಯಾಗಿ ಕಳೆಯುವರು. ಈ ಸಮಯದಲ್ಲಿ ಅವರು ಪರಸ್ಪರಿಗೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಬಯಸುವರು.

ಅನ್ಯೋನ್ಯತೆ

ಸುಖಿಯಾಗಿರುವಂತಹ ದಂಪತಿಯಲ್ಲಿ ಉನ್ನತ ಮಟ್ಟದ ಅನ್ಯೋನ್ಯತೆಯಿರುವುದು ಮತ್ತು ಅವರು ಇದನ್ನು ಸಂಗಾತಿಗೂ ಇದನ್ನು ತೋರಿಸುವರು. ವೈವಾಹಿಕ ಜೀವನಕ್ಕೆ ವೈಭವ ತರಲು ಅವರು ತಮ್ಮ ಅನ್ಯೋನ್ಯತೆಯನ್ನು ಎಂದಿಗೂ ನಿಲ್ಲಿಸುವುದಿಲ್ಲ. ತಮ್ಮ ವೈವಾಹಿಕ ಜೀವನವು ಇನ್ನಷ್ಟು ಗಟ್ಟಿಯಾಗುವಂತೆ ಮಾಡಲು ಅವರು ಅನ್ಯೋನ್ಯತೆ ಮಟ್ಟವನ್ನು ಕಾಪಾಡಿಕೊಳ್ಳುವರು. ಇಬ್ಬರ ನಡುವಿನ ಭಾಂದವ್ಯವು ತೀವ್ರವಾಗಿರುವುದು. ದೈಹಿಕ ಮತ್ತು ಮಾನಸಿಕ ಅನ್ಯೋನ್ಯತೆಯು ಮದುವೆಯಲ್ಲಿ ಅತೀ ಅಗತ್ಯ. ದಾಂಪತ್ಯ ಜೀವನದಲ್ಲಿ ಸುಖವಾಗಿರಲು ದಂಪತಿಯು ಅನ್ಯೋನ್ಯತೆಯು ಅತೀ ಮುಖ್ಯ.

ವಿಶ್ವಾಸಕ್ಕೆ ಧಕ್ಕೆ ಆಗದಿರಲಿ

ಯಾವುದೇ ಸಂಬಂಧದ ಮೂಲವೆಂದರೆ ವಿಶ್ವಾಸ. ವಿಶ್ವಾಸವಿಲ್ಲದೆ ಯಾವುದೇ ಸಂಬಂಧವೂ ಉಳಿಯಲ್ಲ. ಹೃದಯಪೂರ್ವಕವಾಗಿ ನಿಮ್ಮ ಸಂಗಾತಿಯ ಮೇಲೆ ಯಾವಾಗಲೂ ವಿಶ್ವಾಸವಿಡಿ. ನೀವು ಸಂಗಾತಿಯನ್ನು ಕಣ್ಣುಮುಚ್ಚಿ ನಂಬಬೇಕೆಂದಲ್ಲ, ಅವರು ನಿಮ್ಮ ವಿಶ್ವಾಸಗಳಿಸಬೇಕು. ವಿಶ್ವಾಸವು ಗಳಿಸಬೇಕಾಗಿರುವ ವಿಷಯ. ಒಮ್ಮೆ ವಿಶ್ವಾಸ ಕಳೆದುಹೋದರೆ ಅದನ್ನು ಮರಳಿ ಪಡೆಯುವುದು ತುಂಬಾ ಕಷ್ಟ. ಅಸೂಯೆ ಕಡೆಗಣಿಸಲು ನಿಮ್ಮ ಸಂಗಾತಿಯ ಬಗ್ಗೆ ವಿಶ್ವಾಸವನ್ನಿಡಿ ಮತ್ತು ಅವರ ವಿಶ್ವಾಸಗಳಿಸಿ.

ಪ್ರೀತಿ ತೋರಿಸುವ ಕಲೆ

ದಾಂಪತ್ಯದಲ್ಲಿ ಸುಖವಾಗಿರುವಂತಹವರಲ್ಲಿ ಪ್ರೀತಿಸುವ ಕಲೆಯು ಯಾವತ್ತೂ ರಹಸ್ಯವಾಗಿರುವುದಿಲ್ಲ. ಪರಸ್ಪರರನ್ನು ಕಳೆದುಕೊಳ್ಳುತ್ತೇವೆಯಾ ಎನ್ನುವಷ್ಟರ ಮಟ್ಟಿಗೆ ಅರು ಪ್ರೀತಿ ವ್ಯಕ್ತಪಡಿಸುವರು. ದಾಂಪತ್ಯ ಜೀವನದಲ್ಲಿ ಸಂತೋಷವಾಗಿರುವ ದಂಪತಿಗಳು ಪರಸ್ಪರರ ಅಗತ್ಯತೆ ಮತ್ತು ಬೇಕುಬೇಡಗಳನ್ನು ಅರ್ಥಮಾಡಿಕೊಂಡು ಪ್ರೀತಿ ವ್ಯಕ್ತಪಡಿಸುವ ಕಲೆಯ ಜತೆಗೆ ದೈಹಿಕ ಅಗತ್ಯತೆ ತೀರಿಸುವರು. ಹಾಸಿಗೆಯಲ್ಲಿ ಅವರು ತೋರಿಸುವ ತೀವ್ರತೆಯು ಅವರು ಹಂಚಿಕೊಳ್ಳುವ ಪ್ರೀತಿಯ ರೂಪವಾಗಿದೆ. ದಾಂಪತ್ಯವು ಸಾಗಿದಂತೆ ಪ್ರೀತಿಸುವ ತೀವ್ರತೆಯು ಹೆಚ್ಚಾಗುತ್ತಾ ಹೋಗುವುದು. ದಾಂಪತ್ಯವು ಸಂತೋಷವಾಗಿರಬೇಕಾದರೆ ಆಗ ಪರಸ್ಪರ ನಂಬಿಕೆಯೊಂದಿಗೆ ಪ್ರೀತಿ ವ್ಯಕ್ತಪಡಿಸುವುದು ಅತ್ಯವೆಂದು ಸುಖಿ ಜೀವನ ನಡೆಸುವವರಿಗೆ ತಿಳಿದಿದೆ. ಪ್ರತಿಯೊಂದು ವೈವಾಹಿಕ ಜೀವನದಲ್ಲೂ ದೈಹಿಕ ಅನ್ಯೋನ್ಯತೆಯು ಅತೀ ಅಗತ್ಯ. ದೈಹಿಕವಾಗಿ ಬೆಸೆಯುವಂತಹ ಪ್ರೀತಿಯು ಶಾಶ್ವತವಾಗಿರುವುದು.

ಪರಸ್ಪರ ಅರ್ಥಮಾಡಿಕೊಳ್ಳಿ

ಯಾವುದೇ ಸಂಬಂಧದಲ್ಲಿ ಅಸೂಯೆ ಕಡೆಗಣಿಸುವ ಒಳ್ಳೆಯ ಮಾರ್ಗವೆಂದರೆ ಸಂಗಾತಿಯನ್ನು ಅರ್ಥಮಾಡಿಕೊಳ್ಳುವುದು. ಆರೋಗ್ಯಕರ ಸಂಬಂಧಕ್ಕೆ ಅರ್ಥಮಾಡಿಕೊಳ್ಳುವುದು ಅತೀ ಅಗತ್ಯ. ನಿಮ್ಮ ಸಂಗಾತಿಯ ಬೇಡಿಕೆ ಮತ್ತು ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಿ. ವಿಶ್ವಾಸ ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ವ್ಯತ್ಯಾಸವಿದೆ. ಇದು ಎರಡು ಭಿನ್ನ ವಿಷಯಗಳು. ಆದರೆ ಸಂಬಂಧದ ಉಳಿವಿಗೆ ಎರಡೂ ತುಂಬಾ ಮುಖ್ಯ.

ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ

ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಕಾಲಗಳು ಬಂದೆ ಬರುತ್ತವೆ. ಅದು ಮುಂದೆ ಕೆಲವೊಂದು ಸಂಕೀರ್ಣ ಸನ್ನಿವೇಶಗಳಿಗೆ ಎಡೆಮಾಡಿಕೊಡುವುದು ಸಹಜ. ನಿಮ್ಮ ಜೀವನದ ಕೆಲವೊಂದು ಕಾಲ ಘಟ್ಟಗಳಲ್ಲಿ ನೀವೂ ಕೆಲವೊಂದು ಒತ್ತಡಗಳು ಕಂಡು ಬರುತ್ತವೆ. ನೀವು ನಿಮ್ಮ ಸಂಗಾತಿಯ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರ ವಿಚಾರದಲ್ಲಿ ಅಲ್ಲಿ ಏನು ನಡೆದಿದೆಯೋ ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯು ಇರಬಹುದು. ಅದಕ್ಕಾಗಿ ನಿಮ್ಮ ಸಂಗಾತಿಯೇ ಇದಕ್ಕೆ ವಿರುದ್ಧವಾಗಿ ಹೋರಾಡಲು ಬಿಟ್ಟು ಬಿಡಿ. ಇಡೀ ಸನ್ನಿವೇಶವನ್ನು ನೀವು ವೈಯುಕ್ತಿಕವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಡಿ. ಆದರೆ ನೈತಿಕ ಬೆಂಬಲವೊ ಅಥವಾ ಸಲಹೆ ಸೂಚನೆಗಳು ಬೇಕಾಗಿದ್ದಲ್ಲಿ, ಧನಾತ್ಮಕ ನೆಲೆಗಟ್ಟಿನಲ್ಲಿ ಅಗತ್ಯವಾಗಿ ಒದಗಿಸಿ.

English summary

Essentials Of Marriage Every Couple Should Know

There are certain essentials of marriage every couple should know. These essentials portray a lively figure of a happy marriage. Couples who follow these essentials stick till the end making their marriage a forever bond. If you and your partner seek for a similar forever you must know the tricks and essentials of a marriage. Let's delve deep into the article and learn the essentials of a happy marriage. These essentials are always talked about by the relationship experts. Learning, exercising and mastering the essentials of a marriage is the only way to succeed in gaining marital happiness.
Story first published: Thursday, August 30, 2018, 15:48 [IST]
X
Desktop Bottom Promotion