For Quick Alerts
ALLOW NOTIFICATIONS  
For Daily Alerts

ಬ್ರೇಕ್ ಅಪ್ ಆದರೂ, ಜೊತೆಗೆ ಕಳೆದ ನೆನಪುಗಳು ಹಾಗೆಯೇ ಕಾಡಲಿದೆ

By Hemanth
|

ಹಲವಾರು ವರ್ಷಗಳಿಂದ ಜತೆಯಾಗಿ ಇಬ್ಬರು ಕೂಡ ತಮ್ಮ ಭಾವನೆಗಳನ್ನು ಹಂಚಿಕೊಂಡು, ಸುಖದುಃಖದಲ್ಲಿ ಭಾಗಿಯಾಗಿರುವವರು ಈಗ ಸಂಬಂಧ ಮುರಿದುಬಿಡುವುದು ಅಂದರೇನು? ನಿಜವಾಗಿಯೂ ಸಂಬಂಧವು ಮುರಿದುಹೋಗುವುದೇ? ಅಥವಾ ಸಂಬಂಧ ಮುರಿಯುವುದು ಎನ್ನುವುದು ಕೇವಲ ಮಿಥ್ಯವೇ? ಇದರ ಬಗ್ಗೆ ಹಲವಾರು ರೀತಿಯಲ್ಲಿ ನಾವು ಚರ್ಚೆ ಮಾಡಬಹುದು. ಆದರೆ ನಿಜವಾಗಿಯೂ ಸಂಬಂಧವೆನ್ನುವುದು ಮುರಿಯಲು ಸಾಧ್ಯವೇ?

ಹಾಗಾದರೆ ಅಷ್ಟು ವರ್ಷಗಳಲ್ಲಿನ ಪ್ರೀತಿಯು ಕೇವಲ ತೋರಿಕೆಯೇ ಎನ್ನುವ ಪ್ರಶ್ನೆ ಕೂಡ ಕಾಡದೆ ಇರದು. ಆದರೆ ಸಂಬಂಧದಿಂದ ದೂರವಾದರೂ ನಿಮ್ಮ ಒಳಮನಸ್ಸಿನಲ್ಲಿ ನೆನಪುಗಳು ಹಾಗೆ ಇರುವುದು. ಸಂಬಂಧ ನಿಜವಾಗಿಯೂ ಮುರಿದರೆ ನಮಗೆ ಯಾಕೆ ಸಂಗಾತಿಯೊಂದಿಗೆ ಕಳೆದಿರುವ ಪ್ರೀತಿಯ ಕ್ಷಣಗಳು ನೆನಪಿಗೆ ಬರುವುದು? ಸಂಬಂಧ ಮುರಿಯುವುದು ಎನ್ನುವುದು ಕೇವಲ ಮಿಥ್ಯ ಮತ್ತು ನಿಜವಾಗಿಯೂ ನಾವು ಇದನ್ನು ಮಾಡಲ್ಲ. ಸಂಬಂಧ ಮುರಿಯುವ ಮಿಥ್ಯದ ಬಗ್ಗೆ ನಾವು ಈ ಲೇಖನದಲ್ಲಿ ನಿಮ್ಮೊಂದಿಗೆ ಚರ್ಚಿಸಲಿದ್ದೇವೆ. ಓದಲು ಮುಂದಾಗಿ...

myth in a realtionship

1. ನೆನಪುಗಳು ಹಾಗೆ ಉಳಿಯುವುದು

ನೀವು ಮತ್ತು ನಿಮ್ಮ ಸಂಗಾತಿಯು ಸಂಬಂಧ ಮುರಿದುಕೊಂಡರೂ ನಿಮ್ಮಿಬ್ಬರ ನೆನಪುಗಳು ಮಾತ್ರ ಕಾಡುವುದು. ಹಳೆಯ ಸೆಲ್ಫಿ ಮತ್ತು ಹೊಸತನ್ನು ನೋಡುವಿರಿ. ಆಗ ಪ್ರತಿಯೊಂದು ಕೂಡ ತುಂಬಾ ವೇಗವಾಗಿ ನಡೆಯಿತೆಂಬ ಭಾವನೆ ಬಂದು ಇದನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಬಹುದಿತ್ತು ಎಂದು ಯೋಚಿಸುವಿರಿ. ಆತ/ಆಕೆಯ ಹಿಂದಿನ ನೆನಪು ಒಬ್ಬರನ್ನು ಕಾಡುವುದು. ಆತ/ಆಕೆ ಇದನ್ನು ಸರಿಯಾಗಿ ನಿಭಾಯಿಸಬಹುದಿತ್ತು ಮತ್ತು ಇದು ಕೆಲಸ ಮಾಡಬಹುದಿತ್ತು ಎಂದು ಯೋಚಿಸುವಿರಿ. ಇದಕ್ಕೆ ಕಾರಣವೆಂದರೆ ನಾವು ನೆನಪುಗಳನ್ನು ಕೊಲ್ಲುವುದಿಲ್ಲ ಮತ್ತು ಅದನ್ನು ಬಿಟ್ಟು ಹೋಗಲು ಬಿಡುವುದಿಲ್ಲ. ನಾವು ನಿಜವಾಗಿಯೂ ಸಂಬಂಧ ಮುರಿದಿಲ್ಲವೆನ್ನುವುದನ್ನು ಇದು ಹೇಳುತ್ತದೆ. ಬ್ರೇಕ್ ಅಪ್ ಎನ್ನುವುದು ಕೇವಲ ಶಬ್ಧ ಮಾತ್ರ. ನಾವು ಇನ್ನೊಂದು ಸಂಬಂಧದಲ್ಲಿ ತೊಡಗಿಕೊಳ್ಳದೆ ಇದ್ದರೂ ಕೆಲವೊಂದು ನೆನಪುಗಳು ಹಾಗೂ ಘಟನೆಗಳು ಹಾಗೆ ಉಳಿದುಬಿಡುವುದು. ಇದು ಅಂತ್ಯವಲ್ಲ. ಪ್ರೀತಿ ಹಾಗೂ ನೆನಪಿನ ಮುಂದೆ ಬ್ರೇಕ್ ಅಪ್ ಎನ್ನುವುದು ಕೇವಲ ಶಬ್ಧ ಮಾತ್ರ ಎನ್ನುವುದನ್ನು ಇದು ತೋರಿಸಿಕೊಡುತ್ತದೆ.

2. ಬಾಂಧವ್ಯವನ್ನು ಕೊಲ್ಲುತ್ತೇವೆಯೇ?

ಖಂಡಿತವಾಗಿಯೂ ಇಲ್ಲ, ನಾವು ಎಲ್ಲಾದರೂ ಆ ವ್ಯಕ್ತಿಯನ್ನು ನೋಡಿದಾಗ ನಮ್ಮಲ್ಲಿ ಬಾಂಧವ್ಯವು ಮರಳಿ ಬರುವುದು ಮತ್ತು ಬ್ರೇಕ್ ಅಪ್ ಬಳಿಕವೂ ಇಬ್ಬರು ಪರಸ್ಪರ ಬಾಂಧವ್ಯದಲ್ಲಿ ಇರುವ ಭಾವನೆಯಾಗುವುದು. ಇದನ್ನು ಬದಲಾಯಿಸಲು ನಮಗೆ ಸಾಧ್ಯವಿಲ್ಲ. ಯಾಕೆಂದರೆ ನಮಗೆ ಬಾಂಧವ್ಯವನ್ನು ಕೊಲ್ಲಲು ಆಗಲ್ಲ. ಇದನ್ನು ತೋರಿಸಿಕೊಳ್ಳುವುದನ್ನು ತಡೆಯಬಹುದು. ಬಾಂಧವ್ಯ ಎನ್ನುವುದು ಸಾಯಲ್ಲ. ಹಾಗಾದರೆ ನಾನು ಆ ವ್ಯಕ್ತಿಯೊಂದಿಗಿನ ಪ್ರತಿಯೊಂದು ಸಂಬಂಧ ಕಡಿದುಕೊಂಡಿದ್ದೇನೆ ಎಂದು ಹೇಳುವುದು ಯಾಕೆ? ಆದರೆ ಅವರಿಗಾಗಿ ನಮ್ಮಲ್ಲಿ ಪ್ರೀತಿ ಇರುವುದು ಮತ್ತು ಇದನ್ನು ನಾವು ಹೇಳಲ್ಲ. ಇದರಿಂದ ಬ್ರೇಕ್ ಅಪ್ ಎನ್ನುವುದು ಕೇವಲ ಪದ ಮಾತ್ರ.

3. ಭಾವನೆಗಳನ್ನು ಹಿಂಪಡೆಯುತ್ತೇವೆ

ಬ್ರೇಕ್ ಅಪ್ ಆದಾಗ ಮುಖ್ಯವಾಗಿ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತೇವೆ. ಪ್ರೀತಿ ಮತ್ತು ಭಾವನೆಗಳನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬ್ರೇಕ್ ಅಪ್ ವೇಳೆ ಮಾಡುವಂತಹ ಮೊದಲ ಕೆಲಸ. ನಾವು ಭಾವನೆಗಳಿಂದ ಹೊರಬರುತ್ತೇವೆ. ಆದರೆ ಒಳಗಿರುವಂತಹ ಭಾವನೆಗಳನ್ನು ನಿಯಂತ್ರಿಸಲು ನಮ್ಮಿಂದ ಆಗಲ್ಲ. ಇದರಿಂದ ಬ್ರೇಕ್ ಅಪ್ ಎನ್ನುವುದು ಕೇವಲ ಮಿಥ್ಯ. ಸಂಗಾತಿ ಜತೆಗೆ ಮತ್ತು ಮಾಜಿ ಪ್ರಿಯತಮ/ಪ್ರಿಯತಮೆ ಯೊಂದಿಗೆ ಭಾವನಾತ್ಮಕವಾಗಿ ನಾವು ಬೆಸೆದುಕೊಂಡಿರುತ್ತೇವೆ. ಭಾವನೆಗಳನ್ನು ಹಿಂಪಡೆಯಬಹುದು. ಆದರೆ ಅದು ತಾತ್ಕಾಲಿಕ. ಇದರಿಂದ ಬ್ರೇಕ್ ಅಪ್ ಅನ್ನುವುದು ನಿಜವಲ್ಲ.

4. ಪ್ರೀತಿ ಇರಲ್ಲ

ಪ್ರೀತಿ ಎನ್ನುವುದು ಯಾವತ್ತೂ ಸಾಯಲ್ಲ. ಪ್ರೀತಿ ಆತ್ಮದ ಅಮರ ಭಾವನೆ. ಬೇರೆಯವರ ಮೇಲಿರುವ ಪ್ರೀತಿ ಕಡಿಮೆಯಾಗಬಹುದು ಅಥವಾ ಅದನ್ನು ಹಿಡಿದಿಟ್ಟುಕೊಳ್ಳಬಹುದು ಅಥವಾ ಗೌಪ್ಯವಾಗಿಡಬಹುದು. ಆದರೆ ಇದನ್ನು ಸಂಪೂರ್ಣವಾಗಿ ತೊಡೆದುಹಾಕಲು ಆಗಲ್ಲ. "ಪ್ರತಿಯೊಬ್ಬ ಅಪರಿಚಿತನ ಮುಖದಲ್ಲಿ ನನ್ನ ಮುಖ ಕಾಣಲಿದೆ" ಈ ಉಲ್ಲೇಖವನ್ನು ಎಲ್ಲೋ ಓದಿಕೊಂಡಿದ್ದೆ ಮತ್ತು ಬ್ರೇಕ್ ಅಪ್ ಬಳಿಕ ಇದು ಒಳ್ಳೆಯ ಅರ್ಥ ಕಲ್ಪಿಸುವುದು. ಆತ/ಆಕೆ ತೋರಿಸಿರುವಂತಹ ಪ್ರೀತಿಯನ್ನು ಯಾರೂ ಮರೆಯಲು ಆಗಲ್ಲ. ಇದರಿಂದಾಗಿ ಬ್ರೇಕ್ ಅಪ್ ಬಳಿಕವೂ ನೀವು ಹಾಗೂ ಸಂಗಾತಿಯು ಸಂಪರ್ಕದಲ್ಲಿದ್ದೀರಿ ಎಂದರ್ಥ. ಹೀಗಿದ್ದರೆ ನೀವು ಬ್ರೇಕ್ ಅಪ್ ಮಾಡಿಕೊಂಡಿದ್ದೇವೆ ಎಂದು ಹೇಳಲು ಹೇಗೆ ಸಾಧ್ಯ?

ನಿಮಗೆ ಈ ನಾಲ್ಕು ಕಾರಣಗಳು ಸಾಕು. ಆಳವಾಗಿ ಯೋಚಿಸಿ ಮತ್ತು ಮನಸ್ಸಿನ ಒಳಗಿನ ಭಾವನೆ ನೋಡಿ. ಪ್ರೀತಿಯನ್ನು ನಾವು ಕೊನೆಗೊಳಿಸಲು ಆಗಲ್ಲ. ಇದರ ಮೂಲವನ್ನು ಅದುಮಿಟ್ಟಿಕೊಳ್ಳುತ್ತೇವೆ ಮತ್ತು ಇದು ನಾಶವಾಗಿದೆ ಎಂದು ಹೇಳುತ್ತೇವೆ. ಮಾಜಿ ಪ್ರೇಯಸಿ ಅಥವಾ ಪ್ರಿಯತಮನನ್ನು ನೋಡುವಾಗ ಪ್ರೀತಿ ಒಳಗೆ ಮೂಡುವುದು. ಯಾಕೆಂದರೆ ಇದೆಲ್ಲವೂ ನಾವು ನಿಗ್ರಹಿಸಿಕೊಂಡಿರುವ ಭಾವನೆಗಳಿಂದಾಗಿ ಹೀಗೆ ಆಗುವುದು. ನಮ್ಮ ಮನಸ್ಸು ಇದನ್ನು ನಿಗ್ರಹದಿಂದ ಹೊರಗೆ ಹಾಕುವುದು. ಇದರಿಂದ ಸಂಬಂಧದಲ್ಲಿ ಬ್ರೇಕ್ ಅಪ್ ಎನ್ನುವುದು ಕೇವಲ ಮಿಥ್ಯ. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಿಕೊಳ್ಳಲು ಮರೆಯಬೇಡಿ.

English summary

Break-Up Is The Only Myth In A Relationship

Why is break-up the end of a relationship? Is break-up a myth in a relationship? Thinking about it has brought me into the light where I am ready to say it is a myth and we don't really break up with our partners in a relationship. The thing about breaking up with your partner is you call it an end of the era of a relationship between you and your partner. What if I say you never call it an end? Do you think after connecting to someone for so many days and building so many moments and memories, you just say, "I'm done with you and I break up"?
X
Desktop Bottom Promotion