For Quick Alerts
ALLOW NOTIFICATIONS  
For Daily Alerts

ವಿವಾಹೇತರ ಸಂಬಂಧದ ಹೊರತೂ ಕೆಲವು ದಾಂಪತ್ಯ ದ್ರೋಹಗಳು!

By Hemanth
|

ಸಂಬಂಧವೆನ್ನುವುದು ಸಂಗಾತಿಗಳಿಬ್ಬರ ಪ್ರೀತಿ, ನಂಬಿಕೆ ಮೇಲೆ ನಿರ್ಧಾರವಾಗಿರುವುದು. ಸಂಬಂಧವನ್ನು ಉಳಿಸಿಕೊಂಡು ಹೋಗಲು ತುಂಬಾ ಶ್ರಮ ವಹಿಸಬೇಕಾಗುತ್ತದೆ. ಸಂಬಂಧದಲ್ಲಿ ಪ್ರಮುಖವಾಗಿ ಕೆಲವೊಂದು ಸಲ ಸಂಗಾತಿಯು ಬೇರೊಂದು ಸಂಬಂಧ ಇಟ್ಟುಕೊಂಡು ದ್ರೋಹ ಮಾಡಬಹುದು. ಆದರೆ ಕೇವಲ ಇಷ್ಟು ಮಾತ್ರಕ್ಕೆ ಸಂಬಂಧವು ಕಡಿದುಹೋಗುವುದು, ವಿಚ್ಛೇದನಕ್ಕೆ ಕಾರಣವಾಗುವುದು ಎಂದು ಹೇಳಲಾಗದು. ಯಾಕೆಂದರೆ ಸಂಬಂಧವು ಮುರಿದು ಬೀಳಲು ಇತರ ಕೆಲವು ಕಾರಣಗಳು ಇವೆ.

ಯಾವುದೇ ಸಂಬಂಧವಾದರೂ ಅದನ್ನು ತುಂಬಾ ಲಘುವಾಗಿ ಪರಿಗಣಿಸಬಾರದು. ಸಂಬಂಧವನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಕಠಿಣ ಪರಿಶ್ರಮ ಹಾಗೂ ಬದ್ಧತೆ ಬೇಕಾಗುವುದು. ಪ್ರತಿನಿತ್ಯವು ಸ್ವಹಿತಾಸಕ್ತಿಯಿಂದ ಸಂಬಂಧದ ಬಗ್ಗೆ ಗಮನಹರಿಸಬೇಕು. ಕೆಲವೊಂದು ಸಂದರ್ಭದಲ್ಲಿ ನಿಮ್ಮ ಪ್ರೀತಿಗಾಗಿ ಹೋರಾಟ ಕೂಡ ಮಾಡಬೇಕಾಗಿ ಬರಬಹುದು. ಸಂಬಂಧಕ್ಕಾಗಿ ಕಠಿಣ ಪರಿಶ್ರಮ ವಹಿಸುವುದು ಅತೀ ಅಗತ್ಯ. ಸಂಗಾತಿಗೆ ಮೋಸ ಮಾಡುವಂತಹ ಮನಸ್ಥಿತಿಯು ನಿಮ್ಮಲ್ಲಿ ಇರಬಾರದು ಮತ್ತು ಅವರಿಗೂ ಇಂತಹ ಅವಕಾಶ ನೀಡಬಾರದು.

betrayal

ಮನಸ್ಸಿನಲ್ಲಿ ಸಣ್ಣ ಸಂಶಯವು ನಿಮ್ಮಿಬ್ಬರ ಸಂಬಂಧದಲ್ಲಿ ದೊಡ್ಡ ಕಂದಕ ಉಂಟು ಮಾಡಬಹುದು. ಸಂಬಂಧವೆನ್ನುವುದು ಯಾವಾಗಲೂ ಪಾರದರ್ಶಕವಾಗಿರಬೇಕು. ಇದರಿಂದ ಪರಸ್ಪರ ಜತೆಯಾಗಿದ್ದುಕೊಂಡು ಇದನ್ನು ಬೆಳೆಸಬೇಕು. ಸಂಬಂಧಲ್ಲಿ ನಂಬಿಕೆ ಮತ್ತು ಪ್ರೀತಿ ಇಲ್ಲದೆ ಇರುವಾಗ ಅದು ಉಳಿಯುವುದು ಕಷ್ಟ. ಇದರಿಂದ ಸಂಗಾತಿ ಜತೆಗಿನ ಸಂಬಂಧವನ್ನು ಕದಡುವ ಬಗ್ಗೆ ಯಾವತ್ತೂ ಯೋಚನೆ ಮಾಡಬೇಕು. ಇದು ನಿಮ್ಮ ಸಂಬಂಧಕ್ಕೆ ತುಂಬಾ ಅಪಾಯಕಾರಿಯಾಗಬಲ್ಲದು.

ಸಾಮಾನ್ಯವಾಗಿ ನಂಬಿಕೆದ್ರೋಹ ಯಾವಾಗ ಆಗುವುದು?

ಸಂಬಂಧದಲ್ಲಿ ನಂಬಿಕೆದ್ರೋಹವು ಎರಡು ಪರಿಸ್ಥಿತಿಯಲ್ಲಿ ನಡೆಯುವುದು. ಮೊದಲನೇಯದಾಗಿ ಮೋಸವಾದಾಗ. ಸಂಬಂಧಕ್ಕೆ ಚಿತ್ರಣದಲ್ಲೇ ಇಲ್ಲದ ವ್ಯಕ್ತಿಯೊಬ್ಬ ಭಾವನಾತ್ಮಕವಾಗಿ ಸಂಪರ್ಕಕ್ಕೆ ಹಂಬಲಿಸುವಾಗ.

ಬೇರೆ ವಿಧದ ದ್ರೋಹಗಳು ಯಾವುದು?

1. ಷರತ್ತಿನ ಪ್ರೀತಿ

ಷರತ್ತಿನ ಪ್ರೀತಿಯು ನಿಜವಾದ ಪ್ರೀತಿಯಲ್ಲ. ಇದು ಪ್ರೀತಿಯ ಪಾವಿತ್ರ್ಯತೆ ಉರುಳಿಸುವ ಒಂದು ರೂಪ. ಷರತ್ತಿನ ಪ್ರೀತಿಯು ಯಾವತ್ತಿಗೂ ನಿಜವಾದ ಪ್ರೀತಿಯಲ್ಲ. ಇದು ಸಂಬಂಧದಲ್ಲಿ ಆಗುವ ವಿಶ್ವಾಸದ್ರೋಹದಲ್ಲಿ ಒಂದು ವಿಧ.

ಷರತ್ತಿನ ಪ್ರೀತಿಯು ಯುಕ್ತಿಪೂರ್ಣವಾಗಿರುವುದು ಮತ್ತು ಇದು ಸಂಬಂಧದಲ್ಲಿ ಯಾವಾಗಲೂ ತುಂಬಾ ಅಪಾಯಕಾರಿ. ನೀವು ಮತ್ತು ನಿಮ್ಮ ಸಂಗಾತಿಯು ಪರಸ್ಪರರ ವಿರುದ್ಧ ಗೆಲ್ಲಲು ಯುಕ್ತಿಯನ್ನು ಪ್ರದರ್ಶಿಸಬಹುದು.

ಷರತ್ತಿನ ಪ್ರೀತಿಯ ಸಂಬಂಧವು ಯಾವುದೇ ಸಂಗಾತಿಯ ಪರವಾಗಿ ಕೆಲಸ ಮಾಡುವುದಿಲ್ಲ. ಯುಕ್ತಿಗೆ ಒಳಗಾಗಿರುವವರು ಸಂಬಂಧದಿಂದ ಹೊರಹೋಗಬಹುದು ಅಥವಾ ಪ್ರೀತಿ ಕಳೆದುಕೊಳ್ಳಬಹುದು.

ಸಂಬಂಧದಲ್ಲಿ ಷರತ್ತಿನ ಪ್ರೀತಿಯು ಯಾವತ್ತೂ ಆರೋಗ್ಯಕರ ಮಾರ್ಗವಲ್ಲ. ಕಾರಣ ಏನೇ ಇದ್ದರೂ ಒಬ್ಬರು ಇನ್ನೊಬ್ಬರನ್ನು ಯಾವಾಗಲೂ ಪ್ರೀತಿ ಮಾಡಬೇಕೆಂದು ಬಯಸುತ್ತಾ ಇರುವರು. ನೀವು ಮತ್ತು ಸಂಗಾತಿಯು ನಿಜ, ಸ್ಥಿರ ಮತ್ತು ಷರತ್ತುರಹಿತ ಪ್ರೀತಿಯನ್ನು ಬಯಸಬೇಕು.

ಪ್ರೀತಿ ಮತ್ತು ಷರತ್ತನ್ನು ಮಾರ್ಪಡಿಸಿಕೊಂಡು ಇರುವಂತಹ ಸಂಬಂಧದಲ್ಲಿ ಯಾವತ್ತಿಗೂ ಇರಬೇಡಿ.

2. ಭಾವನಾತ್ಮಕವಾಗಿ ದಾಂಪತ್ಯ ದ್ರೋಹ

ವಿವಾಹೇತರ ಸಂಬಂಧಗಳು ಇದ್ದಾಗ ದಾಂಪತ್ಯ ದ್ರೋಹವು ನಡೆಯುವುದು. ದಾಂಪತ್ಯ ದ್ರೋಹವು ಕೆಲವೊಮ್ಮೆ ಭಾವನಾತ್ಮಕವಾಗಿ ನಡೆಯುವುದು. ಒಬ್ಬರು ಅನೈತಿಕವಾಗಿ ಮತ್ತೊಬ್ಬರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಮಾತ್ರ ದಾಂಪತ್ಯ ದ್ರೋಹವಲ್ಲ. ಇದು ಸ್ವಾಭಾವಿಕವಾಗಿ ಭಾವನಾತ್ಮಕವಾಗಿರುವುದು. ದಾಂಪತ್ಯದ್ರೋಹವೆಂದು ಪರಿಗಣಿಸಲು ನೀವು ಬೇರೆಯವರಿಗೆ ಚುಂಬನ ಅಥವಾ ಸ್ಪರ್ಶಿಸಬೇಕೆಂದಿಲ್ಲ.

ಮತ್ತೊಬ್ಬರ ಬಗ್ಗೆ ತುಂಬಾ ಗಾಢವಾದ ಭಾವನೆಗಳನ್ನು ಹೊಂದಿರುವುದು ಮತ್ತು ಆ ಭಾವನೆಗಳತ್ತ ಕೆಲಸ ಮಾಡುವುದು ಕೂಡ ಭಾವನಾತ್ಮಕ ದಾಂಪತ್ಯ ದ್ರೋಹದ ಭಾಗವೆಂದು ಪರಿಗಣಿಸಲಾಗಿದೆ. ಇದು ಕೂಡ ಭಾವನಾತ್ಮಕ ದ್ರೋಹ. ನೀವು ಒಬ್ಬರನ್ನು ಪ್ರೀತಿಸಿ, ಮತ್ತೊಬ್ಬರೊಂದಿಗೆ ಸಂಬಂಧದಲ್ಲಿ ಇರುವುದು.

ಇದರಿಂದ ನಿಮ್ಮ ಸಂಬಂಧಕ್ಕೆ ಯಾವುದೇ ನ್ಯಾಯ ಸಿಗುವುದಿಲ್ಲ. ಸಂಬಂಧವು ಕೆಡದಂತೆ ಇರಲು ನೀವು ಇದನ್ನು ಕಡೆಗಣಿಸಬೇಕು. ಉತ್ತೇಜನವೆನ್ನುವುದು ಮನುಷ್ಯನಿಗೆ ಸಹಜವಾದರೂ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕಲಿಯಬೇಕು. ಇಲ್ಲವಾದಲ್ಲಿ ಸಂಬಂಧವು ಮುರಿದು, ನೀವು ಮೋಸಗಾರರಾಗುವಿರಿ. ಭಾವನಾತ್ಮಕ ದ್ರೋಹವನ್ನು ಕಡೆಗಣಿಸಿ, ಇಂತಹ ದ್ರೋಹದ ಬಗ್ಗೆ ಹೆಚ್ಚಾಗಿ ಚರ್ಚಿಸಲಾಗುವುದಿಲ್ಲ.

3. ನಿಷೇಧಿತ ಭಾವನಾತ್ಮಕ ಚಟುವಟಿಕೆಗಳು

ಇದು ಕೂಡ ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ಹೊರಗಿರುವುದು. ನಿಮ್ಮ ಮತ್ತು ಸಂಗಾತಿ ಮಧ್ಯೆ ಸ್ವಲ್ಪ ಮಟ್ಟಿನ ಮನಸ್ತಾಪವಾಗಿರುವ ಕಾರಣಕ್ಕೆ ನೀವು ಭಾವನಾತ್ಮಕವಾಗಿ ಹೊರಗಿರುವುದು ಕೂಡ ಒಂದು ರೀತಿಯ ದ್ರೋಹ. ನೀವು ಮತ್ತು ಸಂಗಾತಿಯು ಪ್ರಾಮಾಣಿಕವಾಗಿ ಸಂಬಂಧದಲ್ಲಿ ಒಳಗೊಂಡ ಬಲಿಕ ನೀವು ಕೂಡ ಇದಕ್ಕೆ ಬದ್ಧರಾಗಿರಬೇಕು.
ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಸ್ವಲ್ಪ ಮಟ್ಟಿನ ಪ್ರಕ್ಷುಬ್ಧತೆ ಇರಬಹುದು. ಇಂತಹ ಸಮಯದಲ್ಲಿ ನೀವು ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಆಕೆ/ ಆತನಿಗೆ ಬೆಂಬಲವಾಗಿ ನಿಲ್ಲಬೇಕು. ಇಂತಹ ಪರಿಸ್ಥಿತಿಯಲ್ಲಿ ನೀವು ಸಂಬಂಧವನ್ನು ಎತ್ತಿ ಹಿಡಿಯಬೇಕು ಮತ್ತು ಹೀಗೆ ಮಾಡದೇ ಇದ್ದರೆ ಆಗ ಸಂಬಂಧವು ಮುರಿದು ಬೀಳುವುದು.

ನೀವು ಯಾವಾಗಲೂ ಅಲ್ಲಿದ್ದುಕೊಂಡು ನಿಮ್ಮ ಪ್ರೀತಿಗಾಗಿ ಹೋರಾಡಬೇಕು. ಎಲ್ಲವೂ ನಿಮ್ಮ ವಿರುದ್ಧವಾಗಿದ್ದರೂ ನೀವು ಇದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನಿಮ್ಮ ಸಂಗಾತಿ ಮತ್ತು ಸಂಬಂಧವು ಇರುವ ಪರಿಸ್ಥಿತಿಯಿಂದ ನೀವು ಭೀತಿಯ ಕಾರಣದಿಂದ ದೂರವಾದರೆ ಆಗ ನಿಮ್ಮ ಸಂಗಾತಿಯನ್ನು ನಡುದಾರಿಯಲ್ಲಿ ಕೈಬಿಟ್ಟಂತೆ ಆಗುವುದು.

ಇಂತಹ ಪರಿಸ್ಥಿತಿಯು ನಿರ್ಮಾಣವಾಗದಂತೆ ನೋಡಿಕೊಳ್ಳಿ. ಇದು ತುಂಬಾ ಅನಾರೋಗ್ಯಕಾರಿ ಮತ್ತು ಒಂದು ವಿಧದ ದ್ರೋಹ. ನೀವಿಬ್ಬರು ಯಾವುದೇ ಪರಿಸ್ಥಿತಿಯಲ್ಲೂ ಜತೆಯಾಗಿರಿ. ಸಂಗಾತಿಗೆ ಅಗತ್ಯವಿದ್ದಾಗ ದೂರ ಓಡುವ ಬದಲು ಆದಷ್ಟು ಹತ್ತಿರವಾಗಿರಿ.

ಈ ಮೂರು ವಿಧದ ದ್ರೋಹಗಳು ಸಂಬಂಧದಲ್ಲಿ ನಡೆಯುವುದು. ಈ ದ್ರೋಹಗಳು ತುಂಬಾ ಹೊರೆ ಉಂಟು ಮಾಡುವುದು ಮತ್ತು ಸಂಬಂಧವು ಮುರಿದು ಹೋಗಲು ಕಾರಣವಾಗಬಹುದು. ಇಂತಹ ದ್ರೋಹವೆಸಗುವುದರಿಂದ ದೂರವಿರಿ. ನೀವು ಸಂಬಂಧದಲ್ಲಿ ತುಂಬಾ ಸಂತೋಷ ಹಾಗೂ ಪ್ರೀತಿಯನ್ನು ಗಳಿಸಲು ಪ್ರಯತ್ನಿಸಿ. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಶೇರ್ ಮಾಡಿಕೊಳ್ಳಲು ಮರೆಯಬೇಡಿ.

English summary

Betrayals Other Than Having An Affair

If your partner is indulging in an affair with someone else, then it will definitely put a strain on your relationship but it won’t be the end of your relationship or the betrayal that will lead to the end of the relationship. The reasons behind the relationships ending due to betrayal are others. There are a few other more subtle forms of betrayal which will stress you up in the relationship and might cause the end. And these few other forms of betrayal have the potential to destroy the trust that you and your partner have for each other.
X
Desktop Bottom Promotion