For Quick Alerts
ALLOW NOTIFICATIONS  
For Daily Alerts

ತುಂಬಾ ಪ್ರೀತಿಸುತ್ತಿದ್ದ ಸಂಗಾತಿಯಿಂದಲೇ ಮೋಸ ಆಗಿದೆಯೇ? ಏಕೆ ಹೀಗೆ ಆಗುತ್ತದೆ ಗೊತ್ತಾ?

|

ಪ್ರೀತಿಯಲ್ಲಿ ನಂಬಿಕೆ, ಗೌರವ ಮತ್ತು ಬದ್ಧತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ಒಂದು ಸಂಬಂಧದ ಅಡಿಪಾಯ ಅಂದರೆ ತಪ್ಪಾಗಲ್ಲ. ಸಂಬಂಧ ನಿಂತಿರುವುದೇ ಇದರ ಮೇಲೆ. ಆದರೆ, ಇವುಗಳೇ ಪ್ರೀತಿಯಲ್ಲಿ ಇಲ್ಲದೇ ಹೋದಾಗ, ಅಲ್ಲಿ ಪ್ರೀತಿ ಮರೆಯಾಗಿ, ಮೋಸ ತಲೆ ಎತ್ತಿರುತ್ತದೆ.

ಕೆಲವೊಮ್ಮೆ ನಾವು ಹೆಚ್ಚು ಪ್ರೀತಿಸಿರುವ ವ್ಯಕ್ತಿಯೇ ನಮಗೆ ಮೋಸ ಅಥವಾ ವಂಚನೆ ಮಾಡುತ್ತಾರೆ. ಹೀಗೆಕಾಯಿತು ಅಂತ ಯೋಚಿಸುವಷ್ಟರಲ್ಲಿ ಅವರು ನಮ್ಮನ್ನು ಬಿಟ್ಟು, ಇತರರೊಂದಿಗೆ ಹೊಸ ಜೀವನವನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತುದ್ದವರು ಮೋಸ ಮಾಡಿರುವುದು ಏಕೆ ಎಂಬ ಪ್ರಶ್ನೆ ಮೋಸ ಹೋದವರಲ್ಲಿ ಕಾಡದೇ ಇರದು. ಈ ಪ್ರಶ್ನೆಗೆ ನಾವಿಂದು ಉತ್ತರ ಕೊಡಲಿದ್ದೇವೆ. ಹೌದು, ಪ್ರೀತಿ ಮಾಡೋ ಜೀವಕ್ಕೆ ಜನ ಏಕೆ ಮೋಸ ಮಾಡುತ್ತಾರೆ ಎಂಬುದಕ್ಕೆ ಕಾರಣಗಳನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ.

ತಾವು ಪ್ರೀತಿ ಮಾಡೋ ಜೀವಕ್ಕೆ ಜನ ಏಕೆ ಮೋಸ ಮಾಡುತ್ತಾರೆ ಎಂಬುದಕ್ಕೆ ಇಲ್ಲಿವೆ ಕಾರಣಗಳು:
ಅನ್ಯೋನ್ಯತೆಯ ಕೊರತೆ:

ಅನ್ಯೋನ್ಯತೆಯ ಕೊರತೆ:

ಅನ್ಯೋನ್ಯತೆಯ ಕೊರತೆ:

ಯಾವುದೇ ಸಂಬಂಧಕ್ಕಾದರೂ ಅನ್ಯೋನ್ಯತೆ ಬಹಳ ಮುಖ್ಯ. ಅನ್ಯೋನ್ಯತೆ ಇದ್ದಾಗ ಮಾತ್ರ, ತಮ್ಮ ಸುಖ-ದುಃಖಗಳನ್ನು ತಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದು. ಇಲ್ಲವಾದಲ್ಲಿ ಇಬ್ಬರ ನಡುವೆ ಒಂದು ರೀತಿಯ ಗಡಿ ನಿರ್ಮಾಣವಾಗಿ, ಭಿನ್ನಾಭಿಪ್ರಾಯಗಳು ಮೂಡತೊಡಗುತ್ತವೆ. ಈ ಅನ್ಯೋನ್ಯತೆಯ ಕೊರತೆ ಸಾಮಾನ್ಯವಾಗಿ, ಒಬ್ಬರಿಂದ ಇನ್ನೊಬ್ಬರಿಗೆ ತೃಪ್ತಿ ಸಿಗದೇ ಹೋದಾಗ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಸಂಗಾತಿಗೆ ಏನು ಅವಶ್ಯಕವೋ, ಅದನ್ನು ಇಬ್ಬರು ಕುಳಿತು ಮಾತನಾಡಿ, ಬಗೆಹರಿಸಿಕೊಳ್ಳಿ. ಇಲ್ಲವಾದಲ್ಲಿ ಅವರು ಬೇರೊಬ್ಬರನ್ನು ಹುಡುಕುತ್ತಾ ಹೋಗಬಹುದು.

ಸಂಬಂಧದಲ್ಲಿ ನಿರ್ಲಕ್ಷ್ಯ:

ಸಂಬಂಧದಲ್ಲಿ ನಿರ್ಲಕ್ಷ್ಯ:

ಹೌದು, ಸಂಬಂಧಲ್ಲಿ ಏನು ಬೇಕಾದರೂ ಸಹಿಸಿಕೊಳ್ಳಬಹುದು. ಅದರೆ ನಿರ್ಲಕ್ಷ್ಯವನ್ನು ಮಾತ್ರ ಎಂದಿಗೂ ಸಹಿಸಲು ಅಸಾಧ್ಯವಾಗಿರುತ್ತದೆ. ಪ್ರತಿಯೊಂದು ವಿಚಾರದಲ್ಲೂ ತಮ್ಮನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಅಥವಾ ಯಾವುದಾದರೂ ನಿರ್ಧಾರ ಮಾಡುವಾಗ ತಮ್ಮ ಅಭಿಪ್ರಾಯವನ್ನ ಲೆಕ್ಕಿಸದೇ ಇರೋದು ಎಲ್ಲವೂ ನಿರ್ಲಕ್ಷ್ಯದ ಒಂದು ಲಕ್ಷಣವಾಗಿದೆ. ಕೇವಲ ಒಬ್ಬರಷ್ಟೇ ಆದ್ಯತೆ, ಗಮನ ನೀಡುವುದು ಮಾಡುತ್ತಿದ್ದರೆ, ಅವರಿಗೆ ತಮ್ಮ ಬಗ್ಗೆ ನಿರ್ಲಕ್ಷ್ಯದ ಭಾವನೆ ಮೂಡತೊಡಗುತ್ತದೆ. ಆಗ ಸಹಜವಾಗಿಯೇ ಈ ಸಂಬಂಧ ಬೇಡವೆನಿಸುವುದು.

ಸೇಡು:

ಸೇಡು:

ನೋವು ಮತ್ತು ಕೋಪವನ್ನು ವ್ಯಕ್ತಪಡಿಸುವ ಭಯಾನಕ ಮಾರ್ಗವೇ ಸೇಡು. ನೀವು ಎಂದೋ ಮಾಡಿರುವ ತಪ್ಪಿಗೆ ಅಥವಾ ಯಾವತ್ತೋ ಮಾಡಿರುವ ನೋವಿಗೆ, ಇಂದು ಈ ರೀತಿ ಪ್ರೀತಿಗೆ ಮೋಸ ಮಾಡಿ ಸೇಡು ತೀರಿಸಿಕೊಳ್ಳುವ ಸಂದರ್ಭವೂ ಇದೆ. ಆದರೆ, ಇಂತಹ ವಿಷಯಕ್ಕಾಗಿ ಪ್ರೀತಿಯನ್ನು ಅಸ್ತ್ರವಾಗಿ ಬಳಸುವುದು ಎಂದಿಗೂ ಸರಿಯಲ್ಲ.

ಬದಲಾವಣೆಯ ಬಯಕೆ:

ಬದಲಾವಣೆಯ ಬಯಕೆ:

ಕೆಲವರಿಗೆ ಒಂದೇ ರೀತಿಯ ವ್ಯಕ್ತಿಯ ಜೊತೆಗೆ ಇರೋದು ಬೋರ್ ಅನ್ನಿಸುವುದು ಉಂಟು. ಯಾವಾಗಲೂ ಹೊಸದಾಗಿ ವಿಭಿನ್ನವಾದುದ್ದನ್ನು ಹುಡುಕುತ್ತಿರುತ್ತಾರೆ. ಅಂತಹವರು ರಿಲೇಷನ್‌ಶಿಪ್‌ ಸಪ್ಪೆಯಿದೆ ಅನ್ನಿಸಿದಾಗ, ಆ ವ್ಯಕ್ತಿಗೆ ಮೋಸ ಮಾಡಿ, ಹೊಸ ವ್ಯಕ್ತಿಯನ್ನು ಹುಡುಕಬಹುದು. ಇಂತಹವರು ತಮ್ಮ ಲೈಂಗಿಕ ಜೀವನದಲ್ಲಿ ವೈವಿಧ್ಯತೆಯನ್ನು ಬಯಸಬಹುದು ಅಥವಾ ತಮ್ಮ ದಿನನಿತ್ಯದ ಜೀವನದಲ್ಲಿಯೇ ಕೆಲವು ರೀತಿಯ ಸಾಹಸವನ್ನು ಬಯಸಬಹುದು.

ಬದ್ಧತೆಯ ಸಮಸ್ಯೆಗಳು:

ಬದ್ಧತೆಯ ಸಮಸ್ಯೆಗಳು:

ಕಮಿಂಟ್‌ಮೆಂಟ್ ಮೋಸಕ್ಕೆ ಕಾರಣವಲ್ಲ, ಆದರೆ ಕೆಲವು ಸಂಬಂಧಗಳು ಕೊನೆಗೊಳ್ಳಲು ಒಂದು ದೊಡ್ಡ ಕಾರಣ ಇದೇ ಅಗಿದೆ. ಯಾಕಂದ್ರೆ ಕೆಲವರಿಗೆ ಬದ್ಧತೆ ಅಥವಾ ಕಮಿಟ್‌ಮೆಂಟ್‌ನಲ್ಲಿ ಇರೋದಂದ್ರೆ ಇಷ್ಟವಾಗೋದಿಲ್ಲ. ಯಾವುದೇ ಕಮಿಂಟ್‌ಮೆಂಟ್ ಇಲ್ಲದೇ ಸ್ವತಂತ್ರವಾಗಿ ಇರೋದನ್ನ ಕೆಲವರು ಇಷ್ಟಪಡುತ್ತಾರೆ. ಅಂತಹವರು ಮುಂದಿರುವ ಕಮಿಟ್‌ಮೆಂಟ್ಸ್‌ಗೆ ಹೆದರಿ, ತಮ್ಮ ಸಂಬಂಧವನ್ನು ಮುರಿದುಕೊಳ್ಳುವ ನಿರ್ಧಾರ ಮಾಡುತ್ತಾರೆ.

ಕೆಲವೊಂದು ಅವಕಾಶಗಳು:

ಕೆಲವೊಂದು ಅವಕಾಶಗಳು:

ಹೌದು, ಕೆಲವೊಬ್ಬರಿಗೆ ಸಿಗುವ ಅವಕಾಶಗಳೇ, ಅವರನ್ನು ಮೋಸ ಮಾಡುವಂತೆ ಮಾಡಿಬಿಡುತ್ತವೆ. ಅಂದ್ರೆ, ಯಾವುದೋ ಒಂದು ಪಾರ್ಟಿಯಲ್ಲಿ ಇನ್ಯಾರನ್ನೋ ಭೇಟಿ ಮಾಡಿ ಅವರ ಕಡೆಗೆ ಮನಸ್ಸನ್ನು ಕರೆಯಬಿಡೋದು, ಅಥವಾ ತಮಗೆ ಪ್ರೀತಿ ಇದ್ದರೂ ಆಫೀಸಿನಲ್ಲಿ ಸಹೋದ್ಯೋಗಿಗಳ ಮೇಲೆ ಆಕರ್ಷಣೆ ಹೊಂದಿರೋದು.. ಅದರಲ್ಲಿ ಅವರದ್ದೇನೂ ತಪ್ಪಿಲ್ಲ ಅಂತ ಹೇಳೋಕೆ ಆಗೋದಿಲ್ಲ. ಯಾಕಂದ್ರೆ ಅಂತಹ ಅವಕಾಶ ಸಿಕ್ಕಾಗ, ತಮ್ಮ ಪ್ರೀತಿಯನ್ನು ಮರೆತು, ಮೋಸಕ್ಕೆ ಇಳಿಯೋದು ಅವರದ್ದೇ ತಪ್ಪು ಅಲ್ವಾ?.

ಪ್ರೀತಿ ಮರೆಯಾಗುವುದು:

ಪ್ರೀತಿ ಮರೆಯಾಗುವುದು:

ಕೆಲವೊಮ್ಮೆ, ನೀವು ಪ್ರೀತಿಸುವ ವ್ಯಕ್ತಿ ನಿಮ್ಮನ್ನು ಪ್ರೀತಿಸದೇ ಇರಬಹುದು. ಇದಕ್ಕೆ ಕಾರಣ, ಅವರ ನಿಮ್ಮ ಮೇಲಿನ ಅಕರ್ಷಣೆ ಕಳೆದುಕೊಂಡಿರಬಹುದು. ಅದಕ್ಕಾಗಿ ನಿಮ್ಮೊಂದಿಗೆ ಮತ್ತೆ ಪ್ರೀತಿಯಲ್ಲಿ ಬೀಳಲು ಪ್ರಯತ್ನಿಸುವ ಬದಲು , ಅವರು ಅದನ್ನು ಬೇರೆಡೆ ಹುಡುಕುತ್ತಾರೆ. ಒಮ್ಮೆ ಪ್ರೀತಿಯು ಮರೆಯಾದರೆ, ಆ ಪ್ರೀತಿಯ ಭಾವನೆಯನ್ನು ಮರಳಿ ಪಡೆಯುವುದು ಕಷ್ಟವೇ ಸರಿ.

ಸ್ವಾಭಿಮಾನದ ಸಮಸ್ಯೆಗಳು:

ಸ್ವಾಭಿಮಾನದ ಸಮಸ್ಯೆಗಳು:

ಸಂಬಂಧದಲ್ಲಿ ಪರಸ್ಪರ ಗೌರವ ಬಹಳ ಮುಖ್ಯ. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಮಾತು, ನಡವಳಿಕೆಗಳು ನಡೆಯುತ್ತಿದ್ದರೆ, ಅದನ್ನು ಯಾರೂ ಸಹಿಸುವುದಿಲ್ಲ. ಅಂತಹ ಸಂಬಂಧದಲ್ಲಿ ಇರಲು ಇಚ್ಛೆಯೂ ಪಡೋದಿಲ್ಲ. ಅದರಿಂದ ದೂರ ಬರಲು ಬಯಸುತ್ತಾರೆ.

ನೀವು ಅಥವಾ ನಿಮ್ಮ ಸಂಗಾತಿ ಮೋಸ ಮಾಡಿದರೆ ಏನು ಮಾಡಬೇಕು?

1. ನೀವು ಸತ್ಯವನ್ನು ಬಹಿರಂಗಪಡಿಸಲು ಬಯಸುತ್ತೀರಾ ಎಂದು ನಿರ್ಧರಿಸಿ:

ನೀವು ಮೋಸ ಮಾಡಿದ್ದರೆ, ನಿಮ್ಮ ಸಂಗಾತಿಗೆ ಹೇಳಬೇಕೋ ಅಥವಾ ಬೇಡವೋ ಎಂಬುದನ್ನು ಮೊದಲು ನಿರ್ಧರಿಸಿ. ನಿಮಗೆ ಮೋಸ ಮುಂದುವರಿಸಲು ಇಷ್ಟವಿಲ್ಲದಿದ್ದರೆ, ಅದನ್ನು ಸಂಗಾತಿಯ ಮುಂದೆ ಹೇಳಿಕೊಂಡು, ಪ್ರಾಮಾಣಿಕ ಕ್ಷಮೆಯಾಚನೆ ಮಾಡುವುದು ಒಳ್ಳೆಯದು.

2. ಕ್ಷಮೆಯನ್ನು ಅಭ್ಯಾಸ ಮಾಡಿ:

ನೀವು ಮೋಸ ಮಾಡಿದ್ದರೆ, ಸ್ವಲ್ಪ ಆತ್ಮಾವಲೋಕನ ಮಾಡಿ. ಮೋಸ ಮಾಡಲು ನಿಮ್ಮನ್ನು ಪ್ರೇರೇಪಿಸಿದ್ದು ಯಾವುದು? ಇದು ವೈಯಕ್ತಿಕ ಸಮಸ್ಯೆಯೇ ಅಥವಾ ಸಂಬಂಧದಲ್ಲಿನ ಅತೃಪ್ತಿಯಿಂದ ಆಗಿರುವುದೇ ಯೋಚಿಸಿ. ನೀವು ಕಾರಣವನ್ನು ನಿರ್ಧರಿಸಿದ ನಂತರ, ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಿ. ಎಲ್ಲಕ್ಕಿಂತಲೂ ಮುಖ್ಯವಾಗಿ ನಿಮ್ಮನ್ನು ನೀವು ಕ್ಷಮಿಸಿಕೊಳ್ಳಿ, ನಂತರ ಸಂಗಾತಿ ಜೊತೆ ಕ್ಷಮೆ ಕೇಳಿ.

3. ಅವರು ತಮ್ಮನ್ನು ತಾವು ವಿವರಿಸಲಿ.

ನೀವು ಮೋಸ ಹೋದರೆ, ಶಾಂತವಾಗಿರಲು ಪ್ರಯತ್ನಿಸಿ. ಯಾವುದೇ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸಂಗಾತಿ ಅವರ ಕ್ರಿಯೆಗಳ ಬಗ್ಗೆ ಏನು ಹೇಳುತ್ತಾರೆಂದು ಕೇಳಿ, ಅವರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಮತ್ತು ದೈಹಿಕ ಮುಖಾಮುಖಿಯಿಂದ ದೂರವಿರಿ.

4. ನಿಮ್ಮ ಸಂಗಾತಿ ಮೋಸ ಮಾಡಿದರೆ, ನಿಮ್ಮನ್ನು ದೂಷಿಸಿಕೊಳ್ಳದಿರಿ:

ನೀವು ಮೋಸ ಹೋದರೆ, ಇದು ನಿಮ್ಮ ತಪ್ಪು ಅಲ್ಲ ಎಂದು ಅರ್ಥಮಾಡಿಕೊಳ್ಳಿ. ಅವರು ಏಕೆ ಮೋಸ ಮಾಡಿದರು ಎಂಬುದಕ್ಕೆ ಕಾರಣ ನೀಡಿದರೂ ಅದು ಅವರ ಹೊರೆಯೇ ಹೊರತು ನಿಮ್ಮದಲ್ಲ. ಆದ್ದರಿಂದ ಈ ಮೋಸಕ್ಕೆ ನಿಮ್ಮನ್ನು ಹೊಣೆ ಮಾಡಿಕೊಳ್ಳದಿರಿ.

English summary

Why People Cheat on Partners They Really Love in Kannada

Here we talking about Why People Cheat on Partners They Really Love in Kannada, read on
X
Desktop Bottom Promotion