For Quick Alerts
ALLOW NOTIFICATIONS  
For Daily Alerts

ಮಳೆಗಾಲ ಜೋಡಿಗಳಿಗೆ ರೊಮ್ಯಾಂಟಿಕ್‌ ರೈಡ್‌ಗೆ ಬೆಸ್ಟ್‌, ಏಕೆ ಗೊತ್ತಾ?

|

ಜಿಟಿ ಜಿಟಿ ಮಳೆ, ಸುತ್ತ ಮುತ್ತ ಹಸಿರು ಹೊದಿಕೆಯ ಪರಿಸರ, ಮೈ ತಣ್ಣಗೆ ಮಾಡುವ ಶೀತ ಗಾಳಿ...ವಾವ್ ಮಳೆಯ ಈ ಫೀಲಿಂಗ್ಸ್ ಎಷ್ಟು ಮಜಾ ಮತ್ತು ರೊಮ್ಯಾಂಟಿಕ್ ಅಲ್ವಾ..?.ನೀವು ಎಷ್ಟೇ ಅನ್ ರೊಮ್ಯಾಂಟಿಕ್ ಆಗಿದ್ದರು ನಿಮ್ಮನ್ನು ರೊಮ್ಯಾಂಟಿಕ್ ಮಾಡುವ ಶಕ್ತಿಯನ್ನು ಮಳೆ ಹೊಂದಿದೆ. ಹೌದು, ಹಿಂದಿನ ಕಾಲದಿಂದಲೂ ಮಳೆಯನ್ನು ರೊಮ್ಯಾನ್ಸ್ ಗೆ ಹೋಲಿಕೆ ಮಾಡಲಾಗುತ್ತಿದೆ.

ಮಳೆಯೆಂದರೇ ಏನೋ ಒಂದು ಫೀಲಿಂಗ್, ಹೊಸ ಹೊಸ ಆಸೆಗಳು ಹುಟ್ಟುವ ಸಮಯ, ಹಳೆಯದನ್ನು ನೆನಪು ಮಾಡುವ ಕಾಲ. ಹೇಗೆ ಮಳೆ ಹಕ್ಕಿಗಳು, ಸಸಿಗಳಲ್ಲಿ ಹೊಸತನ ಉಂಟು ಮಾಡುತ್ತದೋ ಅದರಂತೆ ಮನುಷ್ಯನಲ್ಲೂ ಮನಸ್ಸನ್ನು ಹದಗೊಳಿಸುವ ಕಾಲ. ತಂಪಾದ ಗಾಳಿ, ಕಪ್ಪಾದ ಆಕಾಶ, ಧೋ ಎಂದು ಸುರಿವ ಮಳೆ, ಆಗಷ್ಟೇ ಸ್ನಾನ ಮಾಡಿ ನಿಂತಂತೆ ಕಾಣುವ ಊರು ಕೇರಿ, ತೂಗುಯ್ಯಾಲೆಯಾಡುವ ಮರಗಳು...

ಮನಸ್ಸು ಕನಸಿನ ಲೋಕಕ್ಕೆ ತೇಲಲು ಇನ್ನೇನು ಬೇಕು? ಇಂಥಾ ಈ ವಾತಾವರಣದಲ್ಲಿ ನಮ್ಮನ್ನು ಪ್ರೀತಿಸುವ ವ್ಯಕ್ತಿ ನಮ್ಮ ಜೊತೆ ಇದ್ದರೆ ಅದುವೇ ಸ್ವರ್ಗ. ಕಪಲ್ ಗಳಿಗೆ ರೊಮ್ಯಾಂಟಿಕ್ ಸಾಗರದಲ್ಲಿ ಮಿಂದೇಳಲು ಹೇಳಿ ಮಾಡಿಸಿದ ಕಾಲ, ಯಾಕೆಂದರೆ ಬೇಸಿಗೆ ಕಾಲದಲ್ಲಿ ನಮಗೆ ಇಂಥ ಯಾವುದೇ ಅನುಭ ಆಗುವುದಿಲ್ಲ, ಚಳಿಗಾಲದಲ್ಲಿ ಭಾರೀ ಚಳಿಯಿಂದ ಮನಸ್ಸು, ದೇಹವೂ ಏನನ್ನು ಕೇಳುವುದಿಲ್ಲ. ಮಳೆಗಾಲ ಹಾಗಲ್ಲ, ಮನಸ್ಸನ್ನು ಹದಗೊಳಿಸಿ ರೊಮ್ಯಾಂಟಿಕ್ ಆಗುತ್ತಿರುವಾಗ, ಸಂಗಾತಿ ಜೊತೆಗಿರುವಾಗ ಸದಾ ನೆನಪಿನಲ್ಲಿಡುವಂಥ ಅನುಭವ ಪಡೆಯಲು ಮನಸ್ಸು ಹಾತೊರೆಯುತ್ತೆ.

ಅದಕ್ಕಾಗೇ ಈ ಕೆಳಗಿನ ಕಾರಣಗಳಿಂದಾಗಿ ಮಳೆಯನ್ನು ರೊಮ್ಯಾಂಟಿಕ್ ಕಾಲ ಎಂದು ಕರೆಯುತ್ತಾರೆ.

ಲಾಂಗ್ ಡ್ರೈವ್!

ಲಾಂಗ್ ಡ್ರೈವ್!

ಯುವಕರಿಗಿಂತ ಹೆಚ್ಚಾಗಿ ಕಪಲ್ ಗಳು ಲಾಂಗ್ ಡ್ರೈವ್ ಗೆ ಹೋಗುವುದು ಸಾಮಾನ್ಯ. ಲಾಂಗ್ ಡ್ರೈವ್ ರೋಮ್ಯಾಂಟಿಕ್ ನ ಸಂಕೇತ. ಈ ರೀತಿಯ ರೋಮ್ಯಾಂಟಿಕ್ ಕೆಲಸಗಳನ್ನು ಮಾಡಲು ಮಳೆಗಾಲ ದೀ ಬೆಸ್ಟ್. ಹೌದು, ಮಳೆಗಾಲದಲ್ಲಿ ಲಾಂಗ್ ಡ್ರೈವ್ ಹೋಗುವ ಮಜಾವೇ ಬೇರೆ. ಹೊರಗೆ ಧೋ ಎನ್ನುವ ಮಳೆ, ಶೀತ ಗಾಳಿ ಕಾರಿನೊಳಗೆ ಹಾಡು ಹಾಕುತ್ತ ಕಪಲ್ ಗಳ ಲಾಂಗ್ ಡ್ರೈವ್ ನಷ್ಟು ನಶೆ ಏರಿಸುವ ಖುಷಿ ಮತ್ತೊಂದಿಲ್ಲ. ಸುಮ್ಮನೆ ಶೂ ಏರಿಸಿಕೊಂಡು ನೈಟ್ ಡ್ರೈವ್ ಆದರೂ ಸರಿ, ಹಗಲಾದರೂ ಸರಿ ಇಬ್ಬರೇ ಕಾರಿನಲ್ಲಿ ಹೆಡ್‌ಲೈಟ್ ಹಾಕಿಕೊಂಡು ಹೋಗುತ್ತಿದ್ದರೆ ಹೊರಗೆ ಮುತ್ತಿನಂತೆ ಉದುರುವ ಮಳೆಹನಿಗಳು, ಒಳಗೆ ಮಳೆಯ ಹನಿಯಂತೆ ಸುರಿವ ಮುತ್ತುಗಳು ನಡೆದೆ ನಡೆಯುತ್ತೆ. ಇಬ್ಬರು ಕೈ ಕೈ ಹಿಡಿದುಕೊಂಡು ಕಾರ್ ಡ್ರೈವ್ ಮಾಡಿಕೊಂಡು ಲಾಂಗ್ ಡ್ರೈ ಹೋದರೆ ಆ ನೆನಪು ಸಾಯುವವರೆಗೆ ಇರಲಿದೆ. ಇನ್ನು ಅನೇಕ ಕಪಲ್ ಗಳು ಬೈಕ್ ನಲ್ಲಿ ಲಾಂಗ್ ಡ್ರೈವ್ ಹೋಗುತ್ತಾರೆ. ಹೊಸ ಜಾಕೆಟ್ ಗಳನ್ನು ಧರಿಸಿ ಲಾಂಗ್ ರೈಡ್ ಗೆ ಹೋಗುತ್ತಾರೆ.

ಒಟ್ಟಿಗೆ ಟೀ/ಕಾಫಿ ಕುಡಿಯುವುದು!

ಒಟ್ಟಿಗೆ ಟೀ/ಕಾಫಿ ಕುಡಿಯುವುದು!

ಮಳೆಗಾಲ ಕಪಲ್ ಗಳನ್ನು ಒಟ್ಟು ಸೇರಿಸುವ ರೋಮ್ಯಾಂಟಿಕ್ ಆಗಿ ಮಾಡುವ ಸಮಯ. ನೀವು ಗಮನಿಸಿರಬಹುದು ಮಳೆಗಾಲದಲ್ಲಿ ಕಾಫಿ ಅಥವಾ ಟೀ ಕುಡಿಯುವ ಮಜಾ ಬೇರೆ ಇರುತ್ತೆ. ಹೀಗೆ ಕಪಲ್ ಗಳು ಒಟ್ಟಿಗೆ ಸೇರಿ ಟೀ ಅಥವಾ ಕಾಫಿ ಕುಡಿಯಲು ಮಳೆಗಾಲ ಪ್ರೇರಿಪಿಸುತ್ತೆ. ಕಪಲ್ ಗಳು ರಜೆ ಹಾಕಿ ಮನೆಯಲ್ಲಿ ಇದ್ದರೆ ಖಂಡಿತವಾಗ್ಲು ಅವರು ಕಾಫಿ ಅಥವಾ ಟೀ ಕುಡಿಯದೇ ಇರರು. ಅದರಲ್ಲೂ ಕೆಲ ಕಪಲ್ ಗಳ ಪೈಕಿ ಗಂಡ ಕಾಫಿ ಅಥವಾ ಟೀ ಮಾಡಿ ಪತ್ನಿಗೆ ಸರ್ವ್ ಮಾಡೋದು ಉಂಟು. ಹೊರಗೆ ಮಳೆ, ಒಳೆಗ ಬಿಸಿ ಬಿಸಿ ಕಾಫಿ ಅಥವಾ ಟೀ ಕುಡಿಯುತ್ತ ರೊಮ್ಯಾಂಟಿಕ್ ಮಾತುಗಳನ್ನು ಖಂಡಿತವಾಗಿಯೂ ಶೇರ್ ಮಾಡದೆ ಇರರು. ಕೆಲ ಕಪಲ್ ಗಳು ಗಾರ್ಡನ್ , ಬಾಲ್ಕನಿಯಲ್ಲಿ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಬಿಸ್ಕಟ್ ತಿನ್ನುತ್ತ ರೊಮ್ಯಾಂಟಿಕ್ ಸಮಯವನ್ನು ಕಳೆಯುವುದಂಟು.

ಬೆಸ್ಟ್ ಕಿಸ್&ರೋಮ್ಯಾನ್ಸ್ ನಡೆಯುವ ಸಮಯ!

ಬೆಸ್ಟ್ ಕಿಸ್&ರೋಮ್ಯಾನ್ಸ್ ನಡೆಯುವ ಸಮಯ!

ಮಳೆಗಾಲ ಅಂದರೆ ಪಕ್ಷಿ, ಪ್ರಾಣಿಗಳಿಂದ ಹಿಡಿದು ಮನುಷ್ಯನವರೆಗೂ ರೋಮ್ಯಾನ್ಸ್ ಮಾಡುವ ಸಮಯ. ಮಳೆಗಾಲದ ಮಳೆ, ಶೀತ ಗಾಳಿ, ಕಪ್ಪಗಿನ ಆಕಾಶಕ್ಕೆ ಮನುಷ್ಯನಿಗೆ ಟೆಮ್ಟ್ ಆಗೋದು ಸಾಮಾನ್ಯ. ಅನೇಕ ಸಿನಿಮಾಗಳಲ್ಲಿ ಮಳೆ ವೇಳೆ ಕಿಸ್ ಮಾಡುವ ದೃಶ್ಯ ನಾವು ನೋಡಿರಬಹುದು. ಅದೇ ರೀತಿ ಮಳೆಯಲ್ಲಿ ಕೊಡೆ ಹಿಡಿದುಕೊಂಡು ನಡೆದುಕೊಂಡು ಹೋಗುವುದು, ಕೈ ಹಿಡಿದುಕೊಳ್ಳುವುದು, ಮಳೆಗೆ ಕಿಸ್ ಮಾಡುವುದು ಸಾಮಾನ್ಯ. ಅಧ್ಯಯನವೊಂದರ ಪ್ರಕಾರ ಹೆಚ್ಚಿನ ಮಹಿಳೆಯರು ಮಳೆಯಲ್ಲಿ ಒದ್ದೆಯಾಗಿಕೊಂಡು ಕಿಸ್ ಮಾಡೋದನ್ನು ಇಷ್ಟಪಡುತ್ತಾರೆ. ಅದು ಅವರಿಗೆ ತುಂಬಾನೇ ರೊಮ್ಯಾಂಟಿಕ್ ಅನುಭವ ನೀಡುತ್ತಂತೆ. ಹೀಗಾಗಿ ಈ ಸಮಯದಲ್ಲಿ ನಡೆಯುವ ರೊಮ್ಯಾನ್ಸ್ , ಮುತ್ತುಗಳು ಅತ್ಯಂತ ಮಧುರವಾಗಿರುತ್ತದೆ. ಇದು ಹೊರಗೆ ಆದರೆ, ಹೊರಗೆ ಮಳೆ ಮನೆಯೊಳಗೆ ಬೆಚ್ಚಗೆ ಇರಲು ಅನೇಕ ಕಪಲ್ ಗಳು ಕಿಸ್, ರೊಮ್ಯಾನ್ಸ್ ನ ಮೊರೆ ಹೋಗುತ್ತಾರೆ.

ಒಂದೆ ಛತ್ರಿಯಲ್ಲಿ ಹೋಗುವುದು!

ಒಂದೆ ಛತ್ರಿಯಲ್ಲಿ ಹೋಗುವುದು!

ಮಳೆಗಾಲವನ್ನು ಯಾಕೆ ರೊಮ್ಯಾಂಟಿಕ್ ಎಂದು ಕರೆಯುತ್ತೇವೆ ಅನ್ನುವುದಕ್ಕೆ ಇದು ಕೂಡ ಉತ್ತಮ ನಿದರ್ಶನ. ಮಳೆ ಬರುತ್ತಿರುವಾಗ ಕಪಲ್ ಗಳು ಛತ್ರಿ ಹಿಡಿದುಕೊಂಡು ಹೊರಗೆ ಹೋದರೆ ಅದರಷ್ಟು ಬೆಸ್ಟ್ ರೊಮ್ಯಾಂಟಿಕ್ ಥಿಂಗ್ ಯಾವುದು ಇಲ್ಲ. ಜೋರು ಮಳೆ, ಕಪಲ್ ಛತ್ರಿಯಡಿ ಕೈ ಕೈ ಹಿಡಿದುಕೊಂಡು ಹೋದರೆ ಅದು ವಿಭಿನ್ನ ಅನುಭವ ನೀಡುತ್ತದೆ. ಹೀಗೆ ಛತ್ರಿಯಲ್ಲಿ ಹೋಗಿ ಸ್ಥಳೀಯ ಅಂಗಡಿಗಳಲ್ಲಿ ಬಿಸಿ ಬಿಸಿ ಚಹಾ, ಬಿಸಿಬಿಸಿ ಪಕೋಡ ಸೇವಿಸಿದರೆ ಆ ಅಯ್ಯೋ ಸ್ವರ್ಗಕ್ಕೆ ಇನ್ನೇನು ಬೇಕಿಲ್ಲ ಎನ್ನುವ ಅನುಭವ ಸಿಗುವುದರಲ್ಲಿ ಡೌಟ್ ಇಲ್ಲ.

ಮಳೆಗೆ ಹಗ್ ಮಾಡಿದಷ್ಟು ಮಜಾ ಯಾವುದರಲ್ಲೂ ಇಲ್ಲ!

ಮಳೆಗೆ ಹಗ್ ಮಾಡಿದಷ್ಟು ಮಜಾ ಯಾವುದರಲ್ಲೂ ಇಲ್ಲ!

ಮಳೆಗಾಲ ರೊಮ್ಯಾಂಟಿಕ್ ಕಾಲ. ಅದರಲ್ಲೂ ಮದುವೆ ಆಗಿದ್ದರೆ ಅದು ನೀಡುವ ಖುಷಿ ಅಷ್ಟಿಷ್ಟಲ್ಲ. ಮಳೆಗಾಲದಲ್ಲಿ ಬೇಗ ಏಳಲು ಮನಸ್ಸು ಆಗುವುದಿಲ್ಲ. ಅದರಲ್ಲೂ ಮದುವೆಯಾಗಿ ಪಕ್ಕದಲ್ಲಿ ತನ್ನ ಪ್ರೀತಿಸುವ ಜೀವ ಇದ್ದರೆ ಆ ವ್ಯಕ್ತಿಯನ್ನು ತಬ್ಬಿಕೊಂಡು ಇನ್ನಷ್ಟು ಸಮಯ ಮಲಗಿಕೊಂಡೆ ಇರುವ, ಸಣ್ಣ -ಪುಟ್ಟ ರೊಮ್ಯಾನ್ಸ್ ಮಾಡಲು ಮನಸ್ಸು, ದೇಹ ಕೇಳುತ್ತದೆ. ಇನ್ನು ಮಳೆಗಾಲದಲ್ಲಿ ಕಾರಿನಲ್ಲಿ ಕುಳಿತು ಅಥವಾ ಲಾಂಗ್ ಡ್ರೈವ್ ಗೆ ಹೋಗುವಾಗ ಹಗ್ ಮಾಡಿಕೊಂಡು ಇರೋಣ ಎಂದು ಅನಿಸುವುದು ಸಹಜ. ಅದಕ್ಕೆ ಕಾರಣ ಹೊರಗೆ ಧೋ ಎಂದು ಸುರಿಯುವ ಮಳೆ.

ಒಟ್ಟಿಗೆ ಕುಳಿತು ಹಾಡು ಕೇಳುವುದು!

ಒಟ್ಟಿಗೆ ಕುಳಿತು ಹಾಡು ಕೇಳುವುದು!

ಮಳೆಗಾಲ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತದೆ. ನೀವು ಬೇಕಾದರೆ ಗಮನಿಸಿ ಬೇಸಿಗೆಕಾಲದಲ್ಲಿ ಒಟ್ಟಿಗೆ ಇರೋಣ ಎಂದು ಕಪಲ್ ಗಳಿಗೆ ಅನಿಸುವುದೇ ಇಲ್ಲ. ಯಾಕೆಂದರೆ ಬಿಸಿಲಿನ್ ತಾಪ, ಬೆವರು ಎಲ್ಲ ಇರಿಟೇಷನ್ ತಂದಿಡುತ್ತೆ. ಆದರೆ ಮಳೆಗಾಲದಲ್ಲಿ ಒಟ್ಟಿಗೆ ಕುಳಿತುಕೊಳ್ಳುವುದು, ಏನಾದರೂ ಮಾತಾಡೋಣ ಅನ್ನುವ ಆಸೆ ಹುಟ್ಟಿಸುತ್ತೆ. ಆದರಲ್ಲೂ ಕೆಲವರು ಹೊರಗೆ ಮಳೆ ಬರುತ್ತಿದ್ದರೆ ಮನೆಯೊಳಗೆ ಅಥವಾ ಕಾರಿನೊಳಗೆ ಇಬ್ಬರು ರೊಮ್ಯಾಂಟಿಕ್ ಹಾಡು ಕೇಳುತ್ತಾರೆ. ಹಳೆಯ ವಿಚಾರಗಳನ್ನು ಹಾಡಿನ ಮೂಲಕ ಮೆಲುಕು ಹಾಕುತ್ತಾರೆ. ಅನೇಕರು ಹಾಡು ಕೇಳುತ್ತಾ ಹ್ಯಾಂಡ್ ಹೋಲ್ಡ್ ಮಾಡಿಕೊಂಡಿರುತ್ತಾರೆ.

ಟ್ರೆಕಿಂಗ್ ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ!

ಟ್ರೆಕಿಂಗ್ ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ!

ಮಳೆಗೆ ಅನೇಕ ಕಪಲ್ ಗಳು ಬೈಕ್ ಅಥವಾ ಕಾರಿನಲ್ಲಿ ವಿವಿಧ ಸ್ಥಳಗಳಿಗೆ ತೆರಳುವುದುಂಟು. ಈ ಮೂಲಕ ರೊಮ್ಯಾಂಟಿಕ್ ಸಾಗರಕ್ಕೆ ಮುಳುಗುವುದಂಟು. ಹಿಲ್ ಸ್ಟೇಷನ್ ಗಳು, ಫಾಗ್ ತುಂಬಿರುವ ಸ್ಥಳಗಳಿಗೆ ಮಳೆ ಸಮಯದಲ್ಲಿ ಅನೇಕ ಕಪಲ್ ಗಳು ಭೇಟಿ ನೀಡುತ್ತಾರೆ. ಮಳೆಗೆ ಸವಾಲೊಡ್ಡಿ ಸುಂದರವಾದ ಬೆಟ್ಟಗುಡ್ಡಗಳನ್ನೇರುವಾಗ, ಒಬ್ಬರಿಗೊಬ್ಬರು ಸಾಧ್ಯವಾದಗಲೆಲ್ಲ ಸಹಾಯ ಮಾಡುತ್ತಾ, ಚಳಿಯನ್ನೋಡಿಸಲು ಆಗಾಗ ಅಂಟಿಕೊಳ್ಳುತ್ತಾ, ರಾತ್ರಿ ನಡುಗುವ ಚಳಿಯಲ್ಲಿ ಟೆಂಟ್ ಹಾಕಿ ಒಳ ಸೇರಿದರಾದರೆ ಮಳೆಯೇ ಬೆವರಿಳಿಸಿದರೂ ಅಚ್ಚರಿಯಿಲ್ಲ!

ಸೆಕ್ಸ್ ಗೆ ಹೇಳಿ ಮಾಡಿಸಿದ ಕಾಲ!

ಸೆಕ್ಸ್ ಗೆ ಹೇಳಿ ಮಾಡಿಸಿದ ಕಾಲ!

ಹಲವು ಅಧ್ಯಯನಗಳಲ್ಲಿ ಮಳೆಗಾಲ ಸೆಕ್ಸ್ ಗೆ ಹೇಳಿ ಮಾಡಿಸಿದ ಸಮಯ ಎಂದು ತಿಳಿಸಲಾಗಿದೆ. ಕೆಲ ದೇಶಗಳಲ್ಲಿ ಮಳೆಗಾಲ ಸಮಯದಲ್ಲೇ ಮದುವೆ ಆಗುತ್ತಾರಂತೆ. ಈ ಸಮಯದಲ್ಲಿ ಸೆಕ್ಸ್ ಗೆ, ರೊಮ್ಯಾನ್ಸ್ ಗೆ ದೇಹ ಹಾಗೂ ಮನಸ್ಸು ತುಡಿಯುವುದರಿಂದ ಈ ಸಮಯ ಕಪಲ್ ಗಳಿಗೆ ಹೇಳಿ ಮಾಡಿಸಿದ ಸಮಯವಾಗಿದೆ. ಹುಡುಗನ ತೋಳಿನಲ್ಲಿ ಬೆಚ್ಚಗೆ ಸೇರಲು ಯುವತಿಯರು ಬಯಸೋ ಕಾಲ. ಅಲ್ಲದೇ ಯುವತಿಯ ಪ್ರೇಮದ ಸಾಗರದಲ್ಲಿ ಮಿಂದೇಳಲು ಯುವಕ ಹಾತೊರೆಯುವ ಸಮಯ ಅದುವೇ ಮಳೆಗಾಲ.

English summary

Why is rainy season considered as a romantic season in kannada

Why is rainy season considered as a romantic season for couple in kannada , Read on
Story first published: Monday, July 18, 2022, 17:33 [IST]
X
Desktop Bottom Promotion