For Quick Alerts
ALLOW NOTIFICATIONS  
For Daily Alerts

ಒಂದಿಷ್ಟು ಸಮಯ ಸಂಗಾತಿ ಕೊಡುವುದು ತುಂಬಾ ಮುಖ್ಯ, ಏಕೆ ಗೊತ್ತಾ?

|

ಹೆಂಡತಿ ಗಂಡನಿಂದ ಬಯಸುವುದು ಏನನ್ನು? ಗಂಡ ಹೆಂಡತಿಯಿಂದ ಬಯಸುವುದು ಏನನ್ನು? ಈ ಪ್ರಶ್ನೆಗಳನ್ನು ಯಾರ ಬಳಿಯಾದರೂ ಕೇಳಿ ನೋಡಿ, ಉತ್ತರಗಳು ನೂರೆಂಟು ಸಿಗುವುದು, ಕೆಲವರು ಪ್ರೀತಿ ಎಂದರೆ ಇನ್ನು ಕೆಲವರು ಸುರಕ್ಷತೆ, ಮತ್ತೆ ಕೆಲವರು ನಿಯತ್ತು ಹೀಗೆ ಅನೇಕ ಉತ್ತರಗಳನ್ನು ನೀಡುತ್ತಾರೆ. ಆದರೆ ಇವುಗಳಷ್ಟೇ ಪ್ರಮುಖವಾಗಿ ಮತ್ತೊಂದು ಅಂಶವನ್ನು ತಮ್ಮ ಸಂಗಾತಿಯಿಂದ ನಿರೀಕ್ಷಿಸುತ್ತಾರೆ... ಅದುವೇ ಸಮಯ.

relationship tips

ಇಂದು ಎಷ್ಟೋ ದಾಂಪತ್ಯದಲ್ಲಿ ದೊಡ್ಡ ಕಂದಕ ಏರ್ಪಡಲು ಇದರ ಕೊರತೆಯೇ ಕಾರಣ. ಗಂಡನಿಗೆ ಕೊಡಲು ಹೆಂಡತಿ ಬಳಿ ಸಮಯವಿಲ್ಲ ಅಥವಾ ಹೆಂಡತಿಗೆ ಗಂಡನಿಗೆ ಕೊಡಲು ಸಮಯವಿಲ್ಲ. ಇಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಾರೆ, ಜೊತೆಗೆ ಉಂಡು, ಮಲಗುತ್ತಾರೆ ಆದರೆ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದನ್ನೇ ಬಿಟ್ಟಿರುತ್ತಾರೆ, ಒಂದು ರೀತಿಯ ಮೆಕ್ಯಾನಿಕಲ್ ಲೈಫ್‌ ನಡೆಸುತ್ತಿರುತ್ತಾರೆ, ಆಗಲೇ ಸಂಸಾರದ ಬುಡ ಮೆಲ್ಲನೆ ಅಲುಗಾಡಲು ಪ್ರಾರಂಭವಾಗುವುದು.

ಯಾವಾಗ ತಮ್ಮ ಸಂಗಾತಿಗೆ ನಾವು ಸಮಯ ಕೊಡುವುದಿಲ್ಲವೋ ಈ ರೀತಿಯ ಸಮಸ್ಯೆ ಉಂಟಾಗಬಹುದು:

ಮನಸ್ತಾಪ ಹೆಚ್ಚುವುದು

ಮನಸ್ತಾಪ ಹೆಚ್ಚುವುದು

ಯಾವಾಗ ನಾವು ನಮ್ಮ ಸಂಗಾತಿಗಾಗಿ ಒಂದಿಷ್ಟು ಸಮಯ ಮೀಸಲಿಡುವುದಿಲ್ಲವೋ ಅವರಿಗೆ ಈತ/ಈಕೆ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ/ಳೆ ಎಂಬ ಭಾವನೆ ಬರಲಾರಂಭಿಸುತ್ತದೆ. ಈ ಭಾವನೆ ಬೆಳೆಯುತ್ತಿದ್ದಂತೆ ಸಣ್ಣ-ಪುಟ್ಟ ಸಮಸ್ಯೆಗಳೂ ದೊಡ್ಡದಾಗುವುದು. ನಮ್ಮಲ್ಲಿರುವ ಅತೃಪ್ತಿಯನ್ನು ಜಗಳದ ಮೂಲಕ ಹೊರ ಹಾಕುತ್ತೇವೆ. ಇದರಿಂದ ಮನಸ್ತಾಪ ಹೆಚ್ಚುವುದು.

ಬೇರೆ ಕಡೆಗೆ ಆಕರ್ಷಣೆ ಬೆಳೆಯುವ ಸಾಧ್ಯತೆ ಹೆಚ್ಚು

ಬೇರೆ ಕಡೆಗೆ ಆಕರ್ಷಣೆ ಬೆಳೆಯುವ ಸಾಧ್ಯತೆ ಹೆಚ್ಚು

ಎಷ್ಟೋ ಅನೈತಿಕ ಸಂಬಂಧಗಳ ಹಿಂದೆ ಇಂಥದ್ದೊಂದು ಕಾರಣವಿರುತ್ತದೆ. ತಮ್ಮ ಸಂಗಾತಿ ನಮ್ಮ ಕಡೆ ಗಮನ ಕೊಡುತ್ತಿಲ್ಲ ಎಂದು ಕೊರಗುತ್ತಿರುವ ಸಮಯದಲ್ಲಿ ಯಾರಾದರೂ ಸ್ವಲ್ಪ ಅನುಕಂಪ ತೋರಿಸಿದರೆ ಅಥವಾ ಇವರ ಬಗ್ಗೆ ಆಸಕ್ತಿ ತೋರಿದರೆ ಆ ಸೆಳೆತಕ್ಕೆ ಸಿಗುವ ಸಾಧ್ಯತೆ ತುಂಬಾನೇ ಹೆಚ್ಚು. ಯಾವ ದಾಂಪತ್ಯದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಮಾಡುತ್ತಾರೋ ಅಂಥ ಸಂಸಾರದಲ್ಲಿ ಇಂಥ ಸಮಸ್ಯೆ ಬರಲ್ಲ.

ಸಂಗಾತಿಯಲ್ಲಿ ಖಿನ್ನತೆ ಉಂಟಾಗುವುದು

ಸಂಗಾತಿಯಲ್ಲಿ ಖಿನ್ನತೆ ಉಂಟಾಗುವುದು

ನನ್ನ ಜೀವನ ಸಂಗಾತಿ ನನ್ನ ಜೊತೆ ಮಾತನಾಡುತ್ತಿಲ್ಲ, ಸದಾ ಕೆಲಸ-ಕೆಲಸ ಅಂತ ಇರುತ್ತಾರೆ, ಸ್ವಲ್ಪ ಹೊತ್ತು ನನ್ನ ಜೊತೆ ಸಮಯ ಕಳೆದರೆ ಏನಾಗುತ್ತೆ? ಮನೆಯಿದೆ, ಆಸ್ತಿ ಇದೆ ಆದರೆ ನನಗೆ ಅದಕ್ಕಿಂತ ಮುಖ್ಯವಾಗಿ ಬೇಕಿರುವುದು ನನ್ನನ್ನು ಪ್ರೀತಿಸುವ ಜೀವ... ಆ ಭಾಗ್ಯವೇ ನನಗಿಲ್ಲ ಎಂಬ ಕೊರಗು ಅನೇಕರಲ್ಲಿ ಇರುತ್ತದೆ. ಈ ರೀತಿಯ ಕೊರಗಿನಿಂದಲೇ ಖಿನ್ನತೆ ಕಾಡುವುದು. ಪ್ರೀತಿಯ ಎರಡು ಮಾತು, ಮೆಚ್ಚುಗೆ ಒಂದು ನೋಟ ಬಯಸುವಾಗ ಅದು ದೊರಕದೇ ಹೋದಾಗ ಉಂಟಾಗುವ ವೇತನೆ ಜೀವನದ ಬಗ್ಗೆ ಜಿಗುಪ್ಸೆಯನ್ನು ಮೂಡಿಸಬಹುದು.

ಖುಷಿಯಾದ ದಾಂಪತ್ಯಕ್ಕೆ ನೀಡಲೇಬೇಕು ಸಮಯ

ಖುಷಿಯಾದ ದಾಂಪತ್ಯಕ್ಕೆ ನೀಡಲೇಬೇಕು ಸಮಯ

ಎಷ್ಟೇ ಬ್ಯುಸಿ ಇರಿ, ತಮ್ಮ ಸಂಗಾತಿಗಾಗಿ ಒಂದಿಷ್ಟು ಸಮಯ ತೆಗೆದು ಇಡಲೇಬೇಕು. ನಾವು ತುಂಬಾ ಆಸ್ತಿ, ಅಂತಸ್ತು ಮಾಡಬಹುದು, ಆದರೆ ಅವುಗಳಿಂದ ಖುಷಿ ಸಿಗಬೇಕಾದರೆ ನಮ್ಮ ಸಂಗಾತಿಗಾಗಿ, ಮಕ್ಕಳಿಗಾಗಿ ಒಂದಿಷ್ಟು ಸಮಯ ಮೀಸಲಿಡಬೇಕು. ಸ್ವಲ್ಪ ಹೊತ್ತು ಅವರ ಜೊತೆ ಕೂತು ಮನಸ್ಸು ಬಿಚ್ಚಿ ಮಾಡುವುದರಿಂದ ಎಷ್ಟೋ ಸಮಸ್ಯೆಗಳು ದೂರವಾಗುವುದು, ಇಬ್ಬರ ಮನಸ್ಸು ತಿಳಿಯಾಗುವುದು, ಪ್ರೀತಿ ಹೆಚ್ಚುವುದು. ಮದುವೆಯಾದ ಮೇಲೆ ನಮ್ಮದೇ ಲೋಕದಲ್ಲಿ ಕಳೆಯುವುದಕ್ಕಿಂತ ನಮ್ಮವರ ಲೋಕದಲ್ಲೂ ಸ್ವಲ್ಪ ಹೊತ್ತು ಕಳೆಯಬೇಕು, ಅವರ ಮನಸ್ಸು ಅರಿಯಲು ಪ್ರಯತ್ನಿಸಬೇಕು. ಸಂಸಾರದಲ್ಲಿ ಇತ್ತೀಚೆಗೆ ಏಕೋ ಮನಸ್ತಾಪ ಹೆಚ್ಚುತ್ತಿದೆ, ಏನೂ ಮೊದಲಿನಂತೆ ಇಲ್ಲ ಎಂದು ಅನಿಸಿದರೆ ಅದಕ್ಕೆ ಮೊದಲ ಪರಿಹಾರ ಸಮಯ.. ಇಬ್ಬರು ಒಟ್ಟಿಗೆ ಒಂದಿಷ್ಟು ಸಮಯ ನಿಮಗೋಸ್ಕರ ಕಳೆದು ನೋಡಿ ನಿಮ್ಮ ಎಷ್ಟೋ ಸಮಸ್ಯೆ ದೂರವಾಗುವುದು... ಸಮಯ ಎಂಬುವುದು ಯಾರ ಪರಿಧಿಗೂ ಸಿಕ್ಕಲ್ಲ, ಸಿಕ್ಕ ಸಮಯವನ್ನು ಸರಿಯಾಗಿ ಬಳಸಿಕೊಳ್ಳದೆ ಮುಂದೆ ಚಿಂತಿಸಿ ಫಲವಿಲ್ಲ, ಏನಂತೀರಿ?

English summary

Why Giving Time For Partner Is Very Important In Relationship in kannada

Why giving time for partner is very important in relationship in kannada, read on...
X
Desktop Bottom Promotion