For Quick Alerts
ALLOW NOTIFICATIONS  
For Daily Alerts

ಇದೇ ಕಾರಣಗಳಿಂದ ನೀವು ಪ್ರೀತಿಯಲ್ಲಿ ಬೀಳೋದು!

|

ಪ್ರೀತಿ ಹುಟ್ಟಲು ಕಾರಣಗಳು ಬೇಕಿಲ್ಲ ಅನ್ನೋ ಮಾತಿದೆ. ಆದರೆ ಕಾರಣವಿಲ್ಲದೆ ಪ್ರೀತಿ ಹುಟ್ಟಿಕೊಳ್ಳಲು ಸಾಧ್ಯವೇ ಇಲ್ಲ. ಇಬ್ಬರ ನಡುವೆ ಪ್ರೀತಿ ಹುಟ್ಟಬೇಕೆಂದರೆ ಅಲ್ಲಿ ಏನಾದ್ರೂ ವಿಶೇಷ ಇರಲೇಬೇಕು. ಹಾರ್ಮೋನ್ ಬದಲಾವಣೆ ಸೇರಿದಂತೆ, ನಮ್ಮ ಸುತ್ತ ಮುತ್ತಲಾಗುವ ವಿದ್ಯಮಾನಗಳು ಸಹ ಒಬ್ಬರ ಮೇಲೆ ಪ್ರೀತಿ ಹುಟ್ಟಿಕೊಳ್ಳಲು ಕಾರಣವಾಗಬಹುದು. ಇದೇ ರೀತಿ ಪ್ರೀತಿ ಹುಟ್ಟಲು ಬೇರೆ ಏನು ಕಾರಣಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪ್ರೀತಿ ಹುಟ್ಟಲು ಕಾರಣಗಳು ಇಲ್ಲಿವೆ :

ಹಾರ್ಮೋನು ಬದಲಾವಣೆ :

ಹಾರ್ಮೋನು ಬದಲಾವಣೆ :

ಇದು ಪ್ರೀತಿ ಹುಟ್ಟಲು ಇರುವ ಸಾಮಾನ್ಯ ಕಾರಣ. ಆದರೆ ಇದು ಹೆಚ್ಚಿನವರಿಗೆ ತಿಳಿದಿಲ್ಲ. ಒಂದು ಹುಡುಗ ಹುಡುಗಿಯ ಮಧ್ಯೆ ಪ್ರೀತಿ ಚಿಗುರಬೇಕೆಂದರೆ ಪ್ರೀತಿ ಹಾರ್ಮೋನ್ ಗಳು ಇರಲೇಬೇಕು. ಈ ಹಾರ್ಮೋನ್ ಗಳು ಪರಸ್ಪರರನ್ನು ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತವೆ.

ಆಕ್ಸಿಟೋಸಿನ್ ಮತ್ತು ವಾಸೊಪ್ರೆಸಿನ್ ಮನುಷ್ಯರಲ್ಲಿ ಪ್ರಣಯದ ಭಾವನೆಯನ್ನು ಉತ್ತೇಜಿಸುವ ಎರಡು ಹಾರ್ಮೋನುಗಳಾಗಿವೆ. ಈ ಹಾರ್ಮೋನ್ ಗಳ ಅಸಮತೋಲನದಿಂದ ಪ್ರತಿಯೊಬ್ಬರಲ್ಲೂ ವಿಭಿನ್ನ ರೀತಿಯ ಪ್ರಣಯ ಅಥವಾ ರೋಮ್ಯಾನ್ಸ್ ಗೆ ಕಾರಣವಾಗಬಹುದು.

ಮಾನಸಿಕ ಅಂಶಗಳು :

ಮಾನಸಿಕ ಅಂಶಗಳು :

ಪ್ರೀತಿಯು ಹೆಣ್ಣು ಗಂಡಿನ ನಡುವಿನ ಮಾನಸಿಕ ಅಂಶವಾಗಿದೆ. ಇಬ್ಬರಲ್ಲೂ ಒಂದೇ ರೀತಿಯ ಆಲೋಚನೆ, ಆಸಕ್ತಿಗಳಿದ್ದರೆ ಅದು ಪ್ರೀತಿಗೆ ಕಾರಣವಾಗಬಹುದು. ಇದಕ್ಕೆ ಹೆಚ್ಚು ಕಾಲದ ಸಂವಹನ ಬೇಕಾಗಿರುತ್ತದೆ. ಇಬ್ಬರೂ ಪರಸ್ಪರ ಆಸೆ ಆಕಾಂಕ್ಷೆ ಗಳನ್ನು ಹಂಚಿಕೊಂಡಾಗ ಪ್ರೀತಿ ಚಿಗುರಬಹುದು. ಇದೇ ಕಾರಣಕ್ಕೆ ಸ್ನೇಹಿತರಾಗಿದ್ದ ಗಂಡು ಹೆಣ್ಣು ಮುಂದೆ ಪ್ರೀತಿಯಲ್ಲಿ ಬೀಳೋದು.

ಮಾನಸಿಕ ಸಿದ್ಧಾಂತಗಳ ಪ್ರಕಾರ ಪ್ರೀತಿ ಎರಡು ರೀತಿಯಲ್ಲಿ ಸಂಭವಿಸಬಹುದು; ಸಹಾನುಭೂತಿಯ ಪ್ರೀತಿ ಮತ್ತು ಭಾವೋದ್ರಿಕ್ತ ಪ್ರೀತಿ. ಸಹಾನುಭೂತಿಯ ಪ್ರೀತಿ ಪರಸ್ಪರ ತಿಳುವಳಿಕೆ, ಗೌರವ ಮತ್ತು ಹಂಚಿಕೆಯಿಂದ ಹುಟ್ಟಿಕೊಂಡರೆ, ಭಾವೋದ್ರಿಕ್ತ ಪ್ರೀತಿಯು ತೀವ್ರವಾದ ಲೈಂಗಿಕ ಬಯಕೆಗಳು, ಆತಂಕ ಮತ್ತು ವಾತ್ಸಲ್ಯವನ್ನು ಆಧರಿಸಿರುತ್ತದೆ.

ದೈಹಿಕ ಆಕರ್ಷಣೆ:

ದೈಹಿಕ ಆಕರ್ಷಣೆ:

ಪ್ರೀತಿ ಹುಟ್ಟಲು ಇದು ಒಂದು ಕಾರಣ ಎಂದರೆ ತಪ್ಪಾಗಲ್ಲ. ಸುಂದರ ಮಹಿಳೆಗೆ ಪುರುಷ ಮರುಳಾಗೋದು,ಆಕರ್ಷಕ ಪುರುಷನಿಗೆ ಮಹಿಳೆ ಬೀಳೋದು ಸಾಮಾನ್ಯ. ಆದರೆ ಎಲ್ಲರೂ ಇದಕ್ಕೆ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬರ ಮನಸ್ಥಿತಿ ಬೇರೆ ಬೇರೆ ಆಗಿರುತ್ತದೆ. ಕಣ್ಣೋಟ ಒಬ್ಬರನ್ನ ಸೆಳೆದರೆ ಮೈಮಾಟ ಮತ್ತೊಬ್ಬರನ್ನು ಸೆಳೆಯಬಹುದು. ಆದರೆ ಪ್ರೀತಿ ಹುಟ್ಟಲು ದೈಹಿಕ ಆಕರ್ಷಣೆ ಕೂಡ ಒಂದು ಅಂಶ ಎಂಬುದು ಮಾತ್ರ ಸತ್ಯ.

ಸಾಮಾಜಿಕ ಕಾರಣಗಳು:

ಸಾಮಾಜಿಕ ಕಾರಣಗಳು:

ಮನುಷ್ಯ ಸಮಾಜ ಜೀವಿ ಅನ್ನೋದನ್ನ ಬಹಳ ಹಿಂದಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಇಂತಹ ಸಮಾಜ ಪ್ರೀತಿಗೆ ಕಾರಣವಾಗದೆ ಇರಲು ಹೇಗೆ ಸಾಧ್ಯ. ಪ್ರೀತಿಯ ಜೊತೆಗೆ ಕುಟುಂಬ, ಮಕ್ಕಳು ಹೀಗೆ ಹಲವಾರು ಅಂಶಗಳು ಸುತ್ತಿಕೊಂಡಿವೆ. ಆ ಸಂತೋಷ ಪಡೆಯುದಕ್ಕಾಗಿ ಆದರೂ ಪ್ರೀತಿಯಲ್ಲಿ ಬೀಳುವವರಿದ್ದಾರೆ. ಪ್ರೀತಿ,ಮದುವೆ ಮಕ್ಕಳು ಎಂಬ ಇತ್ಯಾದಿಗಳಾದಗಳೇ ವ್ಯಕ್ತಿಯ ಜೀವನಕ್ಕೊಂದು ಬೆಲೆ ಹಾಗೂ ತೃಪ್ತಿ ಈ ಸಮಾಜದಲ್ಲಿ. ಜೊತೆಗೆ ಸಮಾಜದಲ್ಲಿ ನಡೆಯುವ ಕೆಲವೊಂದು ವಿಚಾರಗಳು ಆಧುನಿಕ ತಂತ್ರಜ್ಞಾನ ಗಳು ಯುವಕ ಯುವತಿಯರನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ.

English summary

What Makes You Fall In Love in Kannada

Here were talking about What Makes You Fall In Love in Kannada, read on
Story first published: Tuesday, May 25, 2021, 14:39 [IST]
X
Desktop Bottom Promotion