For Quick Alerts
ALLOW NOTIFICATIONS  
For Daily Alerts

ನಿಮ್ಮ ಮುಂದಿರುವವರ ಈ ಬಗೆಯ ಕಣ್ಣೋಟ ಯಾವ ಅರ್ಥ ಸೂಚಿಸುತ್ತೆ ಗೊತ್ತಾ?

|

ಮಾತುಗಳು ಸುಳ್ಳು ಹೇಳಿದರೂ ಕಣ್ಣುಗಳು ಸುಳ್ಳು ಹೇಳಲಾರವು. ವ್ಯಕ್ತಿಯೊಬ್ಬರಲ್ಲಿ ತಮ್ಮ ಭಾವನೆಗಳನ್ನು ನೇರವಾಗಿ ತೋರ್ಪಡಿಸಿಕೊಳ್ಳಲು ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಾ ಹೇಳುವುದಕ್ಕಿಂತ ಉತ್ತಮ ವಿಧಾನ ಇನ್ನೊಂದಿಲ್ಲ. ಅಷ್ಟೇ ಅಲ್ಲ, ಓರ್ವ ವ್ಯಕ್ತಿಯಲ್ಲಿ ಇನ್ನೋರ್ವರು ಅನುರಕ್ತರಾಗಿದ್ದಾರೆಯೇ ಎಂಬುದನ್ನು ಅವರ ನೋಟವೇ ತಿಳಿಸುತ್ತದಂತೆ. ಕಣ್ಣು ಕಣ್ಣು ಬೆರೆತಾಗ ಮೂಡುವ ಒಲವೇ ಮನಸುಗಳನ್ನು ಒಂದಾಗಿಸಲು ಕಾರಣವಾಗುತ್ತದೆ. ವಿಶೇಷವಾಗಿ ಪ್ರೇಮಿಗಳ ನಡುವೆ ಕಣ್ಣುಗಳ ಸಂಪರ್ಕ ಅತಿ ಮುಖ್ಯವಾಗಿದ್ದು ಅನ್ಯೋನ್ಯತೆ ಹೆಚ್ಚಲು ಹೆಚ್ಚು ಹೆಚ್ಚಾಗಿ ಇಬ್ಬರೂ ಒಬ್ಬರ ಕಣ್ಣುಗಳಲ್ಲಿ ಕಣ್ಣಿಟ್ಟು ಸಂಭಾಷಣೆ ನಡೆಸಬೇಕು. ಇಂದಿನ ಲೇಖನದಲ್ಲಿ ಈ ಸಂಪರ್ಕದ ವೈವಿಧ್ಯತೆಯನ್ನು ಹಾಗೂ ಪ್ರತಿ ವಿಧದ ಅರ್ಥವೇನು ಎಂಬುದನ್ನು ವಿವರಿಸಲಾಗಿದೆ, ಬನ್ನಿ ನೋಡೋಣ:

ಉದ್ದೇಶಪೂರ್ವಕವಾಗಿ ಕಣ್ಣುಗಳನ್ನು ಕೇಂದ್ರೀಕರಿಸದೇ ಇರುವುದು.

ಉದ್ದೇಶಪೂರ್ವಕವಾಗಿ ಕಣ್ಣುಗಳನ್ನು ಕೇಂದ್ರೀಕರಿಸದೇ ಇರುವುದು.

ಈ ಪರಿಯ ಸಂಪರ್ಕದ ಸ್ಪಷ್ಟ ಅರ್ಥವೆಂದರೆ ನಿಮ್ಮಲ್ಲಿ ಈ ವ್ಯಕ್ತಿಗೆ ಯಾವುದೇ ಆಸಕ್ತಿ ಇಲ್ಲ ಎನ್ನುವುದಾಗಿದೆ. ಅಂದರೆ, ಎದುರಿನ ವ್ಯಕ್ತಿ ನಿಮ್ಮಿಂದ ಬಿಡುಗಡೆ ಪಡೆಯಲು ಯತ್ನಿಸುತ್ತಿದ್ದಾರೆ ಹಾಗಾಗಿ, ನಿಮ್ಮತ್ತ ದಿಟ್ಟಿಸಿ ನೋಡುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು. ಈ ವ್ಯಕ್ತಿ ನಿಮ್ಮತ್ತ ನೋಡುತ್ತಿದ್ದರೂ ಕಣ್ಣುಗಳನ್ನು ನಿಮ್ಮ ಕಣ್ಣುಗಳೆಡೆಗೆ ಕೇಂದ್ರೀಕರಿಸದೇ ಮತ್ತೆಲ್ಲೋ ನೋಡುತ್ತಿದ್ದರೆ ಇವರಿಗೆ ನಿಮ್ಮಲ್ಲಿ ಯಾವುದೇ ಆಸಕ್ತಿಯಾಗಲೀ ಪ್ರೇಮವಾಗಲೀ ಉಳಿದಿಲ್ಲ ಎಂಬುದು ಸ್ಪಷ್ಟ. ಹಾಗಾಗಿ, ನೀವು ಯಾವುದೇ ಪ್ರೇಮ ಸಂಬಂಧವನ್ನು ಬಯಸದೇ ಈ ವ್ಯಕ್ತಿಯಿಂದ ವಿದಾಯ ಪಡೆಯುವುದೇ ಮೇಲು.

ಉದ್ದೇಶಪೂರ್ವಕವಾಗಿ ದಿಟ್ಟಿಸುವುದು

ಉದ್ದೇಶಪೂರ್ವಕವಾಗಿ ದಿಟ್ಟಿಸುವುದು

ಈ ಬಗೆಯ ಸಂಪರ್ಕದಲ್ಲಿ ಎದುರಿನ ವ್ಯಕ್ತಿ ನಿಮ್ಮತ್ತ ದಿಟ್ಟಿಸಿ ನೋಡುತ್ತಿದ್ದು, ಒಮ್ಮೆ ನೀವು ಆ ವ್ಯಕ್ತಿಯ ಕಣ್ಣುಗಳತ್ತ ನೋಡುತ್ತಿದ್ದಂತೆಯೇ ಅವರು ತಮ್ಮ ದೃಷ್ಟಿಯನ್ನು ಥಟ್ಟನೇ ಬೇರೆಡೆಗೆ ಹೊರಳಿಸಿದರೆ ಇವರು ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸುವಲ್ಲಿ ಹಿಂಜರಿಕೆ ತೋರುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು. ಇದೇ ಕಾರಣಕ್ಕೆ ಇವರಿಗೆ ನಿಮ್ಮಲ್ಲಿ ಆಸಕ್ತಿ ಇದ್ದರೂ ಈ ಆಸಕ್ತಿಯನ್ನು ಸ್ಪಷ್ಟವಾಗಿ ತಿಳಿಸಲು ಹಿಂಜರಿಯುತ್ತಿದ್ದಾರೆ, ಅಂದರೆ ಅವರೇ ತಾವಾಗಿ ಪ್ರೇಮ ನಿವೇದನೆಯಾಗಲೀ ಅಥವಾ ನಿಮ್ಮಲ್ಲಿ ಆಸಕ್ತಿ ಇದೆ ಎಂದು ಹೇಳಿಕೊಳ್ಳಲಾಗಲೀ ಮುಂದುವರೆಯಲಾರರು. ಹಾಗಾಗಿ, ನೀವೇ ಮೊದಲಾಗಿ ಮುಂದುವರೆಯಬೇಕಾಗುತ್ತದೆ.

ಉದ್ದೇಶಪೂರ್ವಕವಲ್ಲದ ನೋಟ

ಉದ್ದೇಶಪೂರ್ವಕವಲ್ಲದ ನೋಟ

ಈ ಬಗೆಯ ನೋಟವನ್ನು ಸಾಮಾನ್ಯವಾಗಿ ನಾವು ಸಮಾಜದಲ್ಲಿ ನೋಡುತ್ತಲೇ ಇರುತ್ತೇವೆ. ರಸ್ತೆಯಲ್ಲಿ ಹೋಗುವಾಗ ಎದುರು ಬರುವ ವ್ಯಕ್ತಿಗಳನ್ನು ನಾವು ನೋಡುವುದಿಲ್ಲವೇ, ಆ ವ್ಯಕ್ತಿ ನಮ್ಮತ್ತ ನೋಡಿದಾಗ ಥಟ್ಟನೇ ಬೇರೆಡೆಗೆ ಕಣ್ಣುಗಳನ್ನು ಹೊರಳಿಸುತ್ತೇವೆ. ಈ ಬಗೆಯ ನೋಟ ನಮ್ಮೆಲ್ಲರಲ್ಲಿ ಸ್ವಾಭಾವಿಕವಾಗಿಯೇ ಅಡಗಿದೆ ಹಾಗೂ ಬಹುತೇಕ ಎಲ್ಲಾ ಅಪರಿಚಿತರಲ್ಲಿ ನಾವು ಈ ಬಗೆಯ ನೋಟವನ್ನು ತೋರುತ್ತೇವೆ.

ಕ್ಷಣಮಾತ್ರ ದಿಟ್ಟಿಸುವುದು

ಕ್ಷಣಮಾತ್ರ ದಿಟ್ಟಿಸುವುದು

ಈ ಬಗೆಯ ಸಂಪರ್ಕದಲ್ಲಿ, ಇಬ್ಬರ ನೋಟಗಳು ಕೆಲವು ಕ್ಷಣಗಳವರೆಗೆ ಮಾತ್ರ ಪರಸ್ಪರ ದಿಟ್ಟಿಸುತ್ತವೆ ಹಾಗೂ ಮರುಕ್ಷಣ ಈ ವ್ಯಕ್ತಿ ತಮ್ಮ ನೋಟವನ್ನು ಬೇರೆಡೆಗೆ ಹೊರಳಿಸುತ್ತಾರೆ. ಇದರ ಅರ್ಥವೆಂದರೆ ಈ ವ್ಯಕ್ತಿ ನಿಮ್ಮಲ್ಲಿ ಆಸಕ್ತರಿದ್ದು ನಿಮ್ಮಿಂದ ಮುಂದಿನ ನಡೆಯನ್ನು ನಿರೀಕ್ಷಿಸುತ್ತಿದ್ದಾರೆ ಎಂದೇ ಅರ್ಥವಾಗಿದೆ. ಕಣ್ಣುಗಳು ಬೆರೆತ ಬಳಿಕ ಕಣ್ಣುಗಳನ್ನು ಬೇರೆಡೆಗೆ ಹೊರಳಿಸಲು ತಡವಾದಷ್ಟೂ ಈ ಭಾವನೆ ಬಲಯುತವಾಗಿದೆ ಎಂದು ಅರ್ಥ. ಈ ಕ್ಷಣಮಾತ್ರದ ದಿಟ್ಟಿಸುವಿಕೆ ನಿಮ್ಮತ್ತ ಆಕರ್ಷಣೆ ಹೊಂದಿರುವ ಖಾತರಿಯೂ ಆಗಿದೆ.

ಎರಡು ಬಾರಿ ದಿಟ್ಟಿಸುವುದು

ಎರಡು ಬಾರಿ ದಿಟ್ಟಿಸುವುದು

ಈ ಪರಿಯ ದಿಟ್ಟಿಸುವಿಕೆ ದಿಟ್ಟ ವ್ಯಕ್ತಿಗಳ ಸ್ವಭಾವವಾಗಿದೆ ಹಾಗೂ ಎದುರಿನ ವ್ಯಕ್ತಿ ತಮ್ಮ ಗಮನವನ್ನು ಪೂರ್ಣವಾಗಿ ನೀಡುತ್ತಿದ್ದಾರೆ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಾರೆ. ನಿಮ್ಮನ್ನು ಒಮ್ಮೆ ದಿಟ್ಟಿಸಿ ನೋಡಿದ ಎದುರಿನ ವ್ಯಕ್ತಿ ತಮ್ಮ ದೃಷ್ಟಿಯನ್ನು ಬೇರೆಡೆ ಹೊರಳಿಸಿ ಮತ್ತೊಮ್ಮೆ ನಿಮ್ಮತ್ತ ನೋಡಿದರೆ ಈ ವ್ಯಕ್ತಿ ನಿಮ್ಮಲ್ಲಿ, ವಿಶೇಷವಾಗಿ ದೈಹಿಕವಾದ ಆಸಕ್ತಿ ಹೊಂದಿದ್ದಾರೆ, ಎಂದು ಅರ್ಥೈಸಿಕೊಳ್ಳಬಹುದು.

ನೈಜ ನೋಟ:

ನೈಜ ನೋಟ:

ಓರ್ವ ವ್ಯಕ್ತಿಯನ್ನು ಮನಸಾರೆ ಪ್ರೀತಿಸುವ ವ್ಯಕ್ತಿ ತನ್ನ ನೋಟವನ್ನು ಅತ್ತಿತ್ತ ಹೊರಳಿಸದೇ, ನೇರವಾಗಿ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಾರೆ ಹಾಗೂ ಇವರ ಮೊಗದಲ್ಲಿ ಸದಾ ಮುಗುಳ್ನಗೆ ತುಂಬಿರುತ್ತದೆ. ಆದರೆ, ಈ ವ್ಯಕ್ತಿ ತಾವಾಗಿ ನಿಮ್ಮತ್ತ ಮುಂದುವರೆಯಲಾರರು, ಹಾಗಾಗಿ, ನೀವೇ ಮುಂದುವರೆದು ಆ ವ್ಯಕ್ತಿಯೊಡನೆ ಮಾತನಾಡಬೇಕಾಗುತ್ತದೆ. ಕೆಲವೊಮ್ಮೆ ಈ ನೋಟ ಸತತವಾಗಿದ್ದು ಬೇರೆಡೆ ನೋಡದೇ ಇದ್ದರೆ, ಈ ಭೇಟಿಯನ್ನು ಕೇವಲ ಮಾತುಕತೆಗೆ ಮೀಸಲಾಗಿಸದೇ ಮುಂದಿನ ಹಂತಕ್ಕೆ ಮುಂದುವರೆಸುವುದರಲ್ಲಿ ಇವರಿಗೆ ಆಸಕ್ತಿ ಇದೆ ಎಂದು ಅರ್ಥೈಸಿಕೊಳ್ಳಬಹುದು.

English summary

What Do Different Types Of Eye Contact Mean in Kannada?

Here we talking about What Do Different Types Of Eye Contact Mean in Kannada?, read on
X
Desktop Bottom Promotion