For Quick Alerts
ALLOW NOTIFICATIONS  
For Daily Alerts

ನಿಮ್ಮ ಸಂಗಾತಿಗೆ ಡೈರೆಕ್ಟಾಗಿ ಐ ಲವ್ ಯೂ ಹೇಳಲು ಆಗದಿದ್ದರೆ ಈ ವಿಧಾನಗಳನ್ನು ಅನುಸರಿಸಿ

|

"ಐ ಲವ್ ಯೂ",ಇದು ಕೇವಲ ಪದವಲ್ಲ, ಒಬ್ಬರ ಮನದಲ್ಲಿರೋ ಭಾವನೆ, ಬದುಕು, ಪ್ರೀತಿಯ ಸಂಕೇತ. ಕೇವಲ ಈ ಮೂರು ಪದವನ್ನು ತಾವು ಪ್ರೀತಿಸುವ ವ್ಯಕ್ತಿಯ ಬಳಿ ಹೇಳೋಕೆ ಹುಡುಗರು ಪಡೋ ಪಾಡು ಅಷ್ಟಿಷ್ಟಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳೋಕೆ ವರ್ಷಾನುಗಟ್ಟಲೇ ತಯಾರಿ ಮಾಡಿಕೊಂಡು ಸಮಯಕ್ಕಾಗಿ ಕಾಯುತ್ತಿರುತ್ತಾರೆ ನಮ್ಮ ಹುಡುಗರು.

ಇದರ ಜೊತೆಗೆ ಈಗಾಗಲೇ ವಿವಾಹವಾದವರು ಅಥವಾ ಸಂಬಂಧದಲ್ಲಿರುವವರು ಆಕೆಗೆ ಈ ಪದಗಳನ್ನು ಹೇಳಲು ಒದ್ದಾಡುತ್ತಿರುತ್ತಾರೆ. ಅದು ಹಿಂಜರಿಕೆಯೋ ಅಥವಾ ಮುಜುಗರವೋ ಗೊತ್ತಿಲ್ಲ. ಅದಕ್ಕಾಗಿ ನಾವಿಂದು ನಿಮ್ಮ ಸಂಗಾತಿಗೆ ಐ ಲವ್ ಯೂ ಹೇಳುವುದು ಹೇಗೆ ಎಂಬುದನ್ನು ಹೇಳಿದ್ದೇವೆ.

ಮೊದಲ ಬಾರಿಗೆ ಐ ಲವ್ ಯೂ ಹೇಳಲು ಕೆಲವೊಂದು ಸಲಹೆಗಳು ನಿಮಗಾಗಿ:

ಬೆಡ್ ನಲ್ಲೇ ಬ್ರೇಕ್ ಫಾಸ್ಟ್ ನೀಡಿ, ಅದರ ಜೊತೆ ಸಣ್ಣ್ ಟಿಪ್ಪಣಿ ಬರೆದಿಡಿ:

ಬೆಡ್ ನಲ್ಲೇ ಬ್ರೇಕ್ ಫಾಸ್ಟ್ ನೀಡಿ, ಅದರ ಜೊತೆ ಸಣ್ಣ್ ಟಿಪ್ಪಣಿ ಬರೆದಿಡಿ:

ನಿಮ್ಮ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಇದಕ್ಕಿಂತ ಒಳ್ಳೆಯ ಮಾರ್ಗ ಮತ್ತೊಂದಿಲ್ಲ. ಆಕೆ ಏಳುವ ಮುನ್ನ ಅವಳಿಗಿಷ್ಟವಾದ ಬ್ರೇಕ್ ಫಾಸ್ಟ ತಯಾರಿಸಿ ಆಕೆಯ ಮುಂದಿಡಿ. ಅದರ ಜೊತೆಗೆ ಆಕೆಯ ಮೇಲಿರುವ ಪ್ರೀತಿಯನ್ನು ಬರೆದಿಡಲು ಮರೆಯದಿರಿ. ಇದು ಹೇಗೆ ಮ್ಯಾಜಿಕ್ ಮಾಡುತ್ತೆ ಎಂದು ನೀವೇ ನೋಡಬಹುದು.

ಮಲಗುವ ಮುನ್ನ ಕಿವಿಯಲ್ಲಿ ಪಿಸುಮಾತಿನ ಮೂಲಕ ಹೇಳಿ:

ಮಲಗುವ ಮುನ್ನ ಕಿವಿಯಲ್ಲಿ ಪಿಸುಮಾತಿನ ಮೂಲಕ ಹೇಳಿ:

ಈ ವಿಧಾನ ನಿಮ್ಮ ನಡುವಿನ ಬಂಧವನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ. ಮಲಗುವ ಮುನ್ನ ಆಕೆಗೆ ಈ ಲವ್ ಯೂ ಅಂದರೆ ಸಾಕು, ಆಕೆಯ ದಿನವಿಡೀಯ ಸುಸ್ತು, ಆಯಾಸ ಎಲ್ಲವೂ ಮರೆಯಾಗಿ ಸಂತೋಷ ಉಕ್ಕುತ್ತದೆ. ಪಿಸುಮಾತಿನಲ್ಲಿ ಹೇಳೋದು ಸಂಬಂಧಕ್ಕೆ ಮತ್ತಷ್ಟು ಕ್ರೇಜಿನೆಸ್ ನೀಡುತ್ತದೆ.

ಮ್ಯೂಸಿಕ್ ಮೂಲಕವೂ ಹೇಳಬಹುದು:

ಮ್ಯೂಸಿಕ್ ಮೂಲಕವೂ ಹೇಳಬಹುದು:

ಅವನ / ಅವಳ ನೆಚ್ಚಿನ ಹಾಡುಗಳನ್ನು ಮಿಕ್ಸ ಮಾಡಿ ಮತ್ತು ಕೆಲವು ರೋಮ್ಯಾಂಟಿಕ್ ಹಾಡುಗಳನ್ನು ಕೂಡ ಸೇರಿಸಿ ಆಕೆ ಇರುವ ಸಮಯದಲ್ಲಿ ಪ್ಲೇ ಮಾಡಿ. ಅಥವಾ ನೀವೇ ಆಕೆಯ ಮೇಲಿರುವ ಪ್ರೀತಿಯನನ್ನು ಹೇಳಿಕೊಂಡು ಅವೆಲ್ಲವನ್ನು ರೆಕಾರ್ಡ್ ಮಾಡಿ, ಆಕೆಗೆ ಕೇಳಿಸಿ. ಇದು ಆಕೆಗೊಂದು ಸ್ಪೆಷಲ್ ಫೀಲ್ ನೀಡುತ್ತದೆ.

ಬೀಚ್ ಹೋದಾಗ ಮರಳಿನಲ್ಲಿ ಹೆಸರು ಬರೆಯೋದನ್ನು ಮರೀಬೇಡಿ:

ಬೀಚ್ ಹೋದಾಗ ಮರಳಿನಲ್ಲಿ ಹೆಸರು ಬರೆಯೋದನ್ನು ಮರೀಬೇಡಿ:

ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಕಡಲ ತೀರದಲ್ಲಿ ನಡೆಯೋದೇ ಒಂದು ರೊಮ್ಯಾಂಟಿಕ್ ಫೀಲ್. ಅದರ ಜೊತೆಗೆ ಮರಳಿನ ಮೇಲೆ ಆಕೆಯ ಹೆಸರನ್ನು ಬರೆದು ಐ ಲವ್ ಯೂ ಎಂದು ಬರೆಯಿರಿ. ಇದು ನೀವು ಆಕೆಯ ಮೇಲಿಟ್ಟಿರುವ ಪ್ರೀತಿ ಹಾಗೂ ಕಾಳಜಿಯನ್ನು ವ್ಯಕ್ತಪಡಿಸುತ್ತೆ ಜೊತೆಗೆ ಸಂತೋಷವೂ ನೀಡುತ್ತೆ.

ಒಂದು ಮುದ್ದಾದ ಪ್ರೇಮ ಪತ್ರವನ್ನು ನೀಡಿ:

ಒಂದು ಮುದ್ದಾದ ಪ್ರೇಮ ಪತ್ರವನ್ನು ನೀಡಿ:

ನಿಮ್ಮ ಪ್ರೀತಿಯನ್ನು ಮಾತಿನಲ್ಲಿ ನೇರವಾಗಿ ಹೇಳುವುದು ನಿಮಗೆ ಕಷ್ಟವಾಗಿದ್ದರೆ, ಆ ಎಲ್ಲಾ ಮಾತುಗಳನ್ನು ಅಕ್ಷರ ರೂಪಕ್ಕೆ ತನ್ನಿ. ಈ ಪ್ರೇಮ ಪತ್ರಕ್ಕೆ ಇಂದಿಗೂ ವಿಶೇಷ ಸ್ಥಾನವಿದೆ. ಇದರಲ್ಲಿ ತುಂಬಾ ರೊಮ್ಯಾಂಟಿಕ್ ಹಾಗೂ ಪ್ರಾಮಾಣಿಕ ಮಾತುಗಳಿರಬೇಕು. ಅತಿಯಾದ ಆಡಂಬರ ಅಗತ್ಯವಿಲ್ಲ, ಸರಳ ಅಕ್ಷರಗಳನ್ನು ಜೋಡಿಸಿ ಒಂದು ಪ್ರೇಮ ಪತ್ರವನ್ನು ಬರೆಯಿರಿ.

ಅವರು ರೂಮ್ ನಲ್ಲಿದ್ದಾಗ ಸಂದೇಶ ಕಳುಹಿಸಿ:

ಅವರು ರೂಮ್ ನಲ್ಲಿದ್ದಾಗ ಸಂದೇಶ ಕಳುಹಿಸಿ:

ನಿಮಗೆ ಪ್ರೀತಿಯ ವಿಚಾರವನ್ನು ಡೈರೆಕ್ಟಾಗಿ ಹೇಳಲು ಅಗದಿದ್ದರೆ ಆಕೆಗೆ ಮೆಸೇಜ್ ಕಳಿಸಿಯೂ ಸಹ ವ್ಯಕ್ತಪಡಿಸಹುದು. ಕ್ಯೂಟ್ ಎಮೋಜಿಗಳ ಜೊತೆಗೆ ನಿಮ್ಮ ಹೃದಯದ ಮಾತುಗಳನ್ನು ಬರೆದು ಸಂದೇಶ ಕಳುಹಿಸಿ.

ಐ ಲವ್ ಯೂ ವನ್ನು ಪ್ರಾಮಾಣಿಕವಾಗಿ ಹೇಳಿ:

ಐ ಲವ್ ಯೂ ವನ್ನು ಪ್ರಾಮಾಣಿಕವಾಗಿ ಹೇಳಿ:

ಇದು ಬಹಳ ಮುಖ್ಯ. ಆಕೆಗೆ ವಿಭಿನ್ನ ವಿಧನವನ್ನು ಬಳಸಿದ್ದರೂ ತೊಂದರೆಯಿಲ್ಲ. ಆದರೆ ಪ್ರಾಮಾಣಿಕವಾಗಿ ಕಣ್ಣಲ್ಲಿ ಕಣ್ಣಿಟ್ಟು ಹೇಳಿ. ಕಣ್ಣಿನ ಭಾಷೆಗಿಂತ ಮುಖ್ಯವಾದುದು ಬೇರೊಂದಿಲ್ಲ. ಆದ್ದರಿಂದ ಕಣ್ಣನ್ನು ನೋಡುತ್ತಾ ಐ ಲವ್ ಯೂ ಹೇಳಿ.

English summary

Ways To Say I Love You For The First Time in Kannada

Here we talking about Ways To Say I Love You For The First Time in Kannada, read on
X
Desktop Bottom Promotion