For Quick Alerts
ALLOW NOTIFICATIONS  
For Daily Alerts

ಕೋಪಗೊಂಡ ಗೆಳೆಯನ ಮುಖದಲ್ಲಿ ನಗು ಮೂಡಿಸುವುದು ಹೇಗೆ?

|

ಪ್ರೀತಿಯಲ್ಲಿ ಸರಸ-ವಿರಸ ಮಾಮೂಲಿ. ಅವೆರಡು ಇದ್ದಾಗ ಮಾತ್ರ ಸಂಬಂಧಕ್ಕೊಂದು ಬೆಲೆ. ಆದರೆ ಯಾವುದೂ ಅತಿಯಾಗಬಾರದು. ಗಂಡು-ಹೆಣ್ಣು ತಮ್ಮ ಜೀವನವನ್ನು ಪರಸ್ಪರ ಹಂಚಿಕೊಳ್ಳಲು ನಿರ್ಧರಿಸಿದಾಗ ಸಾಮಾನ್ಯವಾಗಿ ಕಾದಾಟ ಹಾಗೂ ವಾದಗಳು ಸಂಭವಿಸುತ್ತವೆ.

ಜಗಳದ ಹಿಂದಿನ ಕಾರಣ ಏನೇ ಇರಲಿ, ಆದರೆ ಅದನ್ನು ಸರಿಪಡಿಸಲು ಯಾರಾದರೊಬ್ಬರು ಒಂದು ಹೆಜ್ಜೆ ಮುಂದೆ ಇಡಲೇಬೇಕು. ಇಲ್ಲದಿದ್ದಲ್ಲಿ ಮುಂದೆ ಅದೇ ನಿಮ್ಮ ಭಾಂಧವ್ಯಕ್ಕೆ ಮುಳುವಾಗುತ್ತದೆ. ಇಲ್ಲಿ ನಾವು ನಿಮ್ಮ ಹುಡುಗ ನಿಮ್ಮ ಮೇಲೆ ಮುನಿಸಿಕೊಂಡಾಗ, ಆತನ ಮುಖದಲ್ಲಿ ನಗು ತರಲು ಏನು ಮಾಡಬೇಕು ಎಂಬುದನ್ನ ಹೇಳಿದ್ದೇವೆ.

ನಿಮ್ಮ ಗೆಳೆಯ ಕೋಪಗೊಂಡಾಗ ಆತನನ್ನು ನಗಿಸಲು ಕೆಲವೊಂದು ಮಾರ್ಗಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಸಾರಿ(ಕ್ಷಮಿಸು) ಎಂದು ಹೇಳಿ:

ಸಾರಿ(ಕ್ಷಮಿಸು) ಎಂದು ಹೇಳಿ:

ಈ ಸಾರಿ ಅನ್ನೋ ಪದ ಎಷ್ಟೋ ಸಲ ಸಂಬಂಧವನ್ನು ಉಳಿಸುವ ಅತೀ ದೊಡ್ಡ ಆಯುಧ. ನೀವು ತಪ್ಪು ಮಾಡಿದ್ದರೆ ನಿಮ್ಮ ಅಹಂಕಾರವನ್ನು ಬದಿಗಿರಿಸಿ, ಕ್ಷಮೆಯಾಚಿಸಿ. ನಿಮ್ಮ ತಪ್ಪು ನಿಮಗೆ ಅರ್ಥವಾಗಿದೆ ಎಂದು ಆತನಿಗೆ ಮನವರಿಕೆ ಮಾಡಿ. ನಿಮ್ಮ ಕ್ಷಮೆಯಾಚನೆಯು ನಿಜವಾಗಿದ್ದರೆ, ಆತ ನಿಮ್ಮನ್ನು ಕ್ಷಮಿಸುತ್ತಾನೆ. ನಿಮ್ಮ ಕಡೆ ನೋಡುತ್ತಾನೆ.

ಸಿಹಿಯಾಗಿ ಮಾತನಾಡಿ:

ಸಿಹಿಯಾಗಿ ಮಾತನಾಡಿ:

ನೀವು ಆತನಿಗಾಗಿ ಏನು ಮಾಡಬೇಕೆಂದು ಕೇಳಿ. ಈ ವೇಳೆ ಅವನೊಂದಿಗೆ ಮಾತನಾಡುವಾಗ ನಿಮ್ಮ ಧ್ವನಿಯನ್ನು ಕಡಿಮೆ ಮಾಡಿ. ಅವನಿಗೆ ಸ್ವಲ್ಪ ಕಾಫಿ ಅಥವಾ ತಂಪು ಜ್ಯೂಸ್ ತಯಾರಿಸಿ. ಆದ್ದರಿಂದ ಅವನ ಕೋಪ ಇಳಿದು, ಮೂಡುವುದರಲ್ಲಿ ಸಂಶಯವಿಲ್ಲ.

ಆತನಿಗಾಗಿ ಅಡುಗೆ ಮಾಡಿ:

ಆತನಿಗಾಗಿ ಅಡುಗೆ ಮಾಡಿ:

ಮನುಷ್ಯನ ಹೃದಯ ಗೆಲ್ಲಲು ಹೊಟ್ಟೆ ಮೂಲಕ ಸಾಗಬೇಕು ಎಂಬ ಮಾತಿದೆ. ಇದೇ ವಿಧಾನವನ್ನು ನಿಮ್ಮವನ ಕೋಪ ಇಳಿಸಲು ಬಳಸಿಕೊಳ್ಳಿ. ಆತನಿಗೆ ಇಷ್ಟವಾದ ಅಡುಗೆ ತಯಾರಿಸಿ. ಅಥವಾ ಯಾವುದಾದರೂ ಹೊಸ ರೆಸಿಪಿ ಪ್ರಯತ್ನಿಸಿ ಆತನಿಗೆ ನೀಡಿ. ನೀವು ಅವನಿಗೆ ಸಿದ್ಧಪಡಿಸಿದ ನೀರೂರಿಸುವ ಭಕ್ಷ್ಯವನ್ನು ನೋಡಿದ ಮೇಲೆ ತನ್ನ ಕೋಪವನ್ನು ಮರೆತುಬಿಡಬಹುದು.

ಅವನನ್ನು ಅಭಿನಂದಿಸಿ:

ಅವನನ್ನು ಅಭಿನಂದಿಸಿ:

ಆತ ಕೋಪಗೊಂಡಾಗ ನೀವು ಅವನನ್ನು ಮುದ್ದು ಮಾಡುವುದು ಅಥವಾ ಹೊಗಳುವುದು ಮಾಡಿದರೂ ಕೆಲವೊಮ್ಮೆ ಆತ ನಗುವ ಸಾಧ್ಯತೆಗಳಿವೆ. ಅವನನ್ನು ಸುಮ್ಮನೆ ಕಾಲು ಎಳೆಯೋ ರೀತಿ ಮಾಡಿ, ಆತನ ಮುಖದಲ್ಲಿ ನಗು ಮೂಡಿಸಬಹುದು.

ಜೋಕ್ಸ ಮಾಡಿ:

ಜೋಕ್ಸ ಮಾಡಿ:

ನಿಮ್ಮವನನ್ನು ನಗಿಸಲು ಕೆಲವೊಂದು ಹಾಸ್ಯಗಳನ್ನು ಮಾಡಿ. ಅದು ನಿಮ್ಮ ಮೇಲೆಯೇ ಆಗಿದ್ದರೂ ಸರಿಯೇ. ಇದರಿಂದ ಆತನ ಮೊಗದಲ್ಲಿ ನಗು ಮೂಡುವುದು. ಒಂದು ವೇಳೆ ನಿಮ್ಮ ಜೋಕ್ಸ್ ಗಳು ಎಷ್ಟೇ ಸಿಲ್ಲಿ ಆಗಿದ್ದರೂ, ನಿಮ್ಮ ಗೆಳೆಯ ನಗುವುದಿಲ್ಲ ಎಂದಾದರೆ, ನಿಮ್ಮ ಹಾಸ್ಯ ಪ್ರಜ್ಞೆ ಇನ್ನಷ್ಟು ಹೆಚ್ಚಾಗಬೇಕು ಎಂದರ್ಥ.

ಅವರು ಬಯಸಿದ್ದನ್ನು ಮಾಡಲು ಪ್ರಯತ್ನಿಸಿ:

ಅವರು ಬಯಸಿದ್ದನ್ನು ಮಾಡಲು ಪ್ರಯತ್ನಿಸಿ:

ಅವರೊಂದಿಗೆ ವಿಡಿಯೋ ಗೇಮ್ ಆಡಲು ನಿಮ್ಮನ್ನು ಕೇಳುತ್ತಿದ್ದಾನೆಯೇ? ಅಥವಾ, ಎಂದಾದರೂ ನಿಮ್ಮನ್ನು ಕ್ರಿಕೆಟ್ ಪಂದ್ಯಕ್ಕೆ ಕರೆದೊಯ್ಯಲು ಬಯಸಿದ್ದಾನೆಯೇ? ಹಾಗಿದ್ದರೆ, ಈ ಕೆಲಸಗಳನ್ನು ಮಾಡಲು ಈಗ ಮಾಡಲು ಆತನ ಬಳಿ ಕೇಳಿ. ಆತನಿಗೆ ಇಷ್ಟವಾದ ಈ ಕೆಲಸಗಳನ್ನು ಮಾಡುವಾಗ ಆತ ನಿಮ್ಮ ಮೇಲಿರುವ ಕೋಪವನ್ನು ಮರೆತುಬಿಡುತ್ತಾನೆ.

ಸಣ್ಣ ಸಪ್ರೈಸ್ ನೀಡಿ;

ಸಣ್ಣ ಸಪ್ರೈಸ್ ನೀಡಿ;

ನೀವು ಅವನನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಹೇಳುವ ಕೆಲವು ಸಾಲುಗಳನ್ನು ಬರೆದು ಆತನಿಗೆ ನೀಡಿ. ಅಥವಾ ಅವನನ್ನು ನೆಚ್ಚಿನ ಅಂಗಡಿ ಅಥವಾ ರೆಸ್ಟೋರೆಂಟ್ ಗೆ ಕರೆದೊಯ್ಯಿರಿ. ಅವನ ಕೋಪವನ್ನು ತಣಿಸಲು ಸಣ್ಣ ಸಪ್ರೈಸ್ ನೀಡಿ.

English summary

Ways To Make Your Boyfriend Smile When He Is Mad At You in Kannada

Here we talking about Ways To Make Your Boyfriend Smile When He Is Mad At You in Kannada, read on
Story first published: Monday, May 10, 2021, 14:26 [IST]
X
Desktop Bottom Promotion