For Quick Alerts
ALLOW NOTIFICATIONS  
For Daily Alerts

ತಾನು ಮಾಡುತ್ತಿರುವ ಮೋಸವನ್ನು ಸ್ವತಃ ಸಂಗಾತಿಯೇ ಒಪ್ಪಿಕೊಳ್ಳುವಂತೆ ಮಾಡಲು ಹೀಗೆ ಮಾಡಿ

|

ಸಂಬಂಧದಲ್ಲಿ ಮೋಸವನ್ನು ಯಾರೂ ಸಹಿಸುವುದಿಲ್ಲ. ಈ ಮೋಸವನ್ನು ಹೇಗಾದರೂ ನಿಲ್ಲಿಸಬೇಕು ಎಂದೇ ಹೆಚ್ಚಿನವರು ಬಯಸೋದು. ಆದ್ರೆ ಇದು ಸಾಧ್ಯವಾಗೋದು ನಿಮ್ಮ ಸಂಗಾತಿ ಮೋಸ ಮಾಡುತ್ತಿದ್ದೇನೆ ಅಂತ ತಪ್ಪೊಪ್ಪಿಕೊಂಡಾಗ ಮಾತ್ರ. ಇಲ್ಲವಾದಲ್ಲಿ ಆ ಮೋಸ ಮುಂದುವರಿದು, ಸಂಬಂಧ ಮುರಿಯಲು ಕಾರಣವಾಗುತ್ತದೆ.

partner

ಆದರೆ, ಸಂಗಾತಿಯ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಈ ಮಾರ್ಗಗಳ ಮೂಲಕ ನಿಮ್ಮ ಸಂಗಾತಿಯೇ ಮೋಸ ಮಾಡುತ್ತಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಮಾಡಬಹುದು.

ನಿಮ್ಮ ಸಂಗಾತಿಯು ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಒಪ್ಪಿಕೊಳ್ಳುವಂತೆ ಮಾಡುವ ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ:

ನಿರ್ದಿಷ್ಟ ಸಂದರ್ಭದಲ್ಲಿ ಅವರನ್ನು ಲಾಕ್ ಮಾಡಿ

ನಿರ್ದಿಷ್ಟ ಸಂದರ್ಭದಲ್ಲಿ ಅವರನ್ನು ಲಾಕ್ ಮಾಡಿ

ನಿಮ್ಮ ಸಂಗಾತಿಯು ಸುಲಭವಾಗಿ ದಾಂಪತ್ಯ ದ್ರೋಹದ ಬಗ್ಗೆ ತಪ್ಪೊಪ್ಪಿಕೊಳ್ಳಲು ಸಿದ್ಧರಿಲ್ಲದಿದ್ದರೆ, ಯಾವುದಾದರೊಂದು ಸನ್ನಿವೇಶದಲ್ಲಿ ಅವರನ್ನು ಲಾಕ್ ಮಾಡಿ. ಅಂದರೆ, ನಿಮ್ಮ ಜೊತೆ ಮಾತನಾಡಲು, ಅವರನ್ನು ಕುಳಿತುಕೊಳ್ಳುವಂತೆ ಮಾಡಿ. ಆಗ ನೀವು ನೇರವಾಗಿ ಅವರನ್ನ ಪ್ರಶ್ನಿಸಬಹುದು ಅಥವಾ ಸತ್ಯ ತಿಳಿಯಲು ನಿಮ್ಮದೇ ದಾರಿಯಲ್ಲಿ ಸಾಗಬಹುದು. ಆಗ ಖಂಡಿತ ನಿಮ್ಮ ಸಂಗಾತಿ ತಪ್ಪೊಪ್ಪಿಕೊಳ್ಳುತ್ತಾರೆ.

ಅವರು ಮಾತನಾಡುವಾಗ ತಲೆಯಾಡಿಸಿ

ಅವರು ಮಾತನಾಡುವಾಗ ತಲೆಯಾಡಿಸಿ

ಸತ್ಯವನ್ನು ಮಾತನಾಡಲು ನಿಮ್ಮ ಸಂಗಾತಿಯನ್ನು ಪ್ರೋತ್ಸಾಹಿಸುವ ಒಂದು ಮಾರ್ಗವೆಂದರೆ, ಅವರು ಹೇಳುವ ಪ್ರತಿಯೊಂದು ವಿಚಾರಕ್ಕೂ ತಲೆಯಾಡಿಸಿ. ಇದು ಉತ್ತೇಜನದ ಅತ್ಯಂತ ಸಕಾರಾತ್ಮಕ ಮಾರ್ಗವಾಗಿದ್ದು, ನೀವು ನಿಮ್ಮ ಸಂಗಾತಿಯ ಮಾತಿಗೆ ಎಷ್ಟು ಗಮನ ಕೊಡುತ್ತೀರಿ ಹಾಗೂ ಅವರ ಬಗೆಗಿನ ಕಾಳಜಿಯನ್ನು ಅವರಿಗೆ ಅರ್ಥ ಮಾಡಿಸುತ್ತದೆ. ಇದರಿಂದ ಅವರಾಗಿಯೇ ನಿಜ ಹೇಳುವ ನಿರ್ಧಾರ ಮಾಡುತ್ತಾರೆ.

ಮೋಸದ ಬಗ್ಗೆ ಪರೋಕ್ಷ ಪ್ರಶ್ನೆಗಳನ್ನು ಕೇಳಿ

ಮೋಸದ ಬಗ್ಗೆ ಪರೋಕ್ಷ ಪ್ರಶ್ನೆಗಳನ್ನು ಕೇಳಿ

ನಿಮ್ಮ ಸಂಗಾತಿಗೆ ಮೋಸದ ಬಗ್ಗೆ ಕೆಲವೊಂದು ಪರೋಕ್ಷ ಪ್ರಶ್ನೆಗಳನ್ನು ಕೇಳುವ ಮೂಲಕ ಅವರಲ್ಲಿ ತಪ್ಪಿತಸ್ಥ ಭಾವನೆ ಮೂಡಿಸಬಹುದು. ಇದರಿಂದ ಅವರು ತಮ್ಮ ತಪನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಬಹುದು. ಅಂದ್ರೆ "ನೀವು ಎಷ್ಟು ಪ್ರಾಮಾಣಿಕರಾಗಿರುತ್ತೀರಿ?" ಅಥವಾ "ನನಗೆ ಸುಳ್ಳು ಎಂದರೆ ಇಷ್ಟವಾಗೋದಿಲ್ಲ, ನೀವು ಎಂದಾದರೂ ಸುಳ್ಳು ಹೇಳಿದ್ದೀರಾ?'' ಹೀಗೆ.. ಅವರಿಗೆ ತಮ್ಮ ತಪ್ಪಿನ ಬಗ್ಗೆ ಕೀಳರಿಮೆ ಮೂಡುವಂತಹ ಪ್ರಶ್ನೆಗಳನ್ನು ಕೇಳಬಹುದು. ಇದರಿಂದ ಅವರು ನಿಮಗೆ ಮಾಡುತ್ತಿರುವ ದಾಂಪತ್ಯ ದ್ರೋಹವನ್ನು ಒಪ್ಪಿಕೊಳ್ಳಬಹುದು.

ವ್ಯಂಗ್ಯ ಮಾತು ಬೇಡ, ಸಮಾಧಾನದಿಂದಿರಿ

ವ್ಯಂಗ್ಯ ಮಾತು ಬೇಡ, ಸಮಾಧಾನದಿಂದಿರಿ

ನಿಮ್ಮ ಸಂಗಾತಿಯ ಮೇಲೆ ವ್ಯಂಗ್ಯ ಮಾತು, ಕಠಿಣ ಪದಗಳನ್ನು ಬಳಸುವುದನ್ನು ಪ್ರಾರಂಭಿಸಿದರೆ, ಅವರು ಭಯದಿಂದ ಮುಂದೆ ಏನನ್ನೂ ಹೇಳುವುದಿಲ್ಲ. ಬದಲಾಗಿ, ಅವರೊಂದಿಗೆ ಮಾತನಾಡುವಾಗ ಮುಕ್ತವಾಗಿ ಮತ್ತು ಶಾಂತವಾಗಿರಿ. ಇದರಿಂದ ಅವರು ತಮ್ಮ ಮನಸ್ಸಿನಲ್ಲಿ ಇರುವಂತಹ ಮಾತುಗಳನ್ನು ನಿಮ್ಮ ಬಳಿ ಹೇಳಿಕೊಳ್ಳಬಹುದು. ನೀವು ಕೋಪದಿಂದ ಮಾತನಾಡಿದರೆ, ಅವರು ಏನನ್ನೂ ಹೇಳದೇ ಆ ಮೋಸವನ್ನು ಮುಂದುವರಿಸಬಹುದು.

English summary

Ways to get your partner to admit that they cheated in kannada

Here we talking about Ways to get your partner to admit that they cheated in kannada, read on
X
Desktop Bottom Promotion