For Quick Alerts
ALLOW NOTIFICATIONS  
For Daily Alerts

ನನಗೂ ಒಂದು ಲವ್ವರ್ ಬೇಕೆಂದಿನಿಸುತ್ತಿದೆಯೇ? ನಿಜವಾದ ಪ್ರೀತಿಯನ್ನು ತಿಳಿಯುವುದು ಹೇಗೆ?

|

ಸಿಂಗಲ್‌ ಆಗಿರುವವರಿಗೆ ನನಗೊಂದು ಲೈಫ್‌ ಪಾರ್ಟನರ್‌ ಯಾವಾಗಪ್ಪಾ ಸಿಗುವುದು, ನನ್ನವನು/ನನ್ನವಳು ಎಲ್ಲಿ ಇದ್ದಾರೋ ಏನೋ? ಎಂದು ಆವಾಗ-ಆವಾಗ ಅನಿಸುತ್ತಿರುತ್ತದೆ. ಲವ್‌ ಎಂಬುವುದು ಒಂಥರಾ ವಿಸೇಷ-ವಿಚಿತ್ರವಾದ ಅನುಭವ. ಯಾರಾದರೂ ಜೋಡಿ ಸಿಂಗಲ್‌ ಆಗಿರುವವರ ಮುಂದೆ ಕೈ ಕೈ ಹಿಡಿದು ನಗು-ನಗುತ್ತಾ ಹೋಗುತ್ತಿರುವುದನ್ನು ನೋಡುವಾಗ ನನಗೂ ಒಂದು ಲವ್ವರ್‌ ಇರಬೇಕೆಂದು ಅನಿಸುತ್ತೆ ಎಂದು ಸಿಂಗಲ್‌ ಆಗಿರುವ ಅನೇಕರು ಹೇಳುತ್ತಾರೆ.

ಹಾಗಂತ ಧಾವಂತಕ್ಕೆ ಬಿದ್ದು ಲವ್‌ ಮಾಡುವುದು ಸರಿಯಲ್ಲ, ಹೀಗೆ ಅರ್ಜೆಂಟ್ ಮಾಡಿದರೆ ನಮ್ಮ ಬದುಕಿನಲ್ಲಿ ತಪ್ಪಾದ ವ್ಯಕ್ತಿಯನ್ನು ಆಯ್ಕೆ ಮಾಡಿ ಬಿಡುತ್ತೇವೆ, ನಂತರ ಪಶ್ಚಾತಾಪ ಪಡಬೇಕಾಗುತ್ತದೆ. ಆದ್ದರಿಂದ ಪ್ರೀತಿಯಲ್ಲಿ ಬೀಳುವವಾಗ ಎಲ್ಲರೂ ಪ್ರೀತಿ ಮಾಡುತ್ತಿದ್ದಾರೆ ಎಂದು ಮಾಡುವುದಲ್ಲ, ನಮಗಾಗಿಯೇ ಇರುವವರನ್ನು ಆಯ್ಕೆ ಮಾಡಬೇಕು.

ಆ ವ್ಯಕ್ತಿ ನಮಗಾಗಿಯೇ ಇರುವುದು ಎಂದು ತಿಳಿಯುವುದು ಹೇಗೆ, ನಮಗೆ ಆ ವ್ಯಕ್ತಿ ಮೇಲೆ ಇರುವುದು ಲವ್‌ ಅಥವಾ ಅಫೆಕ್ಷನ್ ಎಂಬುವುದನ್ನು ನಾವು ನಮ್ಮದೇ ನಡವಳಿಕೆಯಿಂದ ಗುರುತಿಸಬಹುದು.

ನಾವು ಆ ವ್ಯಕ್ತಿಯನ್ನು ತುಂಬಾನೇ ಪ್ರೀತಿಸುತ್ತಿದ್ದೇವೆ ಎಂದು ತಿಳಿಯುವುದು ಹೇಗೆ?

ನಾವು ಆ ವ್ಯಕ್ತಿಯನ್ನು ತುಂಬಾನೇ ಪ್ರೀತಿಸುತ್ತಿದ್ದೇವೆ ಎಂದು ತಿಳಿಯುವುದು ಹೇಗೆ?

* ಆ ವ್ಯಕ್ತಿ ಬಗ್ಗೆ ಯೋಚಿಸಿದಾಗ ಅಥವಾ ಅವರು ಎದುರಿಗೆ ಬಂದಾಗ ತುಂಬಾ ಸಂತೋಷವಾಗುತ್ತೆ

* ಅವರನ್ನು ನೋಡುತ್ತಲೇ ಇರಬೇಕೆನಿಸುತ್ತೆ

* ಅವರ ಜೊತೆ ನಡೆಸಿದ ಮಾತುಕತೆಯನ್ನು ಆಗಾಗ ನೆನಪಿಸುತ್ತಲೇ ಇರುತ್ತೇವೆ.

* ಅವರೊಂದಿಗೆ ಭವಿಷ್ಯವನ್ನುಕಟ್ಟಿಕೊಳ್ಳುವುದರ ಬಗ್ಗೆ ಯೋಚಿಸುತ್ತೀರ.

* ಒಬ್ಬರನ್ನೊಬ್ಬರು ಸಂತೋಷವಾಗಿಡಲು ಬಯಸುತ್ತೀರಿ

ಇವೆಲ್ಲಾ ನಿಮಗೆ ಅವರ ಮೇಲೆ ತುಂಬಾ ಪ್ರೀತಿ ಇದ್ದರೆ ಕಂಡು ಬರುವ ಲಕ್ಷಣಗಳಾಗಿವೆ.

ನಿಮ್ಮ ಲೈಫ್‌ನಲ್ಲಿ ನಮಗೆ ಸೂಟ್‌ ಆಗುವ ವ್ಯಕ್ತಿಯನ್ನು ಆರಿಸುವಾಗ ಈ ಅಂಶಗಳನ್ನೂ ಗಮನಿಸಿ:

ನಿಮಗೆ ಎಂಥವರು ಬೇಕು ಎಂಬುವುದನ್ನು ಮೊದಲು ಯೋಚಿಸಬೇಕು

ನಿಮಗೆ ಎಂಥವರು ಬೇಕು ಎಂಬುವುದನ್ನು ಮೊದಲು ಯೋಚಿಸಬೇಕು

ನಮ್ಮ ಜೀವನ ಸಂಗಾತಿಯಾಗಿ ಬರುವವರಲ್ಲಿ ಇರಬೇಕಾದ ಗುಣಗಳೇನು ಎಂಬುವುದನ್ನು ಯೋಚಿಸಿ. ಹಲವು ಮದುವೆಗಳು ಹಣ, ಅಂತಸ್ತು ನೋಡಿ ಆಗುತ್ತವೆ, ಆದರೆ ಅವೆಲ್ಲಕ್ಕಿಂತ ಮುಖ್ಯವಾಗಿ ಗುಣ ನೋಡಿ. ನಿಮಗೆ ಹೊಂದುವ ಗುಣದವರಾದರೆ ಅವರ ಜೊತೆಗಿನ ಬಾಳು ಸಂತೋಷವಾಗಿರುತ್ತೆ.

ಆ ಸಂಬಂಧದಲ್ಲಿ ನೀವು ಖುಷಿಯಾಗಿರಬೇಕು

ಆ ಸಂಬಂಧದಲ್ಲಿ ನೀವು ಖುಷಿಯಾಗಿರಬೇಕು

ಸಂಬಂಧದಲ್ಲಿ ಖುಷಿ ಇಲ್ಲ ಎಂದರೆ ಮನೆ, ಆಸ್ತಿ ಏನು ಇದ್ದೂ ಪ್ರಯೋಜನವಿಲ್ಲ. ನಿಮ್ಮ ಸಂಗಾತಿಗೆ ನಿಮ್ಮನ್ನು ಖುಷಿಯಾಗಿಡಬೇಕು ಎಂಬ ಮನಸ್ಸಿರಬೇಕು, ಇನ್ನು ನಿಮ್ಮ ಸಂಗಾತಿಯನ್ನು ನೋಡಿದಾಗ ನಿಮ್ಮನ್ನು ಸೆಳೆಯುವಂತಿರಬೇಕು.

ನಿಮ್ಮವರನ್ನು ಎಲ್ಲಿ ಹುಡುಕಬೇಕು?

ನಿಮ್ಮವರನ್ನು ಎಲ್ಲಿ ಹುಡುಕಬೇಕು?

ಬಾಳ ಸಂಗಾತಿಯನ್ನು ಹುಡುಕಲು ಅನೇಕ ಆಯ್ಕೆಗಳಿವೆ, ಡೇಟಿಂಗ್‌ ಆ್ಯಪ್‌ಗಳಿವೆ, ನಿಮ್ಮ ಸ್ನೇಹಿತ/ ಸ್ನೇಹಿತೆಯ ಗುಣ ನಿಮಗೆ ಇಷ್ಟವಾಗಿದ್ದರೆ, ನಿಮಗಿರುವ ಫೀಲಿಂಗ್‌ ಅವರಿಗೂ ಇದೆ ಎಂದು ಅನಿಸಿದರೆ ಅವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಬಹುದು. ಇನ್ನು ಅರೇಂಜ್ಡ್‌ ಮ್ಯಾರೇಜ್‌ ಆದರೆ ಮನೆಯವರು ಹುಡುಕಿ ಕೊಡಬಹುದು.

ನೀವು ಯಾರನ್ನಾದರೂ ಮದುವೆಯಾಗಲು ಇಷ್ಟಪಟ್ಟರೆ ಅವರನ್ನು ಏಕೆ ಇಷ್ಟವಾಯಿತು ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ, ನಿಮಗೆ ಗೊಂದಲವಿದ್ದರೆ ಆ ಸಂಬಂಧದಲ್ಲಿ ಮುಂದುವರೆಯಬೇಡಿ. ಅವರ ಹಣ, ಅಂತಸ್ತು, ಉದ್ಯೋಗ ಎಲ್ಲಕ್ಕಿಂತ ನೀವು ಅವರನ್ನು ಬಯಸುತ್ತಿರುವುದು ಅವರ ಮೇಲಿರುವ ಪ್ರೀತಿಯಿಂದಷ್ಟೇ ಎಂದಾದರೆ ಮಾತ್ರ ಮದುವೆಗೆ ಯೆಸ್‌ ಅನ್ನಿ.

ಮೊದಲು ನಿಮ್ಮನ್ನು ನೀವು ಪ್ರೀತಿಸಿ

ಮೊದಲು ನಿಮ್ಮನ್ನು ನೀವು ಪ್ರೀತಿಸಿ

ಎಲ್ಲಕ್ಕಿಂತ ಮೊದಲು ನಿಮ್ಮನ್ನು ನೀವು ಪ್ರೀತಿಸಬೇಕು. ಬೇರೆಯವರಿಗಾಗಿ ನಿಮ್ಮ ಬಗ್ಗೆ ನೀವು ಅಸಹ್ಯ ಪಟ್ಟುಕೊಳ್ಳುವುದು ಮಾಡಬೇಡಿ. ನಾನು ನೋಡಲು ಆಕರ್ಷಕವಾಗಿಲ್ಲ ಆದ್ದರಿಂದ ನನ್ನನ್ನು ರಿಜೆಕ್ಟ್‌ ಮಾಡಿದ್ದಾರೆ, ಬಿಟ್ಟು ಹೋಗಿದ್ದಾರೆ, ಯಾರೂ ನನ್ನನ್ನು ಇಷ್ಟಪಡುತ್ತಿಲ್ಲ ಎಂದೆಲ್ಲಾ ಯೋಚಿಸಲೇಬೇಡಿ. ಮೊದಲು ನಿಮ್ಮನ್ನು ನೀವು ಪ್ರೀತಿಸಿ, ಆಗ ನಮ್ಮ ಆತ್ಮವಿಶ್ವಾಸ ಹೆಚ್ಚುವುದು. ಆತ್ಮವಿಶ್ವಾಸದಿಂದ ಇರುವ ವ್ಯಕ್ತಿಯನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ನಿಮ್ಮ ಗುಣ ನೋಡಿ ಬರುವವರು ಖಂಡಿತ ನಿಮ್ಮನ್ನು ಇಷ್ಟಪಡುತ್ತಾರೆ.

English summary

Ways To Find Your True Love; Tips in Kannada

How to find your true live: Tips in Kannada, read on...
Story first published: Thursday, August 25, 2022, 12:05 [IST]
X
Desktop Bottom Promotion