For Quick Alerts
ALLOW NOTIFICATIONS  
For Daily Alerts

ಇಂಥ ಗುಣವಿರುವ ಹೆಣ್ಣು ಸಂಗಾತಿಯಾದರೆ ಅಲ್ಲಿಗೆ ನಿಮ್ಮ ಜೀವನ ನರಕವಾಗುವುದರಲ್ಲಿ ಡೌಟೇ ಇಲ್ಲ

|

ಹೆಣ್ಣು ಪುರುಷರ ಬದುಕಿನಲ್ಲಿ ಭಾಗ್ಯ ಲಕ್ಷ್ಮಿಯೂ ಆಗಬಹುದು, ಶನಿಯೂ ಆಗಬಹುದು. ಒಳ್ಳೆಯ ಗುಣವಿರುವ ಹೆಣ್ಣು ಸಂಗಾತಿಯಾದರೆ ಅದೃಷ್ಟ, ಅದೇ ಗುಣ ಸರಿಯಲ್ಲ ಇದ್ದರೆ ಅಲ್ಲಿಗೆ ಅವನ ಕತೆ ಮುಗಿದಂತೆ, ಬದುಕೇ ನರಕವಾಗುವುದು. ಅವರನ್ನು ನೀವು ಸರಿ ಮಾಡಬಹುದು ಎಂಬುವುದು ಕೂಡ ಭ್ರಮೆಯಷ್ಟೇ. ಬೆರಳಿಣಿಕೆಯಷ್ಟು ಸರಿ ಹೋಗಬಹುದು. ಹುಟ್ಟುಗುಣ ಸತ್ತರೂ ಹೋಗಲ್ಲ ಅಂತಾರೆ ಅಲ್ವಾ? ಅದೇ ರೀತಿ ಇವರು ತಮ್ಮ ಗುಣ ಬದಲಾಯಿಸುವುದಿಲ್ಲ. ಇವರಿಂದ ಇತರರಿಗೆ ತೊಂದರೆ ತಪ್ಪಿದ್ದಲ್ಲ.

which women you should not date

ಆದರೆ ಸಂಗಾತಿಯನ್ನು ಹುಷಾರಾಗಿ ಆಯ್ಕೆ ಮಾಡಿ. ಅವರ ರೂಪ, ಹಣಕ್ಕಿಂತ ಜೊತೆಗೆ ಬಾಳಲು ಸ್ವಭಾವ ಮುಖ್ಯ. ಇಂಥ ಹೆಣ್ಮಕ್ಕಳ ಬಗ್ಗೆ ಡೇಟಿಂಗ್‌ ಮಾಡುವುದಾದರೆ ಹುಷಾರ್ ಕಣ್ರೀ!

ಕಂಟ್ರೋಲ್‌ ಫ್ರೀಕ್‌:

ಕಂಟ್ರೋಲ್‌ ಫ್ರೀಕ್‌:

ಎಲ್ಲವೂ ನಾನು ಹೇಳಿದಂತೆ ನಡೆಯಬೇಕು ಎಂಬ ಹಠ. ಪ್ರತಿಯೊಂದು ವಿಷಯದಲ್ಲೂ ಪ್ರೇಮಿ ಅಥವಾ ಸಂಗಾತಿಯನ್ನು ಕಂಟ್ರೋಲ್‌ ಮಾಡುವ ಗುಣ ಇದ್ದರೆ ಅಂಥವರ ಜೊತೆ ಬಾಳ್ವೆ ಮಾಡಿದರೆ ನೆಮ್ಮದಿ ಇರಲ್ಲ. ಎಲ್ಲಾ ಹೆಣ್ಮಕ್ಕಳು ತಮ್ಮ ಗಂಡನನ್ನು ಸ್ವಲ್ಪ ಕಂಟ್ರೋಲ್‌ನಲ್ಲಿ ಇಟ್ಟಿರುತ್ತಾರೆ, ಇಲ್ಲದಿದ್ದರೆ ಗಂಡಸರನ್ನು ಹಿಡಿಯೋಕೆ ಸಾಧ್ಯನಾ? ಆದರೆ ಪ್ರತಿಯೊಂದಕ್ಕೂ ಕಂಟ್ರೋಲ್ ಮಾಡುವುದು ಮಾತ್ರ ಒಂಥರಾ ಹಿಂಸೆ ಅನಿಸಲಾರಂಭಿಸುವುದು.

 ಖಾಸಗಿತನ ಗೌರವಿಸದಿರುವ ವ್ಯಕ್ತಿ

ಖಾಸಗಿತನ ಗೌರವಿಸದಿರುವ ವ್ಯಕ್ತಿ

ನಿಮ್ಮ ಎಲ್ಲಾ ವಿಷಯವನ್ನು ಫ್ರೆಂಡ್‌ಗೆ ಹೇಳುವುದು, ಅವರ ವಿಷಯ ನಿಮಗೆ ಹೇಳುವುದು, ನೀವು ಖಾಸಗಿಯಾಗಿ ನಿಮ್ಮ ಸಂಗಾತಿ ಜೊತೆ ಕಳೆಯಬೇಕೆಂದು ಟ್ರಿಪ್ ಪ್ಲ್ಯಾನ್‌ ಮಾಡಿದರೆ ಅಥವಾ ಪಾರ್ಟಿ ಪ್ಲ್ಯಾನ್‌ ಮಾಡಿದರೆ ಅಲ್ಲಿಗೆ ತನ್ನ ಸ್ನೇಹಿತರನ್ನು ಕರೆಯುವುದು, ನಿಮಗಿಂತ ಫ್ರೆಂಡ್ಸ್‌ಗೆ ಹೆಚ್ಚು ಮಹತ್ವ ನೀಡುವುದು, ನಿಮಗಿಂತ ಅವರಿಗೆ ಅವರ ಕುಟುಂಬವೇ ಮುಖ್ಯವಾಗುವುದು ಇಂಥವರಿಂದ ಜೊತೆ ದೂರವಿರಿ. ಫ್ರೆಂಡ್ಸ್ ಬೇಕು, ಫ್ಯಾಮಲಿ ಬೇಕು ಆದರೆ ಅದುವೇ ನಿಮ್ಮಬ್ಬರ ಸಂಬಂಧ ಹಾಳು ಮಾಡುವಂತೆ ಇರಬಾರದು ಅಲ್ವಾ?

 ಹಣವಿದ್ದರೆ ಪ್ರೀತಿ, ಇಲ್ಲದಿದ್ದರೆ ಇಲ್ಲ:

ಹಣವಿದ್ದರೆ ಪ್ರೀತಿ, ಇಲ್ಲದಿದ್ದರೆ ಇಲ್ಲ:

ನಿಮ್ಮಲ್ಲಿ ಹಣವಿದ್ದಾಗ ಬರುತ್ತಾರೆ ಎಂದಾದರೆ ಅವರ ಬಗ್ಗೆ ಹುಷಾರ್! ಬದುಕು ಒಂದೇ ರೀತಿ ಇರಲ್ಲ. ಎಂಥ ಕೋಟ್ಯಾಧಿಪತಿಯಾದರೂ ಜೀವನದ ಒಂದಲ್ಲಾ ಒಂದು ಘಟ್ಟದಲ್ಲಿ ಆರ್ಥಿಕ ಸಂಕಷ್ಟ ಬರಬಹುದು. ಆಗ ನಮ್ಮ ಜೊತೆ ನಿಲ್ಲುವವರು ಬೇಕಾಗುತ್ತದೆ. ನಮ್ಮ ಸುಖದಲ್ಲಿ ಮಾತ್ರವಲ್ಲ, ಕಷ್ಟದಲ್ಲಿಯೂ ಕೈ ಹಿಡಿದು ನಡೆಯುವವರೇ ಬೆಸ್ಟ್ ಪಾರ್ಟನರ್. ಆದ್ದರಿಂದ ನಿಮ್ಮ ಅಂತಸ್ತು ನೋಡಿ ನಿಮ್ಮನ್ನು ಇಷ್ಟಪಡುತ್ತಿರುವ ಹೆಣ್ಣನ್ನು ದೂರವಿಡಿ.

ನಿಮ್ಮ ಗೆಳೆಯನ ಬಗ್ಗೆ ಹೆಚ್ಚು ಆಸಕ್ತಿ ತೋರುವವಳು

ನಿಮ್ಮ ಗೆಳೆಯನ ಬಗ್ಗೆ ಹೆಚ್ಚು ಆಸಕ್ತಿ ತೋರುವವಳು

ನಿಮ್ಮ ಪ್ರೇಮಿಯೇ ಆಗಿದ್ದರೂ ಏಕೋ ನಿಮ್ಮ ಗೆಳೆಯನ ಕಡೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾಳೆ ಎಂದಾದರೆ ಸ್ವಲ್ಪ ಹುಷಾರ್‌! ಚಲ್ಲು-ಚಲ್ಲು ಆಡುತ್ತಿದ್ದರೆ ಅವಳಿಂದ ದೂರವಿರಿ.

 ಅವಳು ಹುಟ್ಟುತ್ತಲೇ ಸ್ಟಾರ್ ಆಗಿದ್ದರೆ: ಅ

ಅವಳು ಹುಟ್ಟುತ್ತಲೇ ಸ್ಟಾರ್ ಆಗಿದ್ದರೆ: ಅ

ಅವಳು ತುಂಬಾ ಶ್ರೀಮಂತಳು, ಯಶಸ್ಸು ಗಳಿಸಿರುವಳು ಆಗಿದ್ದು ನಿಮ್ಮ ಹತ್ರ ಏನೂ ಇಲ್ಲ ಅಂದರೆ ಮೊದ-ಮೊದಲಿಗೆ ಏನೂ ಅನಿಸದೆ ಪ್ರೀತಿಯೇ ದೊಡ್ಡದು ಎಂದು ನೀವು ಹೇಳಿದರೂ ನಂತರ ಈಗೋ ಕ್ಲ್ಯಾಶ್‌ ಬರಬಹುದು ಅಥವಾ ನಿಮಗೆ ಸಮಾಜದಲ್ಲಿ ಯಾವುದೇ ಐಡೆಂಟಿಟಿ ಕೂಡ ಇರಲ್ಲ.

ಹೋಲಿಕೆ ಮಾಡುವ ಗುಣ:

ಹೋಲಿಕೆ ಮಾಡುವ ಗುಣ:

ಇಂಥವರು ಯಾವುದಕ್ಕೂ ತೃಪ್ತಿ ಪಡಲ್ಲ. ಪ್ರತಿಯೊಂದಕ್ಕೂ ಹೋಲಿಕೆ ಮಾಡುತ್ತಾರೆ. ನೀವು ಏನೇ ಕೊಡಿಸಿದರೂ ಬೇರೆಯವರ ಬಗ್ಗೆ ಹೇಳಿ ಅವರ ಸ್ನೇಹಿತೆಗೆ ಸಂಗಾತಿ ಇನ್ನೂ ದುಬಾರಿ ಕೊಡಿಸಿದ್ದಾರೆ ಎಂದು ಹೇಳುತ್ತಾರೆ. ಇಂಥ ಅತೃಪ್ತ ಆತ್ಮಗಳ ಜೊತೆಗಿನ ಬದುಕು ನರಕವಾಗುವುದು.

ಸದಾ ದೂರುವ ಗುಣ:

ಸದಾ ದೂರುವ ಗುಣ:

ನಿಮ್ಮನ್ನು ದ್ವೇಷಿಸುವುದೇ ಅವರಿಗೆ ಖುಷಿ. ನೀವು ಏನೂ ಮಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವುದು ಇವೆಲ್ಲಾ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತೆ. ಅಂಥವರ ಬಗ್ಗೆ ಮೊದಲೇ ಗೊತ್ತಾದರೆ ಡೇಟಿಂಗ್ ಮಾಡುವ ತಪ್ಪು ಮಾಡದಿರಿ.

ಎಮೋಷನ್‌ ಫೂಲ್ಸ್:

ಎಮೋಷನ್‌ ಫೂಲ್ಸ್:

ಊಫ್‌ ಇವರ ನಿಮಗೆ ಪ್ರತಿಯೊಂದಕ್ಕೂ ಎಮೋಷನಲ್‌ ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. ನಾನು ಸಾಯುತ್ತೇನೆ, ಮನೆ ಬಿಟ್ಟು ಹೋಗ್ತೀನಿ ಹೀಗೆ ಚಿಕ್ಕ-ಪುಟ್ಟ ವಿಷಯಕ್ಕೂ ದೊಡ್ಡ ರಾದ್ಧಾಂತ ಮಾಡುತ್ತಾರೆ, ಅಂಥವರ ಜೊತೆಗಿನ ಬಾಳು ಸ್ವಲ್ಪ ರಿಸ್ಕಿ ಅಲ್ವಾ?

 ಫೆಮಿನಿಸ್ಟ್:

ಫೆಮಿನಿಸ್ಟ್:

ಇವರಂತೂ ತುಂಬಾ ಅಪಾಯಕಾರಿ. ಪುರುಷ ಮಹಿಳೆಗೆ ಗೌರವ ನೀಡಬೇಕು, ಮಹಿಳೆ ಪುರುಷನಿಗೆ ಗೌರವ ನೀಡಬೇಕು, ಆಗ ಮಾತ್ರ ಅದೊಂದು ಸುಂದರ, ಹೊಂದಾಣಿಕೆ ಸಂಸಾರವಾಗುವುದು. ಕೆಲವರು ಫೆಮಿನಿಸ್ಟ್ ಅಂದರೆ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವವರು ಅವರು ಬೇರೆ. ಇನ್ನು ಕೆಲ ಫೆಮಿನಿಸ್ಟ್‌ ಇರುತ್ತಾರೆ, ಅವರು ಫೆಮಿನಿಸ್ಟ್ ಅಂದ್ರೆ ಪುರುಷನನ್ನು ದ್ವೇಷಿಸುವುದು ಅಂದುಕೊಳ್ಳುತ್ತಾರೆ. ನಿಮಗೆ ಕಿಂಚಿತ್ತೂ ಗೌರವ ನೀಡಲ್ಲ, ಅಂಥವರ ಜೊತೆ ಬಾಳಲು ಬಯಸುತ್ತೀರಾ?

ಸೋ ... ಪುರುಷರೇ ಇಂಥ ಹೆಣ್ಮಕ್ಕಳ ಹತ್ರ ಹುಷಾರಪ್ಪಾ... ಹುಷಾರ್‌!

English summary

Types of Women You Should Never Ever Date

Types of women you should never ever date, have a look...
Story first published: Friday, April 8, 2022, 18:17 [IST]
X
Desktop Bottom Promotion