For Quick Alerts
ALLOW NOTIFICATIONS  
For Daily Alerts

ಈ ಗುಣಗಳಿರುವ ವ್ಯಕ್ತಿಯನ್ನು ನಿಮ್ಮ ಸ್ನೇಹಿತರ ಲಿಸ್ಟ್ ನಿಂದ ರಿಮೂವ್ ಮಾಡುವುದೇ ಒಳಿತು

|

ನಿಮಗಾಗಿ ಮತ್ತು ನಿಮ್ಮ ಜೀವನಕ್ಕೆ ಬೇಕಾದವರು ಯಾರು? ಯಾರ ಅವಶ್ಯಕತೆ ಇಲ್ಲವೆಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತೆ. ಪಾಸಿಟಿವ್ ಜನ ನಮ್ಮ ಸುತ್ತಮುತ್ತ ಇದ್ದರೆ, ಅಂದ್ರೆ ಧನಾತ್ಮಕ ಆಲೋಚನೆಯುಳ್ಳ ಸ್ನೇಹಿತರು ನಿಮ್ಮವರಾಗಿದ್ದರೆ, ನಿಮ್ಮ ಜೀವನ ಉತ್ತಮವಾಗಿರುತ್ತದೆ, ಅದೇ, ನಿಮ್ಮ ಸ್ನೇಹಿತರು ನಕಾರಾತ್ಮಕ ಮನೋಭಾವ ಹೊಂದಿದವರಾಗಿದ್ದರೆ, ನಿಮ್ಮಲ್ಲಿಯೂ ನಕಾರಾತ್ಮಕತೆ ಆಲೋಚನೆಗಳೇ ತುಂಬಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಈ ಕೆಳಗಿನ ಗುಣಗಳನ್ನು ನಿಮ್ಮ ಸ್ನೇಹಿತರು ಹೊಂದಿದ್ದರೆ, ಅವರನ್ನು ನಿಮ್ಮ ಸ್ನೇಹಿತರ ಲಿಸ್ಟ್ ನಿಂದ ತೆಗೆದುಹಾಕುವುದೇ ಒಳ್ಳೆಯದು.

ನಿಮ್ಮ ಸ್ನೇಹಿತರಲ್ಲಿ ಈ ಗುಣಗಳಿದ್ದರೆ, ಅವರಿಂದ ದೂರವಿರುವುದೇ ಉತ್ತಮ. ಹಾಗಾದರೆ ಆ ಗುಣಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಅತಿಯಾದ ಸ್ಪರ್ಧಾತ್ಮಕ ಮನೋಭಾವದ ಸ್ನೇಹಿತ:

ಅತಿಯಾದ ಸ್ಪರ್ಧಾತ್ಮಕ ಮನೋಭಾವದ ಸ್ನೇಹಿತ:

ಆರೋಗ್ಯಕರ ಸ್ಪರ್ಧೆ ಉತ್ತಮ. ಆದರೆ ಪ್ರತಿಬಾರಿ ಆತ ನಿಮ್ಮನ್ನು ಸೋಲಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ ಅದು ಒಳ್ಳೆಯದಲ್ಲ. ಸ್ನೇಹಿತರ ನಡುವೆ ಅತಿಯಾದ ಸ್ಪರ್ಧಾಮನೋಭಾವ ಎಂದಿಗೂ ಉತ್ತಮ ಫಲಿತಾಂಶ ನೀಡುವುದಿಲ್ಲ. ಸದಾ ನಿಮಗಿಂತ ಉತ್ತಮವಾಗಿಬೇಕು ಎಂದು ಭಾವಿಸುವವವರ ಗೆಳೆತನ ಒಳ್ಳೆಯದಲ್ಲ. ನಿಮಗೆ ಅಂತಹ ಜನರ ಅಗತ್ಯವೂ ಇಲ್ಲ. ಏಕೆಂದರೆ ಅವರು ನಕಾರಾತ್ಮಕ ಭಾವನೆಯನ್ನು ಹೊಂದಿದ್ದು, ನಿಮ್ಮನ್ನು ಎಲ್ಲೋ ಆಳವಾಗಿ ಕಿರಿಕಿರಿಗೊಳಿಸಬಹುದು.

ನಿಮ್ಮಿಂದ ದೂರವಿರಲು ಬಯಸುವವರು:

ನಿಮ್ಮಿಂದ ದೂರವಿರಲು ಬಯಸುವವರು:

ಸ್ನೇಹಿತರಾದವರು ನಿಮ್ಮೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಅದು ನೀವಾಗಿ ಕರೆದರೆ ಎಂದಿಗೂ ಬರದೇ ಇರಲಾರರದು. ಆದರೆ ಪ್ರತಿಬಾರಿ ನೀವು ಕರೆದಾಗಲೂ ಸ್ನೇಹಿತ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದರೆ ಅವರಿಂದ ದುರವಿರುವುದು ಉತ್ತಮ. ಅವರು ನಿಮ್ಮ ಸ್ನೇಹಿತರಾಗಲು ಯೋಗ್ಯರಲ್ಲ. ಕಾರಣಗಳು ಒಂದೆರಡು ಬಾರಿ ಸರಿ, ಆದರೆ ಪ್ರತಿಬಾರಿ ಹೀಗೆಯೇ ಆದರೆ, ಅವರನ್ನು ನಿಮ್ಮ ಸ್ನೇಹಿತರ ಗುಂಪಿನಿಂದ ಹೊರಗಿಡುವುದು ಉತ್ತಮವಾದ ಆಯ್ಕೆ.

ನಕಾರಾತ್ಮಕ ಆಲೋಚನೆ:

ನಕಾರಾತ್ಮಕ ಆಲೋಚನೆ:

ಇದು ಬಹಳ ಮುಖ್ಯ. ಮೇಲೆಯೇ ಹೇಳಿದಂತೆ ನಕಾರಾತ್ಮಕ ಮನಸ್ಥಿತಿಯುಳ್ಳ ವ್ಯಕ್ತಿಗಳಿಂದ ನಾವೂ ನೆಗೆಟಿವ್ ಆಲೋಚನೆಗಳನ್ನು ಬೆಳೆಸಿಕೊಳ್ಲುತ್ತೇವೆ. ಇಮತಹ ವ್ಯಕ್ತಿಯೊಂದಿಗಿನ ಮಾತುಕತೆಯು ಯಾವಾಗಲೂ ನಿಮ್ಮನ್ನು ಕತ್ತಲೆಯನ್ನಾಗಿಸುವುದು ಅಥವಾ ನಿರುತ್ಸಾಹಗೊಳಿಸುವುದು. ಆಗ ಅಂತಹ ವ್ಯಕ್ತಿಯಿಂದ ದೂರಹೋಗಬೇಕಾಗಿರುವುದು ಅನಿವಾರ್ಯವಾಗಿದೆ.

ಅತಿಯಾದ ಭಾವನೆಗಳ ಏರಿಳಿತ:

ಅತಿಯಾದ ಭಾವನೆಗಳ ಏರಿಳಿತ:

ಕೆಲವು ಜನರು ಸ್ವಭಾವತಃ ಮೂಡಿರುತ್ತಾರೆ.. ಆದರೆ ಕಾರಣವಿಲ್ಲದೇ ಕೋಪಿಸಿಕೊಳ್ಳುವವರು, ಯಾವುದೇ ಮನಸ್ತಾಪಗಳಿಲ್ಲದೇ ದೂರಮಾಡುವವರಿಂದ ನೀವು ದೂರವಿರುವುದು ಉತ್ತಮ. ಏಕೆಂದರೆ ಈ ಕೋಪಕ್ಕೆ ಕಾರಣವೇನೆಂದು ತಿಳಿದುಕೊಳ್ಳುವಷ್ಟರಲ್ಲಿಯೇ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಅದರ ಬದಲು ಅಂತಹ ವ್ಯಕ್ತಿಗಳಿಂದ ದೂರವಿರುವಿರುವುದು ಒಳಿತು ತಾನೇ? ಇದರಿಂದ ಮನಸ್ಸು ಹಾಳಾಗದು, ಸಮಯವೂ ವ್ಯರ್ಥವಾಗದು.

ನಾನು, ನಾನು ಮತ್ತು ನಾನು:

ನಾನು, ನಾನು ಮತ್ತು ನಾನು:

ಯಾರಾದರೂ ನಿಮ್ಮನ್ನು ಕರೆದರೆ ಅಥವಾ ಭೇಟಿಯಾದಾಗ ಕೇವಲ ಅವರ ಜೀವನದ ಬಗ್ಗೆಯೇ ಮಾತನಾಡುತ್ತಿದ್ದರೆ, ನಿಮಗೆ ಮಾತನಾಡಲು ಅವಕಾಶ ನೀಡದೇ ಇದ್ದರೆ ಅಂತಹವರಿಂದಲೂ ದೂರವಿರಿ. ಏಕೆಂದರೆ ಸ್ನೇಹದಲ್ಲಿ ಮಾತುಕತೆ ದ್ವಿಮುಖವಾಗಿಬೇಕು. ಏಕಮುಖವಾಗಿದ್ದರೆ ಅಥವಾ ಕೇವಲ ಅವರ ಬಗ್ಗೆಯೇ ಮಾತನಾಡುತ್ತಿದ್ದರೆ ಅಲ್ಲಿ ಸ್ನೇಹಕ್ಕೆ ಬೆಲೆಯೇ ಇರುವುದಿಲ್ಲ. ಇಬ್ಬರ ಕಷ್ಟ-ಸುಖ ಹಂಚಿಕೊಳ್ಳುವುದು ಸಹ ಸ್ನೇಹದ ಪ್ರಮುಖ ಅಂಶ ಅಲ್ಲವೇ?..

English summary

Types of Friends You must Eliminate from your Life in Kannada

Here we talking about Types of friends you must eliminate from your life in Kannada, read on
X
Desktop Bottom Promotion