For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಈ ರೀತಿಯ ಮಾತುಗಳು ಬರಲೇಬಾರದು

|

ಯಾವುದೇ ಒಂದು ವಿಚಾರದ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳದೇ ಇರುವುದು ಮತ್ತು ನಂತರ ಅದಕ್ಕಾಗಿ ನಿಮ್ಮ ಸಂಗಾತಿಯನ್ನು ದೂರುವುದು ಬಹಳ ಸುಲಭ. ಈ ರೀತಿಯಾಗಿ ಹೆಚ್ಚಿನವರು ನಮ್ಮ ಜೀವನದಲ್ಲಿ ವರ್ತಿಸುತ್ತೇವೆ. ನಮ್ಮ ತಪ್ಪನ್ನು ನಾವು ಮೊದಲು ಯೋಚಿಸದೇ ಬೇರೆಯವರನ್ನು ಬೊಟ್ಟು ಮಾಡಿ ತೋರಿಸುತ್ತೇವಲ್ಲವೇ?
ಹೀಗೆ ಬೇರೆಯವರನ್ನೇ ಬೊಟ್ಟು ಮಾಡಿ ತೋರಿಸುತ್ತಿರುವ ಬದುಕಿನಲ್ಲಿ ಯಾರೂ ಯಶಸ್ಸು ಕಾಣಲು ಸಾಧ್ಯವಿಲ್ಲ.

blame game in relation

ಒಂದು ವೇಳೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಯಾವಾಗಲೂ ಹೀಗೆಯೇ ಆಗುತ್ತಿದ್ದು ನೀವು ಅವರನ್ನೇ ಯಾವಾಗಲೂ ದೂರುತ್ತಿರುತ್ತೀರಾದರೆ ನಿಮ್ಮ ಸಂಬಂಧ ಹೆಚ್ಚು ದಿನ ಖಂಡಿತ ಮುಂದುವರಿಯಲಾರದು.

ಸಂಬಂಧದಲ್ಲಿ ಅತ್ಯಂತ ಕೆಟ್ಟ ವಿಚಾರ ಯಾವುದೆಂದರೆ ಬ್ಲೇಮ್ ಗೇಮ್. ಅಂದರೆ ಯಾವುದೇ ಒಂದು ಚರ್ಚೆಯಲ್ಲಿ ಇನ್ನೊಬ್ಬರನ್ನೇ ಬೊಟ್ಟು ಮಾಡುವುದು. ತಮ್ಮನ್ನ ತಾವು ಸಮರ್ಥಿಸಿಕೊಳ್ಳುತ್ತಾ ತಮ್ಮ ತಪ್ಪೇನು ಇಲ್ಲ, ತಪ್ಪೆಲ್ಲಾ ನಿಮ್ಮದೇ ಎಂಬಂತೆ ವರ್ತಿಸುವುದು.

ಈ ವಿಚಾರವನ್ನು ಆಳವಾಗಿ ಗಮನಿಸಿದಾಗ ಇಬ್ಬರೂ ಸರಿಯಿರಬಹುದು ಅಥವಾ ಇಬ್ಬರೂ ತಪ್ಪಿರಬಹುದು. ಯಾಕೆಂದರೆ ಯಾರೂ ಪರಿಪೂರ್ಣರಲ್ಲ ಮತ್ತು ಯಾರೂ ಕೂಡ ತಪ್ಪೇ ಮಾಡದೇ ಇರುವವರೂ ಅಲ್ಲ. ಅಷ್ಟೇ ಅಲ್ಲ ತಪ್ಪು ಅಥವಾ ಸರಿಯೆಂಬುದಿಲ್ಲ. ಬದಲಾಗಿ ಯಾವುದೇ ವಿಚಾರವನ್ನು ನಾವು ಯಾವ ದೃಷ್ಟಿಕೋನದಲ್ಲಿ ನೋಡುತ್ತೇವೆ ಎಂಬುದು ಮುಖ್ಯವಾಗಿರುತ್ತದೆ.

ಹೀಗೆ ಬೊಟ್ಟು ಮಾಡಿ ತೋರಿಸುವುದು ಬಹಳ ಕಿರಿಕಿರಿಗೆ ಕಾರಣವಾಗುತ್ತದೆ ಎಂಬುದು ಮಾತ್ರ ಸತ್ಯ. ಹಾಗಾದ್ರೆ ಇಂತಹ ಸನ್ನಿವೇಶವನ್ನು ತಪ್ಪಿಸುವುದು ಹೇಗೆ? ಸಂಬಂಧದಲ್ಲಿ ಬೊಟ್ಟು ಮಾಡಿ ಇನ್ನೊಬ್ಬರನ್ನು ಟಾರ್ಗೆಟ್ ಮಾಡಿಕೊಂಡು ನಂತರ ಮನಸ್ಸು ನೋಯಿಸಿಕೊಳ್ಳುವ ಬದಲಾಗಿ ಅಂತಹ ಸನ್ನಿವೇಶವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಸಂಬಂಧವನ್ನು ಉತ್ತಮವಾಗಿಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ಒಂದಷ್ಟು ಸಲಹೆಗಳನ್ನು ನಿಮಗಾಗಿ ನೀಡುತ್ತಿದ್ದೇವೆ.

1. ಸಮಸ್ಯೆಯನ್ನು ನಿರ್ಲಕ್ಷಿಸದಿರಿ ಬದಲಾಗಿ ಗುರುತಿಸಿ

1. ಸಮಸ್ಯೆಯನ್ನು ನಿರ್ಲಕ್ಷಿಸದಿರಿ ಬದಲಾಗಿ ಗುರುತಿಸಿ

ಒಂದು ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಮೊದಲಿಗೆ ಸಮಸ್ಯೆಯನ್ನು ಗುರುತಿಸಬೇಕಾಗುತ್ತದೆ.ನಿಮ್ಮ ವರ್ತನೆಯಿಂದಾಗಿ ನಿಮ್ಮ ಸಂಗಾತಿ ನೋವಿಗೆ ಒಳಗಾಗಿರಬಹುದು. ಕೆಲವೊಮ್ಮೆ ಆ ವಿಚಾರ ನಿಮಗೆ ತಿಳಿಯದೇ ಇರಬಹುದು. ಇಂತಹ ಸನ್ನಿವೇಶಗಳಲ್ಲಿ ನಿಮ್ಮ ಸಂಗಾತಿ ಬೇಸರದಲ್ಲಿದ್ದಾರೆ ಅಥವಾ ದುಃಖದಲ್ಲಿದ್ದಾರೆ ಎಂದಾಗ ಆ ಸಮಸ್ಯೆಯನ್ನು ಕಡೆಗಾಣಿಸುವ ನಿರ್ಧಾರ ತೆಗೆದುಕೊಳ್ಳುವುದು ಬಹಳ ತಪ್ಪು. ಸಂಗಾತಿಯ ಜೊತೆಗೆ ಸಮಸ್ಯೆಯ ಬಗ್ಗೆ ಕುಳಿತು ಮಾತನಾಡುವುದು ಬಹಳ ಒಳ್ಳೆಯದು ಮತ್ತು ಅದರ ಪರಿಹಾರವನ್ನು ಹುಡುಕುವುದು ಸೂಕ್ತವಾದದ್ದು. ಹೀಗೆ ಮಾಡುವುದರಿಂದ ಸಂಬಂಧದಲ್ಲಿ ಬೊಟ್ಟು ಮಾಡಿ ತಪ್ಪು ನಿಮ್ಮದೇ ಎಂದು ಇನ್ನೊಬ್ಬರನ್ನು ದೂರುವುದು ತಪ್ಪುತ್ತದೆ.

2. ನಿಮ್ಮ ಸಂಗಾತಿಯ ವಿರುದ್ಧ ಅನಗತ್ಯ ಯೋಚಿಸುವುದನ್ನು ನಿಲ್ಲಿಸಿ

2. ನಿಮ್ಮ ಸಂಗಾತಿಯ ವಿರುದ್ಧ ಅನಗತ್ಯ ಯೋಚಿಸುವುದನ್ನು ನಿಲ್ಲಿಸಿ

ಪ್ರತಿಯೊಬ್ಬರೂ ಕೂಡ ವಿಭಿನ್ನವಾಗಿರುತ್ತಾರೆ. ನೀವು ನೀವೇ ಸರಿ ಮತ್ತು ನಿಮ್ಮ ಸಂಗಾತಿಯೇ ತಪ್ಪು ಮತ್ತು ಅವರು ಈ ಭೂಮಿಯಲ್ಲಿರುವ ಬಹಳ ಕಿರಿಕಿರಿ ಉಂಟುಮಾಡುವ ವ್ಯಕ್ತಿ ಎಂದು ಸಾಧಿಸುವುದಕ್ಕಾಗಿ ವಾದಿಸುತ್ತಲೇ ಇರುವುದಾದರೆ ಖಂಡಿತ ನಿಮ್ಮ ಸಂಬಂಧದಲ್ಲಿ ಸಮಸ್ಯೆ ಎದುರಾಗಬಹುದು. ಬೆಂಕಿಗೆ ಇನ್ನಷ್ಟು ತುಪ್ಪ ಸುರಿದರೆ ಖಂಡಿತ ಸಂಬಂಧ ಮತ್ತಷ್ಟು ಬಿಗಡಾಯಿಸುತ್ತದೆ. ಪ್ರತಿ ಬಾರಿಯೂ ನೀವು ನಿಮ್ಮ ಸಂಗಾತಿಯ ವಿರುದ್ಧ ಬೊಟ್ಟು ಮಾಡಿ ತೋರಿಸಬೇಡಿ. ಯಾಕೆಂದರೆ ಪ್ರತಿ ಬಾರಿಯೂ ಅವರದ್ದೇ ತಪ್ಪಾಗಿರುವುದಿಲ್ಲ.ಬದಲಾಗಿ ನೀವು ನಿಮ್ಮ ಸಂಗಾತಿಗೆ ಯಾವ ಕಾರಣಕ್ಕೆ ನಿಮಗೆ ಬೇಸರವಾಗಿದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿ. ನೀವು ನಿಮ್ಮ ಸಂಗಾತಿಯನ್ನು ಕಿರಿಕಿರಿ ಉಂಟುಮಾಡುವ, ಸಮಸ್ಯೆ ಮಾಡುವ ಮತ್ತು ಕಾಳಜಿ ತೆಗೆದುಕೊಳ್ಳದ ವ್ಯಕ್ತಿ ಎಂಬಂತೆ ಕಾಣಬೇಡಿ.

3. ನಿಮ್ಮ ಅಹಂಕಾರವನ್ನು ಅಳಿಸಿ ಹಾಕಿ

3. ನಿಮ್ಮ ಅಹಂಕಾರವನ್ನು ಅಳಿಸಿ ಹಾಕಿ

ಪ್ರೀತಿ ಇರಬೇಕಾದ ಸಂಬಂಧದಲ್ಲಿ ಅಹಂಕಾರವಿದ್ದರೆ ಸಹಬಾಳ್ವೆ ನಡೆಸುವುದಕ್ಕೆ ಸಾಧ್ಯವಿಲ್ಲ.ನೀವು ತಪ್ಪು ಮಾಡಿದ್ದರೆ ಅದನ್ನು ಸ್ವೀಕರಿಸುವುದಕ್ಕೆ ಸಿದ್ಧರಾಗಿರಿ ಮತ್ತು ಅದಕ್ಕಾಗಿ ನಿಮ್ಮ ಅಹಂಕಾರವನ್ನು ಮಧ್ಯ ತರಬೇಡಿ. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ಅವರಿಂದ ಹೊಸತನ್ನು ಕಲಿಯುವುದು ಜೊತೆಗೆ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಪರಸ್ಪರರ ಬಗ್ಗೆ ಕಡಿಮೆ ತೀರ್ಪು ನೀಡುವುದಕ್ಕೆ ಇದು ಅನುಕೂಲ ಮಾಡಿಕೊಡುತ್ತದೆ.

4. ಅವಾಸ್ತವಿಕ ನಿರೀಕ್ಷೆಗಳನ್ನು ನಿರ್ಮಿಸುವುದನ್ನು ನಿಲ್ಲಿಸಿ

4. ಅವಾಸ್ತವಿಕ ನಿರೀಕ್ಷೆಗಳನ್ನು ನಿರ್ಮಿಸುವುದನ್ನು ನಿಲ್ಲಿಸಿ

ನಿಮ್ಮನ್ನ ಯಾವುದು ತುಂಬಾ ನೋವುಂಟು ಮಾಡುವ ಸಂಗತಿ? ಈ ಪ್ರಶ್ನೆಯನ್ನು ಮೊದಲು ನಿಮಗೆ ನೀವು ಕೇಳಿಕೊಳ್ಳಿ. ಇದಕ್ಕೆ ಉತ್ತರ ಖಂಡಿತ ನಿಮ್ಮ ನಿರೀಕ್ಷೆಗಳು. ಎಷ್ಟು ಬೇಗ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ವಿಭಿನ್ನ ವ್ಯಕ್ತಿಗಳು ಮತ್ತು ಇಬ್ಬರಲ್ಲೂ ಒಬ್ಬರಿಗೊಬ್ಬರ ಮೇಲೆ ಅಪಾರವಾದ ಪ್ರೀತಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೀರೋ ಅಷ್ಟು ಬೇಗ ನೀವು ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದಕ್ಕೆ ಅವಕಾಶವಾಗುತ್ತದೆ. ನಿಮ್ಮ ವರ್ತನೆಯಂತೆಯೇ ನಿಮ್ಮ ಸಂಗಾತಿಯ ವರ್ತನೆಯೂ ಇರಬೇಕು ಎಂದು ಎಲ್ಲಿಯವರೆಗೆ ನೀವು ನಿರೀಕ್ಷಿಸುತ್ತಲೇ ಇರುತ್ತೀರೋ ಅಲ್ಲಿಯವರೆಗೆ ಇಬ್ಬರ ನಡುವೆ ಬೇಸರ ಉಂಟಾಗುವುದು ಸಹಜ. ಬದಲಾಗಿ ಅವರು ಹೇಗಿದ್ದಾರೋ ಹಾಗೆಯೇ ಅವರನ್ನು ಒಪ್ಪಿಕೊಳ್ಳಿ. ಅವರು ನಿಮ್ಮಂತೆ ಇರಬೇಕು ಎಂದು ನಿರೀಕ್ಷಿಸಬೇಡಿ.

5. ನಿಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡಬೇಡಿ

5. ನಿಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡಬೇಡಿ

ಸಿಟ್ಟಿನ ಕೈಗೆ ಕತ್ತಿ ಕೊಡಬೇಡಿ. ಅಂದರೆ ಆಡಿದ ಮಾತನ್ನು ಪುನಃ ಪಡೆಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಯಾವುದೇ ಮಾತು ನಂತರ ನಿಮಗೆ ಬೇಸರ ಅನ್ನಿಸುವಂತಿದ್ದರೆ ಅಂತವುಗಳನ್ನು ಸಿಟ್ಟಿನಲ್ಲಿ ಹೇಳಿ ಹಾಳು ಮಾಡಬೇಡಿ. ನಿಮ್ಮ ಸಂಗಾತಿ ಭಾವನಾತ್ಮಕವಾಗಿರುವ ವ್ಯಕ್ತಿಯಾಗಿದ್ದಲ್ಲಿ ಕೋಪದ ಸಂದರ್ಬದಲ್ಲಿ ನಾನು ನಿಮ್ಮನ್ನು ಬಿಟ್ಟು ಹೋಗುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ. ಒಂದು ವೇಳೆ ಅವರೇನಾದರೂ ತಪ್ಪು ಮಾಡಿದ್ದಲ್ಲಿ ಅವರನ್ನು ಕ್ಷಮಿಸಿಬಿಡಿ.ಯಾಕೆಂದರೆ ಸುಮ್ಮನೆ ದ್ವೇಷ ಇಟ್ಟುಕೊಳ್ಳುವುದು ಸಂಬಂಧದಲ್ಲಿ ಸಮಯ ಹಾಳು ಮಾಡುವುದಕ್ಕಷ್ಟೇ ಆಗಿರುತ್ತದೆ ಮತ್ತು ಇದು ಒಂದು ಸಂಬಂಧಕ್ಕೆ ಒಳ್ಳೆಯದೂ ಅಲ್ಲ.

6. ಇನ್ನೊಬ್ಬರ ಮೇಲೆ ಕೂಗಾಡುವುದರಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ

6. ಇನ್ನೊಬ್ಬರ ಮೇಲೆ ಕೂಗಾಡುವುದರಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ

ನಿಮ್ಮ ಧ್ವನಿಯನ್ನು ಹೆಚ್ಚಿಸುವುದರಿಂದ ನಿಮ್ಮ ವಾದದಲ್ಲಿ ನೀವು ಜಯಶಾಲಿಯಾಗುತ್ತೀರಿ ಎಂದು ನೀವು ಭಾವಿಸಿದ್ದರೆ ಅದು ಖಂಡಿತ ತಪ್ಪು. ನಿಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಮೊದಲು ಪ್ರಯತ್ನಿಸಿ ಮತ್ತು ನಂತರ ನಿಮ್ಮ ಸಂಗಾತಿಯ ಸಮಸ್ಯೆಯ ಬಗ್ಗೆ ಆಲೋಚಿಸಿ.

ಕೂಗಾಡುವ ಧ್ವನಿಯನ್ನು ಕಡಿಮೆ ಮಾಡಿಕೊಂಡು ಶಾಂತವಾದ ಧ್ವನಿಗೆ ಮತ್ತು ಸಂಗಾತಿಯನ್ನು ಮೆಚ್ಚಿಸುವಂತಹ ಧ್ವನಿಯಲ್ಲಿ ಮಾತನಾಡಿ. ಉದಾಹರಣೆಗೆ "ಇದ್ಯಾಕೆ ಹೀಗೆ ಮಾಡಿದೆ" ಎಂದು ಕೇಳುವ ಬದಲು "ಇದನ್ನು ಹೀಗೆ ಮಾಡುವ ಬದಲು ಹೀಗೆ ಮಾಡಬಹುದಿತ್ತು" ಎಂದು ಹೇಳುವುದು ಸೂಕ್ತ. ಪರಿಣಾಮಕಾರಿಯಾಗಿರುವ ಮಾರ್ಗದಲ್ಲಿ ಸಮಸ್ಯೆಯನ್ನು ಅರ್ಥೈಸುವುದು ಬಹಳ ಮುಖ್ಯ. ನೀವು ಮಾತನಾಡುವ ಪದಗಳ ಬಗ್ಗೆ ಜಾಗೃತೆ ಇರಲಿ!

7. ಸಮಸ್ಯೆ ಪರಿಹರಿಸುವ ಗುಣ ಬೆಳೆಸಿಕೊಳ್ಳಿ

7. ಸಮಸ್ಯೆ ಪರಿಹರಿಸುವ ಗುಣ ಬೆಳೆಸಿಕೊಳ್ಳಿ

ಸಮಸ್ಯೆಯನ್ನು ಬಗೆಹರಿಸುವ ಗುಣ ಬೆಳಿಸಿಕೊಳ್ಳದೇ ಇದ್ದಲ್ಲಿ ಬ್ಲೇಮ್ ಗೇಮ್ ನ್ನು ಅಂತ್ಯಗೊಳಿಸುವುದಕ್ಕೆ ಸಾಧ್ಯಲೇ ಇಲ್ಲ. ನಿಮ್ಮ ಸಂಗಾತಿ ಹೇಳುವ ವಿಚಾರ ಅಥವಾ ಮಾಡಿದ ಕೆಲಸ ನಿಮಗೆ ಒಪ್ಪಿಗೆಯಾಗದೇ ಇದ್ದಲ್ಲಿ ಅದನ್ನು ಪುನಃ ಮಾಡಲು ಹೇಳಿ.ಅದೇ ಸಮಯಕ್ಕೆ ನೀವು ನಿಮ್ಮ ಆಲೋಚನೆಗಳನ್ನು ಓರಗೆಗೆ ಹಚ್ಚಿ ಮತ್ತು ನಿಮ್ಮ ಅಸಮ್ಮತಿಯ ಕಾರಣವೇನು ಎಂಬುದನ್ನು ನಿಮ್ಮ ಸಂಗಾತಿಗೆ ಅರ್ಥೈಸುವುದಕ್ಕೆ ಪ್ರಯತ್ನಿಸಿ. ಇಬ್ಬರೂ ಕುಳಿತು ತಾಳ್ಮೆಯಿಂದ ಮಾತನಾಡುವ ಮೂಲಕ ಸಮಸ್ಯೆಗೊಂದು ಸೂಕ್ತ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಇಬ್ಬರಿಗೂ ಒಪ್ಪಿಗೆಯಾಗುವ ಮಾರ್ಗವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

8. ಉತ್ತಮ ಕೇಳುಗರಾಗಿ

8. ಉತ್ತಮ ಕೇಳುಗರಾಗಿ

ಸಾಮಾನ್ಯವಾಗಿ ಗಂಡ-ಹೆಂಡತಿ ಜಗಳದ ಹಿಂದಿನ ಪ್ರಮುಖ ಕಾರಣವೇನೆಂದರೆ ಉತ್ತಮ ಕೇಳುಗರಾಗಿಲ್ಲದೇ ಇರುವುದು. ನಿಮ್ಮ ಸಂಗಾತಿ ಏನನ್ನೋ ಹೇಳುವಾಗ ನೀವು ತಾಳ್ಮೆಯಿಂದ ಕೇಳಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಒಮ್ಮೆ ಆತ ಅಥವಾ ಆಕೆ ಪೂರ್ಣಗೊಳಿಸಿದ ನಂತರ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ನೀವು ಯಾವಾಗಲೂ ಕೂಡ ನಿಮ್ಮ ಸಂಗಾತಿಯ ಎಲ್ಲಾ ವಿಚಾರಗಳಿಗೂ ತಲೆ ಅಲ್ಲಾಡಿಸಬೇಕು ಎಂದೇನಿಲ್ಲ. ನಿಮ್ಮ ಅಭಿಪ್ರಾಯಗಳಿಗೂ ಕೂಡ ಖಂಡಿತ ಸ್ವಾತಂತ್ರ್ಯವಿದೆ. ಆದರೆ ಅದನ್ನು ನಿಮ್ಮ ಸಂಗಾತಿಗೆ ಹೇಳುವಾಗ ಯಾವ ರೀತಿ ಹೇಳಿದರೆ ಸೂಕ್ತ ಎಂಬ ಬಗ್ಗೆ ನಿಮಗೆ ಸರಿಯಾದ ತಿಳುವಳಿಕೆ ಇರುವುದು ಅವಶ್ಯಕ. ಸುಮ್ಮನೆ ಕೂಗಾಟ, ಅರಚಾಟ, ಕಿತ್ತಾಟ ಯಾವ ಸಂಬಂಧಕ್ಕೂ ಹಿತವಲ್ಲ. ಅವರನ್ನು ಅರ್ಥ ಮಾಡಿಕೊಳ್ಳಿ ಮತ್ತು ನಿಮ್ಮ ಆಯ್ಕೆಯನ್ನು ಅವರಿಗೆ ಅರ್ಥೈಸಿ.ನೀವು ಮಾತನಾಡುವಾಗ ಅವರ ಮಾತಿಗೂ ಮಧ್ಯಮಧ್ಯ ಅವಕಾಶ ಕೊಟ್ಟು ಅವರ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಅನುವು ಮಾಡಿಕೊಡಿ.

9. ಕ್ಷಮೆ ಮತ್ತು ಕೃತಜ್ಞತೆಯನ್ನು ಬೆಳೆಸಿಕೊಳ್ಳಿ

9. ಕ್ಷಮೆ ಮತ್ತು ಕೃತಜ್ಞತೆಯನ್ನು ಬೆಳೆಸಿಕೊಳ್ಳಿ

ಯಾವುದೇ ಸಂಬಂಧದಲ್ಲಿ ಬ್ಲೇಮ್ ಗೇಮ್ ಆಗದೇ ಇರುವಂತೆ ತಡೆಯುವುದಕ್ಕಾಗಿ ಇದು ಬಹಳ ಮುಖ್ಯವಾಗಿರುವ ಅಂಶವಾಗಿದೆ.ದ್ವೇಷ ಸಾಧನೆ ಮಾಡುವುದು ಎಂದಿಗೂ ಒಳ್ಳೆಯದಲ್ಲ ಮತ್ತು ನಿಮ್ಮ ಸಂಗಾತಿಯನ್ನು ಕ್ಷಮಿಸುವ ಗುಣ ಇಟ್ಟುಕೊಳ್ಳಿ. ಒಂದು ವೇಳೆ ನಿಮ್ಮ ಸಂಗಾತಿ ಕ್ಷಮೆಯಾಚಿಸಿದರೆ ಕೂಡಲೇ ಅವರನ್ನು ಕ್ಷಮಿಸುವುದು ಬಹಳ ಒಳ್ಳೆಯದು. ಕೃತಜ್ಞತೆಯನ್ನು ನಿಮ್ಮ ಸಂಗಾತಿಗೆ ಸಲ್ಲಿಸುವುದರಿಂದಾಗಿ ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಬಹುದು.

ಸಂಬಂಧವೆನ್ನುವುದು ತಪ್ಪು ಅಥವಾ ಸರಿ ಎಂಬುದರ ಮೇಲಿಲ್ಲ. ಬದಲಾಗಿ ನೀವು ಹೇಗೆ ಒಂದು ಸಮಸ್ಯೆಯನ್ನು ಸುಂದರವಾಗಿ ಬಗೆಹರಿಸಿಕೊಳ್ಳುತ್ತೀರಿ ಎಂಬುದಾಗಿರುತ್ತದೆ ಮತ್ತು ಅದು ನಿಮ್ಮ ಸಂಬಂಧವನ್ನು ಮತ್ತಷ್ಟು ಸುಂದರಗೊಳಿಸುತ್ತದೆ.

English summary

Tips To Avoid Blame Game In Your Relationship

Here we are discussing about Ways To Avoid Blame Game And Strengthen Your Relationship. Let us get one thing straight that no one has ever won after playing the blame game and if this is what you and your partner have been doing for a long time, soon your relationship will hit a dead end. Read more.
X
Desktop Bottom Promotion