For Quick Alerts
ALLOW NOTIFICATIONS  
For Daily Alerts

ಪ್ರೀತಿಯಲ್ಲಿ ರಹಸ್ಯ ಒಳ್ಳೆಯದಲ್ಲ ಆದರೆ, ಈ ವಿಚಾರಗಳನ್ನ ಹೇಳಿಕೊಳ್ಳದಿರುವುದೇ ಉತ್ತಮ..

|

ಸಂಬಂಧದಲ್ಲಿರುವಾಗ ನಿಮ್ಮೆಲ್ಲಾ ಆಲೋಚನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವುದು ಬಹಳ ಮುಖ್ಯ. ಹಾಗಂತ ಸಣ್ಣ-ಪುಟ್ಟ ವಿಚಾರಗಳನ್ನೂ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಕೆಲವೊಮ್ಮೆ ಅದೇ ಸಣ್ಣ ವಿಚಾರಗಳು ಅವರಿಗೆ ಕಿರಿಕಿರಿ ಉಂಟುಮಾಡುವ, ನೋಯಿಸುವ ದೊಡ್ಡ ವಿಚಾರವಾಗಬಹುದು. ಆದ್ದರಿಂದ ನೀವು ಎಷ್ಟೇ ಕಷ್ಟ ಆದರೂ ನಿಮ್ಮಲ್ಲೇ ಉಳಿಸಿಕೊಳ್ಳಬೇಕಾದ ಕೆಲವು ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ.

ಸಂಬಂಧದಲ್ಲಿರುವವರು ತಮ್ಮ ಸಂಗಾತಿಯೊಡನೆ ಹಂಚಿಕೊಳ್ಳಬಾರದ ವಿಷಯಗಳನ್ನು ಈ ಕೆಳಗೆ ವಿವರಿಸಲಾಗಿದೆ:

ಇಡೀ ದಿನ ನಡೆದ ಪುರಾಣ ಬೇಡ:

ಇಡೀ ದಿನ ನಡೆದ ಪುರಾಣ ಬೇಡ:

ಹೌದು, ಈ ಅಭ್ಯಾಸ ಕೆಲವರಿಗಿರುವುದು. ದಿನವಡೀ ಏನಾಗಿದೆ ಎಲ್ಲವನ್ನೂ ಚಾಚೂ ತಪ್ಪದೇ ತಮ್ಮ ಸಂಗಾತಿಯೊಡನೆ ಹೇಳಿಕೊಳ್ಳುವುದು. ಆದರೆ ಇದು ಬೇಡ. ಏಕೆಂದರೆ ಅದೇ ಪುರಾಣ ಕತೆಯಿಂದ ಅವರು ಕಿರಿಕಿರಿ ಅನುಭವಿಸಬಹುದು. ನೀವು ಮಾಡುವ ಸಣ್ಣ-ಪುಟ್ಟ ಕೆಲಸವನ್ನೆಲ್ಲಾ ಅವರೊಡನೆ ಹೇಳಿಕೊಳ್ಳುವುದು ಬೇಡ. ನೀವು ಸಂತೋಷವಾಗಿದ್ದರೆ ಮತ್ತು ಸಂಬಂಧವು ಗಟ್ಟಿಯಾಗಿದ್ದರೆ, ಸಣ್ಣ ವಿಷಯಗಳ ಮೇಲೆ ಕೇಂದ್ರೀಕರಿಸುವ ಅಗತ್ಯವೇ ಇಲ್ಲ. ನಿಮ್ಮ ಸಂಗಾತಿಗೆ ಅಸುರಕ್ಷಿತ ಅಥವಾ ನೋವನ್ನುಂಟುಮಾಡುವುದಕ್ಕಿಂತ ಅವುಗಳನ್ನು ರಹಸ್ಯವಾಗಿಡುವುದು ಉತ್ತಮ.

ಮಾಜಿ ಪ್ರೇಮಿಯ ಬಗ್ಗೆ ಉಳಿದಿರುವ ಭಾವನೆ:

ಮಾಜಿ ಪ್ರೇಮಿಯ ಬಗ್ಗೆ ಉಳಿದಿರುವ ಭಾವನೆ:

ನೀವು ಹಳೆ ಪ್ರೀತಿಯಿಂದ ಈಗಷ್ಟೇ ಚೇತರಿಸಿಕೊಂಡಿದ್ದರೂ, ಆ ನೆನಪುಗಳು ಸದಾ ಒಳಗೇ ಇರುತ್ತವೆ. ಆದರೆ ಅದನ್ನು ನಿಮ್ಮ ಈಗಿನ ಸಂಗಾತಿಯೊಡನೆ ಹಂಚಿಕೊಳ್ಳಲು ಹೋಗಬೇಡಿ. ಇದು ಸಮಸ್ಯೆಗೆ ಕಾರಣವಾಗಬಹುದು. ನಿಮ್ಮಲ್ಲಿ ಹಳೇ ಪ್ರೇಮಿ ಕುರಿತು ಇರುವ ಉಳಿದಿರುವ ಭಾವನೆಗಳನ್ನು ಎಂದಿಗೂ ಹಂಚಿಕೊಳ್ಳಲು ಹೋಗಬೇಡಿ. ಇದು ಅನುಮಾನಕ್ಕೂ ನಾಂಧಿಯಾಗಬಹುದು.

ಅವರ ಕುಟುಂಬದ ಬಗೆಗಿನ ಅಭಿಪ್ರಾಯ:

ಅವರ ಕುಟುಂಬದ ಬಗೆಗಿನ ಅಭಿಪ್ರಾಯ:

ಕುಟುಂಬವು ಒಂದು ರೀತಿ ಸಂಬಂಧವನ್ನು ಗಟ್ಟಿ ಮಾಡುವ ವಿಷಯ. ಆದ್ದರಿಂದ ಆಕೆಯ ಅಥವಾ ಆತನ ಕುಟುಂಬದ ಬಗ್ಗೆ ಅಥವಾ ನಿಮ್ಮ ಸಂಗಾತಿಯ ಪ್ರೀತಿಪಾತ್ರರ ಬಗ್ಗೆ ಇಷ್ಟವಾಗದ ಸಣ್ಣ ವಿಷಯಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ. ಅದನ್ನು ಬೇಕಾದರೆ ತಮಾಷೆಯಾಗಿ ಹೇಳಬಹುದು, ಆದರೆ ಅವಮಾನಕರವಾಗಿ ಏನನ್ನೂ ಹೇಳಬೇಡಿ.

ಸಂಗಾತಿಯ ಎದುರೇ ಆತನ ಸ್ನೇಹಿತನ ಹೊಗಳಿಕೆ:

ಸಂಗಾತಿಯ ಎದುರೇ ಆತನ ಸ್ನೇಹಿತನ ಹೊಗಳಿಕೆ:

ಇನ್ನೊಬ್ಬ ವ್ಯಕ್ತಿಯ ಬಗ್ಗೆ ಆಕರ್ಷಣೆ ಇರುವುದು ಸಾಮಾನ್ಯ. ಆದರೆ ಸಂಬಂಧದಲ್ಲಿರುವವರಿಗೆ ಇದು ಅಷ್ಟೇನೂ ಉತ್ತಮವಲ್ಲ. ಈ ಆಕರ್ಷಣೆಯ ಬಗ್ಗೆ ನಿಮ್ಮ ಸಂಗಾತಿಗೆ ಹೇಳುವುದರಿಂದ ಅವರಿಗೆ ನೋವು, ಅಸೂಯೆ, ಅಭದ್ರತೆಗೆ ವಿಚಿತ್ರತೆಗೆ ಕಾರಣವಾಗುತ್ತದೆ. ಆದ್ದರಿಂದ ಇವುಗಳನ್ನು ನೀವೇ ಇಟ್ಟುಕೊಳ್ಳುವುದು ಉತ್ತಮ.

ತಮ್ಮ ಸಂಬಂಧದ ಬಗ್ಗೆ ಅನುಮಾನ:

ತಮ್ಮ ಸಂಬಂಧದ ಬಗ್ಗೆ ಅನುಮಾನ:

ನಿಮಗೆ ನಿಮ್ಮ ಸಂಗಾತಿ ಮೋಸ ಮಾಡುತ್ತಿದ್ದಾನೆ ಎಂದು ಅನುಮಾನ ಮೂಡಿದರೆ ಅಥವಾ ನಿಮ್ಮ ಸಂಬಂಧ ಹೆಚ್ಚು ಕಾಲ ಉಳಿಯುವ ನಂಬಿಕೆ ಇರದಿದ್ದರೆ ಅದನ್ನು ನೇರವಾಗಿ ಆತನ ಬಳಿ ಹೇಳಬೇಡಿ. ನಿಮ್ಮ ಸಂಗಾತಿಯೊಂದಿಗೆ ಅಂತಹ ವಿಚಾರಗಳನ್ನು ಹಂಚಿಕೊಳ್ಳುವ ಮೊದಲು ಕೆಲವು ಆಂತರಿಕೆ ಕೆಲಸಗಳನ್ನು ಮಾಡಿ, ಸಂಶಯವನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಿ.

ಅವರ ಗುರಿಗಳ ಬಗ್ಗೆ ನಿಮ್ಮ ಅಭಿಪ್ರಾಯ:

ಅವರ ಗುರಿಗಳ ಬಗ್ಗೆ ನಿಮ್ಮ ಅಭಿಪ್ರಾಯ:

ನಿಮ್ಮ ಜೀವನವನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ನಿರ್ಧರಿಸಿದಾಗ, ಇಬ್ಬರ ಗುರಿಗಳು ಮತ್ತು ಅದನ್ನು ಮುಟ್ಟುವ ದಾರಿಗಳು ಎಲ್ಲವೂ ಪರಿಣಾಮ ಬೀರುತ್ತವೆ. ಕೇವಲ ಒಬ್ಬರ ಗುರಿ ತಲುಪುವಲ್ಲಿ ಇಬ್ಬರೂ ಕೆಲಸ ಮಾಡುವುದು ಸರಿಯಲ್ಲ, ಇಬ್ಬರ ಆಸೆ, ಗುರಿಗಳ ಈಡೇರಿಕೆಗೆ ಒಟ್ಟಾಗಿ ಸಹಕರಿಸಬೇಕು.

ಹಳೆಯ ಸಂಬಂಧಗಳ ಬಗ್ಗೆ ಮಿಸ್ ಮಾಡಿಕೊಳ್ಳುತ್ತಿರುವ ವಿಷಯ:

ಹಳೆಯ ಸಂಬಂಧಗಳ ಬಗ್ಗೆ ಮಿಸ್ ಮಾಡಿಕೊಳ್ಳುತ್ತಿರುವ ವಿಷಯ:

ಇದು ಸಾಮಾನ್ಯ ಸಂಗತಿಯಾಗಿದೆ. ನಿಮ್ಮ ಪ್ರಸ್ತುತ ಸಂಗಾತಿಯ ಬಗ್ಗೆ ಯಾವುದೇ ರೀತಿಯ ಅಸಮಾಧಾನವನ್ನು ಇದ್ದರೂ, ನೀವು ಅದನ್ನು ಅವರಿಗೆ ಜೋರಾಗಿ ಹೇಳಬಾರದು. ಬದಲಾಗಿ, ಅದನ್ನು ಸರಿಪಡಿಸುವ ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ.

English summary

Thoughts you Should Keep to Yourself in Relationships in Kannada

Here we talking about Thoughts you should keep to yourself in relationships in kannada, read on
Story first published: Monday, June 28, 2021, 17:33 [IST]
X
Desktop Bottom Promotion