For Quick Alerts
ALLOW NOTIFICATIONS  
For Daily Alerts

ಪ್ರೀತಿಯ ಆರಂಭದಲ್ಲಿಯೇ ಈ ರೀತಿಯೆಲ್ಲಾ ಮಾಡಲೇಬಾರದು

|

ಒಬ್ಬ ವ್ಯಕ್ತಿಯನ್ನು ನೋಡಿ ಅವರತ್ತ ಆಕರ್ಷಿತರಾದರೆ ಅದು ಕ್ರಷ್‌ ಆಗಿರಬಹುದು ಅಥವಾ ಲವ್ ಆಗಿರಬಹುದು. ಕ್ರಷ್ ಅಗಿದ್ದರೆ ಆ ಇಷ್ಟ ಕೊನೆಯವರೆಗೆ ಇರಬಹುದು ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಕ್ರಷ್ ಲವ್ ಆಗಬಹುದು ಇಲ್ಲಾ ಆ ಇಷ್ಟ ಸ್ವಲ್ಪ ಸಮಯದ ನಂತರ ಇಲ್ಲವಾಗಬಹುದು. ಆದ್ದರಿಂದ ನಾವು ಯಾರನ್ನಾದರೂ ಇಷ್ಟ ಪಡುವ ಮುನ್ನ ಆ ವ್ಯಕ್ತಿ ಮೇಲೆ ನಮಗಿರುವುದು ಕ್ರಷ್ ಮಾತ್ರವೇ ಅಥವಾ ಪ್ರೀತಿಯೇ ಎಂದು ನಮ್ಮ ಮನಸ್ಸನ್ನು ಕೇಳಿ ಕೊಳ್ಳುವುದು ಒಳ್ಳೆಯದು.

ಇನ್ನು ಅವರ ಮೇಲೆ ಪ್ರೀತಿ ಮೂಡಿದರೆ ಅಥವಾ ಅವರನ್ನು ಜೀವನ ಸಂಗಾತಿಯಾಗಿ ಬಯಸಿದ್ದೇ ಆದರೆ ಕೆಲವೊಂದು ಕಾರ್ಯಗಳನ್ನು ಮಾಡದೇ ಇರುವುದು ಒಳ್ಳೆಯದು, ಏಕೆಂದರೆ ಆ ಕಾರ್ಯಗಳು ಆರಂಭದಲ್ಲಿಯೇ ಸಂಬಂಧವನ್ನು ಅಂತ್ಯವಾಗಿಸಲು ಕಾರಣವಾಗಬಹುದು.

ಆದ್ದರಿಂದ ಸಂಬಂಧದ ಆರಂಭದಲ್ಲಿಯೇ ಈ ರೀತಿ ವರ್ತಿಸದೆ ಇರುವುದು ಒಳ್ಳೆಯದು:

ತುಂಬಾ ಪೊಸೆಸಿವ್ ಆಗಿರುವುದು

ತುಂಬಾ ಪೊಸೆಸಿವ್ ಆಗಿರುವುದು

ಪ್ರೀತಿಯಲ್ಲಿ ಸ್ವಲ್ಪ ಹೊಟ್ಟೆಕಿಚ್ಚು ಇರುತ್ತದೆ, ಹಾಗೇ ಇದ್ದರನೇ ಚೆಂದ, ಆದರೆ ವಿಪರೀತ ಪೊಸೆಸಿವ್ ಆಗಬಾರದು. ಒಬ್ಬರಲ್ಲಿ ಯಾರಾದರೂ ಒಬ್ಬರು ಪೊಸೆಸಿವ್ ಆದರೆ ಆ ಸಂಬಂಧದಲ್ಲಿ ನೆಮ್ಮದಿ ಇರುವುದಿಲ್ಲ. ಅದೇ ವಿಷಯಕ್ಕೆ ಪದೇ-ಪದೇ ಜಗಳವಾಗುವುದು. ಏಕೆ ಅವನ/ಅವಳ ಜೊತೆ ಮಾತನಾಡಿದೆ ಎಂದು ಹೇಳುವುದು, ಸಂಶಯದಿಂದ ಮೊಬೈಲ್‌ ಚೆಕ್‌ ಮಾಡುವುದು ಇವೆಲ್ಲಾ ನಿಮ್ಮ ಸಂಗಾತಿಗೆ ತುಂಬಾನೇ ಕಿರಿಕಿರಿಯಾಗುವುದು. ಆಗ ಈ ಸಂಬಂಧ ಮುಂದುವರೆಯುವುದು ಬೇಡ ಎಂದು ಅವರು ನಿರ್ಧರಿಸಬಹುದು. ನಿಮಗೆ ಅವರ ಮೇಲೆ ಎಷ್ಟೇ ಪ್ರೀತಿ ಇರಲಿ, ಆದರೆ ಹೊಟ್ಟೆಕಿಚ್ಚು ಅಥವಾ ಪೊಸೆಸಿವ್‌ನೆಸ್ ಬೇಡ.

ತುಂಬಾ ಬೇಗನೆ ಇಬ್ಬರು ಜೊತೆಯಾಗಿ ಭವಿಷ್ಯದ ಬಗ್ಗೆ ಪ್ಲ್ಯಾನ್ ಮಾಡುವುದು

ತುಂಬಾ ಬೇಗನೆ ಇಬ್ಬರು ಜೊತೆಯಾಗಿ ಭವಿಷ್ಯದ ಬಗ್ಗೆ ಪ್ಲ್ಯಾನ್ ಮಾಡುವುದು

ಕೆಲವು ವಾರಗಳು ಅಥವಾ ತಿಂಗಳುಗಳ ಪರಿಚಯ, ಸ್ನೇಹದ ಆಧಾರದ ಮೇಲೆ ಭವಿಷ್ಯದ ಬಗ್ಗೆ ತುಂಬಾ ಪ್ಲ್ಯಾನ್ ಮಾಡಬೇಡ. ಆರಂಭದಲ್ಲಿ ಅವರ ಬಗ್ಗೆ ಸಂಪೂರ್ಣ ಅರಿಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮದುವೆ ಅಥವಾ ಜೊತೆಗೆ ಬಾಳುವುದರ ಕುರಿತು ಪ್ಲ್ಯಾನ್‌ ಮಾಡುವುದು ಸರಿಯಲ್ಲ, ಇದರಿಂದ ಮುಂದೆ ಸಂಕಟ ಪಡಬೇಕಾಗುವುದು. ಸ್ವಲ್ಪ ಸಮಯ ನಿಮ್ಮ ಸಂಗಾತಿಯನ್ನು ಅರಿಯಲು ಪ್ರಯತ್ನಿಸಿ.

ಅವರನ್ನು ನಿಮ್ಮ ಮಾಜಿ ಜೊತೆ ಹೋಲಿಸುವುದು

ಅವರನ್ನು ನಿಮ್ಮ ಮಾಜಿ ಜೊತೆ ಹೋಲಿಸುವುದು

ಈ ತಪ್ಪನ್ನು ಮಾಡಲೇಬಾರದು, ಅವರ ಸ್ವಭಾವವನ್ನು ಇವರ ನಜೊತೆ ಹೋಲಿಸುವುದು ಮಾಡುತ್ತಾ ಹೋದರೆ ನಿಮಗೆ ಈ ಸಂಬಂಧದಲ್ಲಿ ಖುಷಿ ಸಿಗುವುದಿಲ್ಲ, ಅದಲ್ಲದೆ ಈ ಕಾರಣವೇ ನಿಮ್ಮನ್ನು ಈ ಸಂಬಂಧದಲ್ಲಿ ಅತೃಪ್ತರಾಗುವಂತೆ ಮಾಡುವುದು. ಈಗ ಇರುವ ನಿಮ್ಮ ಸಂಗಾತಿ ಜೊತೆ ಸಂತೋಷವಾಗಿ ಕಳೆಯಬೇಕೆ ಹೊರತು ಮಾಜಿ ಅಥವಾ ಬೇರೆ ವ್ಯಕ್ತಿಗಳ ಜೊತೆ ಹೋಲಿಸುತ್ತಾ ಹೋದರೆ ಈ ವ್ಯಕ್ತಿಯೂ ಮಾಜಿಯಾಗಬಹುದು.

ನಿಮ್ಮ ಆಲೋಚನೆಗಳಂತೆಯೇ ಅವರು ಇರಬೇಕು ಎಂದು ಬಯಸಬೇಡಿ

ನಿಮ್ಮ ಆಲೋಚನೆಗಳಂತೆಯೇ ಅವರು ಇರಬೇಕು ಎಂದು ಬಯಸಬೇಡಿ

ನೀವು ಒಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದರೆ ಆ ವ್ಯಕ್ತಿ ಡ್ರೆಸ್ಸಿಂಗ್ ಹೇಗೆ ಮಾಡಬೇಕು, ಯಾವ ಆಹಾರ ಇಷ್ಟಬೇಕು, ಯಾವುದು ದೂರವಿಡಬೇಕು, ಮಾಡುವ ಪಾರ್ಟಿ ಹೇಗಿರಬೇಕು ಹೀಗೆ-ಹಾಗೆ ಅಂತ ನೂರೆಂಟು ವಿಷಯಗಳನ್ನು ಅವರ ಬಳಿ ಹೇಳಲು ಹೋಗಬೇಡಿ. ಅವರು ಹೇಗೆ ಇದ್ದಾರೋ ಹಾಗೇ ಅವರನ್ನು ಸ್ವಿಕರಿಸಲು ಸಿದ್ಧರಿದ್ದರೆ ಮಾತ್ರ ಅವರನ್ನು ಪ್ರೀತಿಸಿ. ಇಲ್ಲದಿದ್ದರೆ ನಿಮ್ಮ ಸಂಬಂಧ ತುಂಬಾ ಕಾಂಪ್ಲಿಕೇಟ್ ಆಗಬಹುದು.

ಕೆಟ್ಟ ಸೂಚನೆಗಳನ್ನು ಗಮನಿಸದೇ ಹೋಗುವುದು

ಕೆಟ್ಟ ಸೂಚನೆಗಳನ್ನು ಗಮನಿಸದೇ ಹೋಗುವುದು

ಕೆಟ್ಟ ಸೂಚನೆಗಳನ್ನು ಗಮನಿಸದೇ ಹೋಗುವುದು ಅಥವಾ ಮುಂದೆ ಸರಿ ಹೋಗುವುದು ಎಂದು ಭಾವಿಸುವುದು ಸಂಬಂಧದಲ್ಲಿ ನೀವು ಮಾಡುವ ಅತೀ ದೊಡ್ಡ ತಪ್ಪಾಗಿದೆ. ಅವರ ತಪ್ಪು ವರ್ತನೆಗಳನ್ನು ಕ್ಷಮಿಸಿ, ಎಲ್ಲಾ ಸರಿ ಹೋಗುತ್ತೆ ಎಂದು ಭಾವಿಸಿ ಆ ಸಂಬಂಧದಲ್ಲಿ ಮುಂದುವರೆಯುವಷ್ಟು ದಡ್ಡತನ ಮತ್ತೊಂದಿಲ್ಲ. ಸಂಬಂಧದಲ್ಲಿ ಸಿಕ್ಕಾಪಟ್ಟೆ ಜಗಳ ಅಥವಾ ಆ ವ್ಯಕ್ತಿಯಿಂದ ಸೂಕ್ತ ಸ್ಪಂದನೆ ಅಂದ್ರೆ ನಿಮ್ಮ ಜೊತೆ ಮಾತನಾಡದೇ ಇರುವುದು, ನಿಮ್ಮ ಗೌರವಗಳಿಗೆ ಗಮನ ನೀಡದೇ ಇರುವುದು ಮಾಡುತ್ತಿದ್ದರೆ ಅಂಥ ಸಂಬಂಧಕ್ಕೆ ಆರಂಭದಲ್ಲಿಯೇ ಗುಡ್‌ ಬೈ ಹೇಳುವುದು ಒಳ್ಳೆಯದು.

ಅವರ ಕೆಲಸದ ಜಾಗದಲ್ಲಿ ನಿಮ್ಮ ಪ್ರೀತಿ ಶೋ ಆಫ್ ಮಾಡುವುದು

ಅವರ ಕೆಲಸದ ಜಾಗದಲ್ಲಿ ನಿಮ್ಮ ಪ್ರೀತಿ ಶೋ ಆಫ್ ಮಾಡುವುದು

ಅವರ ಕೆಲಸದ ಜಾಗಕ್ಕೆ ಹೋಗಿ ಅವರನ್ನು ಕಾಯುವುದು ಅಥವಾ ನಿಮ್ಮ ಪ್ರೀತಿಯ ಗಿಫ್ಟ್‌ಗಳನ್ನು ಅವರು ಕೆಲಸ ಮಾಡುವ ಕಡೆ ಕಳುಹಿಸುವುದು ಇವೆಲ್ಲಾ ಒಂದು ಹಂತದವರೆಗೆ ಓಕೆ, ಅತಿಯಾದರೆ ಅವರಿಗೆ ಇದು ಇಷ್ಟವಾಗದೆ ಹೋಗಬಹುದು.

ತಮ್ಮ ಸಂಬಂಧದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಾಕುವುದು

ತಮ್ಮ ಸಂಬಂಧದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಾಕುವುದು

ಸಂಬಂಧದ ಆರಂಭದಲ್ಲಿ ನಿಮ್ಮಿಬ್ಬರ ಕ್ಲೋಸ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್ ಬರುವುದು ಸರಿಯಲ್ಲ. ಮೊದಲಿಗೆ ನೀವಿಬ್ಬರು ಒಬ್ಬೊರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು, ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ರೊಮ್ಯಾಂಟಿಕ್ ಕಪಲ್‌ನಂತೆ ಬಿಂಬಿಸುವುದರಿಂದ ಏನೂ ಪ್ರಯೋಜನವಿಲ್ಲ.

ಸಂಬಂಧದ ಆರಂಭದಲ್ಲಿ ಹಣವನ್ನು ಸಾಲ ನೀಡಬೇಡಿ

ಸಂಬಂಧದ ಆರಂಭದಲ್ಲಿ ಹಣವನ್ನು ಸಾಲ ನೀಡಬೇಡಿ

ಎಷ್ಟೋ ಕೇಸ್‌ಗಳನ್ನು ನೊಡುತ್ತೇವೆ ಪ್ರೀತಿಯ ನಾಟಕ ಆಡಿ, ಇವರಿಂದ ಹಣವನ್ನು ಪಡೆದು ನಂತರ ಮೋಸ ಮಾಡುತ್ತಾರೆ, ಆದ್ದರಿಂದ ಸಂಬಂಧದ ಆರಂಭದಲ್ಲಿಯೇ ಹಣವನ್ನು ನಿಮ್ಮಲ್ಲಿ ಅವರು ಕೇಳಿದರೆ ನೀವು ಆ ಸಂಬಂಧದ ಬಗ್ಗೆ ಎಚ್ಚರಿಕೆಯಿಂದ ಇರಿ.

ದೈಹಿಕ ಆಸೆ ಈಡೇರಿಸುವುದು

ಪ್ರೀತಿಯ ಹೆಸರಿನಲ್ಲಿ ಕಾಮ ರಾರಾಜಿಸಲು ಅವಕಾಶ ನೀಡಬೇಡಿ, ಅದರಲ್ಲೂ ಹೆಣ್ಣು ಮಕ್ಕಳು ಇಂಥ ವಿಷಯದಲ್ಲಿ ತುಂಬಾನೇ ಎಚ್ಚರವಹಿಸಬೇಕು. ತನ್ನ ಹುಡುಗನಿಗೆ ಬೇಸರವಾಗುತ್ತದೆ ಎಂದು ಹೆದರಿ ಅವನು ಹೇಳಿದಂತೆ ಕೇಳುವುದಾದರೆ ಮುಂದೆ ದುಃಖಿಸಬೇಕಾದವರು ನೀವೇ.. ಆದ್ದರಿಂದ ಮೋಸ ಹೋದೆ ಅಂತ ಪಶ್ಚಾತಾಪ ಪಡುವ ಮುನ್ನವೇ ಎಚ್ಚರಿಕೆವಹಿಸಿ.

English summary

Things You Should Never Do Early In A Relationship in Kannada

Things you should never do early in a relationship, read on...
X
Desktop Bottom Promotion