Just In
- 1 hr ago
ಈ ಪ್ರಾಯಾಣಾಮ ತಪ್ಪದೇ ಮಾಡಿದರೆ ಸಾಕು, ಅಧಿಕ ರಕ್ತದೊತ್ತಡಕ್ಕೆ ಬೈಬೈ ಹೇಳಬಹುದು..!
- 3 hrs ago
ಒಂದೇ ದಿನದಲ್ಲಿ ಬಂದಿದೆ ವಟ ಸಾವಿತ್ರಿ ವ್ರತ ಹಾಗೂ ಶನಿ ಜಯಂತಿ: ಈ ಕಾಕತಾಳೀಯಗಳು ಸಂಭವಿಸಲಿದೆ
- 5 hrs ago
ಇತ್ತೀಚೆಗಷ್ಟೇ ಟೈಪ್ 2 ಮಧುಮೇಹ ಕಾಣಿಸಿಕೊಂಡಿದ್ದರೆ ಗುಣಪಡಿಸುವುದು ಹೇಗೆ?
- 9 hrs ago
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯವರಿಗೆ ಒತ್ತಡವೇ ಸಮಸ್ಯೆ, ಎಚ್ಚರ
Don't Miss
- News
ವಿಜಯೇಂದ್ರಗೆ ಟಿಕೆಟ್ ನಕಾರ; ಬಿಜೆಪಿಗೆ ತಿರುಗುಬಾಣ ಎಂದ ಕುಮಾರಸ್ವಾಮಿ
- Sports
IPL 2022 ಎಲಿಮಿನೇಟರ್: ಲಕ್ನೋ ವಿರುದ್ಧದ ಪಂದ್ಯಕ್ಕೆ RCB ಆಡುವ 11ರ ಬಳಗ ಹೇಗಿರಲಿದೆ?
- Movies
41 ದಿನದಲ್ಲಿ ಇಷ್ಟೊಂದು ಇಳಿಕೆ ಕಂಡೇ ಇಲ್ಲ: 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆಗಿದ್ದೇಕೆ?
- Automobiles
ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!
- Education
KLE Society Recruitment 2022 : 14 ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ದಾವೋಸ್: ರೆನ್ಯೂ ಪವರ್ನಿಂದ ರಾಜ್ಯದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದ
- Technology
ಸ್ಪೈಸ್ಜೆಟ್ ಸಿಸ್ಟಂಗಳ ಮೇಲೆ ರಾನ್ಸಮ್ವೇರ್ ಅಟ್ಯಾಕ್!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರೀತಿಯ ಆರಂಭದಲ್ಲಿ ಗೆಳೆಯನ ಬಳಿ ಈ ಬಗ್ಗೆ ಮಾತುಗಳು ಎಂದಿಗೂ ಬೇಡ
ಸಂಬಂಧದ ಆರಂಭದಲ್ಲಿ ಹುಡುಗಿಯರಿಗೆ ಹೇಗೆ ಕೆಲವು ವಿಚಾರಗಳು ಇಷ್ಟವಾಗುವುದಿಲ್ಲವೋ, ಅದೇ ರೀತಿ ಹುಡುಗರಿಗೂ ಕೆಲವು ವಿಷಯಗಳು ಅಸಮಾಧಾನ ಉಂಟು ಮಾಡಬಹುದು. ಆದ್ದರಿಂದ, ನೀವೇನಾದರೂ ಹೊಸ ಸಂಬಂಧವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದರೆ, ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಆರಂಭಿಕ ಹಂತದಲ್ಲಿಯೇ ಆತನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಪ್ರಶ್ನೆಗಳನ್ನು ಕೇಳುವುದರಿಂದ ನಿಮ್ಮ ಮೇಲಿನ ಭಾವನೆ ಬದಲಾಗಬಹುದು. ಆದ್ದರಿಂದ ಆರಂಭಿಕ ದಿನಗಳನ್ನು ಯಾವ ವಿಚಾರಗಳಿಂದ ಹುಡುಗಿಯರು ದೂರವಿರಬೇಕು ಎಂಬುದನ್ನು ಇಲ್ಲಿ ನೋಡೋಣ.
ಸಂಬಂಧದ ಆರಂಭದಲ್ಲಿ ನೀವು ಕೇಳುವುದನ್ನು ತಪ್ಪಿಸಬೇಕಾದ 4 ವಿಷಯಗಳು ಇಲ್ಲಿವೆ:

ಆತನ ಸಂಪಾದನೆ:
ನಿಮ್ಮ ಗೆಳೆಯ ಏನು ಮಾಡುತ್ತಾನೆ ಮತ್ತು ಅವನು ಎಷ್ಟು ಸಂಪಾದಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ಅನಿವಾರ್ಯವಾಗಿದ್ದರೂ, ಅದನ್ನು ಕೇಳಲು ಸರಿಯಾದ ಸಮಯವಿರಬೇಕು. ನಿಮ್ಮ ಹೊಸ ಬಾಯ್ಫ್ರೆಂಡ್ ಬಳಿ ಅವರ ವೇತನದ ಬಗ್ಗೆ ಕೇಳುವುದು ನಿಮ್ಮ ಗೆಳೆಯನ ಮೇಲೆ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಉಂಟುಮಾಡಬಹುದು. ನೀವು ಯಾವುದೇ ಕೆಟ್ಟ ಉದ್ದೇಶವಿಲ್ಲದೆ ಪ್ರಶ್ನೆಯನ್ನು ಕೇಳಿದ್ದರೂ ಸಹ ಆತ ನಿಮ್ಮನ್ನು ಹಣದ ಹಿಂದೆ ಓಡುವ ವ್ಯಕ್ತಿಯಂತೆ ನೋಡಬಹುದು. ಆದ್ದರಿಂದ, ನಿಮ್ಮ ಸಂಬಂಧವು ಇನ್ನೂ ಆರಂಭಿಕ ಹಂತದಲ್ಲಿದ್ದಾಗ, ನಿಮ್ಮ ಸಂಬಂಧಕ್ಕೆ ಹುಳಿ ಸೇರಿಸುವಂತಹ ಪ್ರಶ್ನೆಗಳನ್ನು ತಪ್ಪಿಸುವುದು ಉತ್ತಮ.

ಮಾಜಿ ಗೆಳೆತಿಯ ಫೋಟೋ:
ಇದು ನಿಮ್ಮ ಗೆಳೆಯನಿಗೆ ಸೃಷ್ಟಿಸಬಹುದಾದ ಅತ್ಯಂತ ಅಹಿತಕರ ಸನ್ನಿವೇಶವಾಗಿದೆ. ನಿಮ್ಮ ಗೆಳೆಯ ನಿಮ್ಮ ಮಾಜಿಗೆಳೆಯ ಅಥವಾ ಅವರ ಚಿತ್ರಗಳನ್ನು ಕೇಳುವುದನ್ನು ನಿಮಗೆ ಹೇಗೆ ಇಷ್ಟವಗುವುದಿಲ್ಲವೋ, ಅದೇ ರೀತಿ ನಿಮ್ಮ ಗೆಳೆಯನಿಗೂ ಅವನ ಮಾಜಿ ಪ್ರೇಮಿಯ ಬಗ್ಗೆ ಅಥವ ಫೋಟೋ ಕೇಳುವುದು ವಿಚಿತ್ರವಾಗಿದೆ. ಬಹುಶಃ ನಂತರದ ಹಂತದಲ್ಲಿ, ಅದನ್ನು ಕೇಳಬಹುದು, ನಿಮ್ಮ ಸಂಬಂಧವನ್ನು ಕಳೆದುಕೊಳ್ಳಲು ಬಯಸದಿದ್ದರೆ ನಿಮ್ಮ ಹೊಸ ಗೆಳೆಯನಿಗೆ ಅದನ್ನು ಕೇಳುವುದನ್ನು ತಪ್ಪಿಸುವುದು ಉತ್ತಮ.

ಉಡುಗೊರೆ:
ಅನೇಕ ಹುಡುಗಿಯರು ಇದನ್ನು ಮಾಡದಿದ್ದರೂ, ವಿನಾಯಿತಿಗಳು ಯಾವಾಗಲೂ ಇರುತ್ತವೆ. ಆದ್ದರಿಂದ, ಇದನ್ನ ತಮಾಷೆಗಾಗಿ ಮಾಡುತ್ತಿದ್ದರೂ ಸಹ, ಅದನ್ನು ತಪ್ಪಿಸಿ. ಉಡುಗೊರೆಗಳು ಅಥವಾ ದುಬಾರಿ ವಸ್ತುಗಳನ್ನು ಕೇಳಬೇಡಿ, ಏಕೆಂದರೆ ಅದು ನಿಮ್ಮ ಗೆಳೆಯನ ಮೇಲೆ ನಿಮ್ಮ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ನಿಮ್ಮ ಬಾಯ್ಫ್ರೆಂಡ್ನೊಂದಿಗೆ ನೀವು ಆರಾಮದಾಯಕವಾದ ಜಾಗದಲ್ಲಿದ್ದಾಗ, ನಿಮಗೆ ಬೇಕಾದುದನ್ನು ಕೇಳಿ, ನೀವು ಅದರಲ್ಲಿ ಸಂತೋಷವಾಗಿರಿ.

ಅವನ ಸ್ನೇಹಿತರಿಗೆ ನಿಮ್ಮನ್ನು ಪರಿಚಯಿಸುವುದು:
ಇದು ಮತ್ತೊಂದು ಅಹಿತಕರ ಪರಿಸ್ಥಿತಿಯಾಗಿದೆ. ನಿಮ್ಮ ಹೊಸ ಗೆಳೆಯ ತನ್ನ ಗ್ಯಾಂಗ್ಗೆ ನಿಮ್ಮನ್ನು ಪರಿಚಯಿಸದಿದ್ದರೆ, ಅವನು ನಿಮ್ಮ ಬಗ್ಗೆ ಗಂಭೀರವಾಗಿಲ್ಲ ಎಂಬ ಕಾರಣ ಅಲ್ಲ, ಇತರ ಕಾರಣಗಳೂ ಇರಬಹುದು ಮತ್ತು ಅವನು ಸರಿಯಾದ ಸಮಯಕ್ಕಾಗಿ ಕಾಯುತ್ತಿರಬಹುದು. ಆದ್ದರಿಂದ, ನಿಮ್ಮ ಗೆಳೆಯ ತನ್ನ ಗ್ಯಾಂಗ್ಗೆ ನಿಮ್ಮನ್ನು ಪರಿಚಯಿಸುವಂತೆ ಕೇಳುವ ಮತ್ತು ಒತ್ತಾಯಿಸುವ ಬದಲು, ತಾಳ್ಮೆಯಿಂದಿರಿ ಮತ್ತು ಅವನು ಬಯಸಿದರೆ ಅದನ್ನು ಸ್ವಂತವಾಗಿ ಮಾಡಲು ಬಿಡಿ.