For Quick Alerts
ALLOW NOTIFICATIONS  
For Daily Alerts

ಪ್ರೀತಿಯ ಆರಂಭದಲ್ಲಿ ಗೆಳೆಯನ ಬಳಿ ಈ ಬಗ್ಗೆ ಮಾತುಗಳು ಎಂದಿಗೂ ಬೇಡ

|

ಸಂಬಂಧದ ಆರಂಭದಲ್ಲಿ ಹುಡುಗಿಯರಿಗೆ ಹೇಗೆ ಕೆಲವು ವಿಚಾರಗಳು ಇಷ್ಟವಾಗುವುದಿಲ್ಲವೋ, ಅದೇ ರೀತಿ ಹುಡುಗರಿಗೂ ಕೆಲವು ವಿಷಯಗಳು ಅಸಮಾಧಾನ ಉಂಟು ಮಾಡಬಹುದು. ಆದ್ದರಿಂದ, ನೀವೇನಾದರೂ ಹೊಸ ಸಂಬಂಧವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದರೆ, ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಆರಂಭಿಕ ಹಂತದಲ್ಲಿಯೇ ಆತನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಪ್ರಶ್ನೆಗಳನ್ನು ಕೇಳುವುದರಿಂದ ನಿಮ್ಮ ಮೇಲಿನ ಭಾವನೆ ಬದಲಾಗಬಹುದು. ಆದ್ದರಿಂದ ಆರಂಭಿಕ ದಿನಗಳನ್ನು ಯಾವ ವಿಚಾರಗಳಿಂದ ಹುಡುಗಿಯರು ದೂರವಿರಬೇಕು ಎಂಬುದನ್ನು ಇಲ್ಲಿ ನೋಡೋಣ.

ಸಂಬಂಧದ ಆರಂಭದಲ್ಲಿ ನೀವು ಕೇಳುವುದನ್ನು ತಪ್ಪಿಸಬೇಕಾದ 4 ವಿಷಯಗಳು ಇಲ್ಲಿವೆ:

ಆತನ ಸಂಪಾದನೆ:

ಆತನ ಸಂಪಾದನೆ:

ನಿಮ್ಮ ಗೆಳೆಯ ಏನು ಮಾಡುತ್ತಾನೆ ಮತ್ತು ಅವನು ಎಷ್ಟು ಸಂಪಾದಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ಅನಿವಾರ್ಯವಾಗಿದ್ದರೂ, ಅದನ್ನು ಕೇಳಲು ಸರಿಯಾದ ಸಮಯವಿರಬೇಕು. ನಿಮ್ಮ ಹೊಸ ಬಾಯ್‌ಫ್ರೆಂಡ್‌ ಬಳಿ ಅವರ ವೇತನದ ಬಗ್ಗೆ ಕೇಳುವುದು ನಿಮ್ಮ ಗೆಳೆಯನ ಮೇಲೆ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಉಂಟುಮಾಡಬಹುದು. ನೀವು ಯಾವುದೇ ಕೆಟ್ಟ ಉದ್ದೇಶವಿಲ್ಲದೆ ಪ್ರಶ್ನೆಯನ್ನು ಕೇಳಿದ್ದರೂ ಸಹ ಆತ ನಿಮ್ಮನ್ನು ಹಣದ ಹಿಂದೆ ಓಡುವ ವ್ಯಕ್ತಿಯಂತೆ ನೋಡಬಹುದು. ಆದ್ದರಿಂದ, ನಿಮ್ಮ ಸಂಬಂಧವು ಇನ್ನೂ ಆರಂಭಿಕ ಹಂತದಲ್ಲಿದ್ದಾಗ, ನಿಮ್ಮ ಸಂಬಂಧಕ್ಕೆ ಹುಳಿ ಸೇರಿಸುವಂತಹ ಪ್ರಶ್ನೆಗಳನ್ನು ತಪ್ಪಿಸುವುದು ಉತ್ತಮ.

ಮಾಜಿ ಗೆಳೆತಿಯ ಫೋಟೋ:

ಮಾಜಿ ಗೆಳೆತಿಯ ಫೋಟೋ:

ಇದು ನಿಮ್ಮ ಗೆಳೆಯನಿಗೆ ಸೃಷ್ಟಿಸಬಹುದಾದ ಅತ್ಯಂತ ಅಹಿತಕರ ಸನ್ನಿವೇಶವಾಗಿದೆ. ನಿಮ್ಮ ಗೆಳೆಯ ನಿಮ್ಮ ಮಾಜಿಗೆಳೆಯ ಅಥವಾ ಅವರ ಚಿತ್ರಗಳನ್ನು ಕೇಳುವುದನ್ನು ನಿಮಗೆ ಹೇಗೆ ಇಷ್ಟವಗುವುದಿಲ್ಲವೋ, ಅದೇ ರೀತಿ ನಿಮ್ಮ ಗೆಳೆಯನಿಗೂ ಅವನ ಮಾಜಿ ಪ್ರೇಮಿಯ ಬಗ್ಗೆ ಅಥವ ಫೋಟೋ ಕೇಳುವುದು ವಿಚಿತ್ರವಾಗಿದೆ. ಬಹುಶಃ ನಂತರದ ಹಂತದಲ್ಲಿ, ಅದನ್ನು ಕೇಳಬಹುದು, ನಿಮ್ಮ ಸಂಬಂಧವನ್ನು ಕಳೆದುಕೊಳ್ಳಲು ಬಯಸದಿದ್ದರೆ ನಿಮ್ಮ ಹೊಸ ಗೆಳೆಯನಿಗೆ ಅದನ್ನು ಕೇಳುವುದನ್ನು ತಪ್ಪಿಸುವುದು ಉತ್ತಮ.

ಉಡುಗೊರೆ:

ಉಡುಗೊರೆ:

ಅನೇಕ ಹುಡುಗಿಯರು ಇದನ್ನು ಮಾಡದಿದ್ದರೂ, ವಿನಾಯಿತಿಗಳು ಯಾವಾಗಲೂ ಇರುತ್ತವೆ. ಆದ್ದರಿಂದ, ಇದನ್ನ ತಮಾಷೆಗಾಗಿ ಮಾಡುತ್ತಿದ್ದರೂ ಸಹ, ಅದನ್ನು ತಪ್ಪಿಸಿ. ಉಡುಗೊರೆಗಳು ಅಥವಾ ದುಬಾರಿ ವಸ್ತುಗಳನ್ನು ಕೇಳಬೇಡಿ, ಏಕೆಂದರೆ ಅದು ನಿಮ್ಮ ಗೆಳೆಯನ ಮೇಲೆ ನಿಮ್ಮ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ನಿಮ್ಮ ಬಾಯ್‌ಫ್ರೆಂಡ್‌ನೊಂದಿಗೆ ನೀವು ಆರಾಮದಾಯಕವಾದ ಜಾಗದಲ್ಲಿದ್ದಾಗ, ನಿಮಗೆ ಬೇಕಾದುದನ್ನು ಕೇಳಿ, ನೀವು ಅದರಲ್ಲಿ ಸಂತೋಷವಾಗಿರಿ.

ಅವನ ಸ್ನೇಹಿತರಿಗೆ ನಿಮ್ಮನ್ನು ಪರಿಚಯಿಸುವುದು:

ಅವನ ಸ್ನೇಹಿತರಿಗೆ ನಿಮ್ಮನ್ನು ಪರಿಚಯಿಸುವುದು:

ಇದು ಮತ್ತೊಂದು ಅಹಿತಕರ ಪರಿಸ್ಥಿತಿಯಾಗಿದೆ. ನಿಮ್ಮ ಹೊಸ ಗೆಳೆಯ ತನ್ನ ಗ್ಯಾಂಗ್‌ಗೆ ನಿಮ್ಮನ್ನು ಪರಿಚಯಿಸದಿದ್ದರೆ, ಅವನು ನಿಮ್ಮ ಬಗ್ಗೆ ಗಂಭೀರವಾಗಿಲ್ಲ ಎಂಬ ಕಾರಣ ಅಲ್ಲ, ಇತರ ಕಾರಣಗಳೂ ಇರಬಹುದು ಮತ್ತು ಅವನು ಸರಿಯಾದ ಸಮಯಕ್ಕಾಗಿ ಕಾಯುತ್ತಿರಬಹುದು. ಆದ್ದರಿಂದ, ನಿಮ್ಮ ಗೆಳೆಯ ತನ್ನ ಗ್ಯಾಂಗ್‌ಗೆ ನಿಮ್ಮನ್ನು ಪರಿಚಯಿಸುವಂತೆ ಕೇಳುವ ಮತ್ತು ಒತ್ತಾಯಿಸುವ ಬದಲು, ತಾಳ್ಮೆಯಿಂದಿರಿ ಮತ್ತು ಅವನು ಬಯಸಿದರೆ ಅದನ್ನು ಸ್ವಂತವಾಗಿ ಮಾಡಲು ಬಿಡಿ.

English summary

Things that you Should Never Ask your New Boyfriend in Kannada

Here we talking about Things that you should never ask your new boyfriend in Kannada, read on
Story first published: Friday, January 21, 2022, 16:50 [IST]
X
Desktop Bottom Promotion