For Quick Alerts
ALLOW NOTIFICATIONS  
For Daily Alerts

ಪ್ರೇಮ ವೈಫಲ್ಯದ ನಂತರ ಮತ್ತೆ ಸಂಗಾತಿಯ ಆಯ್ಕೆಯ ಗೊಂದಲಕ್ಕೆ ಇಲ್ಲಿದೆ ಸಲಹೆ

|

ಜೀವನದಲ್ಲಿ ಉತ್ತಮ ಸಂಗಾತಿ ಸಿಗುವುದಕ್ಕೂ ಅದೃಷ್ಟ ಇರಬೇಕು. ಜೀವನದುದ್ದಕ್ಕೂ ನಮ್ಮ ಜೊತೆ ಬರುವ ಸಂಗಾತಿಯ ಆಯ್ಕೆ ನಿಜಕ್ಕೂ ಅಷ್ಟೇನೂ ಸುಲಭದ ವಿಷಯವಲ್ಲ. ಅದರಲ್ಲೂ ನಮಗೆ ಹೊಂದಿಕೆ ಆಗದ, ಕೆಟ್ಟ ಗುಣಗಳಿರುವ ಪ್ರೇಮಿಯನ್ನು ಆಯ್ಕೆ ಮಾಡಿದರಂತೂ ಜೀವನವೇ ಸಾಕು ಎನಿಸಲಾರದಿರದು.

Signs Your Ready To Date Again After A Toxic Relationship in Kannada

ಹಲವರಿಗೆ ತನ್ನ ಪ್ರೇಮಿಯ ಆಯ್ಕೆ ಸರಿ ಇಲ್ಲ, ಇವರ ಗುಣಸ್ವಭಾವ ನಮಗೆ ಹೊಂದುವುದಿಲ್ಲ, ಎಲ್ಲದ್ದಕ್ಕಿಂತ ಮುಖ್ಯವಾಗಿ ಕೆಟ್ಟ ಸ್ವಭಾವದ ವ್ಯಕ್ತಿ ಎಂದು ಎನಿಸಿದಾಗ ಇಂಥಾ ಸಂಬಂಧದಿಂದ ಹೊರಬರುವುದು ದೊಡ್ಡ ಸವಾಲಾಗಿಬಿಡುತ್ತದೆ. ಇಂಥಾ ವಿಷಕಾರಿ ಸಂಬಂಧಗಳು ನಮ್ಮ ಜೀವನವನ್ನೇ ನಾಶಪಡಿಸುವ ಸಾಧ್ಯತೆ ಇರುತ್ತದೆ.

ಅಂತಿಮವಾಗಿ ಸಂಬಂಧದಿಂದ ಹೊರಬಂದ ನಂತರ ಮುಂದಿನ ಸವಾಲಿನ ಪ್ರಶ್ನೆ ಮತ್ತೊಂದು ಸಂಬಂಧವನ್ನು ಹೊಂದುವುದು ಹೇಗೆ?, ಇದು ಸರಿಯೇ?, ಉತ್ತಮ ಸಂಗಾತಿ ಸಿಗುವರೇ?, ಇವರು ಮತ್ತೆ ನೋಯಿಸಬಹುದೇ? ಹೀಗೆ ಸಾಕಷ್ಟು ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ.

ಹೇಗಾದರೂ, ಧೈರ್ಯಶಾಲಿಯಾಗಿ ಮುಂದೆ ಹೆಜ್ಜೆ ಹಾಕಿ ನಮ್ಮ ಜೀವನವನ್ನು ರೂಪಿಸಿಕೊಳ್ಳುವುದು, ನಮ್ಮ ಜೀವನದ ಸಂತೋಷವನ್ನು ನಾವೇ ಕಂಡುಕೊಳ್ಳುವುದು ಮಾತ್ರ ಇಲ್ಲಿ ಮುಖ್ಯವಾಗುತ್ತದೆ. ಹಾಗಿದ್ದರೆ ವಿಷಕಾರಿ ಸಂಗಾತಿಯನ್ನು ಮರೆತು ಹೇಗೆ ಮುಂದಿನ ಜೀವನಕ್ಕೆ ಸಿದ್ಧರಾಗಲು ಮಾನಸಿಕವಾಗಿ ಹೇಗೆಲ್ಲಾ ತಯಾರಿ ನಡೆಸಬೇಕು ಇಲ್ಲಿದೆ ಕೆಲವು ಸಲಹೆಗಳು:

1. ಮಾಜಿ ಪ್ರೇಮಿ ಜತೆ ಮತ್ತೆ ಯಾವುದೇ ಸಂಪರ್ಕ ಹೊಂದಲೇಬೇಡಿ

1. ಮಾಜಿ ಪ್ರೇಮಿ ಜತೆ ಮತ್ತೆ ಯಾವುದೇ ಸಂಪರ್ಕ ಹೊಂದಲೇಬೇಡಿ

ಒಮ್ಮೆ ಸಂಬಂಧದಿಂದ ಹಿಂದೆ ಸರಿಯುವುದನ್ನು ನಿರ್ಧರಿಸಿದ ನಂತರ ಮತ್ತೆ ಆ ವ್ಯಕ್ತಿ ಜತೆ ಯಾವುದೇ ಕಾರಣಕ್ಕೂ, ಯಾವುದೇ ರೀತಿಯಲ್ಲೂ ಸಂವಹನ ಸಲ್ಲದು. ಆದರೂ ಕೆಲವು ದಿನಗಳ ಕಾಲ ಅವರ ನೆನಪು ಕಾಡಾವುದು ಸಹಜವಾದರೂ ಅದರಿಂದ ನೀವು ಹೊರಬರಲೇಬೇಕು.

ಈಗಾಗಲೇ ಹಲವು ದಿನಗಳ ಜತೆ ಇದ್ದ ವಿಷಕಾರಿ ಪ್ರೇಮಿಯಿಂದ ದೂರಾಗುವುದು, ಮತ್ತೆ ಹೊಸ ಸಂಬಂಧವನ್ನು ಹೊಂದುವುದರಿಂದ ನಿಮ್ಮ ಮಾಜಿ ಪ್ರೇಮಿ ಯಾವೆಲ್ಲಾ ಸಮಸ್ಯೆ ತಂದೊಡ್ಡಬಹುದು ಎಂಬ ಭಯ, ಚಿಂತೆ ನಿಮ್ಮದಾದದರೂ ಇದೆಲ್ಲವನ್ನು ನೀವೇ ಜಾಣ್ಮೆಯಿಂದ ನಿಭಾಯಿಸಬೇಕಿದೆ.

ಮತ್ತೊಂದು ಮುಖ್ಯವಾದ ವಿಷಯವೆಂದರೆ, ನೀವು ಹೊಸ ಸಂಗಾತಿಯನ್ನು ಆಯ್ಕೆ ಮಾಡಿದ ನಂತರವೂ ಮಾಜಿ ಪ್ರೇಮಿಯ ಬಗ್ಗೆ ಚಿಂತಿಸುತ್ತಿದ್ದರೆ ಮಾಜಿ ಹಾಗೂ ಹಾಲಿ ಪ್ರೇಮಿಯೊಂದಿಗೆ ಹೋಲಿಕೆ ಮಾಡುವ ಸಾಧ್ಯತೆ ಹೆಚ್ಚಿದೆ, ಇದು ನಿಮಗೆ ಉತ್ತಮ ಜೀವನ ಖಂಡಿತ ನೀಡಲಾರದು, ಇಂಥಾ ದುಸ್ಸಾಹಸ ಎಂದಿಗೂ ಮಾಡಲೇಬೇಡಿ. ಸಾಧ್ಯವಾದರೆ ನಿಮ್ಮ ಹಾಲಿ ಪ್ರೇಮಿಗೆ ಎಲ್ಲ ವಿಷಯವನ್ನು ತಿಳಿಸಿ.

2. ಏನು ತಪ್ಪಾಗಿದೆ ಎಂದು ನಿಮಗೇ ತಿಳಿದಿದೆ

2. ಏನು ತಪ್ಪಾಗಿದೆ ಎಂದು ನಿಮಗೇ ತಿಳಿದಿದೆ

ಈಗಾಗಲೇ ವಿಷಕಾರಿ ಸಂಬಂಧದಿಂದ ಹೊರಬಂದ ನಂತರ ನಿಮಗೇ ಯಾವೆಲ್ಲಾ ವಿಷಯಗಳಲ್ಲಿ ತಪ್ಪಾಗಿದೆ, ನಮ್ಮ ಸಂಬಂಧದಲ್ಲಿ ವಿಷಕಾರಿಯಾದ ಯಾವ ಅಂಶ ಕಂಡುಬಂದಿದೆ ಎಂಬುದು ತಿಳಿದಿರುತ್ತದೆ. ಹಲವು ಬಾರಿ ನಿಮ್ಮ ಪ್ರೇಮಿ ಮಾತ್ರವಲ್ಲದೇ ಸಂಬಂಧ ಹಾಳಾಗಲು ನಿಮ್ಮಲ್ಲೂ ಹಲವು ತಪ್ಪಾದ ವರ್ತನೆ, ಬೇಡದ ಗುಣಗಳು ಇರುತ್ತದೆ, ಇದರ ಬಗ್ಗೆ ನಿಮಗೆ ಈಗಾಗಲೇ ಅರಿವಾಗಿರುತ್ತದೆ ಮುಂದೆ ಇಂಥಾ ಗುಣಗಳನ್ನು ನೀವು ಸಹ ಬದಲಿಸಿಕೊಳ್ಳಲೇಬೇಕು, ಇಲ್ಲವಾದಲ್ಲಿ ಮತ್ತೆ ಸಂಬಂಧ ಕಳಚಬಹುದು.

3. ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಇರಲಿ

3. ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಇರಲಿ

ನೀವು ಒಮ್ಮೆ ವಿಷಕಾರಿ ಸಂಬಂಧದಿಂದ ಹೊರಬಂದ ನಂತರ ನಿಮಗೇ ನಿಮ್ಮ ಬಗ್ಗೆ ಭಯದ ಭಾವನೆ ಮೂಡಿರುತ್ತದೆ. ಸಾಕಷ್ಟು ದಿನ, ತಿಂಗಳು ಅಥವಾ ವರ್ಷಗಳಿಂದ ನಿಮ್ಮ ಪ್ರೇಮಿಯಿಂದ ನೀವು ನಿಂದನೆ, ಬೈಗುಳಗಳಿಂದಾಗಿ ನೀವೆ ಸರಿ ಇಲ್ಲ, ನಾವು ಸರಿಯಾದ ಪ್ರೇಮಿಯಲ್ಲ, ನಂಬಿಕೆಗೆ ಅರ್ಹವಲ್ಲ ಎಂದೆನಿಸಬಹುದು.

ನಿಮ್ಮ ಬಗ್ಗೆ ನಿಮಗೆ ಸ್ವಾಭಿಮಾನದ ಕೊರತೆ ಇದ್ದರೆ ಮೊದಲು ಇದರಿಂದ ಹೊರಬರಬೇಕು, ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡಿಸುವಂಥ ಕೆಲಸಗಳನ್ನು ನೀವು ಮಾಡಬೇಕು, ನಿಮ್ಮ ಮೇಲೆ ನಿಮಗೆ ನಂಬಿಕೆ ಬರುವಂತೆ ಮಾಡುವುದು ಅತ್ಯಗತ್ಯ.

ನಿಮ್ಮನ್ನು ಪ್ರೀತಿಸುವ ಜನರೊಂದಿಗೆ ಸಮಯ ಕಳೆಯಿರಿ, ನೀವು ಇಷ್ಟಪಡುವ ಕೆಲಸಗಳನ್ನು ಮಾಡಿ, ಮಾಜಿ ಪ್ರೇಮಿ ಬಗ್ಗೆ ಚಿಂತೆ ಮಾಡಬೇಡಿ, ಭವಿಷ್ಯದತ್ತ ಗಮನಹರಿಸಿ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ.

ಮೊದಲು ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಇದ್ದರೆ ಮಾತ್ರ ನೀವು ಸಕಾರಾತ್ಮಕ ಹಾಗೂ ಒಳ್ಳೆಯ ಸ್ವಭಾವದ ವ್ಯಕ್ತಿಯನ್ನು ಆಕರ್ಷಿಸಲು ಸಾಧ್ಯ.

4. ಕೆಟ್ಟ ಗುಣಗಳನ್ನು ನಿರ್ಲಕ್ಷಿಸಲೇಬೇಡಿ

4. ಕೆಟ್ಟ ಗುಣಗಳನ್ನು ನಿರ್ಲಕ್ಷಿಸಲೇಬೇಡಿ

ಪ್ರೇಮ ಅಂಕುರಿಸಿದ ಕೆಲವು ದಿನಗಳು ಒಳ್ಳೆಯ ಗುಣಗಳು ಮಾತ್ರ ಕಾಣುವುದು ಸಹಜ, ಆದರೆ ದಿನ ಕಳೆದಂತೆ ನೀವು ಪ್ರಾಮಾಣಿಕವಾಗಿ ಗಮನಿಸಲು ಆರಂಭಿಸಿದಾಗ ಸಂಬಂಧದಲ್ಲಿ ಕೆಲವು ಇಷ್ಟವಾಗದ ಗುಣ-ಸ್ವಭಾವಗಳು ಕಾಣಲು ಪ್ರಾರಂಭಿಸುತ್ತದೆ.

ಇಂಥಾ ವರ್ತನೆಯನ್ನು ನಾನು ಸರಿ ಮಾಡಬಲ್ಲೆ ಎಂದು ನೀವು ಅಂದುಕೊಳ್ಳಬಹುದು?, ಕೆಲವು ಬಾರಿ ನಿರ್ಲಕ್ಷಿಸಲೂಬಹುದು, ಆದರೆ ಮುಂದುವರಿಯುತ್ತಾ, ಇದೇ ನಿಮ್ಮನ್ನು ಹೆಚ್ಚು ಕಾಡುತ್ತದೆ, ವ್ಯಕ್ತಿಯಿಂದಲೇ ದೂರ ಹೋಗಲು ಸಿದ್ಧರಾಗಬೇಕು. ಹಾಗೆ ಮಾಡುವುದರಿಂದ ಮಾತ್ರ ನೀವು ಬಯಸುವ ಆರೋಗ್ಯಕರ ಸಂಬಂಧವನ್ನು ನೀವು ಪಡೆಯಲು ಸಾಧ್ಯ.

5. ನೀವು ನಿಜವಾಗಿಯೂ ಮತ್ತೊಂದು ಸಂಬಂಧಕ್ಕೆ ಸಿದ್ಧರಿದ್ದೀರಾ?

5. ನೀವು ನಿಜವಾಗಿಯೂ ಮತ್ತೊಂದು ಸಂಬಂಧಕ್ಕೆ ಸಿದ್ಧರಿದ್ದೀರಾ?

ಆಗಷ್ಟೇ ಪ್ರೇಮಿಯಿಂದ ದೂರಾಗಿ ಮತ್ತೊಂದು ಸಂಬಂಧವನ್ನು ಹೊಂದುವುದಕ್ಕು ಧೈರ್ಯ, ಮಾನಸಿಕ ಸ್ಥಿಮಿತ, ಗಟ್ಟಿ ನಿರ್ಧಾರ ಅವಶ್ಯಕ. ಇದಾವುದು ಇಲ್ಲದೆ ಸುಖಾಸುಮ್ಮನೆ ನಿಮ್ಮ ಅನುಕೂಲಕ್ಕಾಗಿ, ಆ ಸಮಯದಲ್ಲಿ ನೋವನ್ನು ಮರೆಯುವುದಕ್ಕಾಗಿ ಮತ್ತೆ ಪ್ರೇಮಿಯನ್ನು ಹೊಂದುವುದು ಉತ್ತಮ ನಿರ್ಧಾರವಲ್ಲ, ಇದರಿಂದ ಮತ್ತೆ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆ ಇರುತ್ತದೆ, ಅಥವಾ ಜೀವನಕ್ಕೆ ಇನ್ನೂ ಹೆಚ್ಚು ಮುಳುವಾಗುವ ಸಾಧ್ಯತೆಯೇ ಹೆಚ್ಚು.

ನೀವು ಕೆಲವು ಸಮಯ ತೆಗೆದುಕೊಂಡರೂ ಸಮಸ್ಯೆ ಇಲ್ಲ, ನಿಜವಾದ ಪ್ರೇಮವನ್ನು ಬಯಸಲು ಪ್ರಯತ್ನಿಸಿ, ಇದು ನಿಮಗೂ, ನಿಮ್ಮ ಮಾನಸಿಕ ಸ್ಥಿತಿಗೂ ಹಾಗೂ ನೀವು ಇಷ್ಟ ಪಡುವ ಪ್ರೇಮಿಗೂ ಆರೋಗ್ಯಕರ.

ನಿಮ್ಮ ಮಾಜಿ ಪ್ರೇಮಿ ಬಗ್ಗೆ ಯೋಚಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಹಿಂದಿನ ಸಂಬಂಧದಲ್ಲಿ ಏನಾಯಿತು ಎಂಬುದನ್ನು ಅರ್ಥೈಸಿಕೊಳ್ಳಿ, ಇದರಿಂದ ನೀವು ಮತ್ತೆ ಅದೇ ತಪ್ಪುಗಳನ್ನು ಮಾಡದಂತೆ ಎಚ್ಚರವಹಿಸಿ. ನಿಮ್ಮ ಸ್ವಾಭಿಮಾನ, ಆತ್ಮವಿಶ್ವಾಸದಿಂದ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಿ.

ನೀವು ಈ ರೀತಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾದರೆ, ನಿಮ್ಮ ಕನಸುಗಳನ್ನು ನನಸಾಗಿಸಬಲ್ಲ ವ್ಯಕ್ತಿ, ಆರೋಗ್ಯಕರ ಸಂಬಂಧವನ್ನು ಹೊಂದಲು ಸಾಧ್ಯವಾಗುತ್ತದೆ.

English summary

Signs Your Ready To Date Again After A Toxic Relationship in Kannada

Dating after a toxic relationship can be complicated. However, taking a risk and stepping back into the dating world is a brave risk and an important part of the healing process.Love and happiness are the goals, and you're the only one who can reach that goal. But only when you're ready.So, how can you tell when you are ready?
Story first published: Tuesday, May 11, 2021, 12:32 [IST]
X
Desktop Bottom Promotion