Just In
Don't Miss
- News
2022ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ರದ್ದು
- Automobiles
ಭಾರತದಲ್ಲಿ ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಎಸ್ಪಿ ಬೈಕ್ ಬಿಡುಗಡೆ
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Movies
HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?
- Technology
ಇಂದು 'ಒನ್ಪ್ಲಸ್ ನಾರ್ಡ್ 2T 5G' ಫಸ್ಟ್ ಸೇಲ್!..ನೀವು ಖರೀದಿಸುತ್ತೀರಾ?
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ಈ ರೀತಿಯೆಲ್ಲಾ ನಿಮಗೆ ಅನಿಸುತ್ತಿದ್ದರೆ ನಿಮ್ಮಿಂದ ದಾಂಪತ್ಯ ಹಾಳಾಗಬಹುದು ಹುಷಾರ್ ಕಣ್ರೀ!
ತಪ್ಪು ಮಾಡುವುದು ಸಹಜ ಅದನ್ನು ತಿದ್ದಿಕೊಳ್ಳುವುದು ಮನುಜ ಎಂಬ ಮಾತಿದೆ. ದಾಂಪತ್ಯದಲ್ಲಿ ಕೆಲವೊಮ್ಮೆ ಅಂಥ ಸಣ್ಣ-ಪುಟ್ಟ ತಪ್ಪುಗಳು ಆಗುವುದುಂಟು, ಮನಸ್ಸು ಒಂದು ಕ್ಷಣ ಜಾರಬಹುದು ಆದರೆ ತಕ್ಷಣವೇ ಅದನ್ನು ಅರಿತುಕೊಂಡು ತಿದ್ದಿಕೊಳ್ಳಲು ಪ್ರಯತ್ನಿಸಿದರೆ ಏನೂ ತೊಂದರೆಯಾಗಲ್ಲ. ಇಲ್ಲದಿದ್ದರೆ ಮುಂದೆ ವಿಚ್ಛೇದನ ಹಂತಕ್ಕೆ ಬರಬಹುದು. ಮದುವೆಯಾಗಿ ವರ್ಷಗಳು ಕಳೆಯುತ್ತಿದ್ದಂತೆ ಗಂಡ-ಹೆಂಡತಿ ತಮ್ಮ-ತಮ್ಮ ಕೆಲಸದಲ್ಲಿ ಮಗ್ನರಾಗಬಹುದು. ಗಂಡ-ಹೆಂಡತಿ ಪಪರಸ್ಪರ ಸಮಯ ಕೊಡುವುದು ಕಡಿಮೆಯಾಗುವುದು, ರೊಮ್ಯಾನ್ಸ್ ಕೂಡ ಕಡಿಮೆಯಾಗುವುದು. ಆದರೆ ಆ ಸಮಯದಲ್ಲಿ ಕೆಲವರ ಮನಸ್ಸು ಇತರ ವ್ಯಕ್ತಿ ಕಡೆ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಜೊತೆಗೆ ಕೆಲಸ ಮಾಡುವವರ ಜೊತೆ ಅಥವಾ ಸ್ನೇಹಿತ/ಸ್ನೇಹಿತೆ ಅಥವಾ ಹೊಸದಾಗಿ ಪರಿಚಯವಾದ ವ್ಯಕ್ತಿ ಕಡೆಗೆ ಹೊಸ ಆಕರ್ಷಣೆ ಮೂಡಬಹುದು, ಆದರೆ ಅದಕ್ಕೆ ಪ್ರಾರಂಭದಲ್ಲಿಯೇ ಕಡಿವಾಣ ಹಾಕಿದರೆ ನಾವು ತಪ್ಪು ಹಾದಿಗೆ ಜಾರುವುದನ್ನು ತಪ್ಪಿಸಬಹುದು, ನಮ್ಮ ದಾಂಪತ್ಯವನ್ನು ಗಟ್ಟಿಯಾಗಿಸಬಹುದು.
ನಿಮ್ಮ ಮನಸ್ಸಿನಲ್ಲಿ ಈ ರೀತಿಯ ತಳಮಳ ಇದ್ದರೆ ಸಂಸಾರಕ್ಕೆ ಅಪಾಯ ತಪ್ಪಿದ್ದಲ್ಲ......

# ನಿಮ್ಮ ಮನಸ್ಸು ಯಾವಾಗಲೂ ಬೇರೆ ವ್ಯಕ್ತಿಯ ಬಗ್ಗೆ ಯೋಚಿಸುವುದು
ನೀವು ನಿರಂತರವಾಗಿ ಯಾವುದೋ ವ್ಯಕ್ತಿಯ ಬಗ್ಗೆ ಯೋಚನೆ ಮಾಡುತ್ತಿದ್ದರೆ ಒಂದು ಬಾರಿ ಸ್ವಯಂ ಕೇಳಿಕೊಳ್ಳಿ, ಯಾರು ಆ ವ್ಯಕ್ತಿ ಎಂದು?.. ಕೇವಲ ಸ್ನೇಹಿತರಾಗಿದ್ದರೆ, ಅವರ ಬಗ್ಗೆ ನಿರಂತರವಾಗಿ ಯೋಚಿಸುವುದಿಲ್ಲ. ಯಾವಾಗ ಸ್ನೇಹಿತರಿಗಿಂತ ಹೆಚ್ಚಿನ ಸಂಪರ್ಕವನ್ನು ಹೊಂದಲು ಬಯಸುತ್ತೇವೋ ಆಗ ಅವರ ಬಗ್ಗೆ ನಿರಂತರವಾಗಿ ಯೋಚನೆ ಮಾಡುತ್ತಲೇ ಇರುತ್ತೇವೆ. ಇದು ನಿಮ್ಮ ಸಂಬಂಧಕ್ಕೆ ಅಪಾಯಕಾರಿಯಾಗಿದೆ.

# ನಿಮ್ಮ ಸಂಗಾತಿಯೊಂದಿಗೆ ನಿಮ್ಮ "ಸ್ನೇಹಿತ"ನನ್ನು ಹೋಲಿಸುವುದು:
ನಿಮ್ಮ ಜೀವನದಲ್ಲಿ ಇಬ್ಬರು ವ್ಯಕ್ತಿಗಳನ್ನು ಹೋಲಿಕೆ ಮಾಡಿದರೆ, ಸಮಸ್ಯೆಗಳಾಗುತ್ತವೆ. ನಿಮ್ಮ ಸಂಗಾತಿಯು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳಿಗಿಂತ ಪ್ರತ್ಯೇಕವಾಗಿರುತ್ತದೆ. ಆದ್ದರಿಂದ ಹೋಲಿಕೆ ಮಾಡಬಾರದು. ಹೀಗೆ ಮಾಡುತ್ತಿದ್ದರೆ, ಇದು ಅಪಾಯಕಾರಿ ಲಕ್ಷಣವಾಗಿದೆ.

# ನೀವು ಹೆಚ್ಚು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುವುದು:
ಸಾಮಾನ್ಯವಾಗಿ ನೀವು ಹತ್ತಿರವಿರುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಆದರೆ ನೀವು ಈ ವ್ಯಕ್ತಿಯೊಂದಿಗೆ ಕಳೆಯುವ ಸಮಯವು ಹೆಚ್ಚಾಗುತ್ತಿದೆ ಎಂದು ನಿಮಗನಿಸಿದರೆ, ಅದು ಏಕೆ ಎಂದು ಪ್ರಶ್ನಿಸಿ. ನಿಮ್ಮ ಸಂಬಂಧದ ಆಧಾರವು ಬದಲಾಗುತ್ತಿದೆಯೇ ಎಂಬುದನ್ನು ಗಮನಿಸಿ, ಅದಕ್ಕೆ ಕಡಿವಾಣ ಹಾಕಿ.

# ನಿಮ್ಮ ರಹಸ್ಯಗಳನ್ನು ಆ ವ್ಯಕ್ತಿಗೆ ತಿಳಿಸುವುದು:
ನಿಮ್ಮ ಸಂಗಾತಿಯನ್ನು ಹೊರತುಪಡಿಸಿ ಬೇರೆ ಯಾರೊಂದಿಗೂ ಹಂಚಿಕೊಳ್ಳಬಾರದ ಕೆಲವು ವಿಷಯಗಳಿವೆ. ಆದರೆ ಅಂಥ ವಿಷಯವನ್ನೂ ನೀವು ಆ ವ್ಯಕ್ತಿಯೊಂದಿಗೆ ಹಂಚಿಕೊಳ್ಳುತ್ತಿದ್ದರೆ ದಾಂಪತ್ಯಕ್ಕೆ ದ್ರೋಹ ಮಾಡುತ್ತಿದ್ದೀರಿ ಎಂದರ್ಥ.

# ಆ ವ್ಯಕ್ತಿಯ ಬಗ್ಗೆ ನಿಮ್ಮ ಸಂಗಾತಿಗೆ ಹೆಚ್ಚು ಹೇಳದೇ ಇರುವುದು:
ನೀವು ಸ್ನೇಹಿತನನ್ನು ನೋಡಲು ಹೋಗುತ್ತಿದ್ದರೆ, ಅದನ್ನು ನೇರವಾಗಿ ನಿಮ್ಮ ಸಂಗಾತಿಗೆ ಹೇಳಬಹುದು, ಒಂದು ವೇಳೆ ಹೇಳದೇ ಭೇಟಿಯಾದರೆ ಅಥವಾ ಆ ವ್ಯಕ್ತಿಯ ಹೆಸರನ್ನೇ ಮರೆಮಾಚಿದರೆ, ನೀವು ದಾಂಪತ್ಯಕ್ಕೆ ಮಾಡುವ ಮೋಸ ಎನ್ನಬಹುದು.

# ನಿಮ್ಮ ಸಂಗಾತಿಯೊಂದಿಗೆ ಕಡಿಮೆ ಸಂಪರ್ಕದಲ್ಲಿರುವಿರಿ:
ನಿಮ್ಮ ಸಂಗಾತಿಯೊಂದಿಗಿನ ಲೈಂಗಿಕ ಜೀವನವು ತೃಪ್ತಿದಾಯಕವಾಗಿರುವುದಿಲ್ಲ ಹಾಗೂ ಅವರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ನಿಮ್ಮ ಮನಸ್ಸು ಇನ್ನೊಬ್ಬ ವ್ಯಕ್ತಿಯ ಮೇಲೆ ಇದ್ದಾಗ ನೀವು ಸಂಗಾತಿಯೊಂದಿಗೆ ಸಹಕರಿಸುವುದು ಕಡಿಮೆಯಾಗಬಹುದು.

# ಆ ವ್ಯಕ್ತಿಯ ಮುಂದೆ ನೀವು ಅತ್ಯುತ್ತಮವಾಗಿ ಕಾಣಲು ಪ್ರಯತ್ನಿಸುತ್ತೀರಿ:
ಆ ವ್ಯಕ್ತಿಯ ಮುಂದೆ ನೀವು ಚೆನ್ನಾಗಿ ಕಾಣಬೇಕು ಎಂದು ಬಯಸುತ್ತೀರಿ, ಅವರನ್ನು ಮೆಚ್ಚಿಸಲು ಪ್ರಯತ್ನಿಸುವುದು ಇವೆಲ್ಲಾ ನಿಮ್ಮ ದಾಂಪತ್ಯ ಜೀವನಕ್ಕೆ ನಿಮ್ಮಿಂದ ಮೋಸವಾಗುವ ಲಕ್ಷಣಗಳಾಗಿವೆ.

# ನೀವು ಹೊಂದಿರುವ ಸಂಪರ್ಕವನ್ನು ನಿರಾಕರಿಸಲು ಸಾಧ್ಯವಾಗದಿರುವುದು:
ಆ ವ್ಯಕ್ತಿ ಜೊತೆ ಮಾತನಾಡದೆ ಇರಲು ಸಾಧ್ಯವಾಗುತ್ತಿಲ್ಲ, ಅವರು ಬೇಕೇಬೇಕು ಎಂದು ಅನಿಸಲಾರಂಭಿಸಿದರೆ ಆ ಬಗ್ಗೆ ಎಚ್ಚೆತ್ತುಕೊಳ್ಳಿ. ಅದರಿಂದ ನಿಮ್ಮ ಸಂಬಂಧಕ್ಕೆ ಹಾನಿಯಾಗಬಹುದು ಎಂದು ಅನಿಸಿದರೆ ನಿಮ್ಮ ಮನಸ್ಸನ್ನು ನಿಯಂತ್ರಿಸಲೇಬೇಕು.

# ಅವರಿಗೆ ಮೆಸೇಜ್ ಕಳುಹಿಸುವುದು:
ನಿಮ್ಮ ಸಂಗಾತಿಯೊಂದಿಗೆ ನೀವು ಮನೆಯಲ್ಲಿದ್ದಾಗ ಕೂಡ ನೀವು ಆ ಇನ್ನೊಬ್ಬ ವ್ಯಕ್ತಿಗೆ ಮೆಸೇಜ್ ಕಳುಹಿಸಿಸುವುದು, ಅವರ ಬಗ್ಗೆ ಆಸಕ್ತಿ ವಹಿಸುತ್ತಿದ್ದೀರಿ ಎಂದಾದರೆ ಅದು ದಾಂಪತ್ಯ ದ್ರೋಹದ ಸಂಕೇತವಾಗಿದೆ.

# ಅವರು ನಿಮ್ಮ ಕನಸಲ್ಲಿ ಬರಲಾರಂಭಿಸುತ್ತಾರೆ:
ನಿಮ್ಮ ಕನಸುಗಳ ಮೇಲೆ ನಿಮಗೆ ಸಂಪೂರ್ಣ ನಿಯಂತ್ರಣವಿಲ್ಲ ಆದರೆ ನೀವು ಒಬ್ಬ ವ್ಯಕ್ತಿಯ ಬಗ್ಗೆ ಹೆಚ್ಚು ಯೋಚಿಸುತ್ತಿದ್ದರೆ, ವಿಶೇಷವಾಗಿ ಮಲಗುವ ಮೊದಲು, ಅವರು ನಿಮ್ಮ ಕನಸಿನಲ್ಲಿ ಬರುವ ಸಾಧ್ಯತೆಗಳಿವೆ. ಇದು ಕೂಡ ನಿಮ್ಮ ಮನಸ್ಸು ಹಾದಿ ತಪ್ಪಿದೆ ಎಂದು ಸುಚಿಸುತ್ತೆ.

# ಅವರನ್ನು ನೋಡಿದಾಗ ನಿಮ್ಮ ಪ್ರತಿಕ್ರಿಯೆ ಬದಲಾಗುವುದು:
ಆ ವ್ಯಕ್ತಿಯನ್ನು ನೋಡಲು ಏನೋ ಕಾತರ, ಅವರ ಮಾತು ಕೇಳಿದಾಗ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗುವುದು ಈ ರೀತಿಯೆಲ್ಲಾ ಅನಿಸುತ್ತಿದ್ದರೆ ನೀವು ಎಚ್ಚೆತ್ತುಕೊಮಡರೆ ಒಳ್ಳೆಯದು.
# ನಿಮ್ಮ ಸ್ಥಾನ ಬೇರೊಬ್ಬರಿಗೆ ನೀಡಿದ್ದಾರೆ ಎಂದೆನಿಸುವುದು:
ನೀವು ಮಾಡುತ್ತಿರುವಂತೆಯೇ ನಿಮ್ಮ ಸಂಗಾತಿಯೂ ಮಾಡುತ್ತಿದ್ದರೆ, ನೀವು ಅದರ ಬಗ್ಗೆ ಸಂತೋಷಪಡುತ್ತೀರಾ? ಅಥವಾ ದ್ರೋಹವೆಂದು ಭಾವಿಸುವಿರಾ? ಉತ್ತರವು 'ಹೌದು' ಆಗಿದ್ದರೆ, ನೀವೇನು ಮಾಡುತ್ತಿದ್ದೀರಿ ಎಂಬುದನ್ನು ಒಮ್ಮೆ ಯೋಚಿಸಿ. ಆಗ ನೀವೇನು ಮಾಡಬೇಕು ಎಂಬ ಉತ್ತರ ಸಿಗುತ್ತೆ.