For Quick Alerts
ALLOW NOTIFICATIONS  
For Daily Alerts

ಆತ ನೀವು ಅಂದುಕೊಂಡದ್ದಕ್ಕಿಂತ ನಿಮ್ಮ ಮೇಲೆ ಹೆಚ್ಚೇ ಕಾಳಜಿ ಹೊಂದಿದ್ದಾನೆ ಎಂದು ಸೂಚಿಸುವ ಲಕ್ಷಣಗಳಿವು

|

ಒಂದು ಹೆಣ್ಣು ತನ್ನ ಹುಡುಗನಿಂದ ಮುಖ್ಯವಾಗಿ ಬಯಸೋದು ಕಾಳಜಿ, ಪ್ರೀತಿ. ತನ್ನ ಮೇಲೆ ತನ್ನ ಪತಿ ಅಥವಾ ತಾನು ಪ್ರೀತಿಸುವ ಗೆಳೆಯ ಎಷ್ಟು ಕಾಳಜಿ ವಹಿಸುತ್ತಾರೆ ಎಂದು ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಸಾಮಾನ್ಯವಾಗಿ ಇರುವುದು. ಆತನ ಕೆಲವು ನಡತೆಗಳಿಂದ ಅದನ್ನು ನೀವು ತಿಳಿದುಕೊಳ್ಳಬಹುದು. ಕೆಲವೊಮ್ಮೆ ನೀವು ಅಂದುಕೊಂಡದ್ದಕ್ಕಿಂತ ಆತ ಹೆಚ್ಚೇ ಕಾಳಜಿ, ಪ್ರೀತಿ ಹೊಂದಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳುವ ಸೂಚನೆಗಳಾವುವು ಎಂಬುದನ್ನು ಇಲ್ಲಿ ನೊಡೋಣ.

1. ನಿಮ್ಮ ಮಾತನ್ನು ತಾಳ್ಮೆಯಿಂದ ಕೇಳುತ್ತಾನೆ:

1. ನಿಮ್ಮ ಮಾತನ್ನು ತಾಳ್ಮೆಯಿಂದ ಕೇಳುತ್ತಾನೆ:

ಹೆಚ್ಚಾಗಿ ತಮ್ಮ ಪ್ರೀತಿಪಾತ್ರರ ಮುಂದೆ ಯಾವುದೇ ಭಾವನೆಗಳನ್ನು ಮುಚ್ಚಿಡುವುದಿಲ್ಲ. ಮನ ಬಂದಂತೆ ಇರುತ್ತಾರೆ. ಅದು ಸಿಲ್ಲಿ, ಗಂಭೀರ, ಭಾವನಾತ್ಮಕ, ಹಾಸ್ಯಮಯ ಅಥವಾ ಯಾವುದೇ ಅರ್ಥವಿಲ್ಲದಿರುವ ವಿಚಾರವಾಗಲೀ ಅತನ ಬಳಿ ಹೇಳಿಕೊಳ್ಳುತ್ತಾರೆ. ಈ ಸಮಯದಲ್ಲಿ ಆತ ಕೋಪಗೊಳ್ಳದೇ ತಾಳ್ಮೆಯಿಂದ ಎಲ್ಲವನ್ನು ಕೇಳುತ್ತಾನೆ ಎಂದರೆ ಆತನಿಗೆ ನಿಮ್ಮ ಮೇಲೆ ಕಾಳಜಿಯಿದೆ ಎಂದರ್ಥ. ಈ ಅವಕಾಶ ಆತ ಎಲ್ಲರಿಗೂ ಕೊಡದೇ, ತಾನು ಇಷ್ಟಪಡುವ ವ್ಯಕ್ತಿಗಷ್ಟೇ ಮೀಸಲಿಡುತ್ತಾನೆ.

2. ನಿಮ್ಮ ಸಂತೋಷಕ್ಕೆ ಆದ್ಯತೆ ನೀಡುತ್ತಾನೆ:

2. ನಿಮ್ಮ ಸಂತೋಷಕ್ಕೆ ಆದ್ಯತೆ ನೀಡುತ್ತಾನೆ:

ನಿಮ್ಮ ಪ್ರತಿ ಕೆಲಸದಲ್ಲೂ ಆತ ಸಮತೋಷ ಕಾಣುತ್ತಾನೆ. ಉದಾಹರಣೆಗೆ ನಿಮಗೆ ಇಷ್ಟವಿರುವ ಯಾವುದೋ ಕೆಲಸ ಆತನಿಗೆ ಇಷ್ಟವಿಲ್ಲದಿದ್ದರೂ ಕೇವಲ ನಿಮಗಾಗಿ, ನಿಮ್ಮ ಸಂತೋಷಕ್ಕಾಗಿ ಅದನ್ನು ಮಾಡುತ್ತಾನೆ. ನಿಮ್ಮನ್ನು ಸದಾ ಖುಷಿಯಾಗಿಡಲು ಪ್ರಯತ್ನಿಸುತ್ತಿರುತ್ತಾನೆ. ಇಂತಹ ಸಂಬಂಧ ಹೆಚ್ಚು ಮೌಲ್ಯಯುತವಾಗಿರುತ್ತದೆ. ನಿಮ್ಮ ಆಸೆಗಳನ್ನು ಈಡೇರಿಸುವಲ್ಲಿ ಆತ ಸಂತೋಷ ಕಾಣುತ್ತಿದ್ದಾನೆ ಎಂದರೆ ಆತ ನಿಜವಾಗಿಯೂ ನಿಮ್ಮ ಮೇಲೆ ಅತೀವ ಕಾಳಜಿ ಹೊಂದಿದ್ದಾನೆ ಎಂದರ್ಥ.

3. ಆತನ ತಪ್ಪಿಗೆ ವಿವರಣೆ ನೀಡುತ್ತಾನೆ:

3. ಆತನ ತಪ್ಪಿಗೆ ವಿವರಣೆ ನೀಡುತ್ತಾನೆ:

ತಪ್ಪುಗಳಾಗುವುದು ಸಹಜ, ಇದು ಸಂಬಂಧದಲ್ಲಿ ಮಾತ್ರವಲ್ಲ, ಜೀವನದ ಎಲ್ಲಾ ಹಂತಗಳಲ್ಲಿಯೂ ಆಗುತ್ತವೆ. ನಿಮ್ಮ ಸಂಗಾತಿಯು ಕೆಲವೊಮ್ಮೆ ತಪ್ಪು ಮಾಡಬಹುದು. ಆದರೆ ಅದನ್ನು ಏಕೆ ಮಾಡಿದೆ?ಏನು ತಪ್ಪಾಗಿದೆ ಎಂಬುದನ್ನು ವಿವರಿಸಲು ಅವನು ಪ್ರಯತ್ನಿಸುತ್ತಾನೆ. ಆತ ನಿಮಗಾಗಿ ತಪ್ಪಿತಸ್ಥನಾಗಿರಬಹುದು ಅಥವಾ ಇಲ್ಲದೇ ಇರಬಹುದು. ಅದರ ಬಗ್ಗೆ ಎಲ್ಲವನ್ನೂ ನಿಮಗೆ ತಿಳಿಸುವ ಪ್ರಯತ್ನ ಮಾಡುವುದು ಅವನ ಬಗ್ಗೆ ಮೆಚ್ಚಬಹುದಾದ ಅತ್ಯುತ್ತಮ ಗುಣಗಳಲ್ಲಿ ಒಂದಾಗಿದೆ.

4. ವಿಶೇಷ ದಿನಗಳಲ್ಲಿ ಸರ್ಪೈಸ್ ನೀಡುತ್ತಾನೆ:

4. ವಿಶೇಷ ದಿನಗಳಲ್ಲಿ ಸರ್ಪೈಸ್ ನೀಡುತ್ತಾನೆ:

ನಿಮಗೆ ಸರ್ಪೈಸ್ ಇಷ್ಟವಿದ್ದರೆ, ಆ ವಿಚಾರ ಆತನಿಗೆ ತಿಳಿದಿದ್ದರೆ ಖಂಡಿತ ನಿಮ್ಮ ಆಸೆಯನ್ನು ನಿರಾಸೆಗೊಳಿಸುವುದಿಲ್ಲ. ನಿಮ್ಮ ನಡುವಿನ ವಿಶೇಷ ದಿನಗಳನ್ನು ನೆನಪಿಟ್ಟುಕೊಂಡು ಆ ದಿನ ಏನಾದರೂ ಸರ್ಪೈಸ್ ಉಡುಗೊರೆಗಳನ್ನು ಅಥವಾ ಪ್ರವಾಸವನ್ನೋ ಆಯೋಜನೆ ಮಾಡುತ್ತಾನೆ. ಆತನಿಗೆ ನಿಮ್ಮ ಖುಷಿಯೇ ಅಂತಿಮವಾಗಿರುತ್ತದೆ. ಅದಕ್ಕಾಗಿಯೇ ಸದಾ ಏನಾದರೂ ಮಾಡುತ್ತಲೇ ಇರುವನು.

5. ಅವನಲ್ಲೂ ಸ್ವಲ್ಪ ಪೊಸಿಸಿವ್ ನೆಸ್ ಇರುವುದು:

5. ಅವನಲ್ಲೂ ಸ್ವಲ್ಪ ಪೊಸಿಸಿವ್ ನೆಸ್ ಇರುವುದು:

ಪೊಸಿಸಿವ್ ನೆಸ್ ಎಲ್ಲಾ ಹುಡುಗ-ಹುಡುಗಿಯರಲ್ಲೂ ಸಾಮಾನ್ಯವಾಗಿದೆ, ಆದರೆ ಮಿತಿ ಮೀರಬಾರದು. ನಿಮ್ಮ ಹುಡುಗ ನಿಮ್ಮ ಬಗ್ಗೆ ಕಾಳಜಿವ ವಹಿಸುವವನಾದರೆ ನೀವು ಇತರ ಹುಡುಗರೊಂದಿಗೆ ಅಥವಾ ನಿಮ್ಮ ಆಪ್ತರೊಂದಿಗೆ ಇರುವಾಗ ಆತ ಹೊರಗೆ ಹೋಗಬಹುದು. ಹೀಗೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆತ ಇನ್ನೊಬ್ಬ ಮಹಿಳೆಯ ಜತೆಗೆ ಹತ್ತಿರವಾದರೆ ನಾವು ಅಸೂಯೆ ಪಡುತ್ತೇವೆ. ಇದು ವಾಸ್ತವಿಕವಾಗಿ ಇಬ್ಬರೂ ಸಂಬಂಧದಲ್ಲಿ ಗಂಭೀರವಾಗಿರುವುದನ್ನು ಸೂಚಿಸುವುದು.

English summary

Signs He Cares About You in Kannada

Here we talking about Signs He Cares About You in Kannada, read on
Story first published: Wednesday, June 2, 2021, 17:42 [IST]
X
Desktop Bottom Promotion