For Quick Alerts
ALLOW NOTIFICATIONS  
For Daily Alerts

ಆಕೆ ನಿಮ್ಮೊಂದಿಗೆ ಕಣ್ಣಿಗೆ ಕಣ್ಣಿಟ್ಟು ಮಾತಾಡ್ತಿಲ್ಲವೇ? ನಿರ್ಲಕ್ಷ್ಯ ಮಾಡುವಂಥ ವಿಷಯವಲ್ಲ!

|

ಕಣ್ಣು ಮನಸ್ಸಿನ ಕನ್ನಡಿ ಎಂಬ ಮಾತಿದೆ. ಅಂದ್ರೆ ನಮ್ಮ ಮನಸ್ಸಿನಲ್ಲಿರುವ ಭಾವನೆಗಳು ನಾವು ಹೇಳದೆಯೇ ನಮ್ಮ ಕಣ್ಣನ್ನ ನೋಡಿದ್ರೆ ತಿಳಿಯುತ್ತಂತೆ. ಅಷ್ಟು ಪವರ್ ನಮ್ಮ ಕಣ್ಣುಗಳಿಗಿದೆ. ಅದರಲ್ಲೂ ಹೆಣ್ಣಿನ ಕಣ್ಣುಗಳಿಗೆ ಬಹಳ ಶಕ್ತಿ ಇದೆ. ಆಕೆ ತನ್ನ ಕಣ್ಣಲ್ಲೇ ಎಲ್ಲವನ್ನ ವಿವರಿಸಬಲ್ಲಳು, ವ್ಯಕ್ತಪಡಿಸಬಲ್ಲಳು.. ಅಂತಹದ್ರಲ್ಲಿ ಒಂದು ಹೆಣ್ಣು ನಿಮ್ಮ ಜೊತೆ ಮಾತನಾಡ್ಬೇಕಾದ್ರೆ ಕಣ್ಣಿನ ಸಂಪರ್ಕವನ್ನ ಬೇರೆಡೆ ವರ್ಗಾಯಿಸುತ್ತಿದ್ದಾಳೆ ಅಂದ್ರೆ ಕಣ್ಣಿಗೆ ಕಣ್ಣಿಟ್ಟು ನೋಡ್ತಾ ಇಲ್ಲ ಅಂದ್ರೆ ಅದಕ್ಕೆ ಕೆಲವೊಂದು ಪ್ರಮುಖ ಕಾರಣಗಳಿರುತ್ತವೆ. ಹಾಗಾದ್ರೆ, ಅವುಗಳು ಯಾವುವು? ಹೆಣ್ಣು ಕಣ್ಣಿನ ಸಂಪರ್ಕ ಕಡಿತಗೊಳಿಸುತ್ತಿದ್ದಾಳೆ ಅಂದ್ರೆ ಅದರ ಹಿಂದಿನ ಅರ್ಥವೇನು ಅನ್ನೋದನ್ನು ಇಲ್ಲಿ ನೋಡೋಣ.

ಹೆಣ್ಣು ಕಣ್ಣಿನ ಸಂಪರ್ಕ ತಪ್ಪಿಸುತ್ತಿದ್ದಾಳೆ ಅಂದ್ರೆ ಅದರ ಹಿಂದಿರುವ ಅರ್ಥವೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಆಕೆ ನರ್ವಸ್ ಆಗಿರಬಹುದು:

1. ಆಕೆ ನರ್ವಸ್ ಆಗಿರಬಹುದು:

ಕೆಲವು ಹುಡುಗಿಯರು ಸಾಮಾಜಿಕ ಅಂತರ ಕಾಪಾಡಿಕೊಂಡಿರುತ್ತಾರೆ. ಅಂತಹವರ ಜೊತೆಗೆ ಯಾರಾದರೂ ಮಾತನಾಡುವಾಗ ಸಾಮಾನ್ಯವಾಗಿಯೇ ಕಣ್ಣಿನ ಸಂಪರ್ಕವನ್ನು ತಪ್ಪಿಸುತ್ತಾರೆ. ಇವರು ಇತರರ ಜೊತೆಗೆ ಮಾತನಾಡುವಾಗ ಸ್ವಲ್ಪ ಮುಜುಗರ ಅಥವಾ ನರ್ವಸ್ ಆಗಬಹುದು. ಅವರಿಗೆ ಒಬ್ಬರ ಜೊತೆ ಮುಕ್ತವಾಗಿ ಬೆರೆಯುವ ಮನಸ್ಥಿತಿ ಇರಲಾರದು. ಆಗ ತಮ್ಮ ಕಣ್ಣಿನ ಸಂಪರ್ಕವನ್ನು ಬೇರೆ ಕಡೆಗೆ ನೋಡುವ ಮೂಲಕ ಬದಲಾಯಿಸಲು ಮುಂದಾಗುತ್ತಾರೆ.

2. ಆಕೆ ಅಸಮಧಾನಗೊಂಡಿರಬಹುದು:

2. ಆಕೆ ಅಸಮಧಾನಗೊಂಡಿರಬಹುದು:

ಅನೇಕ ಮಹಿಳೆಯರು ತಮ್ಮ ಕಿರಿಕಿರಿಯನ್ನು ವ್ಯಕ್ತಪಡಿಸುವ ಸಾಮಾನ್ಯ ವಿಧಾನವೆಂದರೆ ನಿಮ್ಮೊಂದಿಗೆ ಕಣ್ಣಿನ ಸಂಪರ್ಕವನ್ನು ತಪ್ಪಿಸುವುದು. ಇದನ್ನ ಸಾಮಾನ್ಯವಾಗಿ ನೀವೆಲ್ಲ ಗಮನಿಸರಬಹುದು. ಹುಡುಗಿಗೆ ನಿಮ್ಮಿಂದ ಏನಾದರೂ ಮುಜುಗರದ ಸನ್ನಿವೇಶ ಎದುರಾದ್ರೆ ಅಥವಾ ಬೇಜಾರಾಗಿದ್ದರೆ, ಕೋಪಗೊಂಡಿದ್ದರೆ ಆಕೆ ನಿಮ್ಮ ಕಣ್ಣಿನ ಸಂಪರ್ಕದಿಂದ ದೂರವಿರುತ್ತಾಳೆ. ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ, ಮಾತನಾಡುವ ಮನಸ್ಸು ಆಕೆಗೆ ಆ ಕ್ಷಣದಲ್ಲಿ ಇರದು. ಇದನ್ನು ನೀವು ಅರ್ಥ ಮಾಡಿಕೊಂಡು, ಆಕೆಯನ್ನ ಆ ಸನ್ನಿವೇಶದಿಂದ ಹೊರತರಬೇಕು.

3. ಆಕೆಗೆ ಆಸಕ್ತಿಯಿಲ್ಲ ಎಂಬ ಸೂಚನೆ:

3. ಆಕೆಗೆ ಆಸಕ್ತಿಯಿಲ್ಲ ಎಂಬ ಸೂಚನೆ:

ಯಾವುದೇ ಹುಡುಗಿ ನಿಮ್ಮೊಂದಿಗೆ ನಡೆಯುತ್ತಿದ್ದಾಗ ಆಕೆ ನಿಮ್ಮ ಕಣ್ಣಿನ ಸಂಪರ್ಕವನ್ನು ತಪ್ಪಿಸುತ್ತಿದ್ದಾಳೆ ಅಂದ್ರೆ ಆಕೆಗೆ ನಿಮ್ಮ ಮೇಲೆ ಯಾವುದೇ ಆಸಕ್ತಿಯಿಲ್ಲ ಎಂಬುದರ ಸೂಚನೆಯಿದು. ಸಾಮಾನ್ಯವಾಗಿ ಹುಡುಗಿಯರಿಗೆ ತಮ್ಮ ಸುತ್ತಮುತ್ತ ನಡೆಯುವ ಎಲ್ಲಾ ವಿಚಾರಗಳ ಬಗ್ಗೆ ಗೊತ್ತಿರುತ್ತೆ ಅಂದ್ರೆ, ಯಾರು ತಮ್ಮನ್ನ ನೋಡುತ್ತಿದ್ದಾರೆ? ಯಾರು ತಮ್ಮ ನೋಡಿ ನಗುತ್ತಿದ್ದಾರೆ ಎಲ್ಲದರ ಗಮನವಿರುತ್ತದೆ. ಇದು ಗೊತ್ತಿದ್ದು ಆಕೆ ನಿಮ್ಮತ್ತ ನೋಡುತ್ತಿಲ್ಲ, ನಿಮ್ಮ ಮಾತಿಗೆ ಕಣ್ಣಿಗೆ ಕಣ್ಣಿಟ್ಟು ಉತ್ತರ ನೀಡುತ್ತಿಲ್ಲ ಅಂದರೆ ಆಕೆಗೆ ನೀವಂದ್ರೆ ಇಷ್ಟವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. "ಅವಳು ನಡೆಯುವಾಗ ನನ್ನೊಂದಿಗೆ ಕಣ್ಣಿನ ಸಂಪರ್ಕವನ್ನು ತಪ್ಪಿಸುತ್ತಾಳೆ. ಏಕೆ?" ಬಹುಶಃ, ಅವಳು ನಿಮ್ಮ ಬಗ್ಗೆ ಆಸಕ್ತಿ ಹೊಂದಿಲ್ಲ.

4. ಆಕೆಗೆ ನೀವಂದ್ರೆ ಇಷ್ಟವಿರಲೂಬಹುದು:

4. ಆಕೆಗೆ ನೀವಂದ್ರೆ ಇಷ್ಟವಿರಲೂಬಹುದು:

ಮೇಲೆ ಹೇಳಿರೊ ಮಾತಿಗೆ ತದ್ವಿರುದ್ಧವಾಗಿಯೂ ಇರಬಹುದು. ಅಂದ್ರೆ ಹುಡುಗಿಗೆ ನೀವಂದ್ರೆ ಇಷ್ಟವಿದ್ದು, ನಿಮ್ಮನ್ನು ಕಂಡರೆ ಭಯ ಅಥವಾ ನಾಚಿಕೆಯಿದ್ದಾಗ ಕಣ್ಣು ನೋಡದಿರಬಹುದು. ಆದ್ರೆ ಆಕೆಯ ಸಂಪೂರ್ಣ ಗಮನವು ನಿಮ್ಮ ಮೇಲಿರುತ್ತದೆ . ಅಂದ್ರೆ, ಆಕೆ ನಿಮ್ಮ ಕಣ್ಣು ನೋಡಿ ಉತ್ತರಿಸದಿದ್ದರೂ, ಪದೇ ಪದೇ ನಿಮ್ಮನ್ನು ಕದ್ದು ನೋಡುತ್ತಿರುವುದನ್ನು ನೀವು ಗನಿಸಬಹುದು. ಹೀಗಿದ್ದರೆ ಚಿಂತೆ ಮಾಡಬೇಡಿ, ಖುಷಿಪಡಿ.

5. ಆಕೆ ನಾಚಿಕೆ ಸ್ವಭಾವದವಳಾಗಿರಬಹುದು:

5. ಆಕೆ ನಾಚಿಕೆ ಸ್ವಭಾವದವಳಾಗಿರಬಹುದು:

ಸಂಕೋಚದ ಜನರು ಸಾಮಾನ್ಯವಾಗಿ ಸಾಮಾಜಿಕ ತೊಡಗಿಸಿಕೊಳ್ಳುವಿಕೆಯಿಂದ ದೂರವಿರುತ್ತಾರೆ. ಸಾಮಾನ್ಯರು ತಮಗೆ ಇಷ್ಟವಾದ್ರ ಜೊತೆಗೆ ಕಣ್ಣಿನ ಸಂಪರ್ಕದಿಂದ ಅವರಿಗೆ ಹತ್ತಿರವಾಗುತ್ತಾರೆ. ಆದರೆ ಸಂಕೋಚ ಅಥವಾ ನಾಚಿಕೆ ಸ್ವಭಾವದವರಿಗೆ ಇದು ಸಾಧ್ಯವಾಗುವುದಿಲ್ಲ. ತಮ್ಮ ಬಳಿ ಯಾರೇ ಮಾತನಾಡಿದರೂ, ನಾಚಿಕೆಯಿಂದ ತಮ್ಮ ಕಣ್ಣಿನ ಸಂಪರ್ಕವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಾರೆ. ಇಂತಹವಳು ನಿನ್ನನ್ನು ಇಷ್ಟಪಡುತ್ತಿದ್ದಾಳೆಯೇ ಎಂದು ತಿಳಿಯುವ ಏಕೈಕ ಮಾರ್ಗವೆಂದರೆ ಆಕೆಯೊಂದಿಗೆ ಮಾತನಾಡುವುದು.

6. ಆಕೆಗೆ ಆತ್ಮವಿಶ್ವಾಸದ ಕೊರತೆ:

6. ಆಕೆಗೆ ಆತ್ಮವಿಶ್ವಾಸದ ಕೊರತೆ:

ಒಂದು ಹುಡುಗಿ ಕಣ್ಣಿನ ಸಂಪರ್ಕವನ್ನು ತಪ್ಪಿಸುವ ಇನ್ನೊಂದು ಕಾರಣವೆಂದರೆ ಆತ್ಮವಿಶ್ವಾಸದ ಕೊರತೆ. ಆಕೆಗೆ ತನ್ನ ಮೇಲೇಯೇ ನಂಬಿಕೆ ಇರೋದಿಲ್ಲ. ಅದಕ್ಕಾಗಿ ಮಾತನಾಡಲು ಹಿಂಜರಿಯುತ್ತಾಳೆ. ಅಷ್ಟೇಅಲ್ಲ, ತನ್ನ ಮುಂದಿರುವ ವ್ಯಕ್ತಿಯನ್ನ ಎದುರಿಸುವ ಆತ್ಮವಿಶ್ವಾಸ ಆಕೆಗೆ ಇರೋದಿಲ್ಲ. ಅದಕ್ಕಾಗಿ ಎದುರಿರುವವರು ಮಾತನಾಡೋವಾಗ ತನ್ನ ಕಣ್ಣಿನ ಸಂಪರ್ಕವನ್ನು ಬೇರೆಡೆ ವರ್ಗಾಯಿಸುತ್ತಾಳೆ.

ಹುಡುಗಿಯೊಂದಿಗೆ ಕಣ್ಣಿನ ಸಂಪರ್ಕವನ್ನು ಹೇಗೆ ಇಟ್ಟುಕೊಳ್ಳುವುದು?:

ಹುಡುಗಿಯೊಂದಿಗೆ ಕಣ್ಣಿನ ಸಂಪರ್ಕವನ್ನು ಹೇಗೆ ಇಟ್ಟುಕೊಳ್ಳುವುದು?:

ಪುರುಷರು ಹುಡುಗಿಯರೊಂದಿಗೆ ಕಣ್ಣಿನ ಸಂಪರ್ಕವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ಈ ಕೆಳಗೆ ಹೇಳಲಾಗಿದೆ:

1. ನಿಮಗೆ ಇಷ್ಟವಿರುವ ಹುಡುಗಿಯ ಬಗ್ಗೆ ತಿಳಿಯಿರಿ:

ಹುಡುಗಿಯ ಜೊತೆ ಕಣ್ಣಿನ ಸಂಪರ್ಕವನ್ನು ಹೇಗೆ ಇಟ್ಟುಕೊಳ್ಳಬೇಕೆಂದು ತಿಳಿದುಕೊಳ್ಳಲು, ಮೊದಲು ನೀವು ಇಷ್ಟಪಡುವ ಹುಡುಗಿಯೊಂದಿಗೆ ಇರುವುದು ಬಹಳ ಮುಖ್ಯ. ಅವಳು ಏನು ಮಾತನಾಡಲು ಇಷ್ಟಪಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮೊದಲು ಆಕೆಯನ್ನು ಅಧ್ಯಯನ ಮಾಡಿ. ಆಕೆಗೆ ಏನು ಇಷ್ಟ ಎಂಬುದನ್ನು ತಿಳಿದು ತದನಂತರ ಆ ಬಗ್ಗೆ ಮಾತನಾಡಿ.

2. ಶಾಂತವಾಗಿರಿ:

ಹುಡುಗಿಯರೊಂದಿಗೆ ಮಾತನಾಡುವ ಪರಿಣಿತರು ಕೂಡ ಹೊಸಬರನ್ನು ಭೇಟಿಯಾದಾಗ ನರ್ವಸ್ ಆಗುತ್ತಾರೆ. ಆದ್ದರಿಂದ, ನೀವು ಸ್ವಲ್ಪ ಆತಂಕದಲ್ಲಿದ್ದರೆ ಅದು ಸಹಜ. ಅವಳು ನಿಮ್ಮೊಂದಿಗೆ ಕಣ್ಣಿನ ಸಂಪರ್ಕವನ್ನು ತಪ್ಪಿಸಿದರೆ, ಸಾಧ್ಯವಾದಷ್ಟು ಶಾಂತವಾಗಿರಲು ಪ್ರಯತ್ನಿಸಿ.

3. ದಿಟ್ಟಿಸಬೇಡಿ:

ಯಾರನ್ನಾದರೂ ದಿಟ್ಟಿಸಿ ನೋಡುವುದು ಅಸಭ್ಯವಾಗಿ ಕಾಣುವುದು ಮಾತ್ರವಲ್ಲ, ಆ ವ್ಯಕ್ತಿಗೆ ಮುಜುಗರವನ್ನ ಉಂಟುಮಾಡಬಹುದು. ಬದಲಾಗಿ, ಅವಳನ್ನು ಸಾಮಾನ್ಯವಾಗಿ ನೋಡಿ. ಆಕೆಗೆ ಇಷ್ಟವಿದ್ದರೆ, ನಿಮ್ಮ ನೋಟಕ್ಕೆ ಹಿಂತಿರುಗಿ ನೋಡಬಹುದು ಅಥವಾ ಇಷ್ಟವಿಲ್ಲದಿದ್ದರೆ ನೋಡದೆಯೂ ಇರಬಹುದು.

English summary

Relationship Advice: What does it mean when a girl avoids eye contact?

Here we talking about Relationship Advice: What does it mean when a girl avoids eye contact?, read on
X
Desktop Bottom Promotion